ಬಿಜೆಪಿಯ ಬಳ್ಳಾರಿ ವಿಧಾನ ಸಭೆ ಆಕಾಂಕ್ಷಿ ಪಾಲಿಕೆ ಸದಸ್ಯ ಕೊನಂಕಿ ತಿಲಕ್ ನೇತೃತ್ವದಲ್ಲಿ ಹಕ್ಕು ಪತ್ರಗಳು ವಿತರಣೆ.
•ಬಿಜೆಪಿ ಅಭ್ಯರ್ಥಿ ಯಾಗಿ ಕೊನಂಕಿ ಕುಟುಂಬ.!!
•ಸೋಮಶೇಖರ್ ರೆಡ್ಡಿ ನಡೆಯ ಮೇಲೆ ಹೈ ಕ ಅನುಮಾನಗಳು!! •ಸ್ಥಳೀಯ ಬಿಜೆಪಿ ನಾಯಕರಲ್ಲಿ ಕೂಡ ಅಸಮಾಧಾನ!?.
•ಗಾಲಿ ಜನಾರ್ದನ ರೆಡ್ಡಿ ಗಾಲಿ ಸೋಮಶೇಖರ್ ರೆಡ್ಡಿ ಒಂದೇ.!!
ಬಳ್ಳಾರಿ (8) ನಗರದ10.ವಾರ್ಡನ ರಾಣಿ ತೋಟ ಪಾಲಿಕೆ ಸದಸ್ಯರು ಖ್ಯಾತ ವಿದ್ಯಾಸಂಸ್ಥೆ ಗಳು ಮಾಲೀಕರು ಉದ್ಯಮಿಗಳು,ಹಿರಿಯ ರಾಜಕಾರಣಿಗಳು ಅಗಿರವ ಕೊನಂಕಿ ರಾಮಪ್ಪ ,ತಿಲಕ್ ಅವರ ವಾರ್ಡ್ ಗಳಲ್ಲಿ ಮಂಗಳವಾರ ನೂರಾರು ಮಂದಿಗೆ ಹಕ್ಕು ಪತ್ರಗಳನ್ನು ವಿತರಣೆ ಮಾಡಿದರು.
ಅದ್ದೂರಿ ಯಾಗಿ ವೇದಿಕೆ ಹಾಕಿ ಕಾರ್ಯಕ್ರಮ ಮಾಡಿ ಜನರ ಗೆ ಹಕ್ಕು ಪತ್ರಗಳನ್ನು ವಿತರಣೆ ಮಾಡಿದರು.
ಈಗಾಗಲೇ ಕೊನಂಕಿ ರಾಮಪ್ಪ ಕುಟುಂಬ ಮುಂಬರುವ ಚುನಾವಣೆಯಲ್ಲಿ ಬಿಜೆಪಿ ಯಿಂದ ಬಳ್ಳಾರಿ ಯಲ್ಲಿ ಸ್ಪರ್ಧೆ ಮಾಡುವ ತಯಾರಿ ಗಳು ಮಾಡುತ್ತಾ ಇದ್ದಾರೆ.
ಹೈ ಕಮಾಂಡ್, ಜೊತೆಯಲ್ಲಿ ಉಸ್ತುವಾರಿ ಸಚಿವರು ಜೊತೆಯಲ್ಲಿ ಚಿಂತನೆ ಮಾಡಿದ್ದಾರೆ ಅನ್ನುವುದು ಕೇಳಿ ಬರುತ್ತದೆ.
ಕಾಂಗ್ರೆಸ್ ದಿಂದ ಸ್ಪರ್ಧೆ ಮಾಡಲು ಕೇಲ ವರ್ಷಗಳ ಹಿಂದೆ ಹತ್ತಿರದ,ಪ್ರಯತ್ನ ಕೂಡ ಆಗಿತ್ತು.
ನಗರದಲ್ಲಿ ಬೂತ್ ಏಜೆಂಟ್ ಗಳು ದಿಂದ ಹಿಡಿದು ವಾರ್ಡ್ ಜವಾಬ್ದಾರಿ ಗಳನ್ನು ನೇಮಕ ಮಾಡಿದ್ದರು.
ಕೊನೆಯ ಕ್ಷಣದಲ್ಲಿ “ಮೆರುಪು ತೀಗಾ” ಅನಿಲ್ ಲಾಡ್ ಗೆ ಅವಕಾಶ ಸಿಕ್ಕಿತ್ತು.
ರಾಮಪ್ಪ ಇಂಡಿಪೆಂಡೆಂಟ್ ಅಭ್ಯರ್ಥಿ ಯಾಗಿ ಸಮರಕ್ಕೆ ಸಿದ್ದ ವಾಗಿದ್ದರು ನಾಮನೇಷನ್ ಹಾಕಿದ್ದರು.
ತದನಂತರ ರಾಜಕೀಯ ಬೆಳವಣಿಗೆಯ ಮದ್ಯದಲ್ಲಿ ತಟಸ್ಥರು ಆಗಿದ್ದರು.
ಪ್ರಸ್ತುತ ಬಿಜೆಪಿ ಯಲ್ಲಿ ಪ್ರಭಾವಿ ನಾಯಕರು,ಈಗಾಗಲೇ ಪ್ರಸ್ತುತ ಶಾಸಕ ಸೋಮಶೇಖರ್ ರೆಡ್ಡಿ ಅವರ ಸರ್ವೇ ಕಾರ್ಡ್ ಇನ್ ವ್ಯಾಲ್ಯೂಡ್ ಅಗಿದೆ.
ಯಾವ ಕ್ಷಣದಲ್ಲಿ ಆದರೂ ಅವರು ಬಿಜೆಪಿಯ ಬೋರ್ಡ್ ಬದಲಾವಣೆ ಮಾಡುವ ಸಾಧ್ಯತೆ ಗಳು ಕಾಣುತ್ತವೆ ಏಂದು ಹೈ ಕಮಾಂಡ್ ಗೆ ತಲುಪಿದೆ ಎನ್ನುತ್ತಾರೆ ಸಾರ್ವಜನಿಕರು.
ಅದರಲ್ಲಿ ಅವರ ಪಕ್ಷದ ಮುಖಂಡರು ರಾಮ ಲಿಂಗಪ್ಪ ಅಂತಹ ಅವರು ನೇರವಾಗಿ ರೆಡ್ಡಿಗೆ ಸೋಲು ಆಗುತ್ತದೆ ಏಂದು ಬಹಿರಂಗ ವಾಗಿ ಪತ್ರಿಕಾ ಗೋಷ್ಠಿಯಲ್ಲಿ ಗರ್ಜನೆ ಮಾಡಿದ್ದು,ಮತ್ತಷ್ಟು ಹಿನ್ನಡೆ ಯಾಗಿದೆ.
ಇದನ್ನು ಸೂಕ್ಷ್ಮತೆ ಯಿಂದ ನೋಡಿದ ಉಸ್ತುವಾರಿ,ಹೈ ಕಮಾಂಡ್ ಮತ್ತೊಂದು ಪ್ರಬಲ ಅಭ್ಯರ್ಥಿ ಯನ್ನು ಸಿದ್ದತೆ ಮಾಡಿದೆ,ಕೊನೆಯ ಹಂತದಲ್ಲಿ ನಗರದ ಬಿಜೆಪಿ ಅಭ್ಯರ್ಥಿ ಯಾಗಿ ಕೊನಂಕಿ ರಾಮಪ್ಪ ಆಥವಾ ತಿಲಕ್ ವೇದಿಕೆ ಗೆ ಬರುವ ಸಾಧ್ಯತೆ ಗಳು ಹೆಚ್ಚಾಗಿ ಕಂಡುಬರುತ್ತವೆ.ಗಾಲಿ ಜನಾರ್ದನ ರೆಡ್ಡಿ,ಗಾಲಿ ಸೋಮಶೇಖರ್ ರೆಡ್ಡಿ ಒಂದೇ ಅಗುತ್ತಾರೆ ಜನರು ಗೆ ಮೇಲೆ ನೋಟಕ್ಕೆ, ಕಿತ್ತಾಟ ಮಾಡಿದಂತೆ,ತೋರಿಸುವ ಪ್ರಯತ್ನಗಳು ಮಾಡುತ್ತಾ ಇದ್ದಾರೆ.
(ಕೆ.ಬಜಾರಪ್ಪ ವರದಿಗಾರರು ಕಲ್ಯಾಣ ಕರ್ನಾಟಕ ಚೀಫ್ ಬ್ಯೂರೋ.)