This is the title of the web page
This is the title of the web page

Please assign a menu to the primary menu location under menu

State

ಬಿಜೆಪಿ ಪಕ್ಷದ ಮುಖಂಡರು ಗ್ರಾಮೀಣ ಶಾಸಕ ಬಿ.ನಾಗೇಂದ್ರ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷದ ಸೇರ್ಪಡೆ.

ಬಿಜೆಪಿ ಪಕ್ಷದ ಮುಖಂಡರು ಗ್ರಾಮೀಣ ಶಾಸಕ ಬಿ.ನಾಗೇಂದ್ರ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷದ ಸೇರ್ಪಡೆ.

ಬಿಜೆಪಿ ಪಕ್ಷದ ಮುಖಂಡರು ಗ್ರಾಮೀಣ ಶಾಸಕ ಬಿ.ನಾಗೇಂದ್ರ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷದ ಸೇರ್ಪಡೆ.

ಬಳ್ಳಾರಿ(12) ಬಿಜೆಪಿ ಸರ್ಕಾರಗಳ ಆಡಳಿತ ವೈಫಲ್ಯ ಹಾಗೂ ದುರಾಡಳಿತಕ್ಕೆ ಬೇಸತ್ತು ಬಳ್ಳಾರಿ ಗ್ರಾಮಾಂತರ ಕ್ಷೇತ್ರದ ನೂರಾರು ಬಿಜೆಪಿ ಕಾರ್ಯಕರ್ತರು ಇಂದು ಬಿಜೆಪಿ ತೊರೆದು ಜನಪ್ರಿಯ ಶಾಸಕರಾದ ಸನ್ಮಾನ್ಯ ಶ್ರೀ ಬಿ.ನಾಗೇಂದ್ರ ಅವರ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.*

*ಬಳ್ಳಾರಿ ಗ್ರಾಮೀಣ ಕ್ಷೇತ್ರದ ಸಂಜೀವರಾಯನಕೋಟಿ,ಮಿಂಚೇರಿ, ಚರಕುಂಟೆ ಹಾಗೂ ಹಲಕುಂದಿ ಗ್ರಾಮಗಳ ನೂರಾರು ಬಿಜೆಪಿ ಪಕ್ಷದ ಗ್ರಾಮ ಪಂಚಾಯತಿ ಸದಸ್ಯರು, ನೂರಾರು ಬಿಜೆಪಿ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಬೃಹತ್ ಬೈಕ್ ರ್ಯಾಲಿಯೊಂದಿಗೆ ಗ್ರಾಮೀಣ ಶಾಸಕ ಬಿ.ನಾಗೇಂದ್ರ ಅವರ ಗೃಹ ಕಚೇರಿಗೆ ಆಗಮಿಸಿದ್ದರು.*

*ತದನಂತರ ಗ್ರಾಮೀಣ ಶಾಸಕ ಬಿ.ನಾಗೇಂದ್ರ ಅವರು ಸಂಜೀವರಾಯನಕೋಟೆ ಗ್ರಾಮ ಪಂಚಾಯತಿ ಸದಸ್ಯರಾದ ಉಮೇಶಗೌಡ, ಮುಖಂಡರಾದ ರಾಮಾಂಜನೇಯಲು ವಾಲ್ಮೀಕಿ, ಸಿದ್ದಪ್ಪ, ಹುಲುಗಪ್ಪ, ತಿಪ್ಪೇಸ್ವಾಮಿ, ಚಂದ್ರ, ಆನಂದ, ರಾಜ, ಹೊನ್ನೂರ್ ಸ್ವಾಮಿ, ಅಶೋಕ್, ಸೀನಾ, ಸೂರಿ, ಶಿವಪ್ಪ, ಮಹಾರಾಜ್, ಅಂಜಿ, ವನ್ನೂರ ಸ್ವಾಮಿ, ಜಿ.ಮಹೇಶ್ ಕೃಷ್ಣ, ಸ್ವಾಮಿ ಚಂದ್ರಶೇಖರ್ ಯೋಗಿ, ಶಿವ, ಸುಂಕಪ್ಪ, ಸುಂಕಣ್ಣ ಗಿಡ್ಡ, ಸಿದ್ದ ಸಿದ್ದಾರ್ಥ್ ರಮೇಶ್, ಪುನೀತ್, ಸುಂಕಣ್ಣ, ವೆಂಕಟೇಶ್, ಶಿವಕುಮಾರ್, ಪಂಪ ಶಿವಪ್ಪ, ಕೇರಳಪ್ಪ, ಡಿ ಕೋಲಾರಪ್ಪ, ಶ್ರೀರಾಮ ಸುಂಕಣ್ಣ ಸುನಿಲ್ ನಾಗರಾಜ್ ಶಂಕರ್ ವಸಂತ್ ಕುಮಾರ್, ವಿ.ಸುಂಕಣ್ಣ, ಮಿಂಚೇರಿ ಗ್ರಾಮದ ಮುಖಂಡರಾದ ಬಿ.ಹುಸೇನ್, ಡಿ‌.ಮೊಹಮ್ಮದ್, ಭೀಮವನ್ನು ಟಿ.ಮಹಮ್ಮದ್, ಬಿ.ಕಾಸಿಮ್ ಎಸ್.ಸಬ್ಜನ್, ಗೌಸ್, ಶಾಫಿ, ಮುಸ್ತಾಫ್, ಸದ್ದಂ ಸೇರಿದಂತೆ ಇನ್ನೂ ನೂರಾರು ಬಿಜೆಪಿ ಮುಖಂಡರನ್ನು ತುಂಬು ಹೃದಯದಿಂದ ಅವರನ್ನು ಪಕ್ಷಕ್ಕೆ ಬರಮಾಡಿಕೊಂಡರು.*

*ಬಳಿಕ ಮಾತನಾಡಿದ ಮಾನ್ಯ ಶಾಸಕ ಬಿ.ನಾಗೇಂದ್ರ ಅವರು ಗ್ರಾಮೀಣ ಕ್ಷೇತ್ರದಲ್ಲಿ ಬಿಜೆಪಿಯಿಂದ ಬಹಳಷ್ಟು ಮುಖಂಡರು ಕಾಂಗ್ರೆಸ್ ಪಕ್ಷಕ್ಕೆ ಬರುವವರಿದ್ದಾರೆ. ಜನರ ಸೇವೆ ಮಾಡಲು ಆಸಕ್ತಿ ಇರುವವರು ಯಾರು ಬೇಕಾದರೂ ಕಾಂಗ್ರೆಸ್ ಪಕ್ಷಕ್ಕೆ ಬರಬಹುದು ಎಂದು ಕರೆ ನೀಡಿದರು.*

*ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದ ನಂತರ ಮುಖಂಡರು ನಾವು ಮಾನ್ಯ ಶಾಸಕರ ಅಭಿವೃದ್ಧಿ ಕಾರ್ಯಗಳನ್ನು ಪರಿಗಣಿಸಿ ನಿಮ್ಮ ಬೆಂಬಲಕ್ಕಾಗಿ ಗ್ರಾಮದ ಬೆಳವಣಿಗೆಗಾಗಿ ಬಿಜೆಪಿ ಪಕ್ಷವನ್ನು ತೊರೆದು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಾಗಿ ಸೇರುವುದಾಗಿ ಹೇಳಿದರು.

ಈಬಾರಿ ನಮ್ಮ ಕ್ಷೇತ್ರದಲ್ಲಿ ಬಿಜೆಪಿ ಅಗಲಿ ಇತರೆ ಯಾವುದೇ ಪಕ್ಷದ ನಾಯಕರುಗಳು ಅಗಲಿ ದೊಡ್ಡ ದೊಡ್ಡ ವರು ಬರಲಿ ನಾವು ಕಾಂಗ್ರೆಸ್ ನ್ನು ನಾಗೇಂದ್ರ ಅವರನ್ನು ಬಿಟ್ಟು ಹೊಗೋದು ಇಲ್ಲವೆಂದು ಪ್ರಮಾಣವು ರೂಪದಲ್ಲಿ ಮಾತು ಕೊಟ್ಟಿದ್ದಾರೆ ಏಂದು ತಿಳಿದು ಬಂದಿದೆ.*

*ಈ ಸಂದರ್ಭದಲ್ಲಿ ಕೆಪಿಸಿಸಿ ಪ.ಪಂ ವಿಭಾಗದ ರಾಜ್ಯ ಉಪಾಧ್ಯಕ್ಷರಾದ ಪರಶುರಾಮ, ರಾಜ್ಯ ಪ್ರಚಾರ ಸಮಿತಿ ರಾಜ್ಯ ಜಂಟಿ ಕಾರ್ಯದರ್ಶಿ ವೆಂಕಟೇಶ್ ಹೆಗಡೆ, ಮೋಕಾ ರೂಪನಗುಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೀನಳ್ಳಿ ಚಂದ್ರಶೇಖರ್, ಕಾಂಗ್ರೆಸ್ ಮುಖಂಡರಾದ ಮುಂಡ್ಲೂರು ಶ್ರೀಧರ್ ಬಾಬು, ಯರ್ರಗುಡಿ ಮುದಿ ಮಲ್ಲಯ್ಯ, ಪಾಲಕೆ ಸದಸ್ಯರಾದ ವಿ.ಕುಬೇರ್, ನೂರ್ ಮಹಮ್ಮದ್ ಕಾಂಗ್ರೆಸ್ ಮುಖಂಡರಾದ ಬಿ.ವೆಂಕಟೇಶ್ ಪ್ರಸಾದ್, ಗೋವರ್ಧನ್ ರೆಡ್ಡಿ, ಸಿಂಧುವಾಳ್ ಗಾದಿಲಿಂಗನಗೌಡ, ಬೆಣಕಲ್ ಬಸವರಾಜ್ ಗೌಡ, ಕೆ.ಹೊನ್ನಪ್ಪ, ಸೋಮು,ಅನೇಕ ನಾಯಕರು ಕಾಂಗ್ರೆಸ್ ಪಕ್ಷದ ಮುಖಂಡರು ಉಪಸ್ಥಿತರಿದ್ದರು.*


News 9 Today

Leave a Reply