This is the title of the web page
This is the title of the web page

Please assign a menu to the primary menu location under menu

State

ಬಡರೋಗಿಗಳ ಅನುಕೂಲವಾಗುವ ಜನೌಷಧಿ ಕೇಂದ್ರವನ್ನು ಷಡ್ಯಂತ್ರದಿಂದ ಮುಚ್ಚಿಸಿದ ವಿಮ್ಸ್ ನಿರ್ದೇಶಕರು : ಜನೌಷಧಿ ಕೇಂದ್ರದ ಪ್ರದೀಪ್ ಆರೋಪ

ಬಡರೋಗಿಗಳ ಅನುಕೂಲವಾಗುವ ಜನೌಷಧಿ ಕೇಂದ್ರವನ್ನು ಷಡ್ಯಂತ್ರದಿಂದ ಮುಚ್ಚಿಸಿದ ವಿಮ್ಸ್ ನಿರ್ದೇಶಕರು : ಜನೌಷಧಿ ಕೇಂದ್ರದ ಪ್ರದೀಪ್ ಆರೋಪ

ಬಡರೋಗಿಗಳ ಅನುಕೂಲವಾಗುವ ಜನೌಷಧಿ ಕೇಂದ್ರವನ್ನು ಷಡ್ಯಂತ್ರದಿಂದ ಮುಚ್ಚಿಸಿದ ವಿಮ್ಸ್ ನಿರ್ದೇಶಕರು : ಜನೌಷಧಿ ಕೇಂದ್ರದ ಪ್ರದೀಪ್ ಆರೋಪ

ಬಳ್ಳಾರಿ: ಬಳ್ಳಾರಿ ಮತ್ತು ಅಕ್ಕ ಪಕ್ಕದ ಜಿಲ್ಲೆಗಳ ಹಾಗೂ ನೆರೆಯ ಆಂಧ್ರಪ್ರದೇಶದ ಅನಂತಪುರ ಜಿಲ್ಲೆಗಳಿಂದ ಬಳ್ಳಾರಿ ನಗರದ ವಿಜಯ ನಗರ ವೈದ್ಯಕೀಯ ವಿಜ್ಞಾನ ಸಂಸ್ಥೆ ಆಸ್ಪತ್ರೆಗೆ ಪ್ರತಿ ದಿನ ಸಾವಿರಾರು ಜನ ಬಡ ರೋಗಿಗಳು ಬರುತ್ತಾರೆ. ಕಾರಣ ಈ ಆಸ್ಪತ್ರೆಯಲ್ಲಿ ಉತ್ತಮವಾದ ಚಿಕಿತ್ಸೆ ಜೊತೆಗೆ ಪ್ರಧಾನ ಮಂತ್ರಿ ಜನೌಷಧಿ ಕೇಂದ್ರದಲ್ಲಿ ಅತ್ಯಂತ ಕಡಿಮೆ ಬೆಲೆಗೆ ಔಷಧಿಗಳು ಸಿಗುವುದರಿಂದ, ಆದರೆ ಕೆಲ ತಿಂಗಳುಗಳಿಂದ ಅಲ್ಲಿನ ಜನ ಚೌಷಧಿ ಕೇಂದ್ರವನ್ನು ವಿಮ್ಸ್ ನಿರ್ದೇಶಕರಾದ ಗಂಗಾಧರಗೌಡ ಮಳಿಗೆಯ ಅಗ್ರಿಮೆಂಟ್ ಅವದಿ ಮುಂದಿನ ಎಪ್ರಿಲ್‌ ವರೆಗೂ ಇದ್ದರು ಸಹ ನವೀಕರಣಗೊಂಡಿಲ್ಲ ಎನ್ನುವ ಸುಳ್ಳು ನೆಪದಿಂದ ಕೇಂದ್ರವನ್ನು ಬಂದ್‌ ಮಾಡಿಸಿರುತ್ತಾರೆ ಎಂದು ಜನೌಷಧಿ ಕೇಂದ್ರದ ಪ್ರದೀಪ್ ಆರೋಪಿಸಿದ್ದಾರೆ.

ಅವರು ಇಂದು ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಪತ್ರಕರ್ತರನ್ನು ಉದ್ದೇಶಿಸಿ ಮಾತನಾಡಿ ವಿಮ್ಸ್ ಡಾಕ್ಟರ್‌ಗಳು ಜನ್ರಿಕ್ ಔಷಧಿಯನ್ನು ಬರೆದು ಕೊಡುವ ಬದಲಾಗಿ ಹೊರಗಡೆ ಇರುವ ಮೆಡಿಕಲ್ ಶಾಪ್‌ನಲ್ಲಿ ಸಿಗುವ ಬ್ರಾಂಡೆಡ್ ಔಷಧಿಯನ್ನು ಬರೆದುಕೊಡುತ್ತಾರೆ. ಇದರಿಂದ ಅರ್ಥಿಕವಾಗಿ ಬಡವರಿಗೆ ತುಂಬಾ ತೊಂದರೆಯಾಗುತ್ತಿದೆ. ಇದನ್ನು ವಿರೋಧಿಸಿ ನಾನು ವಿಮ್ಸ್ ಅಧಿಕ್ಷಕರು ಮತ್ತು ನಿರ್ದೇಶಕರಿಗೆ ದೂರು ನೀಡಿದಲ್ಲಿ ಅವರು ಸಕರಾತ್ಮಕವಾಗಿ ಸ್ಪಂದಿಸಿರುವುದಿಲ್ಲ. ಅಷ್ಟೆ ಅಲ್ಲದೆ ಪ್ರಧಾನ ಮಂತ್ರಿ ಜನೌಷಧಿ ಕೇಂದ್ರದಲ್ಲಿ ಔಷಧವನ್ನು ಖರೀಧಿಸಬೇಡಿ ಅದು ಕಳೆಪೆ ಗುಣಮಟ್ಟದ್ದಾಗಿದೆ ಎಂದು ಅಪಪ್ರಚಾರ ಸಹ ಮಾಡಿದರು. ನನ್ನ ಮೇಲೆ ಅನೇಕ ಇಲ್ಲಸಲ್ಲದ ಆರೋಪಗಳನ್ನು ಮಾಡಿ ಜನೌಷಧಿ ಕೇಂದ್ರವನ್ನು ಬಂದ್‌ ಮಾಡಿಸಲು ಷಡ್ಯಂತ್ರ ಮಾಡಿದರು ಎಂದು ಇದೇ ವೇಳೆ ಅಪಾದಿಸಿದರು.

ಅಲ್ಲದೆ ಡಾ|| ಪುನೀತ್ ರಾಜ್‌ಕುಮಾರ್ ನೆನಪಿಗಾಗಿ ಅಪ್ಪು ಸಂಜೀವಿನಿ ಹೆಸರಿನಲ್ಲಿ ಬಡ ರೋಗಿಗಳಿಗೆ ಉಚಿತ ಔಷಧಿ ವಿತರಣೆಯನ್ನು ಸಹ ನಮ್ಮ ಜನೌಷಧಿ ಕೇಂದ್ರದಿಂದ ವಿತರಿಸಲಾಗುತ್ತಿತ್ತು. ಇದರಿಂದ ಹೊರಗಡೆ ಇರುವ ಔಷಧಿ ಅಂಗಡಿಗಳಿಗೆ ವ್ಯಾಪಾರ ಕಡಿಮೆಯಾಗಬಹುದೆಂದು ನಿರ್ದೇಶಕರಿಗೆ ವಿವಿಧ ಆರೋಪಗಳನ್ನು ಮಾಡಿ ನಮ್ಮ ಜನೌಷಧಿ ಕೇಂದ್ರವನ್ನು ಮುಚ್ಚಿಸಲು ಪ್ಲಾನ್ ಮಾಡಿದರು. ನಮ್ಮ ಮಳಿಗೆಯ ಕಾರರು ಅವದಿ ಇನ್ನೂ ಚಾಲ್ತಿಯಲ್ಲಿರುವಾಗಲೆ ಬಾಡಿಗೆ ಕರಾರಿನ ಒಪ್ಪಂದ ಮುಗಿದಿದೆ ಎಂದು ನನಗೆ ನನ್ನ ಹಳೆ ವಿಳಾಸಕ್ಕೆ ನನಗೆ ಸಿಗದಂತೆ ನೋಟೀಸ್ ನೀಡಿ ಡ್ರಗ್ ಇನ್ಸ್‌ಪೆಕ್ಟರ್‌ರವರಿಗೆ ಜನೌಷಧಿ ಕೇಂದ್ರವನ್ನು ಮುಚ್ಚಿಸುವಂತೆ ದೂರು ನೀಡಿರುತ್ತಾರೆ. ಅದರಂತೆ ಡ್ರಗ್ ಇನ್ಸ್‌ಪೆಕ್ಟರ್‌ರವರು ನಮ್ಮ ಜನೌಷಧಿ ಕೇಂದ್ರವನ್ನು ಮುಚ್ಚಿಸಿದ್ದಾರೆ. ಇದರಿಂದ ವಿಮ್ಸ್ ಬರುವ ಬಡರೋಗಿಗಳಿಗೆ ಮತ್ತು ಸಾರ್ವಜನಿಕರಿಗೆ ತೊಂದರೆಯಾಗಿದೆ. ಮುಗಿಯುವುದರೊಳಗಾಗಿ ನವೀಕರಣ ಸಹಕರಿಸಬೇಕೆಂದರು. ಮತ್ತು ನಮ್ಮ ಮಳಿಗೆಯ ಬಾಡಿಗೆ ಕರಾರು ಮಾಡಿಕೊಟ್ಟು ಜನೌಷಧಿ ಕೇಂದ್ರವನ್ನು ಆರಂಭಿಸಲು

ಮುಖ್ಯವಾಗಿ ಮುಚ್ಚಿದ ಜನೌಷಧಿ ಕೇಂದ್ರದಲ್ಲಿ ಈಗಾಗಲೇ ಸುಮಾರು 20 ರಿಂದ 25 ಲಕ್ಷದ ರೂಪಾಯಿಗಳ ಔಷಧಿಗಳ ದಾಸ್ತಾನಿದ್ದು ಕೇಂದ್ರವನ್ನು ಮುಚ್ಚಿದಲ್ಲಿ ಔಷಧದ ಅವದಿ ದಿನಾಂಕ ಮುಗಿದುಹೋಗಿ ನನಗೆ ಲಕ್ಷಾಂತರ ರೂಪಾಯಿಗಳ ನಷ್ಟವಾಗುತ್ತದೆ. ಕಾರಣ ಯಾವುದೋ ಲಾಭಿಗೆ ಮಣಿಯದೆ ಷಡ್ಯಂತ್ರ ಮಾಡದೇ, ಮುಚ್ಚಿಸಿದ ಜನೌಷಧಿ ಕೇಂದ್ರವನ್ನು ಮರು ಆರಂಭಿಸಲು ವಿಮ್ಸ್ ನಿರ್ದೇಶಕರು ಮತ್ತು ಅಧಿಕ್ಷಕರು ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿದರು.(ಕೆ.ಬಜಾರಪ್ಪ ವರದಿಗಾರರು ಬಳ್ಳಾರಿ.)


News 9 Today

Leave a Reply