This is the title of the web page
This is the title of the web page

Please assign a menu to the primary menu location under menu

State

ಎರಡು ಕೈ ಗಳನ್ನು ಕಳೆದು ಕೊಂಡು ಕತ್ತಲಲ್ಲಿ ಇದ್ದ ಯುವಕನಿಗೆ ಜೀವನಕ್ಕೆ ಬೆಳಕು ನೀಡಿದ ಶಾಸಕ ನಾಗೇಂದ್ರ.!!

ಎರಡು ಕೈ ಗಳನ್ನು ಕಳೆದು ಕೊಂಡು ಕತ್ತಲಲ್ಲಿ ಇದ್ದ ಯುವಕನಿಗೆ ಜೀವನಕ್ಕೆ ಬೆಳಕು ನೀಡಿದ ಶಾಸಕ ನಾಗೇಂದ್ರ.!!

*ಎರಡು ಕೈ ಗಳನ್ನು ಕಳೆದು ಕೊಂಡು ಕತ್ತಲಲ್ಲಿ ಇದ್ದ ಯುವಕನಿಗೆ ಜೀವನಕ್ಕೆ ಬೆಳಕು ನೀಡಿದ ಶಾಸಕ ನಾಗೇಂದ್ರ.!!*

 

*ಬಳ್ಳಾರಿ(19)ಮೋಕ ಗ್ರಾಮದಲ್ಲಿ ವಿದ್ಯುತ್ ಆಘಾತದಿಂದ ಚೇತರಿಸಿಕೊಳ್ಳುತ್ತಿರುವ ಗ್ರಾಮ ಪಂಚಾಯತಿ ಅಧ್ಯಕ್ಷರಾದ ರಾಮಣ್ಣ ಅವರನ್ನು ಭೇಟಿ ಮಾಡಿದ ಬಳ್ಳಾರಿ ಗ್ರಾಮಾಂತರ ಜನಪ್ರಿಯ ಶಾಸಕರಾದ ಶ್ರೀ ಬಿ.ನಾಗೇಂದ್ರ ಅವರು ಯೋಗಕ್ಷೇಮ ವಿಚಾರಿಸಿದರು.*
*ನಂತರ ಆ ಸ್ಥಳದಲ್ಲಿ ಎಂ.ಶರಣ ಎಂಬ ಯುವಕ ಉಪಸ್ಥಿತರಿದ್ದು, 9 ವರ್ಷಗಳ ಹಿಂದೆ ಕೆಲಸಕ್ಕೆ ಹೋದ ಸಂದರ್ಭದಲ್ಲಿ ತನ್ನ ಎರಡು ಕೈಗಳು ಆಕ್ಸಿಡೆಂಟ್ ಆಗಿ ಕಟ್ಟಾಗಿದ್ದು. ತನ್ನ ಕೈಗಳು ಮೊದಲಿನಂತಾಗಲು ಆಪರೇಷನ್ ಮಾಡಿಸಲು 35 ಲಕ್ಷ ರೂಪಾಯಿಗಳು ಬೇಕಾಗುತ್ತದೆ ಎಂದು ಮಾನ್ಯ ಶಾಸಕ ಬಿ.ನಾಗೇಂದ್ರ ಅವರಲ್ಲಿ ಮನವಿ ಮಾಡಿಕೊಂಡರು.*

*ಕೂಡಲೇ ಮಾನ್ಯ ಶಾಸಕ ಬಿ ನಾಗೇಂದ್ರ ಅವರು
ಎಂ.ಶರಣನ ಕೈಗಳು ಮೊದಲಿನಂತಾಗುವುದಾದರೆ 35 ಲಕ್ಷ ಆಗಲಿ ಅಥವಾ 50 ಲಕ್ಷ ರೂಪಾಯಿಗಳು ಆಗಲಿ, ಸಂಪೂರ್ಣ ಆಪರೇಷನ್‌ನ ಜವಾಬ್ದಾರಿಯನ್ನು ವಹಿಸಿಕೊಳ್ಳುವುದಾಗಿ ಭರವಸೆ ನೀಡಿದರು. ವೈದ್ಯಾಧಿಕಾರಿಗೆ ಕರೆ ಮಾಡಿ ಆದಷ್ಟು ಬೇಗ ಯುವಕನ ಕೈಗಳನ್ನು ಪರೀಕ್ಷೆ ಮಾಡಿ ತಕ್ಷಣವೇ ನನಗೆ ಮಾಹಿತಿ ನೀಡಬೇಕೆಂದು ವೈದ್ಯಾಧಿಕಾರಿಗಳಲ್ಲಿ ವಿನಂತಿಸಿಕೊಂಡರು.

ಬಳ್ಳಾರಿ ಯಲ್ಲಿ ಕೆಲ ನಾಯಕರು ಸುಳ್ಳು ಬರವಸೆ ಗಳು ಕೊಟ್ಟು ಮನೆ ಬಾಗಿಲುಗಳು ಮುಂದೆ ಚಪ್ಪಲಿ ಹರಿಯುವ ವರೆಗೆ ತಿರುಗಿಸುವ ಸುಳ್ಳು ನಾಯಕರನ್ನು ಬಳ್ಳಾರಿ ಜನರು ನೋಡಿದ್ದಾರೆ.

ಅಕ್ರಮ,ಸಕ್ರಮದಿಂದ ಶ್ರೀಮಂತಿಕೆ ಬಂದ ತಕ್ಷಣವೇ ಈಹಿಂದೆ ಯಾವ ರೀತಿಯಲ್ಲಿ ನಾವು ಜೀವನ ಮಾಡಿದ್ದಿವಿ,ಅನ್ನುವ ಅರಿವು ಇಲ್ಲದೆ,ಇರುವ ನಾಯಕರು ಇನ್ನೂ ಜೀವಂತ ವಾಗಿ ಇದ್ದಾರೆ.

ಇಂತಹ ಸಹಾಯ ಗುಣ ಇರುವ ನಾಯಕರಲ್ಲಿ ಗ್ರಾಮೀಣ ಕ್ಷೇತ್ರದ ಶಾಸಕ ನಾಗೇಂದ್ರ ಬಹಳ ವಿಶೇಷ… ಜನರು ಇಷ್ಟು ದಿನ ನಾಗೇಂದ್ರ ಬಡವರ ಕರುಣಾಮಯಿ ಎನ್ನುತ್ತಿದ್ದರು ಆದರೆ ಅವರು ಈದಿನ ದೊಡ್ಡ ಮೊತ್ತದ ಸಹಾಯ ಮಾಡಿ ಬಳ್ಳಾರಿ ರಾಜಕೀಯ ನಾಯಕರಿಗೆ ಮಾದರಿಯಾಗಿದ್ದಾರೆ ಅದಕ್ಕೆ ಜನರು ಅವರನ್ನು ದೇವರು
ಎನ್ನುತ್ತಾರೆ ಎಂದ ಮತದಾರರು.*

*ಈ ಸಂದರ್ಭದಲ್ಲಿ ಜನಪ್ರಿಯ ನಾಯಕರಾದ ಶ್ರೀ ಬಿ.ವೆಂಕಟೇಶ್ ಪ್ರಸಾದ್ ರವರು, ಗ್ರಾಮ ಪಂಚಾಯಿತಿಯ ಅಧ್ಯಕ್ಷರಾದ ರಾಮಣ್ಣ, ಕಾಂಗ್ರೆಸ್ ಪಕ್ಷದ ಮುಖಂಡರಾದ ಸಿಂಧುವಾಳ್ ಗಾದಿಲಿಂಗನಗೌಡ, ಹಗರಿ ಗೋವಿಂದ, ಗೋನಾಳ್ ನಾಗಭೂಷಣ ಗೌಡ, ಯಾಳ್ಪಿ ದಿವಾಕರ್ ಗೌಡ ಸೇರಿದಂತೆ ಗ್ರಾಮ ಪಂಚಾಯತಿ ಸದಸ್ಯರು ಇನ್ನೂ ಅನೇಕ ಕಾಂಗ್ರೆಸ್ ಪಕ್ಷದ ಮುಖಂಡರು ಉಪಸ್ಥಿತರಿದ್ದರು.* (ಕೆ.ಬಜಾರಪ್ಪ ವರದಿಗಾರರು ಬಳ್ಳಾರಿ.)


News 9 Today

Leave a Reply