*ಅಖಾಡಕ್ಕಿಳಿದ ಮುಂಡ್ಲೂರು ದಿವಾಕರ್ ಬಾಬು !ಹಂತ,ಹಂತವಾಗಿ ಜನರಗೆ ಹತ್ತಿರ ಆಗುತ್ತಿರುವ ಬಾಸ್!!*
ಬಳ್ಳಾರಿ,ಫೆ.12-ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಿಕೊಟ್ಟರೆ ವಿವಿಧ ವಿಭಾಗಗಳಲ್ಲಿ ದುಡಿಯುತ್ತಿರುವ ಎಲ್ಲ ಹಮಾಲರಿಗೆ 25*30 ವಿಸ್ತೀರ್ಣದ ನಿವೇಶನಗಳನ್ನು ಕೇವಲ 1 ಸಾವಿರ ರೂ. ನಲ್ಲಿ ನೀಡುವುದಾಗಿ ಮಾಜಿ ಸಚಿವರು ಹಾಗೂ ಕಾಂಗ್ರೆಸ್ ಪಕ್ಷದ ಟಿಕೆಟ್ ಆಕಾಂಕ್ಷಿಗಳೂ ಆದ ಎಂ.ದಿವಾಕರಬಾಬು ವಾಗ್ದಾನ ಮಾಡಿದರು.
ಇಲ್ಲಿನ ಮುಂಡ್ರಿಗಿ ಕೈಗಾರಿಕಾ ಪ್ರದೇಶದ 2ನೇ ಹಂತದ ಅಗ್ರೋಟೆಕ್ ಆವರಣದಲ್ಲಿ ರೈಸ್ ಮಿಲ್, ಕಾಟನ್ ಮಿಲ್ ಮತ್ತು ಎ.ಸಿ.ಗೋಡಾನ್ ಹಮಾಲರ ಸಂಘಟನೆಯ ವತಿಯಿಂದ ಆಯೋಜಿಸಿದ್ದ ನಾವು ನಿಮಗಾಗಿ-ನೀವು ನಮಗಾಗಿ ಸಮಾವೇಶದಲ್ಲಿ ಹಮಾಲರಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಹಮಾಲರಿಗೆ ಇನ್ಸೂರೆನ್ಸ್ ಮತ್ತು ಇಎಸ್‍ಐ ಸೇರಿದಂತೆ ಎಲ್ಲ ರೀತಿಯ ಕಾರ್ಮಿಕ ಯೋಜನೆಗಳನ್ನು ಅನುಷ್ಠಾನಕ್ಕೆ ತಂದಿದ್ದೇ ಕಾಂಗ್ರೆಸ್ ಪಕ್ಷ ಎಂದರು.
ನಾನು ಹೆಚ್ಚಿಗೇನೂ ಹೇಳುವುದಿಲ್ಲ.
ಸುಳ್ಳು ಹೇಳುವ ಜಾಯಮಾನ ನನ್ನದಲ್ಲ. ಹಮಾಲರು, ಕಾರ್ಮಿಕರ ಏನೇ ಕಷ್ಟಗಳಿದ್ದರೂ ಎಂಥದೇ ಸಂದರ್ಭದಲ್ಲೂ ನಾನು ನಿಮ್ಮ ಜೊತೆಗೆ ಇರುತ್ತೇನೆ.
ನಿಮ್ಮೆಲ್ಲ ಕಷ್ಟ-ನಷ್ಟಗಳಿಗೆ ಪರಿಹಾರ ಕಂಡುಕೊಳ್ಳುವ ಪಕ್ಷವೆಂದರೆ ಅದು ಕಾಂಗ್ರೆಸ್ ಪಕ್ಷ ಮಾತ್ರ. ಕಳೆದ 18 ವರ್ಷದ ಹಿಂದೆಯೇ ನಾನು 600 ಜನ ಹಮಾಲರಿಗಾಗಿ ಸ್ಥಳ ಒದಗಿಸಿದ್ದೆ.
ಇಂದಿಗೂ ಯಾವುದೇ ನಾಯಕ, ಯಾವುದೇ ಸರ್ಕಾರ ಬಂದರೂ ನಿಮಗೆಲ್ಲ ಮನೆಗಳನ್ನು ಕಟ್ಟಿಸಿಕೊಡಲಾಗಲಿಲ್ಲ. ಈ ಕೊರತೆ ನೀಗಿಸಲು ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಬೇಕೆಂದು ಮನವಿ ಮಾಡಿದರು.
ಕಾಂಗ್ರೆಸ್ ಪಕ್ಷದಿಂದ ನನಗೆ ಟಿಕೆಟ್ ಲಭಿಸುವ ಸಾಧ್ಯತೆ ಇದ್ದು, ಈ ಬಾರಿ ಮತ್ತೆ ನನ್ನ ಕೈ ಹಿಡಿದರೆ ನಾನೇ ಒಂದು ಲೇಔಟ್ ಮಾಡಿ ನಿಮಗೆಲ್ಲರಿಗೂ 25*30 ಅಳತೆಯ6 ನಿವೇಶನಗಳನ್ನು ಮಾಡಿ ಹಂಚಿಕೆ ಮಾಡುತ್ತೇನೆ.
ಇದು ನನ್ನ ವಾಗ್ದಾನ ಜಾಸ್ತಿ ಮಾತನಾಡಿದರೆ ಅದು ಉಪನ್ಯಾಸ ಆಗುತ್ತದೆ. ಹೀಗಾಗಿ ನಾನು ಹೆಚ್ಚಿಗೇನೂ ಮಾತನಾಡುವುದಿಲ್ಲ.
ಆದರೆ ನಿವೇಶನಗಳನ್ನು ಫ್ರೀ ಕೊಡಲ್ಲ. ನಿಮ್ಮಿಂದ ನೋಂದಣಿ ಫೀಸಿಗಾಗಿ ರೂ.1 ಸಾವಿರ ಪಡೆಯುತ್ತೇನೆ ಎಂದರು.
ರೈಸ್ ಮಿಲ್ ಮತ್ತು ಕಾಟನ್ ಮಿಲ್ ಹಾಗೂ ಎ.ಸಿ.ಗೋಡಾನ್ ಹಮಾಲರ ಸಂಘಟನೆಯ ಧುರೀಣ ಕಾಕರ್ಲತೋಟ ವೀರೇಶ್ ಅವರು ಮಾತನಾಡಿ, ನಾವೆಲ್ಲರೂ ಈಗ ಒಗ್ಗಟ್ಟಾಗಬೇಕಾಗಿದೆ. ಮುಂಬರುವ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ಪಕ್ಷದಿಂದ ಎಂ.ದಿವಾಕರಬಾಬು ಅವರಿಗೇ ಟಿಕೆಟ್ ನೀಡಬೇಕೆಂದು ಪಕ್ಷದ ವರಿಷ್ಠರಲ್ಲಿ ಮನವಿ ಮಾಡೋಣ. ಎಂ.ದಿವಾಕರಬಾಬು ಅವರಿಗೆ ಟಿಕೆಟ್ ಲಭಿಸಿದರೆ ಅವರ ಗೆಲುವು ನಿಶ್ಚಿತ. ಅವರನ್ನು ಗೆಲ್ಲಿಸಿಕೊಡುವ ಹೊಣೆಗಾರಿಕೆ ನಮ್ಮದು. ಅವರು ಗೆದ್ದರೆ ಹಮಾಲರು ಮತ್ತು ಕಾರ್ಮಿಕರ ಯಾವುದೇ ಸಮಸ್ಯೆಗಳಿಗೆ ತಕ್ಷಣವೇ ಸ್ಪಂದಿಸುತ್ತಾರೆ. ಅವರನ್ನು ಯಾವುದೇ ಸಾಮಾನ್ಯ ವ್ಯಕ್ತಿಯೂ ಕೂಡ ನೇರವಾಗಿ ಸಂಪರ್ಕಿಸಿ ತಮ್ಮ ಕೆಲಸ ಕಾರ್ಯಗಳನ್ನು ಮಾಡಿಕೊಳ್ಳಬಹುದು ಎಂದರು.
ಇದಕ್ಕೂ ಮುನ್ನ ಎಪಿಎಂಸಿ, ತರಕಾರಿ, ಫ್ರುಟ್ಸ್, ಫಿಟ್ಟರ್, ಕಿರಾಣಿ ಸೇರಿದಂತೆ ನಾನಾ ವಿಭಾಗಗಳಲ್ಲಿ ಹಮಾಲರಾಗಿ ದುಡಿಯುತ್ತಿರುವ ಕೆಲ ಹಮಾಲರು ತಮ್ಮ ಸಮಸ್ಯೆಗಳು ಮತ್ತು ಬೇಡಿಕೆಗಳನ್ನು ಸಮಾವೇಶದಲ್ಲಿ ಮಾಜಿ ಸಚಿವ ಎಂ.ದಿವಾಕರ ಬಾಬು ಅವರ ಸಮ್ಮುಖದಲ್ಲಿ ಮಂಡಿಸಿದರು.
ಹಮಾಲರ ಸಂಘದ ಮಾಜಿ ಧುರೀಣರಾದ ತಿಮ್ಮಪ್ಪ, ಅಂದ್ರಾಳು ತಿಮ್ಮಪ್ಪ, ಕೃಷ್ಣಪ್ಪ ಒಳಗೊಂಡಂತೆ ರೈಸ್ ಮಿಲ್ ಮತ್ತು ಕಾಟನ್ ಮಿಲ್ ಹಾಗೂ ಎ.ಸಿ.ಗೋಡಾನ್ ಹಮಾಲರ ಸಂಘಟನೆಯ ಪದಾಧಿಕಾರಿಗಳು, ಸದಸ್ಯರು ಮತ್ತು ನೂರಾರು ಜನ ಹಮಾಲರು, ಕಾಂಗ್ರೆಸ್ ಪಕ್ಷದ ಯುವ ರಾಜ್ಯ ಪ್ರಧಾನ ಕಾರ್ಯದರ್ಶಿ ಹನುಮ ಕಿಶೋರ್ ಸೇರಿದಂತೆ ಕಾಂಗ್ರೆಸ್ ಪಕ್ಷದ ಹಲವಾರು ಮುಖಂಡರು, ಕಾರ್ಯಕರ್ತರು ಕೂಡ ಈ ಸಮಾವೇಶದಲ್ಲಿ ಇದ್ದರು.ಪ್ರಸ್ತುತ ವಾತಾವರಣ ದಲ್ಲಿ ಗಾಲಿ ಜನಾರ್ದನ ರೆಡ್ಡಿ ಪಕ್ಷಕ್ಕೆ,ಬಿಜೆಪಿ ಗೆ ಕಡಿವಾಣ ಹಾಕಬೇಕು ಎಂದರೆ ಕಾಂಗ್ರೆಸ್ ಪಕ್ಷಕ್ಕೆ ಧೈರ್ಯವಂತ ಲೀಡರ್ ದಿವಾಕರ್ ಬಾಬು ಮಾತ್ರವೇ ಅನ್ನುವ ಮಾತು ಸಾರ್ವಜನಿಕರ ವಲಯದಲ್ಲಿ ಕೇಳಿ ಬರುತ್ತಿದೆ,ಮಹಿಳಾ ಅಭ್ಯರ್ಥಿ ರಾಜೇಶ್ವರಿ ಸುಬ್ಬರಾಯುಡು ಅವರ ಗೆ ಕೊಟ್ಟರು ದಿವಾಕರ್ ಬಾಬು ಇನ್ನುಳಿದ ನಾಯಕರ ಸಹಕಾರ ಅವಶ್ಯ ಇದೆ. (ಕೆ.ಬಜಾರಪ್ಪ ವರದಿಗಾರರು ಕಲ್ಯಾಣ ಕರ್ನಾಟಕ.)