*75,ಲಕ್ಷಗಳು ಬಳ್ಳಾರಿ ಕರ್ನಾಟಕ ಒನ್ ಕಚೇರಿ ನಲ್ಲಿ ಕಳವು ಆಗಿದ್ದ ಹಣವನ್ನು ಒಂದು ತಿಂಗಳನಂತರ ರಿಕವರಿ ಮಾಡಿದ ಪೋಲಿಸರು.*
ಬಳ್ಳಾರಿ ಗಾಂಧಿನಗರ ಪೊಲೀಸರ ಯಶಸ್ವಿ ಕಾರ್ಯಚರಣೆ- ಕರ್ನಾಟಕ ಒನ್ ನಲ್ಲಿ ನಡೆದ 75 ಲಕ್ಷ ರೂಪಾಯಿಗಳ ಕಳ್ಳತನ ಬೇದಿಸಿದ ಪೊಲೀಸರು.
ದಿನಾಂಕಃ 28/04/2024 ರಂದು ರಾತ್ರಿ 09-00 ಗಂಟೆಯಿಂದ ದಿನಾಂಕಃ 29/04/2024 ರಂದು ಬೆಳಗಿನ ಜಾವ 06-00 ಗಂಟೆಯ ಮಧ್ಯಾವಧಿಯಲ್ಲಿ ಮಹಾನಗರ ಪಾಲಿಕೆಯ ಕಟ್ಟಡದಲ್ಲಿರುವ ಕರ್ನಾಟಕ ಒನ್ ಕೇಂದ್ರದಲ್ಲಿ ಸಾರ್ವಜನಿಕರ ವಿವಿಧ ತೆರಿಗೆಗಳಿಂದ ಸಂಗ್ರಹವಾದ ಹಣ 75 ಲಕ್ಷ ರೂ.ಗಳನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಆದರೆ ಯಾವುದೆ ಕೀ ಗಳು ಮುರಿಯದೇ ಕಳ್ಳತನ ವಾಗಿದೆ ಆ ಕಛೇರಿಯಲ್ಲಿ ಕೆಲಸ ಮಾಡುತ್ತಿದ್ದ ಹಾಗೂ ಕೀ ಗಳನ್ನು ಇಟ್ಟುಕೊಳ್ಳುತ್ತಿದ್ದ ಅಂದ್ರಾಳ್ ಗ್ರಾಮದ ಕೆ.ಮಹಾಲಿಂಗ ಈತನು ಸದರಿ ಹಣವನ್ನು ಕಳ್ಳತನ ಮಾಡಿ ಹಣವನ್ನು ದುರುಪಯೋಗ ಪಡಿಸಿಕೊಂಡಿದ್ದಾನೆಂದು ಕರ್ನಾಟಕ ಒನ್ ಕೇಂದ್ರದ ರಾಜ್ಯದ ಯೋಜನಾ ವ್ಯವಸ್ಥಾಪಕರಾದ ಶ್ರೀ ಉದಯ್ ಕುಮಾರ್. ಅರ್ಕಸಾಲಿ ರವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಾಗಿತ್ತು.
ಸದರಿ ಪ್ರಕರಣದಲ್ಲಿ ಆರೋಪಿತರನ್ನು ಪತ್ತೆ ಹಚ್ಚಲು ಮಾನ್ಯ ಎಸ್.ಪಿ.ಸಾಹೇಬರು ಬಳ್ಳಾರಿ ರವರು ಸಿದ್ದರಾಮೇಶ್ವರ ಗಡೇದ್ ಪಿ.ಐ. ಗಾಂಧಿನಗರ ಹಾಗೂ ಪಿ.ಎಸ್.ಐ. ಗಳಾದ ಶ್ರೀಮತಿ ಸೌಮ್ಯ ಹಾಗೂ ಶ್ರೀ ನಾರಾಯಣ ಸ್ವಾಮಿ ಮತ್ತು ಅವರ ಅಪರಾಧ ವಿಭಾಗದ ಸಿಬ್ಬಂದಿಯವರ ತಂಡವನ್ನು ರಚಿಸಿದ್ದು, ಸದರಿ ತಂಡವು ದಿನಾಂಕಃ 30/05/2024 ರಂದು ಮಾನ್ಯ ಶ್ರೀ ರಂಜೀತ್ ಕುಮಾರ್ ಬಂಡಾರು ಐ.ಪಿ.ಎಸ್. ಎಸ್.ಪಿ. ಬಳ್ಳಾರಿ ರವರ ನಿರ್ದೇಶನದಂತೆ, ಶ್ರೀ ಕೆ.ಪಿ.ರವಿಕುಮಾರ್ ಹೆಚ್ಚುವರಿ ಪೊಲೀಸ್ ಅಧೀಕ್ಷಕರು, ಶ್ರೀ ನವೀನ್ ಕುಮಾರ್ ಹೆಚ್ಚುವರಿ ಪೊಲೀಸ್ ಅಧೀಕ್ಷಕರು-2 ರವರ ಮಾರ್ಗದರ್ಶನದಂತೆ ಶ್ರೀ ಚಂದ್ರ ಕಾಂತ್ ನಂದರೆಡ್ಡಿ ಕೆ.ಎಸ್.ಪಿ.ಎಸ್., ಡಿ.ಎಸ್.ಪಿ. ಬಳ್ಳಾರಿ ನಗರ ಉಪ-ವಿಭಾಗ ರವರ ನೇತೃತ್ವದಲ್ಲಿ ಸದರಿ ತಂಡವು ವೈಜ್ಞಾನಿಕ ವಿಧಾನಗಳ ಮೂಲಕ ಆರೋಪಿತನಾದ ಎಸ್.ಟಿ.ಎಂ.ಕೆ.ಚಂದ್ರಶೇಖರಯ್ಯ ತಂದೆ ವೀರೇಶಯ್ಯ ವಃ33 ವರ್ಷ, ಪುರೋಯಿತ ಕೆಲಸ, ವಾಸಃ 6ನೇ ವಾರ್ಡ್, ರಾಜೀವ್ ನಗರ, ಮಾರೆಮ್ಮ ಗುಡಿ ಎದುರುಗಡೆ, ಶ್ರೀಧರಗಡ್ಡೆ ಗ್ರಾಮ, ಬಳ್ಳಾರಿ [ತಾ] & ಜಿಲ್ಲೆ ರವರನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ಮಾಡಿ ರೂ.72,00,000/- ಗಳ ನಗದು ಹಣ ಕೃತ್ಯಕ್ಕೆ ಬಳಸಿದ ಒಂದು ಎಸ್.ಪಿ-125 ಹೊಂಡಾ ಮೋಟರ್ ಸೈಕಲ್ ನಂ. ಕೆ.ಎ-34/ಇ.ಎಂ-8861, ಕಳ್ಳತನ ಮಾಡಿ ಖರೀಧಿಸಿದ ಎರಡು ಮೊಬೈಲ್‌ಗಳನ್ನು ಜಪ್ತು ಪಡಿಸಿಕೊಂಡಿದೆ. ಸದರಿ ಪ್ರಕರಣದಲ್ಲಿ ಆರೋಪಿತನು ಕಳ್ಳತನ ಮಾಡಲು ಸದರಿ ಕಛೇರಿಯಲ್ಲಿ ಡಾಡಾ ಎಂಟ್ರಿ ಆಪರೇಟರ್ ಅಂತ ಕೆಲಸ ಮಾಡುತ್ತಿದ್ದ ಕೆ.ಮಹಾಲಿಂಗ ವಾಸಃ ಅಂದ್ರಾಳ್ ಗ್ರಾಮ ಈತನು ಕಛೇರಿಯ ಬೀಗ ಗಳನ್ನು ಆರೋಪಿತನಾದ ಚಂದ್ರಶೇಖರಯ್ಯನಿಗೆ ನೀಡಿದ್ದು, ಸದರಿ ಬೀಗಗಳನ್ನು ಉಪಯೋಗಿಸಿಕೊಂಡು ಕಳ್ಳತನ ಮಾಡಿ ಪುನಃ ಬೀಗವನ್ನು ಮಹಾಲಿಂಗನ ಮನೆಯ ಬಾಗಿಲಲ್ಲಿ ಹಾಕಿ ಹೋಗಿದ್ದಾಗಿ ತನಿಖೆಯಲ್ಲಿ ತಿಳಿದುಬಂದಿದೆ. ಒಟ್ಟು 75 ಲಕ್ಷದಲ್ಲಿ ರೂ.3 ಲಕ್ಷ ಹಣವನ್ನು ಖರ್ಚು ಮಾಡಿದ್ದು, ಉಳಿದ 72 ಲಕ್ಷ ಹಣವನ್ನು ಜಪ್ತು ಪಡಿಸಿಕೊಳ್ಳಲಾಗಿದೆ. ಆರೋಪಿತನಾದ ಚಂದ್ರಶೇಖರಯ್ಯ ನನ್ನು ದಸ್ತಗಿರಿ ಮಾಡಿ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದ್ದು, ಮುಖ್ಯ ಆರೋಪಿಯಾದ ಮಹಾಲಿಂಗನು ಪರಾರಿಯಲ್ಲಿದ್ದು ಆದಷ್ಟು ಬೇಗನೇ ಪತ್ತೆ ಮಾಡಲಾಗುವುದು.
ಸದರಿ ಪ್ರಕರಣವನ್ನು ಬೇಧಿಸಿದ ಗಾಂಧಿನಗರ ಪೊಲೀಸ್ ಠಾಣೆಯ ಪಿ.ಐ. ಸಿದ್ದರಾಮೇಶ್ವರ ಗಡೇದ್, ಪಿ.ಎಸ್.ಐ. ರವರಾದ ಶ್ರೀಮತಿ ಸೌಮ್ಯ ಹಾಗೂ ಶ್ರೀ ನಾರಾಯಣ ಸ್ವಾಮಿ ಮತ್ತು ಅಪರಾಧ ವಿಭಾಗದ ಸಿಬ್ಬಂದಿಯವರಾದ ಶ್ರೀ ಜಯರಾಮ್ ಹೆಚ್.ಸಿ.259, ಶ್ರೀ ನಾರಾಯಣ ಹೆಚ್.ಸಿ.248, ಶ್ರೀ ಮಾರುತಿ ಪಿ.ಸಿ.1062, ಶ್ರೀ ತಿಮ್ಮಪ್ಪ ಪಿ.ಸಿ.1133 ಶ್ರೀ ಪ್ರವೀಣ್ ಪಿ.ಸಿ.72 ರವರ ಕರ್ತವ್ಯವವನ್ನು ಮಾನ್ಯ ಎಸ್.ಪಿ.ಸಾಹೇಬರು ಬಳ್ಳಾರಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕರು-1 & 2, ಹಾಗೂ ಡಿ.ಎಸ್.ಪಿ.ನಗರ ಉಪವಿಭಾಗ ರವರು ಪ್ರಶಂಸೆ ವ್ಯಕ್ತಪಡಿಸಿರುತ್ತಾರೆ.ಆದರೆ ಪ್ರಮುಖ ಆರೋಪಿ ಯನ್ನುಲಾಗಿರವ ಮಹಾಲಿಂಗನು ಕಳವು ಅಗಿರವ ದಿಂದಲೂ ಪೋಲಿಸ್ ವಿಚಾರಣೆ ದಲ್ಲಿ ಇದ್ದರು ತೂಂಭಾ ಬಾರಿ ಅರೋಪಿಯನ್ನು ಗ್ರಾಮಕ್ಕೆ ತೆಗೆದು ಕೊಂಡು ಹೋಗಿ ವಿಚಾರಣೆ ಮಾಡುತ್ತ ಇದ್ದರು, ಆದರೇ ಅದೇ ವ್ಯಕ್ತಿ ಪರಾರಿಯಲ್ಲಿದ್ದಾರೆ ಎಂದು ತಿಳಿಸಿದ್ದು ಅನುಮಾನ ಗಳು ಮೂಡಿಸುತ್ತವೆ!!.ಕಳವು ಆಗಿದ್ದು ಪ್ರಕರಣ ವನ್ನು ಬಯಲು ಗೆ ಬರದಂತೆ ನೋಡಿ ಕೊಂಡಿದ್ದರು, ಪಿ.ಐ.ಸಿದ್ದರಾಮೇಶ್ವರ ಗಡೇದ್.ಕರ್ನಾಟಕದ ಒನ್ ನಲ್ಲಿ ಈಹಿಂದೆ ಕೂಡ ಕೇಲ ಘಟನೆ ಗಳು ಆಗಿದ್ದವು. ಆದರೆ ಅದರ ಏಜೆನ್ಸಿ ಪಡೆದ ಅವರ ಮೇಲೆ ಏನು ಕ್ರಮ ಅಗುತ್ತಾ ಇಲ್ಲ ಅನ್ನವದು ಸಾರ್ವಜನಿಕರ ಪ್ರಶ್ನೆ ಅಗಿದೆ. ಈ ಹಿಂದೆ ವಿಕಾಸ್ ಬ್ಯಾಂಕ್ ಯಲ್ಲಿ ಕೂಡ ಲಕ್ಷಗಟ್ಟಲೆ ಹಣದ ಎಟಿಎಂ ಕಳವು ಅಗಿದೆ,ಅದು ಈವರೆಗೆ ಸುಳಿವು ಇಲ್ಲ.ಒಟ್ಟಾರೆ ಸಾರ್ವಜನಿಕರ ತೆರಿಗೆ ಹಣ ಮತ್ತೆ ರಿಕವರಿ ಅಗಿದ್ದು ಪೋಲಿಸರ ಕರ್ತವ್ಯ ಶ್ಲಾಘನೀಯ, ಅಭಿನಂದನೆ ತಿಳಸಬೇಕು. (ಕೆ.ಬಜಾರಪ್ಪ ವರದಿಗಾರರು ಬಳ್ಳಾರಿ.)