This is the title of the web page
This is the title of the web page

Please assign a menu to the primary menu location under menu

State

ಬಳ್ಳಾರಿ ರೆಕ್ಕಾನ್ ರಿಕ್ರಿಯೇಶನ್ ಪ್ರೈವೇಟ್ ಲಿಮಿಟೆಡ್ ಮೇಲೆ ಎಸ್ಪಿ ರಂಜೀತ್ ದಿಢೀರ್ ದಾಳಿ

ಬಳ್ಳಾರಿ ರೆಕ್ಕಾನ್ ರಿಕ್ರಿಯೇಶನ್ ಪ್ರೈವೇಟ್ ಲಿಮಿಟೆಡ್ ಮೇಲೆ ಎಸ್ಪಿ ರಂಜೀತ್ ದಿಢೀರ್ ದಾಳಿ

*ಬಳ್ಳಾರಿ ರೆಕ್ಕಾನ್ ರಿಕ್ರಿಯೇಶನ್ ಪ್ರೈವೇಟ್ ಲಿಮಿಟೆಡ್ ಮೇಲೆ ಎಸ್ಪಿ ರಂಜೀತ್ ದಿಢೀರ್ ದಾಳಿ*

ಬಳ್ಳಾರಿ: 21 (ಅಕ್ಟೋಬರ್) ಬಳ್ಳಾರಿಯ ಹೃದಯ ಭಾಗದಲ್ಲಿರುವ ನಟರಾಜ್ ಥಿಯೇಟರ್ ಹಿಂಬದಿಯ ಬೀದಿಯಲ್ಲಿರುವ ರೆಕ್ಕಾನ್ ರಿಕ್ರಿಯೇಶನ್ಸ್, ಕ್ಲಬ್‌‌ಗೆ ಹತ್ತಾರು ಪೊಲೀಸರೊಂದಿಗೆ ದಿಢೀರ್ ದಾಳಿ ನಡೆಸಿದ ಬಳ್ಳಾರಿ ಎಸ್ಪಿ ರಂಜೀತ್ ಬಂಡಾರು.
ಕ್ಲಬ್‌ನ ಪರವಾನಿಗಿ ದಾಖಲೆಗಳನ್ನ ಪರಿಶೀಲನೆ ನಡೆಸಿದ್ದಾರೆ ಎನ್ನಲಾಗಿದೆ.
ಈಗಾಗಲೇ,ಈಕ್ಲಬ್ ನ್ಯಾಯಲಯದ ಅನುಮತಿ ಸೇರಿದಂತೆ ವಿವಿಧ ಇಲಾಖೆಗಳಿಂದ ಪರವಾನಗಿ ಪಡೆದಿದ್ದಾರೆ ಏಂದು ತಿಳಿದು ಬಂದಿದ್ದು.
ಪ್ರತಿ ಭಾರಿ ಪೊಲೀಸ್ ವರಿಷ್ಠಾಧಿಕಾರಿಗಳು ಬದಲಾದಾಗ ದಾಳಿ ಮಾಡುವುದು ಪರವಾನಿಗಿ ಪರಿಶೀಲಿಸುವುದು ಸಾಮಾನ್ಯವಾಗಿದೆ.
ಆದ್ರೆ, ಪದೇ ಪದೇ ಪೊಲೀಸ್ ದಾಳಿಯಿಂದ ಅನುಮಾನಕ್ಕೆ ಎಡೆಮಾಡಿಕೊಟ್ಟಂತಾಗುತ್ತದೆ ಎನ್ನುವುದು ಮಾಲಿಕರ ಅಳಲು.
ಬಳ್ಳಾರಿಯಲ್ಲಿ ಇನ್ನೂ ಉಳಿದ ಕ್ಲಬ್ ಗಳು ಹಲವಾರು ವರ್ಷ ಗಳು ದಿಂದ ನಡೆಯುತ್ತಾ ಇದ್ದರು ಅವುಗಳಿಗೆ ಯಾವುದೆ ರೈಡ್ ಅಥವ ಪರಿಶೀಲನೆಗಳ ಕಾರ್ಯಾ ಜರುಗುವುದು ವಿರಳ. ಹೀಗಾಗಿ ಅಂತಹ ಕ್ಲಬ್‌ಗಳಿಗೆ ರಾಜಕಾರಣಿಗಳ ಕೃಪಾರ್ಶಿವಾದವೇನಾದ್ರು ಇರಬಹುದಾ ಎನ್ನುವುದು ಸಾರ್ವಜನಿಕರ ಗುಮಾನಿ.
ರೆಕ್ಕಾನ್ ರಿಕ್ರಿಯೇಶನ್ ಕ್ಲಬ್ ನಗರದಲ್ಲಿ ಪ್ರಖ್ಯಾತಿ ಹೊಂದಿರುವ ಕ್ಲಬ್ ಇದಾಗಿದ್ದು.
ಸರ್ಕಾರದ ನಿಯಮಾನುಸಾರ ಯಾವೆಲ್ಲ ನಿಯಮ್ಮಗಳನ್ನ ಪಾಲಿಸಬೇಕು ಅದನ್ನ ಅಚ್ಚುಕಟ್ಟಾಗಿ ನಿರ್ವಹಿಸಿ ಪರವಾನಗಿ ಪಡೆದು ನಡೆಸುತ್ತಿದ್ದರು.
ಜನನಿ ಬೀಡ ಪ್ರದೇಶದಲ್ಲಿರುವ ಕ್ಲಬ್ ಕಟ್ಟದಲ್ಲಿ ಪೊಲೀಸರು ಪದೇ ಪದೇ ದಾಳಿ ಮಾಡು ಸನ್ನಿವೇಶಗಳಿಂದ ಸಾರ್ವಜನಿಕರಿಗೆ ಭಯದವಾತಾವರಣ ಸೃಷ್ಟಿಯಾದಂತಾಗಿದೆ.
ಈ ಹಿಂದೆ, ರಾಜಕಾರಣಿಗಳ ಬೆಂಬಲದಿಂದ ಹಲವು ಭಾರಿ ಕಾನೂನು ಭಾಹಿರ ಚಟುವಟಿಕೆಗಳು ನಡೆಯುತ್ತಿಧ್ದವು ಎನ್ನಲಾಗಿದ್ದು ಹಲವು ಪ್ರಕರಣಗಳು ದಾಖಲಾಗಿದ್ದವು.
ಹೀಗಾಗಿ ಕ್ಲಬ್‌ನ ಮುಖ್ಯಸ್ಥರು,ನಿಯಮಗಳ ಪ್ರಕಾರ ಸದಸ್ಯರಿಗೆ ಮಾತ್ರ ಅನುಮತಿಯಿದ್ದು. ಕಾಯನ್‌ಗಳ ಮೂಲಕ ಹಾಗೂ ಯುನಿಕೋಡ್ ಬಳಸಿ ಮನೊರಂಜನೆಯಾಗಿ ಆಡುವ ಕ್ರಿಯೇಶನ್ ಕ್ಲಬ್ ಆಗಿದ್ದು ಸಂಪೂರ್ಣ ಸಿಸಿ ಕ್ಯಾಮರಾ ಅಳವಡಿಸಲಾಗಿದೆ. ಇಷ್ಟಲ್ಲ ನಿಯಮಗಳು ಪಾಲಿಸುತ್ತಿದ್ದರು ಪೊಲೀಸರು ದಾಳಿ ನಡೆಸುತ್ತಿರುವುದು ಸುಖಾ ಸುಮ್ಮನೆ ಕಿರುಕುಳದಂತಾಗಿದೆ ಎನ್ನಲಾಗುತ್ತಿದೆ.
ಅಥವ ಯಾರಾದ್ರು ಪ್ರಭಾವಿ ಒತ್ತಡಕ್ಕೆ ಎಸ್ಪಿಯವರು ದಾಳಿ ನಡೆಸಿದ್ರಾ ಎನ್ನುವುದು ಸಾರ್ವಜನಿಕ ವಲಯದಲ್ಲಿ ಹರಿದಾಡುವ ಮಾಹಿತಿಯಾಗಿದೆ.


News 9 Today

Leave a Reply