*ಶ್ರೀಮತಿ ಲಕ್ಷ್ಮಿ ಅರುಣಾ ಜನಾರ್ದನ್ ರೆಡ್ಡಿ ಅವರಿಗೆ ಗುಗ್ಗುರಟ್ಟಿಯಲ್ಲಿ ಅದ್ದೂರಿ ಸ್ವಾಗತ.*
*ಬಳ್ಳಾರಿ(7) ಕಲ್ಯಾಣ,ಕರ್ನಾಟಕ ರಾಜ್ಯ ಪಕ್ಷದ ಅಧಿನಾಯಕಿ ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಶ್ರೀಮತಿ ಲಕ್ಷ್ಮಿಅರುಣಾರವರು 5ನೇ ವಾರ್ಡಿನ ಗುಗ್ಗುರಟ್ಟಿಯಲ್ಲಿ ನೂರಾರು ಜನ ಕಾರ್ಯಕರ್ತರನ್ನು ಪಕ್ಷದ ಶಾಲು ಹಾಕುವ ಮೂಲಕ ಕಲ್ಯಾಣ ರಾಜ್ಯ ಪ್ರಗತಿಪಕ್ಷಕ್ಕೆ ಬರಮಾಡಿಕೊಂಡರು*
ಈ ಸಮಯದಲ್ಲಿ ಪ್ರೀತಿಯ ಸಾವಿರಾರು ಜನ ಶ್ರೀಮತಿ ಲಕ್ಷ್ಮಿಅರುಣಾರವರನ್ನು ಹೂ ಮಳೆ ಸುರಿಸಿ ಪಟಾಕಿ ಹೊಡೆಯುವ ಮೂಲಕ ಅದ್ದೂರಿ ಸ್ವಾಗತ ಕೋರಿದರು ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿದರು
ಕಾರ್ಯಕ್ರಮದಲ್ಲಿ ಮಾತನಾಡಿದ ಶ್ರೀಮತಿ ಲಕ್ಷ್ಮಿ ಅರುಣ ಜನಾರ್ದನರೆಡ್ಡಿಯವರು ಅಭಿವೃದ್ಧಿಯ ಕನಸು ಮತ್ತು ಸಮಾಜ ಸೇವೆಗೆ ಬಂದಿರುವ ಜನಾರ್ದನ ರೆಡ್ಡಿ ಅವರ ಬೆಂಬಲಕ್ಕೆ ನೀವು ನಿಲ್ಲಬೇಕು ರಾಜ್ಯ ಪ್ರಗತಿಪಕ್ಷಕ್ಕೆ ಮತ ಹಾಕುವ ಮೂಲಕ ಅಶೋತ್ತರಗಳನ್ನು ಈಡೇರಿಸಬೇಕು ಎಂದು ಕೇಳಿಕೊಂಡರು*
*ಕಾರ್ಯಕ್ರಮದಲ್ಲಿ ಪಕ್ಷದ ಅಧ್ಯಕ್ಷರಾದ ಶ್ರೀ ಗೋನಾಳ್ ರಾಜಶೇಖರ ಗೌಡ, ಹಿರಿಯರಾದ ಶ್ರೀ ಖುದ್ದುಸ್ ಸಾಬ್ ಪರಿಶಿಷ್ಟ ಪಂಗಡ ಜಿಲ್ಲಾಧ್ಯಕ್ಷರಾದ ಶ್ರೀ ಉಮಾ ರಾಜ್ ಮಹಿಳಾ ಶಕ್ತಿ ಘಟಕದ ಅಧ್ಯಕ್ಷರಾದ ಶ್ರೀಮತಿ ಹಂಪಿರಮಣ ಯುವಶಕ್ತಿ ಘಟಕದ ಅಧ್ಯಕ್ಷರಾದ ಶ್ರೀ ಕುರುಹಟ್ಟಿ ರಾಜಣ್ಣ, ಸಾಮಾಜಿಕ ಜಾಲತಾಣ ಘಟಕದ ಅಧ್ಯಕ್ಷರಾದ ಮಲ್ಲಿಕಾರ್ಜುನ ಆಚಾರ್ ಭಾಗವಹಿಸಿದ್ದರು* (ಕೆ.ಬಜಾರಪ್ಪ ವರದಿಗಾರರು ಕಲ್ಯಾಣ ಕರ್ನಾಟಕ ಚೀಫ್ ಬ್ಯೂರೋ)