This is the title of the web page
This is the title of the web page

Please assign a menu to the primary menu location under menu

State

ಸಚಿವ ಅಶ್ವತ್ಥನಾರಾಯಣ ಹೇಳಿಕೆ ಖಂಡನೀಯ, ಸ್ಪೀಕರ್ ನಿಷ್ಪಕ್ಷಪಾತವಾಗಿ ವರ್ತಿಸಲಿ: ಶಾಸಕ ನಾಗೇಂದ್ರ

ಸಚಿವ ಅಶ್ವತ್ಥನಾರಾಯಣ ಹೇಳಿಕೆ ಖಂಡನೀಯ, ಸ್ಪೀಕರ್ ನಿಷ್ಪಕ್ಷಪಾತವಾಗಿ ವರ್ತಿಸಲಿ: ಶಾಸಕ ನಾಗೇಂದ್ರ

*ಸಚಿವ ಅಶ್ವತ್ಥನಾರಾಯಣ ಹೇಳಿಕೆ ಖಂಡನೀಯ, ಸ್ಪೀಕರ್ ನಿಷ್ಪಕ್ಷಪಾತವಾಗಿ ವರ್ತಿಸಲಿ: ಶಾಸಕ ನಾಗೇಂದ್ರ*

*ಬಳ್ಳಾರಿ, ಫೆ.16: ಉನ್ನತ ಶಿಕ್ಷಣ, ಐಟಿ ಮತ್ತು ಬಿಟಿ ಸಚಿವ ಡಾ.ಅಶ್ವತ್ಥನಾರಾಯಣ ಅವರು ಮಾಜಿ ಸಿಎಂ, ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಕುರಿತು ಆಡಿರುವ ಮಾತುಗಳು ಖಂಡನಾರ್ಹವಾಗಿದೆ ಎಂದು ಬಳ್ಳಾರಿ ಗ್ರಾಮೀಣ ಶಾಸಕ ಬಿ.ನಾಗೇಂದ್ರ ತಿಳಿಸಿದ್ದಾರೆ.*

*ಚುನಾವಣೆ ಸಂದರ್ಭದಲ್ಲಿ ಮತದಾರರನ್ನು ಮೆಚ್ಚಿಸುವ ಮಾತುಗಳನ್ನು ಆಡುವುದು ಸಹಜ. ಆದರೆ ಕೊಲ್ಲಲು, ಹೊಡೆದು ಹಾಕಲು ಕರೆ ನೀಡುವಂತಹ ಪ್ರಚೋದನಕಾರಿ ಹೇಳಿಕೆ ಸರಿಯಲ್ಲ. ಜನಪ್ರತಿನಿಧಿಗಳ ಮಾತುಗಳು, ಸ್ಪರ್ಧೆ ಆರೋಗ್ಯಕರವಾಗಿರಬೇಕು ಎಂದಿದ್ದಾರೆ.*

*ಸಚಿವ ಡಾ.ಅಶ್ವತ್ಥನಾರಾಯಣ ಅವರ ಮೇಲೆ ಸಿಎಂ ಬಸವರಾಜ ಬೊಮ್ಮಾಯಿ ಅವರು ಶಿಸ್ತು ಕ್ರಮ ಜರುಗಿಸಬೇಕೆಂದು ಒತ್ತಾಯಿಸುತ್ತೇನೆ ಎಂದಿದ್ದಾರೆ.*

*ಸ್ಪೀಕರ್ ನಿಷ್ಪಕ್ಷಪಾತವಾಗಿ ವರ್ತಿಸಲಿ: ಸದ್ಯ ಸದನ ನಡೆಯುತ್ತಿದ್ದು, ಸದನವನ್ನು ನಿಷ್ಪಕ್ಷಪಾತವಾಗಿ ನಡೆಸುವ ಜವಾಬ್ದಾರಿಯುತ ಸ್ಥಾನದಲ್ಲಿ ಸ್ಪೀಕರ್ ಇರುತ್ತಾರೆ.* *ನ್ಯಾಯಸ್ಥಾನದಲ್ಲಿ ಕೂತು ಆಡಳಿತ ಮತ್ತು ವಿಪಕ್ಷ ಸದಸ್ಯರಿಗೆ ಸಮಾನ ಅವಕಾಶ ನೀಡಬೇಕು. ಸಮಾನವಾಗಿ ಪರಿಗಣಿಸಬೇಕು. ಗುರುವಾರ ಸದನದಲ್ಲಿ ಈಶ್ವರ್ ಖಂಡ್ರೆಯವರು ಮಾತನಾಡುವಾಗ ಸ್ಪೀಕರ್ ಅವರು ಏಕಪಕ್ಷೀಯವಾಗಿ ಮಾತಾಡಿದ್ದಾರೆ. ಇದು ಸರಿಯಾದ ಕ್ರಮವಲ್ಲ ಎಂದು ಶಾಸಕ ನಾಗೇಂದ್ರ ತಿಳಿಸಿದ್ದಾರೆ.*


News 9 Today

Leave a Reply