ಬಳ್ಳಾರಿ ಜಿಲ್ಲಾ ಮದ್ಯ ಮಾರಾಟಗಾರರ ಸಂಘದವತಿಯಿಂದ ಸಾಂಕಿರ್ತಿಕ ಪ್ರತಿಭಟನೆ ಹಮ್ಮಿಕೊಳ್ಳಲಾಯತು.
ಬಳ್ಳಾರಿ (4) ರಾಜ್ಯದ ಎಲ್ಲಾ ವರ್ಗದ ಸನ್ನದುದಾರರ ಬೇಡಿಕೆ ಮತ್ತು ಸಮಸ್ಯೆಗಳಿಗೆ ಸಂಬಂಧಪಟ್ಟುಅಂತೆ ದಿನಾಂಕ 04.04.2025 ರಂದು ರಾಜ್ಯದ ಎಲ್ಲಾ ಜಿಲ್ಲೆಯ ಜಿಲ್ಲಾಧಿಕಾರಿ ಕಛೇರಿ ಎದುರು ಜಿಲ್ಲಾ ಸಂಘದ ನೇತೃತ್ವದಲ್ಲಿ ಎಲ್ಲಾ ವರ್ಗದ ಸನ್ನದುದಾರರು ‘ಸಾಂಕೇತಿಕ ಪ್ರತಿಭಟನೆ’ಯನ್ನುಹಮ್ಮಿಕೊಳ್ಳಲಾಗಿತ್ತು. ಹಲವಾರು ಬೇಡಿಕೆ ಗಳು ಗೆ ಒತ್ತಾಯ ಮಾಡಿದರು.
1 : ಚಿಲ್ಲರೆ ಮದ್ಯ ಮಾರಾಟದ ಮೇಲೆ ಕನಿಷ್ಠ ಶೇಕಡ 20 ಲಾಭಾಂಶ ನೀಡುವಂತೆ ವಿನಂತಿಮಾಡಿದರು.
2 : ಹೆಚ್ಚುವರಿ ಅಬಕಾರಿ ಶುಲ್ಕವನ್ನು ಕಡಿಮೆ ಮಾಡುವಕುರಿತು ಒತ್ತಾಯ ಮಾಡಿದ್ರು.3 : ಯಾವುದೇ ಕಾರಣಕ್ಕೂ ಸನ್ನದು ಶುಲ್ಕವನ್ನು ಹೆಚ್ಚಳ ಮಾಡಬಾರದು. ಕಾರಣ ಇತ್ತೀಚಿನ ವರ್ಷಗಳಲ್ಲಿ ಸನ್ನದುಗಳ ಸಂಖ್ಯೆ ಮಾತ್ರ ಹೆಚ್ಚಳ ಆಗಿರುವುದು ಬಿಟ್ಟರೆ ಮದ್ಯ ಮಾರಾಟ ಗಣನೀಯವಾಗಿ ವೃದ್ಧಿಯಾಗಿಲ್ಲ
ಕೆಲವೊಂದು ಸನ್ನದುಗಳನ್ನು ಏಲಂ ಮಾಡುವ ಸುದ್ದಿ ಮಾಧ್ಯಮಗಳಲ್ಲಿ ಬರುತ್ತಿದ್ದು, ದಿನಾಂಕ 14.09.2023ರಲ್ಲಿ ಇಲಾಖೆ ಸರ್ಕಾರಕ್ಕೆ ನೀಡಿರುವ ಪ್ರಸ್ತಾವನೆಯಲ್ಲೂ ಕೂಡ ಇದೆ,ದಯವಿಟ್ಟು ಯಾವುದೇ ಕಾರಣಕ್ಕೂ ಸನ್ನದುಗಳನ್ನು ಏಲಂ ಮಾಡಬಾರದಾಗಿ
ಸಿ.ಎಲ್-2ಗಳಲ್ಲಿ ಪಾನೀಕರಿಗೆ ಮದ್ಯ ಸೇವಿಸಲು ಅವಕಾಶ ಮಾಡಿಕೊಡಬೇಕು ಸಿ.ಎಲ್-9, ಸಿಎಲ್-7 ಅಥವಾ ಇನ್ನಿತರ ದೊಡ್ಡ ಹೋಟೆಲುಗಳಿಗೆ ಹೋಗಿ ಮದ್ಯದೊಂದಿಗೆ ಆಹಾರ ಪದಾರ್ಥಗಳನ್ನು ತೆಗೆದುಕೊಂಡು ದುಬಾರಿ ಖರ್ಚು ಮಾಡಲು ಸಾಧ್ಯವಿಲ್ಲದ ಬಡ ವರ್ಗದ ಗ್ರಾಹಕರಿಗೆ,ಅನುಕೂಲವಾಗಲು ಸನ್ನದು ಷರತ್ತನ್ನು ಸಡಲಿಸುವ ಅತೀ ಅಗತ್ಯವಿದೆ ಎಂದುರು.
ಸನ್ನದು ಆವರಣದಲ್ಲಿ ನಿಗದಿಪಡಿಸಿದ ನಿರ್ಧಿಷ್ಟ ಸ್ಥಳ ಮತ್ತು ಮೊದಲೇ ತಯಾರಿಸಿದ (Packed Snacks) ನೀಡಲು ಅವಕಾಶ ಮಾಡಿಕೊಡುವುದರಿಂದ ಬಡ ವರ್ಗದ ಗ್ರಾಹಕರಿಗೆ ಸಹಾಯವಾಗುತ್ತದೆ ಮತ್ತು ಸಾರ್ವಜನಿಕ ಪ್ರದೇಶದಲ್ಲಿ ಮದ್ಯಪಾನ ಮಾಡುವುದನ್ನು ತಡೆಗಟ್ಟುವ ಸಾಧ್ಯತೆ ಇರುತ್ತದೆ ಹಾಗೂ ಕಾಯ್ದೆ ಉಲ್ಲಂಘನೆ ತಡೆಯಬಹುದು. ನೆರೆ ರಾಜ್ಯದಲ್ಲಿ ಈ ತೆರನಾದ ವ್ಯವಸ್ಥೆ ಇರುತ್ತದೆ ಹಾಗೂ ಹೆಚ್ಚುವರಿ ಶುಲ್ಕವನ್ನು ಅಳವಡಿಸುವುದರಿಂದ ಸರಕಾರಕ್ಕೆ ವರಮಾನ ಜಾಸ್ತಿ ಆಗುತ್ತದೆ,ನಿಗದಿತ ಸ್ಥಳಾವಕಾಶದಲ್ಲಿ ಆಹಾರ ತಯಾರಿಕೆಗೆ ಅವಕಾಶ ನೀಡದೆ ಮದ್ಯವನ್ನು ಮಾತ್ರ ನಿಂತು ಕುಡಿಯಲು ಅವಕಾಶವನ್ನು ನೀಡುವಂತೆ ವಿನಂತಿಸುತ್ತಿದ್ದೇವೆ.
ಕಾನೂನು ಬಾಹಿರವಾಗಿ ವ್ಯವಹರಿಸದಂತೆ ಕಠಿಣ ಕಾನೂನು ರೂಪಿಸಬೇಕು, ಈ ವ್ಯವಸ್ಥೆ ಬಯಸುವ ಸನ್ನದುದಾರರಿಗೆ ಹೆಚ್ಚುವರಿ ಶುಲ್ಕ ವಿಧಿಸುವುದರಿಂದ ಸರ್ಕಾರದ ವರಮಾನದ ಹೆಚ್ಚಳಕ್ಕೆ ಸಹಾಯವಾಗುತ್ತದೆ ಎಂದುರು.
ಸಿ.ಎಲ್-9ಗಳಲ್ಲಿ ಮಾತ್ರ ಹೆಚ್ಚುವರಿ ಕೌಂಟರ್‌ಗಳನ್ನು ಶುಲ್ಕ ವಿಧಿಸಿ ನೀಡುವ ಕುರಿತು ಮಂಜೂರಾದ ಸನ್ನದು ಆವರಣದಲ್ಲಿ ಮೊದಲನೇ ಮಹಡಿ ಇದ್ದಲ್ಲಿ ಇದು ತುಂಬಾ ಸಹಕಾರಿ ಆಗುತ್ತದೆ.
ಮತ್ತು ಹೆಚ್ಚುವರಿ ಶುಲ್ಕ ವಿಧಿಸಬಹುದು. ಸಿ.ಎಲ್-9ಗಳಲ್ಲಿ ಮದ್ಯವನ್ನು ಪಾರ್ಸೇಲ್ ರೂಪದಲ್ಲಿ ಮಾರಾಟ ಮಾಡುವ ಕುರಿತು ಕಾನೂನು ತಿದ್ದುಪಡಿ ಮಾಡುವಂತೆ ಕೋರುತ್ತಿದ್ದೇವೆ.
“ಈಗಾಗಲೇ ಕಾನೂನು ತಿದ್ದುಪಡಿ ಆಗಿರುವ ಆದೇಶಗಳಿಗೆ ಸಂಬಂಧಿಸಿದ ಬೇಡಿಕೆಗಳು ಇದ್ದಾವೆ,”
2005ರಲ್ಲಿ ತಿದ್ದುಪಡಿ ಆಗಿರುವ ಅಬಕಾರಿ ಕಾಯ್ದೆ ಕಲಂ 29ನ್ನು ಪುನರ್ ವಿಮರ್ಶಿಸಿ ತಿದ್ದುಪಡಿಮಾಡಬೇಕು,
ಸರ್ಕಾರಿ ಆದೇಶ ಸಂಖ್ಯೆ: ಅಇ/36/ಇಡಬ್ಲ್ಯೂಪಿ/2018 ದಿನಾಂಕ 06.08.2020ನ್ನು ರದ್ದುಗೊಳಿಸುವ ಮತ್ತು ಆದೇಶ ನಂ.ಎಚ್.ಡಿ.16ಪಿ.ಇ.ಎಸ್-2017 ದಿನಾಂಕ 05.07.2018 ಇದನ್ನು ಮಾರ್ಪಾಡು ಮಾಡಿ ರೂಂಗಳನ್ನು ಹೆಚ್ಚಳ ಮಾಡುವ ಕುರಿತು.
ಎಂ.ಎಸ್.ಐ.ಎಲ್ ಸನ್ನದುಗಳ ಕುರಿತು ನ್ಯಾಯ ಸಮ್ಮತವಾದ ತೀರ್ಮಾನ ಕೈಗೊಳ್ಳುವ ಕುರಿತು. ಗ್ರಾಮಾಂತರ ಪ್ರದೇಶಗಳಲ್ಲಿ ಸನ್ನದುಗಳನ್ನು ತೆರೆಯದೇ ನಗರದ ಮಧ್ಯಭಾಗದಲ್ಲಿ ತೆರೆಯುತ್ತಿದ್ದಾರೆ. ನಿರೀಕ್ಷಿತ ವ್ಯವಹಾರ ಇಲ್ಲದೆ ಇರುವ ಸನ್ನದುಗಳನ್ನು ಬೇರೆಡೆಗೆ (ಗ್ರಾಮಾಂತರಕ್ಕೆ) ಸ್ಥಳಾಂತರಿಸಬೇಕು,ಮಿಲಿಟರಿ ಕ್ಯಾಂಟೀನ್ ಸ್ಟೋರ್‌ಗಳ Duty Free ಹೆಸರಿನಲ್ಲಿ ಬರುವ ನಕಲಿ ಮದ್ಯ, ಗೋವಾದಿಂದ ಬರುವ ಮದ್ಯ ಮತ್ತು ನಕಲಿ ಮದ್ಯ ತಯಾರಕರ ಕಳ್ಳಭಟ್ಟಿ ಕೇಂದ್ರಗಳ ಬಗ್ಗೆ ಅತ್ಯಂತ ಕಠಿಣ ಕಾನೂನು ಕ್ರಮ ಕೈಗೊಳ್ಳುವ ಕುರಿತು. ಸಿ.ಎಲ್-8, ಸಿ.ಎಲ್-8ಎ ಮತ್ತು ಸಿ.ಎಲ್-8ಬಿ ಸನ್ನದು ಷರತ್ತುಗಳ ಪಾಲನೆಗೆ ಕ್ರಮ ಕೈಗೊಳ್ಳಬೇಕು.
ಮದ್ಯ/ಬಿಯರ್ ತಯಾರಿಕಾ ಕಂಪನಿಯವರು ನೀಡುತ್ತಿರುವ ಸ್ತ್ರೀಂಗಳ ಸಂಬಂಧ 11ಎ ತಿದ್ದುಪಡಿ (No Distillery, Brewery, Winery shall introduce any discout scheme direct or indirectly for promoting the sale of their product) ৯০.৬. ದರಕ್ಕಿಂತ ಕಡಿಮೆ ದರದಲ್ಲಿ ಮತ್ತು ಸ್ತ್ರೀಂ ನೀಡುವ ಸನ್ನದುಗಳಿಗೆ ಗರಿಷ್ಠ ದಂಡನೆ ವಿಧಿಸಲು ಕಾನೂನು ರೂಪಿಸುವ ಕುರಿತು. ಸನ್ನದು ಷರತ್ತಿನಲ್ಲಿ ಇದನ್ನು ನಮೂದಿಸಬೇಕು.
*ಪೊಲೀಸ್ ಇಲಾಖೆಯ ಹಸ್ತಕ್ಷೇಪ ಮತ್ತು ಅನಗತ್ಯವಾಗಿ ಸನ್ನದುಗಳನ್ನು ಬಂದ್ ಮಾಡುತ್ತಿರುವ ಕುರಿತು ಸರ್ಕಾರ ಮದ್ಯ ಪ್ರವೇಶಿಸಿ ಇಲಾಖೆಗೆ ಸೂಕ್ತ ನಿರ್ದೇಶನ ನೀಡಬೇಕು.
ಸನ್ನದುದಾರರಿಗೆ ವಿಧಿಸುವ ಸಾಮಾನ್ಯ ಮೊಕದ್ದಮೆಗಳಿಗೆ ರಾಜಿ ಮೂಲಕ ವಿಧಿಸುವ ದಂಡನೆ ಕಡಿಮೆ ಮಾಡಿ ಲೈಸನ್ನು ರಹಿತವಾಗಿ ಮದ್ಯ ಮಾರಾಟ ಮಾಡುವವರ ದಂಡನೆ ಹೆಚ್ಚಳ ಮಾಡುವ ಕುರಿತು ಮತ್ತು ಡಾಬಾ, ಮಾಂಸಾಹಾರಿ ಹೋಟೆಲು, ಹಳ್ಳಿಗಳಲ್ಲಿ ಮದ್ಯ ಮಾರಾಟ ಮಾಡುವುದನ್ನು ನಿಯಂತ್ರಿಸಲು ಇನ್ನೂ ಕಠಿಣ ಕಾನೂನು ರಚಿಸುವ ಕುರಿತು.
ಸಿ.ಎಲ್-2, ಸಿ.ಎಲ್-9 ಗಳ ಮದ್ಯ ಮಾರಾಟದ ವೇಳೆಯನ್ನು ಸಿ.ಎಲ್-7ನಂತೆ ಬದಲಾಯಿಸಿ ಬೆಳಿಗ್ಗೆ 9.00 ರಿಂದ ರಾತ್ರಿ 12.00 ರವರೆಗೆ ಮಾಡಲು ವಿನಂತಿಸುತ್ತಿದ್ದೇವೆ.
“AROED’ ಅನ್ನು ಪುನರ್ ಪರಿಶೀಲಿಸಿ ರದ್ದುಗೊಳಿಸುವ ಕುರಿತು, ಸರ್ಕಾರ ಕ್ಕೆ ಒತ್ತಾಯ ಮಾಡಿದರು. ಜಿಲ್ಲೆ ಅಧಿಕಾರಿಗಳು ಗೆ ಮನವಿ ಸಲ್ಲಿಸದರು. ಈ ಸಂದರ್ಭದಲ್ಲಿ
ಎಸ್.ಸತೀಶ್‌ಬಾಬು
ಅಧ್ಯಕ್ಷರು
ಸಿ.ಹೆಚ್.ಬಸವಲಿಂಗಾರೆಡ್ಡಿಪ್ರಧಾನ ಕಾರ್ಯದರ್ಶಿ. ಇನ್ನು ಬಳ್ಳಾರಿ ಜಿಲ್ಲಾ ಮದ್ಯ ಮಾರಾಟಗಾರರು ಯಾಲ್ಲರು ಉಪಸ್ಥಿತರಿದ್ದರು.