ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ. ನಾನು ಶಾಸಕನಾದರೆ ನೀವೆಲ್ಲ ಶಾಸಕನಾದಂತೆ ಎಂದು ಹೇಳಿದ ಶಾಸಕ ಬಿ.ನಾಗೇಂದ್ರ,
*ಬಳ್ಳಾರಿ: ಫೆಬ್ರವರಿ,1ರಂದು ಕೌಲ್ ಬಜಾರ್ ವ್ಯಾಪ್ತಿಯ 26 ವಾರ್ಡ್ ನಲ್ಲಿ ಬರುವ ಗಡಂಗ್ ಬೀದಿ ಹಳೆ ಎಂಪ್ಲಾಯ್ಮೆಂಟ್ ಆಫೀಸ್ ಬಳ್ಳಾರಿ ಮಹಾನಗರ ಪಾಲಿಕೆಯ ಅನುದಾನದ ಅಡಿಯಲ್ಲಿ 10 ಲಕ್ಷ ರೂ ವೆಚ್ಚದಲ್ಲಿ ಕುಡಿಯುವ ನೀರಿನ ಪೈಪ್ ಲೈನ್ ಅಳವಡಿಸುವ ಕಾಮಗಾರಿಗೆ ಭೂಮಿ ಪೂಜೆಯನ್ನು ಬಳ್ಳಾರಿ ಗ್ರಾಮಾಂತರ ಜನಪ್ರಿಯ ಶಾಸಕರಾದ ಶ್ರೀ ಬಿ.ನಾಗೇಂದ್ರ ಅವರು ನೆರವೇರಿಸಿದರು.*
*ಕೋಮುವಾದಿ ಪಕ್ಷಗಳು, ಕೋಮುವಾದಿ ರಾಜಕಾರಣಿಗಳು ಸಮುದಾಯದ ಜನರಿಗೆ ಆಮಿಷಗಳನ್ನು ಒಡ್ಡುತ್ತಾರೆ, ಕೇಸ್ ಹಾಕುವುದಾಗಿ ಬೆದರಿಸುತ್ತಾರೆ ಯಾರೂ ಕೂಡ ಆಮಿಷಕ್ಕೆ ಈಡಾಗಬಾರದು, ಭಯಪಡಿಸಿದರೆ ಹೆದರಬಾರದು ನಾವೆಲ್ಲ ನಿಮ್ಮ ಜೊತೆ ಇದ್ದೇವೆ ಎಂದು ಬಳ್ಳಾರಿ ಗ್ರಾಮೀಣ ಶಾಸಕ ಬಿ.ನಾಗೇಂದ್ರ ಹೇಳಿದರು.*
*ಚುನಾವಣೆ ಸಂದರ್ಭದಲ್ಲಿ ಆಮಿಷ ಒಡ್ಡುವವರು ಬರುತ್ತಾರೆ. ಅದು ಮಾಡುತ್ತೇವೆ, ಇದು ಮಾಡುತ್ತೇವೆ ಎನ್ನುತ್ತಾರೆ ಯಾರೂ ಕೂಡ ವಿಚಲಿತರಾಗಬಾರದು. ಗೊಂದಲಕ್ಕೇ ಈಡಾಗಬಾರದು ಎಂದರು.*
*ನನ್ನ ಮೇಲೆ ಸುಳ್ಳು ಕೇಸು ಹಾಕಿ ಬೆದರಿಸುವ ಯತ್ನ ನಡೆಯಿತು, ತೊಂದರೆ ಕೊಟ್ಟರು. ಹೀಗಿದ್ದರೂ ನಾನು ಇಂದು ಕಾಂಗ್ರೆಸ್ ಪಕ್ಷದಲ್ಲಿ ಇದ್ದೇನೆ. ಮುಂಬರುವ ದಿನಗಳಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ. ನಾನು ಶಾಸಕನಾದರೆ ನೀವೆಲ್ಲ ಶಾಸಕನಾದಂತೆ ಎಂದು ಹೇಳಿದ ಶಾಸಕ ನಾಗೇಂದ್ರ, ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ಖಚಿತ. ಆಗ ಕೌಲಬಜಾರ್ ಪ್ರದೇಶವನ್ನು, ಇಡೀ ಗ್ರಾಮೀಣ ಕ್ಷೇತ್ರವನ್ನು ಅಭಿವೃದ್ಧಿಪಡಿಸೋಣ ಎಂದರು.*
*ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆಯ ಮಹಾಪೌರರಾದ ಶ್ರೀಮತಿ ರಾಜೇಶ್ವರಿ ಸುಬ್ಬರಾಯ್ಡು, ಉಪ ಮಹಾಪೌರರು ಶ್ರೀಮತಿ ಮಾಲಾನ್ ಬೀ, ಪಾಲಿಕೆ ಸದಸ್ಯರಾದ ಶ್ರೀಮತಿ ಡಿ.ಸುಕ್ಕುಂ, ಬಿ.ಜಾನಕಮ್ಮ, ಜಬ್ಬರ್, ಕಾಂಗ್ರೆಸ್ ಮುಖಂಡರಾದ ಸುಬ್ಬಾರಾಯುಡು, ನಾಗಲಕೆರೆ ಗೋವಿಂದ, ಅಯಾಜ್ ಅಹಮದ್, ಗುಮ್ಮನೂರು ಜಗನ್ನಾಥ್, ಶಿವರಾಜ್, ಸೋಮು, ಅಲ್ಲಾ ಬಕಷ್, ಅಕ್ಬರ್, ಬಿ.ಆರ್.ಎಲ್ ಸೀನಾ, ಲೋಕೇಶ್, ನಾಜು, ಮಹಮ್ಮದ್ ಬಾಯ್, ಚಿನ್ನ, ಸರಗು ನಾಗರಾಜ್, ಖಾಜಾ ಖಾನ್, ಬೆಣಕಲ್ ಬಸವರಾಜ್ ಗೌಡ, ಶ್ರೀನಾಥ್, ಗೋನಾಳ ನಾಗಭೂಷಣ ಗೌಡ, ದುರುಗಣ್ಣ ಸೇರಿದಂತೆ ಕಾಂಗ್ರೆಸ್ ಪಕ್ಷದ ಮುಖಂಡರು ಪಾಲ್ಗೊಂಡಿದ್ದರು.*