*ಗಂಗಾಮತಸ್ಥರ ಪರಿಶಿಷ್ಟ ಪಂಗಡಕ್ಕೆ ಸೇರಿಸಿ – ಡಾ.ಮೌಲಾಲಿ*
ಗಣಿನಾಡು ವಾರ್ತೆ
ಬಳ್ಳಾರಿ : ಗಂಗಾಮತ, ಕೋಲಿ, ಬಾರ್ಕಿ, ಮೊಗವೀರ ಹಾಗೂ ಪರ್ಯಾಯ ಪದಗಳನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕು ಎಂದು ಕರ್ನಾಟಕ ರಾಜ್ಯ ಗಂಗಾಮಸ್ಥರ ಸಂಘದ ಅಧ್ಯಕ್ಷರಾದ ಡಾ.ಮೌಲಾಲಿ ಅವರು ಆಗ್ರಹಿಸಿದರು.
ಇಲ್ಲಿನ ಪತ್ರಿಕಾಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳರದ ಮೂರು ದಶಕಗಳಿಂದ ಗಂಗಾಮತ, ಕೋಲಿ, ಬಾರ್ಕಿ, ಮೊಗವೀರ ಮತ್ತು ಪಯಾರ್ಯ ಪದಗಳನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕೆಂಬ ನಮ್ಮ ಹೋರಾಟಕ್ಕೆ ಇಲ್ಲಿಯವರೆಗೂ ಯಾವುದೇ ನ್ಯಾಯ ಸಿಗದಂತಾಗಿದೆ. ಚುನಾವಣೆ ಸಂದರ್ಭದಲ್ಲಿ ನಮ್ಮ ಪರವಾಗಿ ಹೇಳಿಕೆ ನೀಡಿದ ಬಿಜೆಪಿ ಸರ್ಕಾರವು ಮೂಗಿಗೆ ತುಪ್ಪ ಸವರಿ ನಡುರಸ್ತೆಯಲ್ಲಿ ಬಿಟ್ಟಿದೆ ಎಂದು ದೂರಿದರು.
ಅಲ್ಲದೇ ಕಳೆದ ನಾಲ್ಕು ವರ್ಷಗಳಲ್ಲಿ ಪ್ರಧಾನಮಂತ್ರಿಗಳೂ ಸೇರಿದಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಹಲವಾರು ಸಚಿವರಿಗೆ, ಸಂಸದರಿಗೆ ಈ ಕುರಿತು ಮನವಿ ಪತ್ರಗಳನ್ನು ನೀಡುತ್ತಾ ಬಂದಿದ್ದರು. ಯಾವುದೇ ರೀತಿಯ ಪ್ರಯೋಜನವಾಗದಿರುವುದು ಅತ್ಯಂತ ನೋವುನ ಸಂಗತಿಯಾಗಿದೆ ಎಂದರು.
ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅವಧಿ ಮುಗಿಯುವಷ್ಟರಲ್ಲಿ ಗಂಗಾಮತ, ಕೋಲಿ, ಬಾರ್ಕಿ, ಮೊಗವೀರ ಹಾಗೂ ಪರ್ಯಾಯ ಪದಗಳನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸದಿದ್ದರೆ ಮುಂದಿನ ಚುನಾವಣೆಯಲ್ಲಿ ಬಿಜೆಪಿ ಸರ್ಕಾರಗಳಿಗೆ ತಕ್ಕ ಪಾಠ ಕಲಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಈಗಲಾದರೂ ಸರ್ಕಾರಗಳು ಎಚ್ಚೆತ್ತುಕೊಂಡು ನಮ್ಮ ಸಮಾಜವನ್ನು ಪರಿಶಿಷ್ಟ ಪಂಗಡಕ್ಕೆ ಒಕ್ಕೊರಲಿನಿಂದ ಒತ್ತಾಯಿಸುತ್ತೇವೆ ಎಂದರು.
ನಮ್ಮ ಜನಾಂಗ ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡ ಭಾಗದಲ್ಲಿ ಹೊರನಾಡು ಮೀನುಗಾರರಿಗೆ ಮೊಗವೀರರು ಸುಮಾರು 8 ಲಕ್ಷ ಜನ ಸಂಖ್ಯೆಯಲ್ಲಿದ್ದರೆ, 12 ಶಾಸಕ ಕ್ಷೇತ್ರಗಳು ಮತ್ತು 4 ಸಂಸದ ಕ್ಷೇತ್ರಗಳು ನಮ್ಮ ಮತ ನಿರ್ಧರಿಸುವ ಶಕ್ತಿ ಹೊಂದಿದ್ದೇವೆ. ಹಾಗೆ ಉತ್ತರ ಕರ್ನಾಟಕದಲ್ಲಿ ಕಲ್ಬುರ್ಗಿ, ಯಾದಗಿರಿ, ರಾಯಚೂರು, ಬಳ್ಳಾರಿ, ವಿಜಯಪುರ ಸೇರಿ ಸುಮಾರು 14 ಶಾಸಕ ಹಾಗೂ 3 ಸಂಸದ ಕ್ಷೇತ್ರಗಳಲ್ಲಿ ನಿರ್ಧರಿಸುವ ಮತದಾರರಾಗಿದ್ದೇವೆ. ಮಧ್ಯ ಕರ್ನಾಟಕ ಮತ್ತು ದಕ್ಷಿಣ ಕರ್ನಾಟಕ ಸೇರಿ 10 ಶಾಸಕ ಹಾಗೂ 2 ಸಂಸದ ಕ್ಷೇತ್ರಗಳಲ್ಲಿ ನಿರ್ಧರಿಸುವ ಮತಗಳು ನಮ್ಮ ಸಮಾಜ ಆಗಿರುತ್ತದೆ. ಆದರೂ ನಮ್ಮ ಸಮಾಜಕ್ಕೆ ಇಂದಿಗೂ ಸಾಮಾಜಿಕ ನ್ಯಾಯ ಸಿಗದಂತಾಗಿದೆ. ನಮ್ಮ ಸಮಾಜದ ಕೂಗು ಸರ್ಕಾರಕ್ಕೆ ಮುಟ್ಟಿಸುವ ಕಾರ್ಯದಲ್ಲಿ ಸಹಕಾರ ನೀಡಬೇಕೆಂದು ಮನವಿ ಮಾಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಯಮನೇಶ್, ಮೌಲಾಲಿ, ನಾಗರಾಜ್, ಷಣ್ಮುಖ, ವೆಂಕಟೇಶ್, ಪಂಪಾಪತಿ ಇದ್ದರು.
***********