*ಶಾಸಕ ಸೋಮಶೇಖರ್ ರೆಡ್ಡಿ ಮತ್ತು ಆಪ್ತ ಮೋತ್ಕಾರ್ ಕೊಟೇಗೆ ಲಗ್ಗೆ.ಗಾಲಿ ಲಕ್ಷ್ಮಿ ಅರುಣಾ ಮಹತ್ವದ ಶಕ್ತಿ ಪ್ರದರ್ಶನ* ಬಳ್ಳಾರಿ ನಗರದ ತಾಳುರು ರಸ್ತೆಯ ಗೋವಿಂದಪ್ಪ ಕಲ್ಯಾಣ ಮಂಟಪದ ಹತ್ತಿರ ದೊಡ್ಡ ಮಟ್ಟದಲ್ಲಿ ಕಾರ್ಯಕರ್ತರ ಸೇರ್ಪಡೆ, ಮತ್ತು ಶಕ್ತಿ ಪ್ರದರ್ಶನ, ಮಾಡಲಿದ್ದಾರೆ.
ಈಗಾಗಲೇ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಅಭ್ಯರ್ಥಿಯಾಗಿ ಕಣಕ್ಕೆ ಇಳಿದು ಪ್ರಚಾರ ಆರಂಭ ಮಾಡಿದ್ದಾರೆ.
ನಗರದಲ್ಲಿ ಬಹುತೇಕ ವಾರ್ಡ್ ಗಳಲ್ಲಿ ಪಕ್ಷದ ವಿವಿಧ ಕಾರ್ಯಕ್ರಮ ಗಳು ಮಾಡುತ್ತಾ ಇದ್ದಾರೆ.
ಗಾಲಿ ಅರುಣಾ ಹೊಡೆತಕ್ಕೆ ಬಿಜೆಪಿ ಪಕ್ಷಕ್ಕೆ ಚಳಿ,ಜ್ವರ,ಕೆಮ್ಮು, ತಲೆನೋವು ಬಂದಂತೆ ಅಗಿದೆ.
ಸಾವಿರಾರು ಕಾರ್ಯಕರ್ತರ ಪಡೆಯನ್ನು ಕಟ್ಟಿಕೊಂಡು,ಕಡಿಮೆ ಅವದಿಯಲ್ಲಿ ಜನರ ಮನಸ್ಸನ್ನು ಸೆಳೆಯುತ್ತಾಇದ್ದಾರೆ.
ನಗರ ಶಾಸಕ ಸೋಮಶೇಖರ್ ರೆಡ್ಡಿ”ಅನಾಥ”ಆಗಿದ್ದಾರೆ ಅನ್ನುವ ವಾತಾವರಣ ಸೃಷ್ಟಿ ಆಗಿದೆ.
ಏನು ಇಲ್ಲ,ಯಾತ್ತಾ ಇಲ್ಲ,ಸುಮ್ಮನೆ ಇರದೆ,ಜನಾರ್ದನ ರೆಡ್ಡಿ ಪಕ್ಷದ ಕಾರ್ಯಕರ್ತರು ಗೆ ಬೆದರಿಕೆಯನ್ನು ಹಾಕಿ ದಬ್ಬಾಳಿಕೆ ಮಾಡಿ ನಿಯಂತ್ರಣ ಮಾಡುವ ಕೆಲಸಕ್ಕೆ ಕೈ ಹಾಕಿ,ಕೆಟ್ಟ ಅಪವಾದ ವನ್ನು, ಗಿಟ್ಟಿಸಿಕೊಂಡಿದ್ದಾರೆ.
ಬಿಜೆಪಿ ಅವರ ಸಂಸ್ಕೃತಿ ಇಂತಹ ಕೀಳು ಮಟ್ಟದ ರಾಜಕೀಯ ಮಾಡುವ ಸಂಸ್ಕೃತಿ ಏಂದು ನಗರ ಶಾಸಕ ಗಾಲಿ ಸೋಮಶೇಖರ್ ರೆಡ್ಡಿ ಆಪ್ತ ಪಾಲಿಕೆ ಸದಸ್ಯ ಮಾತನಾಡಿದ ಆಡಿಯೋ ವೈರಲ್ ಆಗಿದ್ದು ಅವರಿಗೆ ಡ್ಯಾಮೇಜ್ ಅಗಿದೆ.
ಆಡಿಯೋ ದಲ್ಲಿ “ಪ್ರಕಾಶ್ ರೆಡ್ಡಿ”ಏನು ಮಾಡೆುತ್ತಾನೆ, ಅನ್ನುವ ಘಟ್ಟಿ ಧ್ವನಿ ಯಲ್ಲಿ ದಬ್ಬಾಳಿಕೆ ಮಾತುಗಳು ಕೇಳಿ ಬಂದಿದ್ದವು ಪ್ರಕಾಶ್ ರೆಡ್ಡಿ ಯಾರು ಅಲ್ಲ ಗಾಲಿ ಜನಾರ್ದನ ರೆಡ್ಡಿ ಕಷ್ಟ ಕಾಲದ ಪರಮ ಆಪ್ತ ನಗರಕ್ಕೆ ಚಿರುಪರಿಚಿತರು.
ಸೋಮಶೇಖರ್ ರೆಡ್ಡಿ ಗೆ ಕೂಡ ಗೊತ್ತು,ಯೋಚನೆ ಇಲ್ಲದಂತೆ ವಾರ್ನಿಂಗ್ ಕೊಡುತ್ತಾರೆ ಎಂದರೆ ಏನು ಹೇಳಬೇಕು.??,ಅದಕ್ಕೆ ಇಂದು ನೇರವಾಗಿ ಸೋಮಶೇಖರ್ ರೆಡ್ಡಿ ಗೆ ರಾಜಕೀಯದ ಭವಿಷ್ಯ ವನ್ನು ಕೊಟ್ಟ ವಾರ್ಡ್,ಮತ್ತು ಅವರ ಆಪ್ತ ಮೋತ್ಕರ್ ವಾರ್ಡ್ ಗೆ ಲಗ್ಗೆ ಇಟ್ಟಿದ್ದಾರೆ.
ಆಡಿಯೋ ವಿಡಿಯೋ ಬೇಡ ನೇರವಾಗಿ ಯುದ್ಧ ಭೂಮಿಯಲ್ಲಿ ಶಕ್ತಿ ಪ್ರದರ್ಶನ ಕ್ಕೆ ಸಿದ್ದ ರಾಗಿದ್ದಾರೆ.
ಇವರ ದಬ್ಬಾಳಿಕೆಗೆ, ಬೆದರಿಕೆ ಗೆ, ಉತ್ತರ ಕೊಡಲು, ಗಾಲಿ ಜನಾರ್ದನ ರೆಡ್ಡಿ ಪಡೆ ಶ್ರೀ ಗಾಲಿ ಲಕ್ಷ್ಮಿ ಅರುಣಾ ಶುಕ್ರವಾರ ಸಾಯಂಕಾಲ, ತಾಳುರು ರಸ್ತೆ ಯಲ್ಲಿ ಕಾರ್ಯಕ್ರಮ, ರೋಡ್ ಷೋ ಮೂಲಕ ಶಕ್ತಿ ಪ್ರದರ್ಶನ ಮಾಡಲಿ ಇದ್ದಾರೆ.
ಈಗಾಗಲೇ ಕಾರ್ಯಕರ್ತರು ಬ್ಯಾನರ್ ಗಳು ಪೋಟೋ ಗಳು ತುಂಬಿ ಹೋಗಿವೆ.
ದೊಡ್ಡ ಮಟ್ಟದಲ್ಲಿ ಜನರು ಸೇರುವ ನಿರೀಕ್ಷೆ ಇದೇ.
ಇಂದು ಕೆ.ಆರ್ ಪಿ.ಪಿ. ಕದನ ನೋಡಬೇಕು ಅನ್ನುವ ಕೂತುಹಲ ಜನರಲ್ಲಿ ಮೂಡಿಸಿದೆ.
ಇಂದು ಕಾರ್ಯಕರ್ತರು ಗೆ ಮೇಡಂ ಯಾವ ರೀತಿಯಲ್ಲಿ ಶಕ್ತಿ ತುಂಬುತ್ತಾರೆ ಅನ್ನುವುದು ಕಾದು ನೋಡಬೇಕು ಅಗಿದೆ.!?.
(ಕೆ.ಬಜಾರಪ್ಪ ವರದಿಗಾರರು ಕಲ್ಯಾಣ ಕರ್ನಾಟಕ, ಚೀಫ್ ಬ್ಯೂರೋ)