This is the title of the web page
This is the title of the web page

Please assign a menu to the primary menu location under menu

State

ಭಾರತ್ ಜೋಡ್ ಯಾತ್ರೆಯ ದಿನಗಳ ಅನುಭವ ಅವಿಸ್ಮರಣಿಯ- ಎಂ.ಹನುಮ ಕಿಶೋರ್

ಭಾರತ್ ಜೋಡ್ ಯಾತ್ರೆಯ ದಿನಗಳ ಅನುಭವ ಅವಿಸ್ಮರಣಿಯ- ಎಂ.ಹನುಮ ಕಿಶೋರ್

ಭಾರತ್ ಜೋಡ್ ಯಾತ್ರೆಯ ದಿನಗಳ ಅನುಭವ ಅವಿಸ್ಮರಣಿಯ- ಎಂ.ಹನುಮ ಕಿಶೋರ್

ಬಳ್ಳಾರಿ ;- ಭಾರತ್ ಜೋಡೋ ಯಾತ್ರೆಯ ೧೩೬ ದಿನಗಳ ಪಾದಯಾತ್ರೆಯಲ್ಲಿ ಭಾಗವಹಿಸಿದ್ದು ಆನೇಕ ವಿಷಯಗಳ ಬಗ್ಗೆ ಹೆಚ್ಚಿನ ಅನುಭವ ಹಾಗೂ ಸಮಸ್ಯೆಗಳ ಪರಿಷ್ಕಾರದ ಬಗ್ಗೆ ಅರಿವು ಉಂಟಾಗಿದೆ ಎಂದು ಯೂತ್ ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ಭಾರತ ಜೋಡೋಯಾತ್ರಯಲ್ಲಿ ಆರಂಭದಿAದ ಕೊನೆವರೆಗೂ ಪಾದಯಾತ್ರೆಯಲ್ಲಿ ಭಾಗವಹಿಸಿದ್ದ ಎಂ, ಹನುಮಕಿಶೋರ್ ತಿಳಿಸಿದ್ದಾರೆ,

ಭಾರತ್ ಜೋಡೋ ೧೩೬ ದಿನಗಳ ಪಾದಯಾತ್ರೆಯಲ್ಲಿ ಭಾಗವಹಿಸಿ ಇಂದು ಬಳ್ಳಾರಿಗೆ ಆಗಮಿಸಿದ್ದ ಎಂ, ಹನುಮಕಿಶೋರ್ ರವರಿಗೆ ಬಳ್ಳಾರಿಯ ಯೂತ್ ಕಾಂಗ್ರೆಸ್ ವತಿಯಿಂದ ಅದ್ದೂರಿ ಸ್ವಾಗತ ಹಾಗೂ ಸನ್ಮಾನ ಕಾರ್ಯಕ್ರಮವನ್ನು ಮೋತಿ ಸರ್ಕಲ್ ನಲ್ಲಿ ಹಮ್ಮಿಕೊಳ್ಳಲಾಗಿತ್ತು, ಇದಕ್ಕೂ ಮುನ್ನ ಸುಧಾ ಕ್ರಾಸ್ ಗೆ ಬಂದಿಳಿದಾಗ ಗ್ರಾಮೀಣ ಕ್ಷೇತ್ರದ ಶಾಸಕ ಬಿ, ನಾಗೇಂದ್ರ ಹೂ ಮಾಲೆ ಹಾಕುವುದರೊಂದಿಗೆ ಬರ ಮಾಡಿಕೊಂಡರು. ಬೈಕ್ ರ‍್ಯಾಲಿ ನಗರ ಪ್ರಮುಖ ರಸ್ತೆಗಳಲ್ಲಿ ಸಾಗಿ ಬಂತು.

ಮೋತಿ ಸರ್ಕಲ್ ವೇದಿಕೆಯಲ್ಲಿ ಕಾಂಗ್ರೆಸ್ ಹಿರಿಯ ಮುಖಂಡ ಕಲ್ಲುಕಂಭ ಪಂಪಾಪತಿ ಮಾತನಾಡಿ ಐತಿಹಾಸಿಕ ಭಾರತ್ ಜೋಡೋ ಯಾತ್ರೆಯಲ್ಲಿ ಭಾಗವಹಿಸಿದ್ದ ಹನುಮ ಕಿಶೋರ್ ರವರು ಯುವ ನಾಯಕನಾಗಿ ಜನರ ನಾಡಿ ಮಿಡಿತವನ್ನು ಅರಿತು ಬಂದಿದ್ದಾರೆ, ರಾಹುಲ್ ಗಾಂಧಿಯವರು ಪ್ರತಿ ಹಳ್ಳಿಗಳ ಜನರ ಸಮಸ್ಯೆ, ಸಮಸ್ಯೆಗಳ ಪರಿಷ್ಕಾರವನ್ನು ಸ್ವತಹ ಅನುಭವ ಪಡೆದಿರುವ ಹನುಮ ಕಿಶೋರ್ ಇದನ್ನು ಬಳ್ಳಾರಿನಗರದ ಜನರ ಹಾಗೂ ಅಭಿವೃದ್ದಿಗೆ ಶ್ರಮಿಸುವ ಮೂಲಕ ಮುಂದಾಗಬೇಕು ಎಂದು ತಿಳಿಸಿದರು. ಪಕ್ಷದ ಯಾರಿಗೆ ಟಿಕೇಟ್ ನೀಡಿದರು ಎಲ್ಲರೂ ವ್ಯಕ್ತಿಯನ್ನು ಗುರಿತಿಸದೇ ಪಕ್ಷದ ಒಳಿಗಾಗಿ ಒಗ್ಗಟ್ಟಾಗಿ ಶ್ರಮಿಸಬೇಕು ಎಂದು ತಿಳಿಸಿದರು.

ಜಿಲ್ಲಾ ಪಂಚಾಯ್ತಿ ಸದಸ್ಯ ಅಲ್ಲಂ ಪ್ರಶಾಂತ ಮಾತನಾಡಿ ಆತ್ಮೀಯ ಗೆಳೆಯ ಹನುಮ ಕಿಶೋರ್ ಪಾದಯಾತ್ರೆಯನ್ನು ಬರೀ ಕರ್ನಾಟಕಕ್ಕೆ ಬಂದು ತಲುಪುವರೆಗೂ ಮಾತ್ರ ಎನ್ನುವ ವಂದತಿಗಳು ಹರಿದಾಡುತ್ತಿತ್ತು, ಏಕೆಂದರೆ ಚಳಿ, ಮಳೆ, ಬಿಸಿಲು ಎಲ್ಲವನ್ನು ಸಹಿಸಲಾರ ಎಂದಿದ್ದರು, ಆದರೆ ನನ್ನ ಅನಿಸಿಕೆ ಹನುಮ ಕಿಶೋರ್ ಬಳ್ಳಾರಿಯ ಬಂಡೆ ಹಿಡಿದ ಕೆಲಸವನ್ನು ಪೂರ್ಣಗೊಳಿಸುವ ವಿಶ್ವಾಸ ನನಗಿತ್ತು ಇಂದು ನನಸಾಗಿದೆ ಎಂದರು ೧೩೬ ದಿನಗಳಲ್ಲಿ ವಿವಿಧ ಭಾಷೆ ವಿವಿಧ ಪ್ರಾಂತಗಳ ಜನರ ಸಮಸ್ಯೆಗಳ ಜೊತೆ ಪರಿಷ್ಕಾರವ್ನುö್ನ ರಾಹುಲ್ ಗಾಂಧಿಯವರ ಜೊತೆ ಬೆರತು ಅನುಭವ ಪಡೆದಿದ್ದಾರೆ ಇದು ಬಳ್ಳಾರಿ ನಗರ ಏಳಿಗಿಗೆ ಉಪಯೋಗಿಸಲಿ ಇದೀಗ ಜೋಡೋ ಯಾತ್ರೆ ಮುಗಿಯಿತು, ಇದೀಗ ಚುನಾವಣೆಯ ಯಾತ್ರೆಯಲ್ಲಿ ಭಾಗವಹಿಸುವ ಮೂಲಕ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವ ಯತ್ನಕ್ಕೆ ಎಲ್ಲರು ಮುಂದಾಗೋಣ ಎಂದರು.

ಇನ್ನೊರ್ವ ಜಿಲ್ಲಾ ಪಂಚಾಯಿತಿ ಸದಸ್ಯ ನಾರ ಭರತ್ ರೆಡ್ಡಿ ಮಾತನಾಡಿ ನಮ್ಮ ಕುಟುಂಬಕ್ಕೂ ಮುಂಡ್ಲೂರು ಕುಟುಂಬಕ್ಕೂ ಅವಿನಾಭಾವ ಸಂಬAಧವಿದೆ, ಹನುಮ ಕಿಶೋರ್ ಪಾದಯಾತ್ರೆಯ ಯಶಸ್ಸು ಅವರ ಕುಟುಂಬಕ್ಕೆ ಸಲ್ಲಬೇಕಾಗಿದೆ, ಮನೆಂiÀವರ ಎಲ್ಲಾ ಬೆಂಬಲದಿAದ ೧೩೬ ದಿನಗಳ ಪಾದಯಾತ್ರೆ ಮುಗಿಸಿದ್ದಾರೆ, ಹನುಮ ಕಿಶೋರ್ ರವರನ್ನು ನಾನು ಬಳ್ಳಾರಿಯ ರಾಹುಲ್ ಗಾಂಧಿ ಎಂದು ಕರೆಯಲು ಬಯಸುತ್ತೇನೆ, ನಾನು ಮನೆಮನೆಗೂ ಭರತ್ ಎನ್ನುವ ಕಾರ್ಯಕ್ರಮ ಮಾಡಿ ಜನರ ಬಳಿ ತೆರೆಳಿದ್ದೇ ಇದೀಗ ಭಾರತ್ ಜೋಡೋ ಮುಗಿಸಿ ಬಂದಿರುವ ಇವರನ್ನು ಕಂಡು ನನಗೆ ಆನೆ ಬಲ ಬಂದAತಾಗಿದೆ, ಚುನಾವಣೆ ಬಂದಕಾರಣ ಹೊಂದಾಣಿಕೆಯ ಹೊಸಪಕ್ಷಗಳು ಬಂದಿವೇ ಇದರ ಬಗ್ಗೆ ತಲೆಕಡಿಸಿಕೊಳ್ಳುವುದು ಬೇಡ ನಮಗೆ ವಿಪಕ್ಷ ಎಂದರೇ ಬಿಜೆಪಿ ಮಾತ್ರ ಈ ಪಕ್ಷವನ್ನು ಮುಂಬರುವ ಚುನಾವಣೆಯಲ್ಲಿ ಸೋಲಿಸುವುದರ ಮೂಲಕ ಕಾಂಗ್ರೆಸ್ ಪಕ್ಷನ್ನು ಬಲಪಡಿಸುವಂತೆ ಮನವಿ ಮಾಡಿದರು.

ಸನ್ಮಾಸ ಸ್ವೀಕರಿಸಿ ಮಾತನಾಡಿದ ಎಂ. ಹನುಮ ಕಿಶೋರ್ ಭಾರತ ಜೋಡೋ ಯಾತ್ರೆಯು ನನ್ನ ಜೀವನದಲ್ಲಿ ಮರೆಯಲಾಗದ ಕ್ಷಣ. ದೇಶ ಸುತ್ತು ಇಲ್ಲವೇ ಕೋಶ ಓದು ಎನ್ನುವ ಗಾದೆ ಮಾತಿದೆ, ನಾನು ಪದವೀಧರನು ಆಗಿದ್ದರು ಸಹ ಭಾರತ ಜೋಡೋ ಯಾತ್ರೆಯಿಂದ ರಾಜ್ಯಗಳನ್ನು ಸುತ್ತಿ ಆನೇಕ ಜನರ ಜೀವನ, ಸಂಕಷ್ಟಗಳು, ಬೇಡಿಕೆಗಳು, ಇವುಗಳ ಬಗ್ಗೆ ರಾಹುಲ್ ಗಾಂಧಿ ಚರ್ಚೆ ಮತ್ತು ಸಂವಾದಗಳು ಆಲಿಸಿದ ನನಗೆ ಹೆಚ್ಚಿನ ಜ್ಞಾನದ ಅನುಭವ ಉಂಟಾಯಿತು, ಇ ಯಾತ್ರೆಯಲ್ಲಿ ಭಾಗವಹಿಸಿದ್ದು ನನ್ನ ಅದೃಷ್ಟ ಎಂದರು.
ಪಾದಯಾತ್ರೆಯಲ್ಲಿ ನಾನು ಬಹಳಷ್ಟು ದೊಡ್ಡ ನಗರಗಳನ್ನು ಸಣ್ಣ ಸಣ್ಣ ಹಳ್ಳಿಗಳನ್ನು ನೋಡಿದೆ ಅಲ್ಲಿ ಎಷ್ಟೋಂದು ಅಭಿವೃದ್ದಿ ನೋಡಿ ನಾನು ಆಶ್ಚರ್ಯಗೊಂಡೆ ಆದರೆ ನಮ್ಮ ಬಳ್ಳಾರಿ ಮಾತ್ರ ಬಹಳಷ್ಟು ಹಿಂದೂಳಿದದ್ದು ಕಂಡು ನನಗೆ ಬೇಸರವಾಗಿದೆ, ಇಲ್ಲಿನ ಜನಪ್ರತಿನಿಧಿಗಳಿಗೆ ಜಿಲ್ಲೆಯ ಅಭಿವೃದ್ದಿ ಬೇಕಾಗಿಲ್ಲ, ಬರೀ ಅಧಿಕಾರಕ್ಕಾಗಿ ಕುರ್ಚಿಗೆ ಅಂಟಿ ಕುಳಿತುರುವುದು ಕಂಡು ಬರುತ್ತಲಿದೆ, ಇದಕ್ಕೊಂದು ಉದಾಹರಣೆ ಎಂದರೇ ಅನಂತ ಪುರ ರಸ್ತೆ ಕಾಮಗಾರಿ ಹಲವು ತಿಂಗಳು ಕಳೆದರು ಪೂರ್ತಿಯಾಗುತ್ತಿಲ್ಲ, ಅಪಘಾತದಿಂದ ಒಬ್ಬ ವ್ಯಕ್ತಿ ಮೃತಪಟ್ಟಿದ್ದರು ಈ ಬಗ್ಗೆ ಶಾಸಕರಾಗಲಿ, ಜಿಲ್ಲಾ ಉಸ್ತುವಾರಿ ಸಚಿವರಾಗಲಿ ಕಿಂಚಿತ್ ಗಮನ ಹರಿಸುತ್ತಿಲ್ಲ, ನಗರದೆಲ್ಲಡೆ ರಸ್ತಗಳು ಹದಗೆಟ್ಟಿವೆ, ಇನ್ನು ಬೇಸಿಗೆ ಬಂತು ಕುಡಿಯುವ ನೀರಿನ ಸಮಸ್ಯೆ. ಸೂರು ಇಲ್ಲದವರಿಗೆ ಸೂರು ಸಹ ನೀಡಲಾಗಿಲ್ಲ, ಇದೀಗ ಚುನಾವಣೆಯ ನೆಪದಲ್ಲಿ ಹಕ್ಕು ಪತ್ರ ನೀಡುವ ರಾಜಕೀಯ ತಂತ್ರವಾಗಿ ಬಳಸುತ್ತಿದ್ದಾರೆ. ಹೀಗೆ ಹತ್ತು ಹಲವು ಕೊರತೆಗಳಿದ್ದರು, ಇವರಿಗೆ ಅಭಿವೃದ್ದಿ ಕಡೆಗೆ ಮುಂದಾಗುವAತಹ ಇಚ್ಚಾಶಕ್ತಿ ಕಂಡು ಬರುತ್ತಿಲ್ಲ ಎಂದು ಆರೋಪಿಸಿದರು. ಮುಂಬರರುವ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷನ್ನು ಅಧಿಕಾರಕ್ಕೆ ತರುವ ಮೂಲಕ ಬೆಟರ್ ಬಳ್ಳಾರಿ ಮಾಡಲು ಮುಂದಾಗೋಣ ಎಂದರು.

ಪಾಲಿಕೆ ಸದಸ್ಯರಾದ ಪಿ.ಗಾದೆಪ್ಪ,ವಿವೇಕ್,ಪಕ್ಷದ ವಕ್ತಾರ ವೆಂಕಟೇಶ್ ಹೆಗಡೆ, ವಿಷ್ಣು ಬೋಯಪಾಟಿ ವೇದಿಯನ್ನು ಉದ್ದೇಶಿಸಿ ಮಾತನಾಡಿದರು.
ಪಾಲಿಕೆ ಉಪ ಮಹಪೌರರಾದ ಮಾಲನ್ ಬೀ, ಸೇರಿದಂತೆ ಪಾಲಿಕೆ ಸದಸ್ಯರುಗಳು,ಪಕ್ಷದ ಮಹಿಳಾ ಅಧ್ಯಕ್ಷೆ ಮಂಜುಳ,ಯೂತ್ ಕಾಂಗ್ರೆಸ್ ಅಧ್ಯಕ್ಷರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.


News 9 Today

Leave a Reply