This is the title of the web page
This is the title of the web page

Please assign a menu to the primary menu location under menu

State

10 ಲಕ್ಷ ಮೌಲ್ಯದ ಅನುಮಾನ ಆಸ್ಪದದ ಪಡಿತರ ಅಕ್ಕಿ ಲಾರಿ, ಮಧ್ಯ ರಾತ್ರಿ ದಿಂದ ಠಾಣೆ ಯಲ್ಲಿ, ಬೆಳಿಗ್ಗೆ 9 ಕ್ಕೆ ಲಾರಿ ಇಲ್ಲ. ಎಲ್ಲಾವೂ ವಿಸ್ಮಯ..

10 ಲಕ್ಷ ಮೌಲ್ಯದ ಅನುಮಾನ ಆಸ್ಪದದ ಪಡಿತರ ಅಕ್ಕಿ ಲಾರಿ, ಮಧ್ಯ ರಾತ್ರಿ ದಿಂದ ಠಾಣೆ ಯಲ್ಲಿ, ಬೆಳಿಗ್ಗೆ 9 ಕ್ಕೆ ಲಾರಿ ಇಲ್ಲ. ಎಲ್ಲಾವೂ ವಿಸ್ಮಯ..

10 ಲಕ್ಷ ಮೌಲ್ಯದ ಅನುಮಾನ ಆಸ್ಪದದ ಪಡಿತರ ಅಕ್ಕಿ ಲಾರಿ, ಮಧ್ಯ ರಾತ್ರಿ ದಿಂದ ಠಾಣೆ ಯಲ್ಲಿ, ಬೆಳಿಗ್ಗೆ 9 ಕ್ಕೆ ಲಾರಿ ಇಲ್ಲ. ಎಲ್ಲಾವೂ ವಿಸ್ಮಯ..

ಬಳ್ಳಾರಿ (18) ನಗರದಲ್ಲಿ ಬುಧವಾರ ರಾತ್ರಿ 2.30 ಗಂಟೆ ಸಮಯದಲ್ಲಿ 10 ಲಕ್ಷ ರೂಪಾಯಿ ಮೌಲ್ಯದ ಪಡಿತರಕ್ಕೆಯ ವಾಹನವನ್ನು ಬಳ್ಳಾರಿ ಕೃಷಿ ಉತ್ಪನ್ನ ಮಾರುಕಟ್ಟೆಯ ಪೊಲೀಸ ಅಧಿಕಾರಿಗಳು ತಪಾಸಣೆ ಮಾಡಿ ಠಾಣೆಗೆ ತಂದು ನಿಲ್ಲಿಸಿಕೊಂಡಿದ್ದರು.

ರಾಯಚೂರನಿಂದ ಛತ್ತೀಸ್ಗ ಡ್ ಗೆ ಸಾಗಾಣೆಗೆ ಮಾಡುತ್ತಿದ್ದ ವಾಹನವಾಗಿತ್ತು ವಾಹನಕ್ಕೆ ಆರ್ ಕೆ ಎಂಟರ್ ಪ್ರೈಸಸ್ ರಾಯಚೂರು,ಬಳ್ಳಾರಿ ಎಂದು ವೇಬಿಲ್ ಹಾಕಿ ರಾಯಚೂರುನಿಂದ ಛತ್ತೀಸ್ಗಡಿಗೆ ಅಕ್ಕಿ ಸರಬರಾಜು ಮಾಡುತ್ತಿದ್ದ ಮತ್ತೊಂದು ಬಿಲ್ ಹಾಕಿ ಕಳಿಸಲಾಗಿತ್ತು.

ಈ ವಾಹನಕ್ಕೆ ಬಳ್ಳಾರಿಯ ಹವಂಬಾವಿ ಪ್ರದೇಶದಲ್ಲಿ ಕಳ್ಳಸಾಗಾಣಿಕೆ ಪಡಿತರ
ಅಕ್ಕಿಯನ್ನು ತುಂಬಿದ್ದಾರೆ ಎನ್ನುವ ಖಚಿತ ಮಾಹಿತಿ ಪೊಲೀಸರಿಗೆ ಇದ್ದು ಮಾಹಿತಿ ನೀಡಿರುವ ಅವರನ್ನು ಕೂಡ ಬೆದೆರಿಕೆ ಹಾಕಿದ್ದರೆ ಎಂದು ಸಾರ್ವಜನಿಕವಾಗಿ ಕೇಳಿಬರುತ್ತೆ.

ಮಧ್ಯರಾತ್ರಿದಿಂದ ಬೆಳಿಗ್ಗೆ 9:00 ವರೆಗೆ ವಾಹನವನ್ನು ಇಟ್ಟುಕೊಂಡು ಎಲ್ಲವೂ ಸರಿ ಇದ್ದಾವೆ ಎಂದು ಗಾಡಿಯನ್ನು ಬಿಟ್ಟು ಕಳಿಸಿರುವುದು ಎಲ್ಲವೂ ವಿಸ್ಮಯವಾಗಿದೆ.

ಈ ಠಾಣೆಗೆ ನೂತನವಾಗಿ ಬಂದಿರುವ ಪೊಲೀಸ್ ಅಧಿಕಾರಿಯಾಗಿರುವ ತೋರಣಗಲ್ಲು ಸಂಡೂರು ಲೋಕಾಯುಕ್ತ ಮುಂತಾದ ಇಲಾಖೆಗಳಲ್ಲಿ ಸೇವೆ ಸಲ್ಲಿಸಿ ಬಳ್ಳಾರಿ ಎಪಿಎಂಸಿ ಠಾಣೆಗೆ ವರ್ಗಾವಣೆ ಆಗಿರುವ ರಫೀಕ್ ಅವರ ಮೇಲೆ ಅನುಮಾನ ವ್ಯಕ್ತಪಡಿಸುತ್ತಿದ್ದಾರೆ ಸಾರ್ವಜನಿಕರು. ಈಗಾಗಲೇ ಪಡಿತರ ಕಳ್ಳಸಾಗಾಣಿಕೆ ದಂದೆ ನಡೆಯುತ್ತಿದ್ದು ಕಣ್ಣಿಗೆ ಕಂಡು ಕಾಣದಂತೆ ನಡೆಯುತ್ತದೆ ಇಂತಹ ಸಂದರ್ಭದಲ್ಲಿ ರಾಯಚೂರಿನಿಂದ ಛತ್ತೀಸ್ಗಢ ಗೆ ಬಿಲ್, ಬಳ್ಳಾರಿಯಲ್ಲಿ ಅಕ್ಕಿ, ಪೊಲೀಸ್ ಠಾಣೆಯಲ್ಲಿ ಗಾಡಿ,ಯಾವುದೇ ಪ್ರಕರಣ ಇಲ್ಲದೆ ಬಿಟ್ಟು ಕಳಿಸಿರುವುದು ಆಶ್ಚರ್ಯ ಆಗಿದೆ.
ಪೊಲೀಸ್ ಅಧಿಕಾರಿಗಳಿಗೆ ಕಪ್ಪು ಹಣ ಮುಟ್ಟಿದೆ ಎನ್ನುವ ಗುಸು,ಗುಸು ಇದೇ. ಲಾರಿ ಬಿಲ್ ಗಳು ಮಧ್ಯ ರಾತ್ರಿ ಚೆಕ್ ಮಾಡಿದ್ದು ಯಾರು,?? ಸಾಧಾರಣ ಟೈಮ್ ನಲ್ಲಿ ಬಂದು ನೋಡಲು ಬರದೇ ಇರುವ ಅಧಿಕಾರಿಗಳು, ಮಧ್ಯ ರಾತ್ರಿ ಬಂದು ನೋಡಿರಬಹುದಾ..?? ಈಗಲೇ ರಫೀಕ್ ಮೇಲೆ ಕೆಲ ಸಿಬ್ಬಂದಿ ಮೇಲೆ, ಆರೋಪ ಗಳು ಇದ್ದಾವೆ, ಅಕ್ರಮ ಚಟುವಟಿಕೆಗಳಿಗೆ ನಿರ್ದೇಶಕರು ಅನ್ನುವ ಕೀರ್ತಿ ಇದೇ, ಲೋಕಾಯುಕ್ತ ದಲ್ಲಿ ಇದ್ದ ಸಮಯ ದಲ್ಲಿ ಕೂಡ ಬಹುತೇಕ ಡ್ರಾಮ್ ಗಳು ಮಾಡಿದ್ದೂ ನೊಂದ ಅವರ ನೋವಿನ ವಿಚಾರ ಆಗಿದೆ. ಜಿಲ್ಲೆ ಗೆ ಪವರ್ ಫುಲ್ Sp ಅನ್ನುವ ಶೋಭ್ ರಾಣಿ ಅವರ ಮೇಲೆ ಜನರಿಗೆ ನಂಬಿಕೆ ಇದೇ. ಮೇಡಂ ಯಾವ ಕ್ರಮ ಮಾಡುತ್ತಾರೆ ಅನ್ನುವದು ಜನರ ಪ್ರಶ್ನೆ ಆಗಿದೆ, ರಫೀಕ್ ಪದೇ ಪದೇ ದಾದಾ ಸಂತೋಷ್ ಲಾಡ್ ಹೆಸರು ಹೇಳಿ ಬೆಳಗುತ್ತ ಇದ್ದಾರೆ. ರಫೀಕ್ ಕೂಡ ಆಗರ್ಭ ಪಟ್ಟಿ ಯಲ್ಲಿ ಇದ್ದಾರೆ. ಇದರ ಅಸಲಿ ಕಥೆ ಬೇರೆ ಇದೇ…


News 9 Today

Leave a Reply