*ಬ್ರೂಸ್ ಪೇಟೆ ಪೊಲೀಸರಿಂದ ಮಿಂಚಿನ ಕಾರ್ಯಾಚರಣೆ ನಡೆಸಿ, ಕಳ್ಳತನ ಮಾಡುತ್ತಿದ್ದ ಆರೋಪಿತರ ಬಂಧನ ಆರೋಪಿತರಿಂದ ಎರಡು ಪ್ರಕರಣಗಳಲ್ಲಿ ಬಂಗಾರದ ಆಭರಣಗಳು ಮತ್ತು ಬೆಳ್ಳಿಯ ವಸ್ತುಗಳು ಬೆಲೆ 810,083/-ರ ವಶ*
ಬಳ್ಳಾರಿ(27)ದಿನಾಂಕ: 20-07-2022 ರಂದು ದೂರುದಾರಾದ ಪಿ.ನಾರಯಣಪ್ಪ ಇವರು,ಹಾಜರಾಗಿ ದೂರು ನೀಡಿದ್ದು, ಸದರಿಯವರ ಮನೆಯಲ್ಲಿ 200ಗ್ರಾಂ ತೂಕದ ವಿವಿಧ ಬಂಗಾರದ ಆಭರಣಗಳು, ಮತ್ತು490.ಗ್ರಾಂ
ತೂಕದ ವಿವಿಧ ಬೆಳ್ಳಿಯ ವಸ್ತುಗಳು ಒಟ್ಟು ಮೌಲ್ಯ 5,89,300/- ರೂ. ಬೆಲೆ ಬಾಳುವವಗಳು
ಕಳ್ಳತನವಾಗಿರುತ್ತವೆಂದು ಇದ್ದ ಮೇರೆಗೆ ಅಪರಾಧ ಸಂಖ್ಯೆ: 122/ 2022 ಕಲಂ 454, 457, 38) ಐಪಿಸಿ
ಅಡಿಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
ಸದರಿ ಪ್ರಕರಣದಲ್ಲಿ ಮಾಲು ಮತ್ತು ಆರೋಪಿತರ ಪತ್ತೆಗಾಗಿ ದಿನಾಂಕ: 27-07-2022 ರಂದು ಶ್ರೀ ಸೈದಲು ಅಡಾವತ್, ಪೊಲೀಸ್ ಅಧೀಕ್ಷಕರು, ಮತ್ತು ಶ್ರೀ ಗುರುನಾಥ ಏ, ಮತ್ತೂರ, ಹೆಚ್ಚುವು ಪೊಲೀಸ್ ಅಧೀಕ್ಷಕರು, ಬಳ್ಳಾರಿ ಜಿಲ್ಲೆ ರವರ ಮಾರ್ಗದರ್ಶನದಲ್ಲಿ ಬಳ್ಳಾರಿ ನಗರದ ಉಪ ವಿಭಾಗದ ಡಿ.ಎಸ್.ಪಿ. ಶ್ರೀ ಶೇಖರಪ್ಪ ರವರ ನೇತೃತ್ವದಲ್ಲಿ ಬ್ರೂಸ್ ಪೇಟೆ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ *ಶ್ರೀ ಜಿ.ಆರ್. ಷಣ್ಮುಖಪ್ಪ* ಮತ್ತು ಪಿ.ಎಸ್.ಐ(ಕಾ.ಸು) ಸುರೇಶಪ್ಪ, ಆರ್ ಹಾಗೂ ಪಿ.ಎಸ್‌ಐ ತನಿಖೆ ಶ್ರೀಮತಿ ಕೆ. ಸವಿತಾ ರಾಣಿ ಮತ್ತು ಸಿಬ್ಬಂದಿಯವರಾದ ಜಿ. ಮಲ್ಲಿಕಾರ್ಜುನ, ಎ.ಎಸ್.ಐ, ಹೆಚ್.ಸಿ ಸರ್ದಾರ್ ಮುಜಾಹಿದ್ ಆಲಿ, ಬಿ, ಉಮೇಶ ರಡ್ಡಿ, ಪಿ.ಸಿ ಅಯ್ಯಪ್ಪ, ಶಿವರಾಜ್ ಮತ್ತು ರಾಮಾಂಜಿನಿ ಇವರನ್ನು ಒಳಗೊಂಡ ತಂಡಗಳನ್ನು ರಚಿಸಿದ್ದು, ಈ ಕಂಡಗಳು ಆರೋಪಿತರಾದ
1),ಬಿ.ಭಾಸ್ಕರ್
2) ಶ್ರೀಮತಿ ಪದ್ದಕ್ಕೆ, ಇಬ್ಬರು ವಾಸ: ಬಳ್ಳಾರಿ
ಇವರನ್ನು ಮಿಂಚಿನ ಕಾರ್ಯಾಚರಣೆ ನಡೆಸಿ ವಿಚಾರಣೆಗೊಳಪಡಿಸಿ 10 ಗ್ರಾಂ ತೂಕದ ವಿವಿಧ ಬಂಗಾರದ ಆಭರಣಗಳು ಮತ್ತು 715 ತೂಕದ ಬೆಳ್ಳಿಯ ವಸ್ತುಗಳನ್ನು ವಶಪಡಿಸಿಕೊಂಡಿದ್ದು ಹಾಗೂ ಹೆಚ್ಚಿನ ವಿಚಾರಣೆಯಲ್ಲಿ ಕಳೆದ ಜೂನ್ ತಿಂಗಳಲ್ಲಿ ಅಪರಾಧ ಸಂಖ್ಯೆ: 103/2022 ಕಲಂ 379 ಐಪಿಸಿ ಪ್ರಕರಣದಲ್ಲಿ ಶ್ರೀಮತಿ ಮಂಜುಳ ಇವರು ನೀಡಿದ್ದ ದೂರಿನಲ್ಲಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದಾಗ ಬ್ಯಾಗಿನಲ್ಲಿಟ್ಟಿದ್ದ 59 ಗ್ರಾಂ ತೂಕದ ಬಂಗಾರದ ಆಭರಣಗಳು: ಕಳ್ಳತನವಾಗಿದ್ದು, ಅವುಗಳನ್ನು ಆರೋಪಿ-1 ಭಾಸ್ಕರ್ ಈತನಿಂದ ಬಂಗಾರದ ಆಭರಣಗಳು: 50 ಗ್ರಾಂ ಬೆಲೆ 2,50,000/- ರೂ ಸೇರಿದಂತೆ ಎಲ್ಲಾ ಒಟ್ಟು ಮೌಲ್ಯ 8,10,083/-ರೂ. ಬೆಲೆಬಾಳುವ ಆಭರಣಗಳನ್ನು ವಶಪಡಿಸಿಕೊಳ್ಳುವುದರಲ್ಲಿ ಯಶಸ್ವಿಯಾಗಿರುತ್ತಾರೆ.
ಈ ಪತ್ತೆ ಕಾರ್ಯವನ್ನು ಶ್ರೀ ಸೈದುಲು ಅಡಾವತ್, ಐ.ಪಿ.ಎಸ್, ಪೊಲೀಸ್ ಅಧೀಕ್ಷಕರು ಮತ್ತು ಶ್ರೀ ಗುರುನಾಥ, ಬಿ. ಮತ್ತೂರ, ಕೆ.ಎಸ್.ಪಿ.ಎಸ್, ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಬಳ್ಳಾರಿ ಜಿಲ್ಲೆ ರವರು ಮೆಚ್ಚುಗೆ ವ್ಯಕ್ತಪಡಿಸಿ ಬಹುಮಾನ ಘೋಷಿಸಿರುತ್ತಾರೆ.*. (ಕೆ.ಬಜಾರಪ್ಪ ವರದಿಗಾರರು.)