This is the title of the web page
This is the title of the web page

Please assign a menu to the primary menu location under menu

State

ಭತ್ತದ ಗದ್ದೆಗಳ ಗೆ ನುಗ್ಗಿದ ವಿಧ್ಯಾರ್ಥಿಗಳ ಪಡೆ..!!

ಭತ್ತದ ಗದ್ದೆಗಳ ಗೆ ನುಗ್ಗಿದ ವಿಧ್ಯಾರ್ಥಿಗಳ ಪಡೆ..!!

*ಭತ್ತದ ಗದ್ದೆಗಳ ಗೆ ನುಗ್ಗಿದ ವಿಧ್ಯಾರ್ಥಿಗಳ ಪಡೆ..!!* ಬಳ್ಳಾರಿಯ ವೀರಶೈವ ವಿದ್ಯಾವರ್ಧಕ ಸಂಘದ “ವೀರಶೈವ ಕಾಲೇಜಿ”ನ ಅಧ್ಯಕ್ಷರಾದ ಶ್ರೀ ದರೂರು ಶಾಂತನಗೌಡ ಇವರ ಸಲಹೆಯ ಮೇರೆಗೆ ಕಾಲೇಜಿನ ಅಧ್ಯಾಪಕಿಯರಾದ ಶ್ರೀಮತಿ ಹೇಮಾ ಹಿರೇಮಠ ಇವರು ಸೋಮವಾರ ಕಾಲೇಜಿನ ಸುಮಾರು 80 ವಿದ್ಯಾರ್ಥಿಗಳನ್ನು ಕಾಲೇಜಿನ ಬಸ್ಸಿನಲ್ಲಿ ಸಿರಿಗುಪ್ಪ ತಾಲುಕಿನ ದರೂರು ಗ್ರಾಮಕ್ಕೆ ಭೇಟಿ ನೀಡಿದ್ದರು. *ಒಂದು ದಿನ ಮಕ್ಕಳು ಗೆ ರೈತರ ಕೃಷಿ ಚಟುವಟಿಕೆಗಳು ಕುರಿತು ನೇರವಾಗಿ ತೋರಿಸುವ ಕಾರ್ಯಕ್ರಮ ವನ್ನ ಹಮ್ಮಿಕೊಂಡಿದ್ದರು.* ಗ್ರಾಮದ ಶ್ರೀವೀರಭದ್ರಸ್ವಾಮಿ ಪುಣ್ಯಕ್ಷೇತ್ರದಲ್ಲಿ ದೇವರ ದರ್ಶನ ಪಡೆದು, ಪ್ರಸಾದ ಸ್ವೀಕರಿಸಿದರು ಮಕ್ಕಳು. ಅಲ್ಲಿಯೆ ಇರುವ ಶಾಂತನಗೌಡ ಪೂರುಷೋತ್ತಮ ಗೌಡ,ವಿಶ್ವನಾಥ್ ಗೌಡ. ತೋಟದ ಮನೆಯ ಆವರಣದಲ್ಲಿ ಅಧ್ಯಾಪಕರು ರೈತರು ಮತ್ತು ವಿದ್ಯಾರ್ಥಿಗಳ ನಡುವೆ ಕೃಷಿ ಮತ್ತು ಕೃಷಿ ಚಟುವಟಿಕೆಗಳ ಕುರಿತು ನೇರ ಸಂವಾದ ಕಾರ್ಯಕ್ರಮ ನಡೆಸಿದರು. ಹಲವಾರು ಬೆಳೆಗಳ,ಗಿಡ,ಮರಗಳ,ಹೂವು,ಹಣ್ಣುಗಳ ಹಾಗು ಹೈನುಗಾರಿಕೆಯ ವಿಷಯಗಳ ಕುರಿತು ಚರ್ಚಿಸಲಾಯಿತು.

ಈ ಸಂದರ್ಬದಲ್ಲಿ ಪುರುಷೋತ್ತಮಗೌಡ, ಶ್ರೀಮತಿ ಹೇಮಾ ಹಿರೇಮಠ, ಟಿ. ರಂಜಾನ್ ಸಾಬ್, ತಳವಾರ್ ದುರುಗಣ್ಣ , ಶ್ರೀಕಾಂತ್ ,
ತಿಪ್ಪೇರುದ್ರಗೌಡ, ವೀರೇಶ್ ಗೌಡ,ಲಂಕೇಶ್ ರುದ್ರಮುನಿ,ಗ್ರಾಮಸ್ಥರು ಉಪಸ್ಥಿತಿ ಇದ್ದರು.

ಈ ಗ್ರಾಮ ಕರ್ನಾಟಕ ದಲ್ಲಿ ಇತಿಹಾಸ ಹೊಂದಿದೆ,ರಾಜಕೀಯ, ಹೋರಾಟ, ವ್ಯವಸಾಯ ದಲ್ಲಿ.

ಈ ಗ್ರಾಮಕ್ಕೆ ಮರು ನಾಮಕರಣ ಇದೆ,ಯಾರನ್ನು ಕೇಳಿದರು ದರೂರು ಮಲ್ಲಿ ಗೌಡರು ಊರು ಅನ್ನುತ್ತಾರೆ,ಪುರುಷೋತ್ತಮ,ಗೌಡ ಶಾಂತನ ಗೌಡ ವಿಶ್ವನಾಥ್ ಗೌಡ ಇವರು ಅವರ ಮಕ್ಕಳು.

ಮಲ್ಲಿಗೌಡರು,ಆಳ್ವಿಕೆಯಲ್ಲಿ,ಜಮಾನ ದಲ್ಲಿ,ಸುತ್ತಮುತ್ತಲಿನ ಜನರು ಇವರು ಮಾತು,ಗೆರೆ ದಾಟುವ,ಅವರು ಯಾರು ಇರಲಿಲ್ಲ.

ಒಂದು ರೀತಿಯಲ್ಲಿ *ದಾನ ವೀರ ಶೂರ ಕರ್ಣ ಸಿನಿಮಾ ಸ್ಟೈಲ್ ಇದ್ದಂತೆ ಇತ್ತು ಅನ್ನುತ್ತಾರೆ ಅಲ್ಲಿಯ ಜನರು* ಇಂತಹ ಗ್ರಾಮಕ್ಕೆ ಭೇಟಿ ನೀಡಿ ವಿದ್ಯಾರ್ಥಿಗಳು ಖುಷಿ ದಿಂದ ಅಲ್ಲಿಯ ವಾಸ್ತವಿಕ ರೈತರು ಜೀವನದ ಶೈಲಿ, ವ್ಯವಸಾಯದ ಸುಖ: ಗಳು ಕಷ್ಟಗಳು ಹೇಗ ಇರುತ್ತವೆ,ಏಂದು ಹತ್ತಿರ ದಿಂದ ನೋಡಿದ್ದು ಇತಿಹಾಸದ ದಲ್ಲಿ ಇದೆ ಮೊದಲ ಎನ್ನಬಹುದು.

ಪ್ರತಿ ವಿದ್ಯಾರ್ಥಿಗಳ ಪೋಷಕರು ರೈತರು ಅಗಿ ಇರಬಹುದು, ಅದರೆ ಮಕ್ಕಳಿಗೆ ಅವರ ವ್ಯವಸಾಯದ ಬಗ್ಗೆ ಕಷ್ಟ ನಷ್ಟ ಬಗ್ಗೆ ಹೇಳಿ ಕೊಳ್ಳುವ ಸಂದರ್ಭ ಕಡಿಮೆ ಇರುತ್ತದೆ.

ಪೋಷಕರು ಕೂಡ ಯಾವುದೇ ತೊಂದರೆ ಅದರೆ ಮಕ್ಕಳು ಮುಂದೆ ಹೇಳಿ ಕೊಳ್ಳದೆ,ಮುಚ್ಚಿ ಇಟ್ಟು ಕೊಂಡು ಜೀವನ ಮಾಡುತ್ತಾರೆ.

ಅದರೆ ಇಲ್ಲಯಾ ವಿದ್ಯಾರ್ಥಿಗಳು ಖುಷಿ ದಿಂದ ಭತ್ತದ ಗದ್ದೆಗಳಲ್ಲಿ ನಾಟಿ ಮಾಡಿದ್ದು ನೋಡಿದರೆ ತುಂಬಾ ಸಂತೋಷ ಅಗುತ್ತಾಇದೆ.

ಈ ವಿದ್ಯಾರ್ಥಿಗಳು ಭವಿಷ್ಯ ದಲ್ಲಿ ತುಂಬಾ ಉನ್ನತ ಮಟ್ಟದಲ್ಲಿ ಬೆಳೆಯುವ ಗುರಿ ಇರುವ ಅವರು.

ಇಂತಹ ಸಂದರ್ಭ ವನ್ನು, ಇದರ ಅನುಭವವನ್ನು ಅವರು ಏಂದುಗು ಮರೆಯಲಾಗದ ದಿನ.

ಈವರೆಗೆ ಬಹುತೇಕ ಮಕ್ಕಳು ಗೆ ನಾವು ತಿನ್ನುವ ಬೆಳೆಯುವ ಅಹಾರ ಪದಾರ್ಥದ ಬಗ್ಗೆ ಗೊತ್ತಿಲ್ಲ.!! ಇಂತಹ ಕಾರ್ಯಕ್ರಮಗಳನ್ನು ಸರ್ಕಾರ ಮಾಡಲು ಸಾಧ್ಯವಿಲ್ಲ,ಮಾಡಿದರೆ ಕೂಡ ಕಾಟಾಚರಕ್ಕೆ ಮಾಡಿ ಜೈ ಅನ್ನುತ್ತಾರೆ.

ಈಗಲೂ ಅದರು ಖಾಸಗಿ ಮತ್ತು ಸರ್ಕಾರ ವಿದ್ಯಾಸಂಸ್ಥೆಗಳು ಇಂತಹ ಕಾರ್ಯಗಳು ಮಾಡಬೇಕು ಅಗಿದೆ.

ಖಾಸಗಿ ಅವರು ಫೀಜ್ ಬಗ್ಗೆ  ಅವರು  ಬಗ್ಗೆ ಚಿಂತನೆ ಬಿಟ್ಟು ಇಂತಹ ಕಾರ್ಯಕ್ರಮ ಗಳು ಮಾಡಬೇಕು ಆಗಿದೆ.                        (ಕೆ.ಬಜಾರಪ್ಪ ವರದಿಗಾರರು.)


News 9 Today

Leave a Reply