*26,ರಂದು,ಮುಖ್ಯಮಂತ್ರಿಗಳು,ಬಳ್ಳಾರಿ ಗೆ.ಅಪರ ಜಿಲ್ಲಾಧಿಕಾರಿ* *ಪಿ.ಎಸ್.ಮಂಜುನಾಥ*
ಬಳ್ಳಾರಿ,ಜೂ.(21)ಬಳ್ಳಾರಿಯಲ್ಲಿರುವ ಜಿಲ್ಲಾ ನ್ಯಾಯಾಲಯದ ಸಂಕೀರ್ಣ ಉದ್ಘಾಟನಾ ಕಾರ್ಯಕ್ರಮ ಇದೇ ಜೂ.26ರಂದು ನಡೆಯಲಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಆಗಮಿಸಲಿದ್ದು,ಇದೇ ಸಂದರ್ಭದಲ್ಲಿ ವಿವಿಧ ಇಲಾಖೆಗಳ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ,ವಿವಿಧ ಯೋಜನೆಗಳ ಫಲಾನುಭವಿಗಳಿಗೆ ಸೌಲಭ್ಯಗಳ ವಿತರಿಸಲು ಜಿಲ್ಲಾಡಳಿತ ಉದ್ದೇಶಿಸಿದ್ದು,ಅಗತ್ಯ ಮಾಹಿತಿಯನ್ನು ತುರ್ತಾಗಿ ನಾಳೆ(ಜೂ.22)ಯೊಳಗೆ ಸಲ್ಲಿಸುವಂತೆ ಅಪರ ಜಿಲ್ಲಾಧಿಕಾರಿ ಪಿ.ಎಸ್.ಮಂಜುನಾಥ ಅವರು ಸೂಚನೆ ನೀಡಿದ್ದಾರೆ.
ಮುಖ್ಯಮಂತ್ರಿಗಳ ಬಳ್ಳಾರಿ ಭೇಟಿ ಹಿನ್ನೆಲೆ ನಗರದ ಜಿಲ್ಲಾಧಿಕಾರಿ ಕಚೇರಿಗಳ ಸಭಾಂಗಣದಲ್ಲಿ ಮಂಗಳವಾರ ನಡೆದ ಪೂರ್ವಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಲೋಕೋಪಯೋಗಿ,ಪಂಚಾಯತ್‍ರಾಜ್ ಇಲಾಖೆ, ಕೆಆರ್‍ಐಡಿಎಲ್,ವಿಮ್ಸ್, ಮಹಾನಗರ ಪಾಲಿಕೆ,ಸಮಾಜ ಕಲ್ಯಾಣ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಪೂರ್ಣಗೊಂಡ ಕಾಮಗಾರಿಗಳು ಮತ್ತು ಶಂಕುಸ್ಥಾಪನೆ ನೆರವೇರಿಸಲಿರುವ ಕಾಮಗಾರಿಗಳ ಸಂಪೂರ್ಣ ವಿವರ,ಅನುಷ್ಠಾನ ಏಜೆನ್ಸಿ ಹಾಗೂ ಅದರ ವೆಚ್ಚ ಮತ್ತು ಕಾಮಗಾರಿಯ ಉದ್ದೇಶದ ವಿವರಗಳು ಸಂಪೂರ್ಣವಾಗಿ ಸಲ್ಲಿಸಬೇಕು ಎಂದರು.
ಕೃಷಿ,ತೋಟಗಾರಿಕೆ,ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ವಿವಿಧ ಯೋಜನೆಗಳಡಿ ಸೌಲಭ್ಯ ಪಡೆದ ಫಲಾನುಭವಿಗಳಿಗೆ ಆದೇಶ ಪತ್ರ ವಿತರಣೆ ಮತ್ತು ಎಷ್ಟು ಜನರಿಗೆ ಸೌಲಭ್ಯ ಒದಗಿಸಲಾಗಿದೆ ಎಂಬುದರ ಸಮಗ್ರ ವಿವರ ಸಲ್ಲಿಸುವಂತೆ ಅವರು ಸೂಚಿಸಿದರು.
ಬಳ್ಳಾರಿ ಜಿಪಂ ಸಿಇಒ ಜಿ.ಲಿಂಗಮೂರ್ತಿ ಅವರು ಮುಖ್ಯಮಂತ್ರಿಗಳು ಬಜೆಟ್‍ನಲ್ಲಿ ಘೋಷಿಸಲಾದ ವಿವಿಧ ಘೋಷಣೆಗಳ ಅನುಷ್ಠಾನ ಇಲಾಖೆಗಳಲ್ಲಿ ಆಗಿದ್ದಲ್ಲಿ ಅವುಗಳ ಸಂಪೂರ್ಣ ವಿವರವನ್ನು ಸಲ್ಲಿಸಬೇಕು ಎಂದರು.
ಎಲ್ಲ ಇಲಾಖೆಗಳ ಅಧಿಕಾರಿಗಳು ತಮಗೆ ಒದಗಿಸಲಾದ ನಮೂನೆಯಲ್ಲಿ ಅಗತ್ಯ ಮಾಹಿತಿಯನ್ನು ತುರ್ತಾಗಿ ಭರ್ತಿ ಮಾಡಿ ಒದಗಿಸಬೇಕು ಮತ್ತು ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡಿಟ್ಟುಕೊಂಡಿರಬೇಕು ಎಂದರು.
ಜಿಲ್ಲಾ ನ್ಯಾಯಾಲಯದ ಉದ್ಘಾಟನೆ ಇದೇ 26ರಂದು ನಡೆಯಲಿದ್ದು, ಹೈಕೋರ್ಟ್ ಮುಖ್ಯನ್ಯಾಯಮೂರ್ತಿಗಳು ಆಗಮಿಸಲಿದ್ದು, ಮುಖ್ಯಮಂತ್ರಿಗಳು ಸಹ ಭಾಗವಹಿಸುವ ಕುರಿತು ತಾತ್ಕಾಲಿಕ ಪ್ರವಾಸ ನಿಗದಿಯಾಗಿದೆ;ಅವರು ಬಂದಲ್ಲಿ ವಿವಿಧ ಕಾಮಗಾರಿಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಲಾಗುವುದು ಎಂದರು.
ಇದೇ ಜೂ.25ರಂದು ಬಳ್ಳಾರಿಯಲ್ಲಿ ಅಮೃತಭಾರತಿಗೆ ಕನ್ನಡದ ಆರತಿ ಕಾರ್ಯಕ್ರಮ ನಿಗದಿಯಾಗಿದ್ದು,ವಿವಿಧ ಇಲಾಖೆಗಳ ಎಲ್ಲ ಅಧಿಕಾರಿಗಳು ಮತ್ತು ಸಿಬ್ಬಂದಿ ಕಡ್ಡಾಯವಾಗಿ ಭಾಗವಹಿಸಬೇಕು ಎಂದು ಅವರು ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು ಇದ್ದರು.(ಕೆ.ಬಜಾರಪ್ಪ ವರದಿಗಾರರು)
News 9 Today > State > 26,ರಂದು,ಮುಖ್ಯಮಂತ್ರಿಗಳು,ಬಳ್ಳಾರಿ ಗೆ.ಅಪರ ಜಿಲ್ಲಾಧಿಕಾರಿ* *ಪಿ.ಎಸ್.ಮಂಜುನಾಥ
More important news
ಲಾರಿ ಮಾಲೀಕರ ಮುಷ್ಕರ
12/04/2025
ಮೀನುಗಳ ಮಾರಣ ಹೋಮ -ಕಾರಣ ನಿಗೂಢ.!?
10/04/2025
ಬಳ್ಳಾರಿ ಯಲ್ಲಿ ಉದೋಗ ಮೇಳ.
05/04/2025