This is the title of the web page
This is the title of the web page

Please assign a menu to the primary menu location under menu

State

ಸಚಿವರು,ಶಾಸಕರ ಬಲ ಪ್ರದರ್ಶನ ವಾಗಿತ್ತು ಲೋಕಾರ್ಪಣೆ ವೇದಿಕೆ.!

ಸಚಿವರು,ಶಾಸಕರ ಬಲ ಪ್ರದರ್ಶನ ವಾಗಿತ್ತು ಲೋಕಾರ್ಪಣೆ ವೇದಿಕೆ.!

*ಸಚಿವರು,ಶಾಸಕರ ಬಲ ಪ್ರದರ್ಶನ ವಾಗಿತ್ತು ಲೋಕಾರ್ಪಣೆ ವೇದಿಕೆ.!* ಬಳ್ಳಾರಿ(1) ಜಿಲ್ಲೆ ಗೆ ಉಸ್ತುವಾರಿ ಯಾಗಿ ನೇಮಕ ಗೊಂಡ ಕ್ಷಣ ದಿಂದ, ಶ್ರೀರಾಮುಲು ಅವರು ಕ್ಷಣ ಬಿಡುವು ಬಿಡುವು ಇಲ್ಲದೆ,ನಾಮ ಫಲಕಗಳು ಇರುವ ಪ್ರತಿ ಕಾರ್ಯಕ್ರಮ ಕ್ಕೆ, ಚಾಲನೆ, ಶಂಕುಸ್ಥಾಪನೆ, ಭೂಮಿ ಪೂಜೆ ಮುಂತಾದ,ಕೋಟಿ ಕೋಟಿ ಅನುದಾನದ ಕಾರ್ಯಕ್ರಮ ಗಳಲ್ಲಿ ಭಾಗ ವಹಿಸಿರುವ, ದೇಶ,ರಾಜ್ಯ ಮಟ್ಟದಲ್ಲಿ, ಪ್ರಥಮ ಸಚಿವರು ಇರಬಹುದು ಅನಿಸುತ್ತದೆ.!!.ಇದರಲ್ಲಿ ಯಾವುದು ಹೊಸ ಕಾಮಗಾರಿ,ಯಾವುದು ಹಳೆಯ,ಕಾಮಗಾರಿ ಅನ್ನವದು, ಗೊತ್ತಿಲ್ಲದ ಗೊಂದಲ ಅಗಿದೆ.

ಈಹಿಂದೆನ ರಾಜಕಾರಣಿಗಳು,ಉದ್ಘಾಟನೆ ಮಾಡಿದ್ದ ಯೋಜನೆ ಗಳು ಗೆ ಮತ್ತೆ ಸಚಿವರು ಯಿಂದ ಚಾಲನೆ..!! ಈ ವರಗೆ ಸಚಿವರು,ಕ್ಷಣ ಬಿಡುವು ಇಲ್ಲದೆ ಮಾಡಿರುವ ಅಭಿವೃದ್ಧಿ ಗಳಲ್ಲಿ,ಶೇಕಡಾ ಡಬಲ್ ಟೈಮ್ ಮಾಡಿರುವ ಕಾಮಗಾರಿ ಗಳು ಏಂದು,ಪ್ರತಿ ಒಬ್ಬರು ಹೇಳುತ್ತಾರೆ, ಅಲ್ಪ ಸ್ವಲ್ಪ ನೂತನ ಯೋಜನೆ ಗಳಗೆ ಚಾಲನೆ ಮಾಡಿದ್ದಾರೆ ಅನ್ನುತ್ತಾರೆ, ಸಾರ್ವಜನಿಕರು.

ಈವರೆಗೆ ಸಚಿವರು ಮಾಡಿದ ಅಭಿವೃದ್ಧಿ ಕಾಮಗಾರಿ ಗಳಲ್ಲಿ, ನೆಲ ಮಟ್ಟದಿಂದ ನಿರ್ಮಾಣ ಮಾಡಿರುವ, ಕಾಮಗಾರಿ ಗಳು ಬೆರಳು ಎಣಿಕೆ ಅಷ್ಟೇ ಮಾತ್ರವೇ.

ನೂತನ ನಿರ್ಮಾಣ ವಿವರಗಳು ಡಿಸಿ,ಜಿಪಂ,ಯಲ್ಲಿ ಕೂಡ ಇಲ್ಲವೆಂದು ಅಧಿಕಾರಿಗಳು ಹೇಳುತ್ತಾರೆ.

ಅಧಿಕಾರಿಗಳು ಬುದ್ದಿವಂತಕೆ ಕಥೆಗಳು ಹೇಳುತ್ತಾರೆ,ಇಲ್ಲ ಈಹಿಂದೆಯೇ ಯಾಲ್ಲವು ಮಾಡಿದ್ದು ಅವಗಳಗೆ ಮತ್ತು ಹೆಚ್ಚಿನ ಅನುದಾನ.. ಬರುವಂತೆ ಮಾಡಿದ್ದಾರೆ, ಅಲ್ಪಸ್ವಲ್ಪ ಕೆಲಸಗಳು ಬಾಕಿ ಇದ್ದವು, ಅದನ್ನು ಮಾಡಿ ನೂತನ ಸಚಿವರು ಕೂಡ ಯಾಲ್ಲವು ಮಾಡಿ ಸುತ್ತಾ ಇದ್ದಿವಿ,ಏನೂ ಮಾಡಬೇಕು ಅನ್ನುತ್ತಾರೆ!!.

ಇನ್ನೂ ಹೊಸ ಕಾಮಗಾರಿ ಗಳು ಇದ್ದಾವೆ, ಅವುಗಳು ಆರಂಭ ಮಾಡಬೇಕು,ಗುತ್ತಿಗೆ ದಾರರಗೆ ಕ್ಲಿಯರ್ ನ್ಸ್ ಸಿಕ್ಕ ಕೂಡಲೇ ಶರ ವೇಗ ದಿಂದ ನಡೆಯುತ್ತದೆ ಅನ್ನುತ್ತಾರೆ.

ಇಲ್ಲದಿದ್ದರೆ ಸಚಿವರು ಅಗಿ ಕೆಲ ತಿಂಗಳುಗಳು ಆಗಿಲ್ಲ, ಅಷ್ಟು ರಲ್ಲಿ ಇಷ್ಟು ಉದ್ಘಾಟನೆ ಅಗುತ್ತಾವೇ ಅಂದರೆ,”ಚೈನಾ” ಸಿಸ್ಟಮ್ ಮಾದರಿ ಯಲ್ಲಿ ಮಾಡಲು ಸಾಧ್ಯವೇ.?? ಅನ್ನುತ್ತಾರೆ ಸಾರ್ವಜನಿಕರು.

ಗುರುವಾರ ಸಚಿವರು ಕೋಳುರು ಏತ ನೀರಾವರಿ ಯೋಜನೆ ಲೋಕಾರ್ಪಣೆ ಮಾಡಲು ಹೋಗಿದ್ದರು,ಅದು ಈಹಿಂದೆ ಶಾಸಕ ಶಂಕರ ರೆಡ್ಡಿ, ಜನಾರ್ದನ ರೆಡ್ಡಿ, ಶಾಂತಮ್ಮ ಅವರ ಅವದಿಯಲ್ಲಿ ಆರಂಭ ಮಾಡಿದ್ದರು.

ಕೋಟಿ ಕೋಟಿ, ಅನುದಾನ ಖರ್ಚು ಮಾಡಿದ್ದರು,5.6.ಗ್ರಾಮಗಳಗೆ ಬೇಸಾಯಕ್ಕೆ ಅನುಕೂಲ ಆಗುವಂತೆ, ಮಾಡಿದ ಯೋಜನೆ.

ಅಧಿಕಾರಿಗಳು ಸಕ್ರಿಯ ವಾಗಿ ಮಾಡದೆ ಕಾಮಗಾರಿ ಯಲ್ಲಿ ಅವ್ಯವಹಾರ ಮಾಡಿದ್ದರು.

ಹಲವಾರು ವರ್ಷಗಳ ಹಿಂದೇ ಮಾಡಿದ ಈ ಯೋಜನೆ ಯಿಂದ ಒಬ್ಬ ರೈತ ಒಂದು ಎಕರೆ ಗೆ ಬೊಗಸೆ ನೀರು ಹರಿಸಿ ಬೆಳೆದ ದಾಖಲೆ ಗಳು ಇಲ್ಲ ಎಂದು ಸುತ್ತಮುತ್ತಲಿನ ಗ್ರಾಮಸ್ಥರು ಬಹಿರಂಗ ವಾಗಿ ಹೇಳುತ್ತಾರೆ.

ಇದಕ್ಕೆ ಮತ್ತೆ ಸಚಿವರು.7.13,ಕೋಟಿ ಗಳು ಬಿಡುಗಡೆ, ಈವರೆಗೆ ಕಾಮಗಾರಿ ಇನ್ನೂ ಪೂರ್ತಿ ಅಗಲ್ಲ ಅನ್ನುತ್ತಾರೆ ಜನರು.

ಇಷ್ಟು ಅನುದಾನ ಯಾಲ್ಲವು ಮಣ್ಣಿನ ಪಾಲ್,ನಾಯಕರ ಪಾಲ್ ಅಗಿದೆ ಅನ್ನುವ ಆರೋಪಗಳು ಕೇಳಿ ಬರುತ್ತವೆ.

ಸಚಿವರು ಸಂಪೂರ್ಣ ವಾಗಿ ಕಾಮಗಾರಿ ಮಾಹಿತಿಯನ್ನು ಪಡೆದುಕೊಂಡು,ಅನ್ನದಾತ ರಗೆ ಅನುಕೂಲ ವಾಗಿದಿಯಾ ಇಲ್ಲವೆಂದು ತಿಳಿದು ಕೊಂಡು, ಕಾರ್ಯಕ್ರಮ ಮಾಡಬಹುದು ಆಗಿತ್ತು.

ಇದೆ ಕಾರ್ಯಕ್ರಮ ಕ್ಕೆ ಶಾಸಕ ಗಣೇಶ್ ಕೂಡ ಬಂದಿದ್ದರು, ಅವರು ಎತ್ತಿನ ಬಂಡಿ ಮೂಲಕ ಸಾವಿರ ಅಭಿಮಾನಿಗಳ ಜೊತೆಯಲ್ಲಿ ಬಂದಿದ್ದರು, ಒಂದು ರೀತಿಯಲ್ಲಿ ಲೋಕಾರ್ಪಣೆ ಕಾರ್ಯಕ್ರಮ ಸಚಿವರು ಗೆ ಶಾಸಕ ರಗೆ ಬಲ ಪ್ರದರ್ಶನ ವೇದಿಕೆ ಆಗಿತ್ತುಅನ್ನವ ಮಟ್ಟದಲ್ಲಿಇತ್ತು.

ಒಂದು ರೀತಿಯಲ್ಲಿ ಗಣೇಶ್ ಪ್ಲಾನ್ ಮಾಡಿಕೊಂಡು ಜನಸಮೂಹ ದಿಂದ ಬಂದಿದ್ದರು,ಗಣೇಶ್ ಅವರ ಗೆ ಜೈಕಾರ ಹಾಕುವದು ನೋಡಿದ ಸಚಿವರು ಸ್ವಲ್ಪ ಹೊತ್ತು ಮೌನ ಕ್ಕೆ ಶರಣು ಆಗಿದ್ದರು.

ಒಳ್ಳೆಯ ಕಾರ್ಯಕ್ರಮ ಆಗಿತ್ತು,ಜೈಕಾರ ಹಾಕಿಸಿ ಕೊಳ್ಳುವ ವೈದಿಕ ಅಲ್ಲವೇ ಅಲ್ಲ.ಜನರ ನೂಕು ನುಗ್ಗಲು ಮಾಡಿದ್ದರು,ಗಣೇಶ್ ಅವರನ್ನು ಎತ್ತಿಕೊಂಡು ಕುಣಿಯುವ ಸಂದರ್ಭದಲ್ಲಿ, ರಾಮುಲು ಅಭಿಮಾನಿಗಳು ಕೂಡ ಅದನ್ನೆ ಮಾಡುವ ಪ್ರಯತ್ನ ದಲ್ಲಿ ಹೆಚ್ಚು ಕಡಿಮೆ ಅಗಿ ಸಾಹೇಬರು ಕಾಲಿಗೆ ಪೆಟ್ಟು ಅಗಿದೆ ಎಂದು ತಿಳಿದು ಬಂದಿದೆ.

ಇಲ್ಲಿ ಭದ್ರತೆ ವ್ಯವಸ್ಥೆ ಸರಿಯಾಗಿ ಇರಲಿಲ್ಲ ಅನ್ನವ ಮಾತುಗಳು ಕೇಳಿ ಬಂದಿದ್ದವು.

ಅಷ್ಟು ದೊಡ್ಡ ಮಟ್ಟದಲ್ಲಿ ಸಾರ್ವಜನಿಕರಿಗೆ ಸಚಿವರ ಬಳಿ ಕಳಿಸುವ ಅಗತ್ಯ,ಇರಲಿಲ್ಲ.

ಸ್ವಲ್ಪ ಹೆಚ್ಚು ಕಡಿಮೆ ಆಗಿದ್ದರೆ ಎರಡು ಪಕ್ಷಗಳ ಅಭಿಮಾನಿಗಳು ಗೆ ಗಲಾಟೆ ಆಗುವ ವಾತಾವರಣ ಸೃಷ್ಟಿ ಆಗಿತ್ತು ಅನ್ನವ ಮಾತುಗಳು ಕೇಳಿ ಬಂದಿವೆ.

ಒಳ್ಳೆಯ ಕಾರ್ಯಕ್ರಮ ಗಳಲ್ಲಿ ಇಂತಹ ಪರಿಸ್ಥಿತಿ ಗಳು ಅಗಬಾರದು.ಸಚಿವರ ಗೆ ಕೋಳುರು ಮಾಜಿ ಅಧ್ಯಕ್ಷರು ಸಣ್ಣ ನಾಗಪ್ಪ, ಮತ್ತು ಸುತ್ತಮುತ್ತಲಿನ ಗ್ರಾಮಸ್ಥರು, ಸಾಥ್ ನೀಡಿದ್ದರು.
(ಕೆ ಬಜಾರಪ್ಪ ವರದಿಗಾರರು)


News 9 Today

Leave a Reply