This is the title of the web page
This is the title of the web page

Please assign a menu to the primary menu location under menu

State

ಸ್ಲಂ ಬೋರ್ಡ್ ಕಚೇರಿ ಗೆ ಪಾಲಿಕೆ ಸದಸ್ಯರು ಭೇಟಿ. ತಾರತಮ್ಯ ಯಾಕೆ??

ಸ್ಲಂ ಬೋರ್ಡ್ ಕಚೇರಿ ಗೆ ಪಾಲಿಕೆ ಸದಸ್ಯರು ಭೇಟಿ. ತಾರತಮ್ಯ ಯಾಕೆ??

*ಸ್ಲಂ ಬೋರ್ಡ್ ಕಚೇರಿ ಗೆ ಪಾಲಿಕೆ ಸದಸ್ಯರು ಭೇಟಿ. ತಾರತಮ್ಯ ಯಾಕೆ??*
•ಬಡವರ ಮನೆಗಳ ನಿರ್ಮಾಣದ ದಲ್ಲಿ ರಾಜಕೀಯ ವೇ??
•ಪಟ್ಟ್ಟಗಳು ನೀಡಲು ವಿಳಂಬ ಯಾಕೆ??
•ಬಡವರ ಬಳಿ ಹಣ ವನ್ನು ಯಾಕೆ ವಸೂಲಿ ಮಾಡುತ್ತಿರಿ??

ಬಳ್ಳಾರಿ(21)ನಗರದ ಕೊಳಗೇರಿ ಅಭಿವೃದ್ಧಿ ಮಂಡಳಿ ಕಚೇರಿ ಗೆ ಕಾಂಗ್ರೆಸ್ ಪಾಲಿಕೆ ಸದಸ್ಯರು ಯಾಲ್ಲರು ಶನಿವಾರ ಸಾಯಂಕಾಲ ಭೇಟಿ ನೀಡಿದ್ದರು.

ಎ.ಇ.ಇ,ಕೃಷ್ಣ ರೆಡ್ಡಿ ಜೊತೆಯಲ್ಲಿ ಮೂರು ತಾಸುಗಳು ಸುದೀರ್ಘ ವಾಗಿ ಚರ್ಚೆ ಮಾಡಿದರು.

ಸರ್ಕಾರದ ದಿಂದ ಬಂದಿರುವ ಸ್ಲಂ ಪ್ರದೇಶ ಗಳಲ್ಲಿ ಬಡವರ ಮನೆಗಳು ನಿರ್ಮಾಣ ವಿಚಾರದಲ್ಲಿ ರಾಜಕೀಯದ ತಾರತಮ್ಯ ಮಾಡಿ ಬಹುತೇಕ ಬಡವರಿಗೆ ಅನ್ಯಾಯ ಮಾಡಿದ್ದಿರಿ ಏಂದು ಸದಸ್ಯರುಗಳು ವಾದ ಮಾಡಿದರು.

ವಾರ್ಡ್ ಪ್ರತಿನಿಧಿಗಳು ಗೆ ಗೊತ್ತಿಲ್ಲದೆ ಅಡಳಿತ ಪಕ್ಷದ ಲೀಡರ್ ಗಳು ಹೇಳಿದ ಅವರ ಗೆ ಮಾತ್ರವೇ ಹಂಚಿಕೆಯನ್ನು ಮಾಡಿ ತುಂಬಾ ಬಡವರ ಗೆ ಅನ್ಯಾಯ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇದಕ್ಕೆ ಅಧಿಕಾರಿ ಕೃಷ್ಣ ರೆಡ್ಡಿ, ಕಮೀಟಿ ಚೇರ್ಮನ್ ಅಗಿ ಶಾಸಕರು ಇದ್ದಾರೆ ಅವರ ತೀರ್ಮಾನ ದಂತೆ ಮಾಡಲಾಗುತ್ತದೆ ಎಂದು ಉತ್ತರ ನೀಡಿದರು,ಅದಕ್ಕೆ ಪಾಲಿಕೆ ಸದಸ್ಯರು ಅಧಿಕಾರಿ ವಿರುದ್ಧ ಗರಂ ಅಗಿದ್ದರು.

ಬಡವರು ಯಾಲ್ಲರು ಒಂದೇ ಅಡಳಿತ ಪಕ್ಷದ ಅವರ ಹೇಳಿದ ಅವರ ಗೆ ಮಾತ್ರವೇ ನಿರ್ಮಾಣ ಮಾಡಿಕೊಡಬೇಕು ಅನ್ನುವ ಪಾಲನೆ,ಇಲ್ಲವೆಂದುರು.

ಅದಕ್ಕೆ ಅವರು ಮಣಿದು ಮತ್ತೊಮ್ಮೆ ಪರಿಶೀಲನೆ ಮಾಡಿ,ಉಳಿದ ಅವರಗೆ ಕೂಡ ನಿರ್ಮಾಣ ಮಾಡುವ ವ್ಯವಸ್ಥೆ ಮಾಡುತ್ತಿವೆ ಏಂದರು.

ಇದೇ ಸಂದರ್ಭದಲ್ಲಿ ಸ್ಲಂ ಪ್ರದೇಶದ ಮನೆಗಳು ಗೆ ಹಕ್ಕು ಪತ್ರಗಳು ನೀಡಿದೆ,ಯಾಲ್ಲವು ಶಾಸಕ ಮನೆಯಲ್ಲಿ ಇಟ್ಟಿದ್ದಾರೆ ಅನ್ನುವ ಆರೋಪ ಮಾಡಿದರು.

ಹಕ್ಕು ಪತ್ರ ನೀಡಲು “ಎರಡುವರೆ ಸಾವಿರ ದಿಂದ ನಾಲ್ಕೂವರೆ ಸಾವಿರ” ಹಣವನ್ನು ಪಡೆಯುತ್ತಾ ಇದ್ದಾರೆ, ಇದು ಯಾಕೆ ಕೊಡಬೇಕು,ಬಡವರು ಎಲ್ಲಿ ಯಿಂದ ಕೊಡುತ್ತಾರೆ, ಏಂದು ಪ್ರಶ್ನೆ ಮಾಡಿದರು.

*ಅದಕ್ಕೆ ಅಧಿಕಾರಿ ಗಳು ನಾವು ಯಾವುದೇ ಹಣವನ್ನು ಜನರ ಹತ್ತಿರ ತೆಗೆದು ಕೊಳ್ಳಲು ಹೇಳಿ ಇಲ್ಲಿ,ನಮ್ಮ ಗಮನಕ್ಕೆ ಬಂದರೆ ಅವರ ಮೇಲೆ ಕ್ರಮ ಕೈ ಗೊಳ್ಳ ಲಾಗುತ್ತದೆ ಏಂದರು.*

ಹಕ್ಕು ಪತ್ರಗಳು ಯಾಲ್ಲವು ಕಚೇರಿ ಯಲ್ಲಿ ಇದ್ದಾವೆ, ಶಾಸಕರು ಒಂದು ಕಾರ್ಯಕ್ರಮ ಮಾಡಿಕೊಡಬೇಕು ಎಂದಿದ್ದಾರೆ, ಅದಕ್ಕೆ ವಿಳಂಬ ಅಗಿದೆ, ಮೇಲಿನ ಅಧಿಕಾರಿಗಳ ಅನುಮತಿ ಪಡೆದು,ತಕ್ಷಣವೇ ಹಂಚಿಕೆ ಮಾಡುವ ವ್ಯವಸ್ಥೆ ಮಾಡಲಾಗುತ್ತದೆ, ಏಂದರು.

ಮನೆಗಳ ನಿರ್ಮಾಣ ದಲ್ಲಿ ಕಳಪೆ ಕಾಮಗಾರಿ ಅಗಿದೆ, ಕೆಲ ಪ್ರದೇಶ ಗಳಲ್ಲಿ, ನಿರ್ಮಾಣ ಕ್ಕೆ ಯೋಗ್ಯ ವಾಗದೆ ಇರುವ ಸ್ಥಳ ಗಳಲ್ಲಿ, ನಿರ್ಮಾಣ ಮಾಡಿದ್ದಿರಿ,ನಾಳೆ ಅಪಾಯ ಗಳು ನಡೆದರೆ,ಯಾರು ಜವಾಬ್ದಾರಿ ಏಂದು ಪ್ರಶ್ನೆ ಮಾಡಿದರು.

ಇದಕ್ಕೆ ಉತ್ತರ ಯಾಲ್ಲವು ಶಾಸಕರು..ಶಾಸಕರು..?? ಅನ್ನುವ ಉತ್ತರ ಕೊಟ್ಟಿದ್ದು ಅಚ್ಚರಿ ಮೂಡಿಸುವಂತೆ ಆಗಿತ್ತು.

ಮತ್ತು ಕೆಲ ಕಡೆ ಸರ್ಕಾರದ ಸ್ಥಳಗಳಲ್ಲಿ ನಿರ್ಮಾಣ ಮಾಡಿದ್ದು,ಪಾಣಿಗಳಲ್ಲಿ ಸರ್ಕಾರ ಏಂದು ಬರುತ್ತದೆ, ಅದು ಏಂದು ಕ್ಲಿಯರ್ ಆಗಬೇಕು, ನಾಳೆ ಬಡವರ ಪರಿಸ್ಥಿತಿ ಏನು ಏಂದು ಪ್ರಶ್ನೆ ಮಾಡಿದ್ದು ಅದಕ್ಕೆ ಜಿಲ್ಲಾಧಿಕಾರಿ ಗಳು ಅಸ್ಥಳವನ್ನು ಸ್ಲಂ ಗೆ ವರ್ಗಾವಣೆ ಮಾಡಿಕೊಡುತ್ತಾರೆ ಎಂದರು.

ಇದು ಯಾಲ್ಲವು ನೋಡುತ್ತಾ ಇದ್ದರೆ “ಹುಚ್ಚ” ನ ಮದುವೆ ಯಲ್ಲಿ ಉಟ ಮಾಡಿದವನು ಜಾಣ ಅನ್ನುವ ಕಥೆ ಅಗಿದೆ.

ಈ ಕಚೇರಿ ಕೂಡ ರಹಸ್ಯ ಪ್ರದೇಶದಲ್ಲಿ ಬಹುದೂರ ಇದೇ.

ಸಾಮಾನ್ಯ ಜನರು ಗೆ ಸಿಗುವುದು ಸುಳ್ಳು,ಇದೇ ಕಚೇರಿ ಯಲ್ಲಿ ಅಧಿಕಾರಿ ತುಂಬಾ ವರ್ಷಗಳ ದಿಂದ ಇದ್ದಾರೆ.

ಇತರೆ ಜಿಲ್ಲೆ ಗಳು ಕೂಡ ಅವರೆ ನೋಡಿಕೊಳ್ಳಬೇಕು.

ಇದರ ಕಥೆ ಯಾರಿಗೆ ಅರ್ಥ ವಾಗದು,ಆದರೆ ಕಾಂಗ್ರೆಸ್ ಪಾಲಿಕೆಯ ಸದಸ್ಯರು ಯಾಲ್ಲರು ಹೋಗಿ ಬಡವರ ಪರವಾಗಿ ಧ್ವನಿ ಮಾಡಿದ್ದು ಶ್ಲಾಘನೀಯ ದ ವಿಚಾರ,ನೋಡಬೇಕು ಬಡಜನರಿಗೆ ಏಷ್ಟುರ ಮಟ್ಟಿಗೆ ನ್ಯಾಯ ಸಿಗುತ್ತದೆ ಎಂದು.

ಜಿಲ್ಲಾಧಿಕಾರಿ ಗಳು ತಕ್ಷಣವೇ ಯಾಲ್ಲ ಸ್ಲಂ ಪ್ರದೇಶದ ಜನರು ಜೊತೆಯಲ್ಲಿ ಜನ ಸ್ಪಂದನ ಕಾರ್ಯಕ್ರಮ ಮಾಡಿ,ಸ್ಲಂ ಬೋರ್ಡ್ ದಿಂದ ಅಗಿರವ ಕಷ್ಟ ಸುಖ ಗಳು ತಿಳಿದು ಕೊಳ್ಳುವ ಅವಶ್ಯಕತೆ ಇದೆ, ಇಲ್ಲದಿದ್ದರೆ ಸರ್ಕಾರದ ವಿರುದ್ಧ ಜನರು ಹೋರಾಟ ಮಾಡುವ,ಕಾಲ ಹತ್ತಿರ ದಲ್ಲಿ ಇದೇ.ಈಗಾಗಲೇ ಸ್ಲಂ ಪ್ರದೇಶ ಗಳಲ್ಲಿ ಬಡವರ ಗೆ ಮನೆ ನಿರ್ಮಾಣ ಮಾಡಿಕೊಡುತ್ತವೆ ಏಂದು ಅದೇ ಬಾಗದ ಚೊಟ ಮೋಟ ಲೀಡರ್ ಗಳು ಶಾಸಕರ ಆಪ್ತರು ಏಂದು ಹೇಳಿಕೊಂಡು, ಶಾಸಕರು ಗೆ ತಿಳಿಯದಂತೆ ರಹಸ್ಯ ವಾಗಿ ಜನರ ಹತ್ತಿರ, “ಸಿಕ್ಕ ಪಟ್ಟೆ ಕಿತ್ತು ಕೊಂಡು” ತಿಂದು ಹಾಕಿದ್ದಾರೆ ಅನ್ನುವ ವಿಚಾರ ಸಾರ್ವಜನಿಕರ ವಲಯದಲ್ಲಿ ಕೇಳಿ ಬರುತ್ತಿದೆ,ಇದು ಒಂದು ಸಿಜನಲ್ ವ್ಯಾಪಾರ ಅಗಿದೆ. • *ಶಾಸಕರ ವಿಚಾರ ದಲ್ಲಿ ಜನರಲ್ಲಿ ಉತ್ತಮ ಅಭಿಪ್ರಾಯ ಇದೇ.* ಬಡವರ ವಿಚಾರ ದಲ್ಲಿ ಇಂತಹ ಸಮಸ್ಯೆಗಳು ಅಗಬಾರದು ಅನ್ನುವುದು ನಮ್ಮ ಉದ್ದೇಶ.

ಕೊಳಗೇರಿ ಮಂಡಳಿ ದಲ್ಲಿ ನಡೆಯುವ ಸಮಸ್ಯೆಗಳು ಮೇಯರ್‌ ರಾಜೇಶ್ವರಿ ಸುಬ್ಬರಾಯಡು ಅವರ ಗಮನಕ್ಕೆ ಬಂದಿತ್ತು.

ಈ ಸಂದರ್ಭದಲ್ಲಿ ಬಹುತೇಕ ಪಾಲಿಕೆಯ ಕಾಂಗ್ರೆಸ್ ಸದಸ್ಯರು ಉಪಸ್ಥಿತಿ ಇದ್ದರು.
(ಕೆ.ಬಜಾರಪ್ಪ ವರದಿಗಾರರು.)


News 9 Today

Leave a Reply