This is the title of the web page
This is the title of the web page

Please assign a menu to the primary menu location under menu

State

⚡ಮಹತ್ವ ಬೆಳವಣಿಗೆ, ಜನರ ಮೆಚ್ಚುಗೆ!! ಅಭಿವೃದ್ಧಿ,ಜನರಪರ ಯೋಜನೆ ಗಳನ್ನು ರೂಪಿಸುವ ವಂತೆ ಸೂಚನೆ ನೀಡಿದ, ಡಾ”ಸಯ್ಯದ್ ನಾಸೀರ್ ಹುಸೇನ್

⚡ಮಹತ್ವ ಬೆಳವಣಿಗೆ, ಜನರ ಮೆಚ್ಚುಗೆ!! ಅಭಿವೃದ್ಧಿ,ಜನರಪರ ಯೋಜನೆ ಗಳನ್ನು ರೂಪಿಸುವ ವಂತೆ ಸೂಚನೆ ನೀಡಿದ, ಡಾ”ಸಯ್ಯದ್ ನಾಸೀರ್ ಹುಸೇನ್

*⚡ಮಹತ್ವ ಬೆಳವಣಿಗೆ, ಜನರ ಮೆಚ್ಚುಗೆ!! ಅಭಿವೃದ್ಧಿ,ಜನರಪರ ಯೋಜನೆ ಗಳನ್ನು ರೂಪಿಸುವ ವಂತೆ ಸೂಚನೆ ನೀಡಿದ, ಡಾ”ಸಯ್ಯದ್ ನಾಸೀರ್ ಹುಸೇನ್* ಬಳ್ಲಾರಿ (8)ದಿನಾಂಕ: 06.07.2022 ರಂದು ನಡೆದ ಬಳ್ಳಾರಿ ಮಹಾನಗರ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಬಳ್ಳಾರಿ ನಗರದ ಸ್ವಚ್ಛತೆ, ಕುಡಿಯುವ ನೀರು, ಸೌಂದರ್ಯೀಕರಣ, ವಿವಿಧ ಕಾಮಗಾರಿಗಳ ಪ್ರಗತಿ ಪರಿಶೀಲನೆ ಹಾಗೂ ಇನ್ನಿತರೆ ಪ್ರಮುಖ ವಿಷಯಗಳ ಕುರಿತಂತೆ ಸುಮಾರು 9 ಗಂಟೆಗಳ ಕಾಲ ಸುಧೀರ್ಘವಾಗಿ,ಜಿಪಂ ನಜೀರ್ ಸಭಾಂಗಣದಲ್ಲಿ ಸಾಮಾನ್ಯ ಸಭೆಯಲ್ಲಿ ಚರ್ಚಿಸಲಾಯಿತು.

ಈ ಸಂದರ್ಭದಲ್ಲಿ ಬಳ್ಳಾರಿ ಗ್ರಾಮಾಂತರ ಶಾಸಕರಾದ ಶ್ರೀ ಬಿ ನಾಗೇಂದ್ರ ರವರು ಹಾಗೂ ನಮ್ಮ ಪಕ್ಷದ ಮಹಾನಗರ ಪಾಲಿಕೆಯ ಸದಸ್ಯರೆಲ್ಲರೂ ಪಾಲಿಕೆ ವ್ಯಾಪ್ತಿಯ ಹಲವು ಪ್ರಮುಖ ಸಮಸ್ಯೆಗಳನ್ನು ಮಾನ್ಯ ಬಳ್ಳಾರಿ ಮಹಾನಗರ ಪಾಲಿಕೆಯ ಮಹಾಪೌರರು ಮತ್ತು ಆಯುಕ್ತರು ಗೆ ಪ್ರಸ್ತಾಪಿಸಿ ಅದರ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳಲು,ಒತ್ತಾಯಿಸಲಾಯಿತು.

🔥ಬಳ್ಳಾರಿ ನಗರದ ಜನಸಾಮಾನ್ಯರು ಮತ್ತು ಬಡವರ ಮೇಲೆ ಹೊರೆಸಲಾಗುತ್ತಿರುವ ಆಸ್ತಿ ತೆರಿಗೆಯನ್ನು ಪರಿಷ್ಕರಿಸುವ ಕುರಿತು :
ಈ ಹಿಂದೆ 2005-06 ನೇ ಸಾಲಿನಲ್ಲಿ ಆಸ್ತಿ ತೆರಿಗೆಯನ್ನು ಪರಿಷ್ಕರಣ ಮಾಡಲಾಗಿದ್ದು, ತದನಂತರ 2005-06 ನೇ ಸಾಲಿನ ಮಾರುಕಟ್ಟೆ ಬೆಲೆಯನ್ನಾಧಾರಿಸಿ ಪಾಲಿಕೆಯು ಪ್ರತಿ ಮೂರು ವರ್ಷಕ್ಕೊಮ್ಮೆ ಶೇ. 15 ರಿಂದ 20 ಏರಿಸುತ್ತಾ ಬಂದಿದೆ,2005 ನೇ ಸಾಲಿನಲ್ಲಿ ಆದ ತೆರಿಗೆ ಪರಿಷ್ಕರಣೆಯಾಗದೇ ಸುಮಾರು 15 ವರ್ಷಗಳ ನಂತರ ಸರ್ಕಾರದ ಮಾರ್ಗಸೂಚಿಗಳನ್ವಯ ಪಾಲಿಕೆಯ ಅಧಿಕಾರಿಗಳು ಆಸ್ತಿ ತೆರಿಗೆಯನ್ನು ಹೆಚ್ಚಿಸಿರುತ್ತಾರೆ,ಇದರಿಂದ ಬಳ್ಳಾರಿ ನಗರದ “ಜನಸಾಮಾನ್ಯರಿಗೆ ಮತ್ತು ಕಡಬಡವರ ಹೊಟ್ಟೆಯ ಮೇಲೆ ಹೊಡೆದಂತಾಗಿದೆ ಎಂದು ಸಭೆಯ ಗಮನಕ್ಕೆ ತರಲಾಯಿತು”.

ಈ ನಿಟ್ಟಿನಲ್ಲಿ ಜನಸಾಮಾನ್ಯರು ಮತ್ತು ಬಡವರ ಮೇಲೆ ಹೊರೆಸಲಾಗುತ್ತಿರುವ *ಆಸ್ತಿ ತೆರಿಗೆಯನ್ನು ವಿವಿಧ ಪ್ರದೇಶಗಳಂತೆ (ಸ್ಲಂ ಪ್ರದೇಶ/ ಹಿಂದುಳಿದ ಪ್ರದೇಶ/ ಐಷಾರಾಮಿ ಪ್ರದೇಶ) ವಿಂಗಡಿಸಿ ತೆರಿಗೆಯನ್ನು ಕಡಿಮೆ ಮಾಡುವ ಬಗ್ಗೆ ಸ್ಥಾಯಿ ಸಮಿತಿಯಲ್ಲಿ ಚರ್ಚಿಸಿ ಮುಂದಿನ ಸಭೆಯಲ್ಲಿ ಮಂಡಿಸಲು ಸಭೆಯಲ್ಲಿ ಒತ್ತಾಯಿಸಿದ್ದಾರೆ*
ಈ ವಿಷಯವಾಗಿ ಮಾನ್ಯ ಮಹಾಪೌರರು ಮತ್ತು ಆಯುಕ್ತರು ಆಸ್ತಿ ತೆರಿಗೆಯನ್ನು ಕಡಿಮೆ ಮಾಡುವ ಬಗ್ಗೆ ಸ್ಥಾಯಿ ಸಮಿತಿಯಲ್ಲಿ ಚರ್ಚಿಸಿ ಮುಂದಿನ ಸಭೆಯಲ್ಲಿ ಮಂಡಿಸಲಾಗುವುದೆಂದು ಸಭೆಗೆ ತಿಳಿಸಿದರು.

ಬಳ್ಳಾರಿ ನಗರದಲ್ಲಿ 24×7 ನೀರಿನ ಸೌಲಭ್ಯ ಒದಗಿಸುವ ಕುರಿತು :-
ಈ ಹಿಂದೆ ಹಲವಾರು ವರ್ಷಗಳ ಹಿಂದೆ ನಗರದಲ್ಲಿ 24×7 ನೀರಿನ ಯೋಜನೆಯನ್ನು ಸರ್ಕಾರವು ರೂಪಿಸಿ, ಹಲವಾರು ಕೋಟಿಗಳಷ್ಟು ಹಣವನ್ನು ಮೀಸಲಿಡಲಾಗಿದೆ,ಆದರೆ ಆ ಯೋಜನೆಯು ಸಂಪೂರ್ಣ ವಿಫಲವಾಗಿದ್ದು, ಈಗಲೂ ಸಹ *ಬಳ್ಳಾರಿ ಜನತೆಗೆ 12 ರಿಂದ 15 ದಿನಗಳಿಗೊಮ್ಮೆ ನೀರು ನೀಡುತ್ತಿರುವುದು ನಮ್ಮ ದೌರ್ಭಾಗ್*, ನಮ್ಮಲ್ಲಿ 85 MLD ರಷ್ಟು ನೀರಿನ ಲಭ್ಯತೆ ಇದ್ದಾಗ್ಯೂ 24×7 ಗಂಟೆಗಳ ಕಾಲ ನೀರು ನೀಡಿದರೂ ನಗರಕ್ಕೆ 75 MLD ನೀರು ಅವಶ್ಯಕತೆ ಇರುತ್ತದೆ.

ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಳ್ಳಲಾಯಿತು.

ಈ ನಿಟ್ಟಿನಲ್ಲಿ ಬಳ್ಳಾರಿ ಜನತೆಯ ನೀರಿನ ಸಮಸ್ಯೆಯನ್ನು ಬಗೆಹರಿಸಲು ನಗರದಲ್ಲಿ ನೀರು ವಿತರಣಾ ಘಟಕಗಳನ್ನು ಸ್ಥಾಪಿಸಿ ಹೊಸದಾಗಿ ಕುಡಿಯುವ ನೀರಿನ ಪೈಪ್ ಲೈನ್ ಮತ್ತು ಕೊಳಚೆ ನೀರು ಪೈಪ್ ಲೈನ್ ಗಳನ್ನೂ ಅಳವಡಿಸಬೇಕಾಗಿದೆ. ಅದಕ್ಕೆ KMERC ಅನುದಾನವನನ್ನು ಸದಉಪಯೋಗಿಸಿಕೊಳ್ಳಲು ಸೂಕ್ತ ಕ್ರಿಯಾ ಯೋಜನೆಯನ್ನು ತಯಾರಿಸಲು ಅಧಿಕಾರಿಗಳಿಗೆ 10 ದಿನಗಳ ಕಾಲ ಕಾಲವಕಾಶ ನೀಡಿ ತ್ವರಿತವಾಗಿ ನೀರಿನ ಸಮಸ್ಯೆಯನ್ನು ಬಗೆಹರಿಸಲು ಸೂಚಿಸಿದರು.

*ಬಳ್ಳಾರಿ ನಗರದಲ್ಲಿ ವಿವಿಧ ವೃತ್ತಗಳ ನಾಮಕರಣ ಮಾಡುವ ಕುರಿತು*
ಕರ್ನಾಟಕದ ಏಕೀಕರಣಕ್ಕೆ ತಮ್ಮ ಪ್ರಾಣವನ್ನು ತೆತ್ತ ಏಕೈಕ ಮಹನೀಯರಾದ ನಮ್ಮ ಬಳ್ಳಾರಿಯ ಪೈಲ್ವಾನ್ ರಂಜಾನ್ ಸಾಬ್ ಅವರೊರೊಬ್ಬರೇ ಎಂಬುದು ನಮ್ಮ ನಗರದ ಇತಿಹಾಸ ಮತ್ತು ಹೆಮ್ಮೆ. ನಗರದಲ್ಲಿ ಅವರ ಒಂದು ಪುತ್ಥಳಿ ನಿರ್ಮಾಣ ಮಾಡುವ ಸಲುವಾಗಿ ಅನೇಕರು ಧ್ವನಿ ಎತ್ತಿದ್ದಾರೆ. ಆದರೆ ಆ ಧ್ವನಿ ಕೇವಲ ಧ್ವನಿಯಾಗಿ ಉಳಿದಿದೆ,ಈ ನಿಟ್ಟಿನಲ್ಲಿ ಬಳ್ಳಾರಿಯ ಯಾವುದಾದರೂ ಪ್ರಮುಖ ವೃತ್ತದಲ್ಲಿ *ದಿ|| ಪಿಂಜಾರ್ ರಂಜಾನ್ ಸಾಬ್ ರವರ ಪುತ್ಥಳಿಯನ್ನು ನಿರ್ಮಾಣ ಮಾಡಿ, ಆ ವೃತ್ತಕ್ಕೆ “ಪಿಂಜಾರ್ ರಂಜಾನ್ ಸಾಬ್ ವೃತ್ತ” ಎಂದು ಮರು ನಾಮಕರಣ ಮಾಡಲು ಸಭೆಯಲ್ಲಿ ಪ್ರಸ್ತಾಪಿಸಲಾಯಿತು*.

ಈ ವಿಷಯವಾಗಿ ಮಾನ್ಯ ಮಹಾಪೌರರು ಮತ್ತು ಆಯುಕ್ತರು ಪಿಂಜಾರ್ ರಂಜಾನ್ ಸಾಬ್ ರವರ ಪುತ್ಥಳಿ ನಿರ್ಮಾಣಕ್ಕೆ ಸೂಕ್ತ ವೃತ್ತವನ್ನು ಗುರುತಿಸಿ ಮುಂದಿನ ಸಭೆಯಲ್ಲಿ ಮಂಡಿಸಲಾಗುವುದೆಂದು ಸಭೆಗೆ ತಿಳಿಸಿದರು.

ಬಳ್ಳಾರಿ ನಗರದ ಸಂಗನಕಲ್ಲು ರಸ್ತೆಯನ್ನು ಹೊಂದುಕೊಂಡು ಹತ್ತಿರದಲ್ಲಿಯೇ ಬಸವೇಶ್ವರ ನಗರ ಇರುವುದರಿಂದ ಕೆ.ಇ.ಬಿ ವೃತ್ತವನ್ನು *ಬಸವೇಶ್ವರ ವೃತ್ತ” ಎಂದು ಮರು ನಾಮಕರಣ ಮಾಡಲು ಹಾಗೂ ಬಳ್ಳಾರಿ ನಗರದ ಕೋಟೆ ಪ್ರದೇಶದ ಹತ್ತಿರವಿರುವ ರಿಪಬ್ಲಿಕ್ ಸರ್ಕಲ್ ನ್ನು “ಭಗವಾನ್ ಮಹಾವೀರ ವೃತ್ತ” ಎಂದು ಮರು ನಾಮಕರಣ ಮಾಡಲು ಒಪ್ಪಿಗೆ ಸೂಚಿಸಲಾಯಿತು*!!

ಬಳ್ಳಾರಿ ಮಹಾನಗರ ಪಾಲಿಕೆಯನ್ನು DIGITAL MAPPING ಮಾಡುವ ಕುರಿತು :-
ಬಳ್ಳಾರಿ ನಗರದಲ್ಲಿ ಸಾಕಷ್ಟು ಕಂದುಕೊರತೆಗಳಿದ್ದು ಇದರಿಂದ ಜನ ಸಾಮಾನ್ಯರು ಪಾಲಿಕೆಯಿಂದ ತಮ್ಮ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳದೇ ಅವಕಾಶ ವಂಚಿತರಾಗಿದ್ದಾರೆ,ಈ ನಿಟ್ಟಿನಲ್ಲಿ ಬಳ್ಳಾರಿ ಮಹಾನಗರ ಪಾಲಿಕೆಯಲ್ಲಿ ಒಂದು IT Cell ನ್ನು ಸ್ಥಾಪಿಸಿ ನಗರದ ಹಾಲಿ ಇರುವ ನೀರಿನ ಪೈಪ್ ಲೈನ್, ಕೊಳಚೆ ನೀರು ಪೈಪ್ ಲೈನ್, ರಸ್ತೆಗಳು ಹಾಗೂ ಇತರೆಗಳನ್ನು DIGITAL MAPPING ಮಾಡುವುದು ಹಾಗೂ ಸದರಿ DIGITAL MAPPING ನ್ನು ಆಧಾರದಲ್ಲಿಟ್ಟುಕೊಂಡು ನಗರದಲ್ಲಿ ಇತರೆ ಇಲಾಖೆಗಳು ಹೊಸ ಕಾಮಗಾರಿಯನ್ನು ಕೈಗೊಂಡಲ್ಲಿ ಬಳ್ಳಾರಿ ಮಹಾನಗರ ಪಾಲಿಕೆಯ ನಿರಾಕ್ಷೇಪಣೆ ಪತ್ರವನ್ನು (NOC) ಪಡೆದು ಕಾಮಗಾರಿಯನ್ನು ಕೈಗೊಳ್ಳಲು ಸಭೆಯ ಗಮನಕ್ಕೆ ತರಲಾಯಿತು.

ಮಹಾನಗರ ಪಾಲಿಕೆಯ ಆಸ್ತಿಗಳ ಪಟ್ಟಿಯನ್ನು ತಯಾರಿಸುವ ಕುರಿತು :-
ಬಳ್ಳಾರಿ ಮಹಾನಗರದ ವ್ಯಾಪ್ತಿಯಲ್ಲಿ ಪಾಲಿಕೆ ವ್ತಾಪ್ತಿಯಲ್ಲಿ ಸಾಕಷ್ಟ ಖಾಲಿ ಜಾಗದ ಆಸ್ತಿಗಳು ಇರುತ್ತವೆ,ಪಾಲಿಕೆಯ ಅಧಿಕಾರಿಗಳು ಅವುಗಳನ್ನು ಪತ್ತೆಹಚ್ಚಿ ಆ ಜಾಗಗಳಲ್ಲಿ ವಾಣಿಜ್ಯ ಮಳಿಗೆಗಳು ಹಾಗೂ ಇತರೆ ಕಂದಾಯ ಬರುವಂತಹ ಕಾರ್ಯಗಳನ್ನು ಕೈಗೊಳ್ಳಲು ಸೂಚಿಸಲಾಯಿತು.

ಬೀದಿ-ಬದಿ ವ್ಯಾಪಾರಸ್ಥರ ಕುಂದುಕೊರತೆಗಳ ಕುರಿತು :-
ಬಳ್ಳಾರಿ ನಗರದ ವಿವಿಧ ಸ್ಥಳಗಳಲ್ಲಿ ಬಡ ಬೀದಿ-ಬದಿ ವ್ಯಾಪಾರಸ್ಥರು ತಮ್ಮ ಹೊಟ್ಟೆ ಪಾಡಿಗಾಗಿ ವ್ಯಾಪಾರ ಮಾಡುತ್ತಾ ಬಂದಿರುತ್ತಾರೆ,ಆದರೆ ನಗರದ ಸೌಂದರ್ಯೀಕರಣ ಸಲುವಾಗಿ *ಬಡ ವ್ಯಾಪಾರಸ್ಥರನ್ನು ಅವರ ವ್ಯಾಪಾರ ಸ್ಥಳದಿಂದ ಪಾಲಿಕೆ ಅಧಿಕಾರಿಗಳು ಏಕಾಏಕಿ ದೌರ್ಜನ್ಯದಿಂದ ತೆರವುಗೊಳಿಸುತ್ತಿರುವುದು ಗಮನಕ್ಕೆ ಬಂದಿದೆ. ನಾವು ನಗರದ ಸೌಂದರ್ಯೀಕರಣಕ್ಕೆ ಯಾವುದೇ ತಡೆ ನೀಡುವುದಿಲ್ಲ, ಆದರೆ ಸದರಿ ಬಡ ಬೀದಿ-ಬದಿ ವ್ಯಾಪಾರಸ್ಥರಿಗೆ ಪರ್ಯಾಯ ವ್ಯವಸ್ಥೆಯನ್ನು ಮಾಡಿ ತದನಂತರ ಅವರನ್ನು ತೆರವುಗೊಳಿಸಲು ಸಭೆಯಲ್ಲಿ ಪ್ರಸ್ತಾಪಿಸಿದರು* ಇದಕ್ಕೆ ಪಾಲಿಕೆಯ ಸಂಬಂಧಪಟ್ಟ ಅಧಿಕಾರಿಗಳು ಬೀದಿ-ಬದಿ ವ್ಯಾಪಾರಸ್ಥರಿಗೆ ಪರ್ಯಾಯ ವ್ಯವಸ್ಥೆ ಮಾಡುವವರೆಗೆ ತೆರವು ಕಾರ್ಯ ಮಾಡುವುದಿಲ್ಲವೆಂದು ಒಪ್ಪಿಗೆ ಸೂಚಿಸಿದರು.

ಸಾರ್ವಜನಿಕ ಶೌಚಾಲಯ ನಿರ್ಮಾಣ ಮಾಡುವ ಕುರಿತು :-
ಬಳ್ಳಾರಿ ನಗರಕ್ಕೆ ಪಕ್ಕದ ಆಂದ್ರ ಪ್ರದೇಶ ಹಾಗೂ ರಾಜ್ಯ ಇತರೆ ಜಿಲ್ಲೆಗಳಿಂದ ಮತ್ತು ಹಳ್ಳಿಗಳಿಂದ ರೈತರು, ವ್ಯಾವಾರಸ್ಥರು, ಮಹಿಳೆಯರು ಹಾಗೂ ಸಾರ್ವಜನಕರು ಆಗಮಿಸುತ್ತಾರೆ. ಆದರೆ ನಗರದಲ್ಲಿ ಯಾವೊಂದು ಪ್ರದೇಶದಲ್ಲಿ ಸುಸಜ್ಜಿತ ಶೌಚಾಲಯಗಳು ಇರುವುದಿಲ್ಲ ಇದರಿಂದಾಗಿ ಸಾರ್ವಜನಿಕರು ದೂರದ ಪ್ರದೇಶಗಳಿಗೆ ತೆರಳಿ ವಿಸರ್ಜನೆ ಮಾಡುವ ಪ್ರಮೇಯ ಬಂದಿದೆ. ಬಳ್ಳಾರಿ ನಗರದಲ್ಲಿ ಒಂದೇ ಒಂದು ಸುಸಜ್ಜಿತ ಶೌಚಾಲಯವು ಇಲ್ಲದೇ ಇರುವುದು ನಮ್ಮ ದುರದೃಷ್ಟಕರ ಸಂಗತಿ. ಈ ನಿಟ್ಟಿನಲ್ಲಿ ನಗರದಲ್ಲಿ ಈಗಾಗಲೇ ಇರುವ ಶೌಚಾಲಯಗಳನ್ನು ನವೀಕರಿಸಲು ಹಾಗೂ ಬಹುಸಂಖ್ಯೆ ಇರುವ ಸ್ಥಳಗಳಲ್ಲಿ ಹೊಸ ಶೌಚಾಲಯಗಳನ್ನು ನಿರ್ಮಾಣ ಮಾಡಿ ಅವುಗಳನ್ನು ಸುಸಜ್ಜಿತವಾಗಿ ನಿರ್ವಹಣೆ ಮಾಡಲು ಸಭೆಯ ಅಧಿಕಾರಿಗಳಿಗೆ ಸೂಚಿಸಲಾಯಿತು.

ಮಹಾನಗರ ಪಾಲಿಕೆಯಲ್ಲಿ ಹೆಚ್ಚುವರಿ ಕಾರ್ಮಿಕರನ್ನು ನೇಮಿಸುವ ಕುರಿತು :-
ಬಳ್ಳಾರಿ ಮಹಾನಗರ ಪಾಲಿಕೆಯು ಒಂದು ದೊಡ್ಡ ಪಾಲಿಕೆಯಾಗಿದ್ದು ಇಲ್ಲಿನ ಸ್ವಚ್ಛತೆಗಾಗಿ ಇನ್ನೂ ಅವಶ್ಯವುರುವ ಹೆಚ್ಚುವರಿ ಕಾರ್ಮಿಕರನ್ನು ಪಾಲಿಕೆಯು ನೇಮಿಸಿ, ಕಾರ್ಮಿಕರ ಕಾರ್ಯವನ್ನು ಸುಗಮಗೊಳಿಸಲು ಸಭೆಯಲ್ಲಿ ಸೂಚಿಸಲಾಯಿತು.
ಮುಂದುವರೆದು ಬಳ್ಳಾರಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬಯೋಮೆಡಿಕಲ್ ತ್ಯಾಜ್ಯದ ಸೇವಾ ಶುಲ್ಕ ವಿಧಿಸುವ ಬಗ್ಗೆ, ಮಹಾನಗರ ಪಾಲಿಕೆಯ ಘನತ್ಯಾಜ್ಯ, ದ್ರವ ತ್ಯಾಜ್ಯ ಹಗೂ ಸಿ ಮತ್ತು ಡಿ ತ್ಯಾಜ್ಯ ಸಂಗ್ರಹಣೆ ಮತ್ತು ಸಾಗಾಣಿಕೆ ಹಾಗೂ ಇತರೇ ವಾಹನಗಳಿಗೆ ಅವಶ್ಯವಿರುವ ಮಾನವ ಸಂಪನ್ಮೂಲ ಸೇವೆಯನ್ನು ಹೊರಗುತ್ತಿಗೆ ಅಡಿ ಪಡೆಯುವುದಕ್ಕೆ, 653ಪೌರಕರ್ಮಿಕರಿಗೆ ಬೆಳಗಿನ ಉಪಹಾರ ಒದಗಿಸುವುದಕ್ಕೆ ಭರಿಸಲಾದ 83.42 ಲಕ್ಷ ರೂ.ಗಳು ಸೇರಿದಂತೆ ವಿವಿಧ ವಿಷಯಗಳನ್ನು ಸಭೆಯಲ್ಲಿ ಚರ್ಚಿಸಿ ಅನುಮೋದನೆ ನೀಡಲಾಗಿದೆ ಏಂದು,ರಾಜಕೀಯ ಇತಿಹಾಸದಲ್ಲಿ ಒಂದು ದಿನ ಪೂರ್ತಿ ಪಾಲಿಕೆ ಸಭೆ ನಡೆದಿದೆ, ಯಾಲ್ಲ ಸದಸ್ಯರು ಸಂತೋಷ ವ್ಯಕ್ತಿ ಪಡಿಸಿದ್ದಾರೆ ಎಂದು ತಿಳಿಸಿದ್ದಾರೆ. ನಮಗೆ ಯಾವುದೇ ಪಕ್ಷ ಭೇದವಿಲ್ಲ,ಯಾಲ್ಲರು ಅಭಿವೃದ್ಧಿ, ಜನಪರ ಸಮಸ್ಯೆಗಳನ್ನು ಬಗೆಹರಿಸುವದೇ ನಮ್ಮ ಗುರಿ.ಪಾಲಿಕೆ ಯನ್ನು ಮಾದರಿಯಾಗಿ ಮಾಡಿ ತೋರಿಸಲು ಗುರಿ ಇದೆ. ಮುಂದಿನ ದಿನಗಳಲ್ಲಿ ರಸ್ತೆಗಳು ಅಭಿವೃದ್ಧಿ ಮಾಡಲು ಪ್ಲಾನ್ ಮಾಡಿಕೊಂಡಿದ್ದಿವಿ,ಹೊಸ ಟೆಕ್ನಾಲಜಿ ದಿಂದ ರಸ್ತೆ ಗಳು ಅಭಿವೃದ್ಧಿ ಆಗುವ ಸಾಧ್ಯತೆ ಇದೆ ಮಾಡಿ ತೊರಿಸುವೇ ಎಂದು,ಡಾ|| ಸೈಯದ್ ನಾಸೀರ್ ಹುಸೇನ್
ರಾಜ್ಯಸಭಾ ಸದಸ್ಯರು ತಿಳಿಸಿದ್ದಾರೆ. ಜನರು ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.(ಕೆ.ಬಜಾರಪ್ಪ ವರದಿಗಾರರು ಬಳ್ಳಾರಿ.)


News 9 Today

Leave a Reply