This is the title of the web page
This is the title of the web page

Please assign a menu to the primary menu location under menu

State

ಪೋಲಿಸ್ ಹೆಚ್ಚುವರಿ ಮಹಾನಿರ್ದೇಶಕರ ಅಹವಾಲು ಸಭೆ – ದೂರಗಳ ಸುರಿಮಳೆ ಆಕ್ರೋಶ.!!

ಪೋಲಿಸ್ ಹೆಚ್ಚುವರಿ ಮಹಾನಿರ್ದೇಶಕರ ಅಹವಾಲು ಸಭೆ – ದೂರಗಳ ಸುರಿಮಳೆ ಆಕ್ರೋಶ.!!

ಪೋಲಿಸ್ ಹೆಚ್ಚುವರಿ ಮಹಾನಿರ್ದೇಶಕರ ಅಹವಾಲು ಸಭೆ – ದೂರಗಳ ಸುರಿಮಳೆ ಆಕ್ರೋಶ.!!

ಬಳ್ಳಾರಿ : ಬಳ್ಳಾರಿಗೆ ಜಿಲ್ಲೆಗೆ ಅಪರೂಪಕ್ಕೆ ಬಂದಿರುವ ಎಡಿಜಿಪಿ ಆಲೋಕ್ ಕುಮಾರ್ ಅವರಿಗೆ ಸಾರ್ವಜನಿಕರ ದೂರುಗಳ ಸುರಿಮಳೆಯಾಗಿರುವ ದೃಶ್ಯ ಕಂಡು ಬಂದಿದೆ.

ಮಂಗಳವಾರ ಅಲೋಕ್ ಕುಮಾರ್ ಅವರು ಬಳ್ಳಾರಿಗೆ ಆಗಮಿಸಿದ್ದರು.

ಅವರು ಬರುವ ಮಾಹಿತಿ ಸಾರ್ವಜನಿಕರಗೆ ತಡವಾಗಿ ತಿಳಿದು ಬಂದಿತ್ತು.

ಇಲಾಖೆಯವರು ಕೂಡ ಮಾಹಿತಿ ಕೊಡುವ ವಿಚಾರದಲ್ಲಿ ಸ್ವಲ್ಪ ವಿಳಂಬ ಆಗಿತ್ತು ಸಾಯಂಕಾಲ ಅಲೋಕ್ ಕುಮಾರ್ 7 ಗಂಟ ಸಮಯದಲ್ಲಿ ಸಾರ್ವಜನಿಕರ ಅಹವಾಲು ಸಭೆ ಆರಂಭ ಮಾಡಿದ್ದರು.

ಅದರೆ ಬಳ್ಳಾರಿ ಠಾಣೆಯ ಅಧಿಕಾರಿಗಳು ಮಾತ್ರ ಯಾವುದೇ ದೂರುಗಳು ಅವರ ಗಮನಕ್ಕೆ ಹೋಗದಂತೆ ಸರ್ಕಸ್ ಮಾಡಿದ್ದರು.

ಪೋಲಿಸರು ಅವರ ಠಾಣೆಗಳು ವ್ಯಾಪ್ತಿಗಳಲ್ಲಿ ಅವರಗೆ ಅನೂಕೂಲ, ಸ್ನೇಹ, ಠಾಣೆಗಳಲ್ಲಿ,ಬರ್ತ್ ಡೇ, ಮತ್ತಿತರ ದಂಧೆಗಳು ಮಾಡುವ ಅವರನ್ನು ಕ್ಷಣ ಮಾತ್ರ ದಲ್ಲಿ ಸಾಹೇಬರು ಕಾರ್ಯಕ್ರಮಕ್ಕೆ ಬರುವಂತೆ ಇಲಾಖೆಯ ಬಗ್ಗೆ ಬ್ಯಾಟಿಂಗ್ ಮಾಡುವಂತೆ ಮಾಹಿತಿ ಕೊಟ್ಟು ಕರೆದಿದ್ದಾರೆ ಎನ್ನುವುದು ಮೇಲ್ನೋಟಕ್ಕೆ ಕಂಡುಬಂದಿದ್ದು, ಅಲ್ಲಿಗೆ ಆಗಮಿಸಿದ್ದ ಅವರು ಗುಸು ಗುಸು ಕೇಳಿ ಬಂದಿತ್ತು.

ನೂತನವಾಗಿ ಬಂದಿರುವ ಎಸ್ಪಿ ರಂಜಿತ್ ಕುಮಾರ್ ಅವರ ಕರ್ತವ್ಯ ಶ್ಲಾಘನೀಯ ಇದೆ ಆರಂಭದಿಂದಲೂ ಖಡಕ್ ಆಗಿಯೇ ಇದ್ದಾರೆ.

ಆದರೆ ಅವರು ಇದ್ದಕ್ಕಿದ್ದಂತೆ *ಕೂಲ್ ಕೂಲ್* ಆಗಿದ್ದಾರೆ ಯಾಕೋ ಅನ್ನುವುದು ಯಕ್ಷ ಪ್ರಶ್ನೆಯಾಗಿದೆ.

ಅದರೆ ಸಾರ್ವಜನಿಕರ ಅಹವಾಲು ಸಭೆಯಲ್ಲಿ ಎಸ್ಪಿ ಅವರ ಕರ್ತವ್ಯದ ಬಗ್ಗೆ ಸಾರ್ವಜನಿಕರು ಮೆಚ್ಚಿಗೆ ವ್ಯಕ್ತಪಡಿಸಿದ್ದರು.

ಆದರೆ ಮಾಹಿತಿ ತಿಳಿದುಕೊಂಡು ಬಂದಿರುವ ಸಾರ್ವಜನಿಕರು, ಇದ್ದಕ್ಕಿದ್ದಂತೆ ಠಾಣೆಗಳಲ್ಲಿ ನಡೆಯುವ ನಿರ್ಲಕ್ಷಗಳು, ನಗರದಲ್ಲಿ ಅಕ್ರಮ ದಂಧೆಗಳು ಸೇರಿದಂತೆ ಹಲವಾರು ವರ್ಷಗಳಿಂದ ಠಾಣೆಗಳಲ್ಲಿ ಠಿಕಾಣೆ ಹಾಕಿಕೊಂಡು ಜಿಲ್ಲೆಯಲ್ಲಿ ಭೂ ಪ್ರದಕ್ಷಿಣೆ ಮಾಡುತ್ತಿರುವ ಅಧಿಕಾರಿಗಳ ದೂರುಗಳು ಮೋಸ, ವಂಚನೆ, ಬೆದರಿಕೆ, ಕಳವು, ಅಕ್ರಮ ದಂಧೆಗಳ, ಟ್ರಾಫಿಕ್ ಸಮಸ್ಯೆಗಳು ಮುಂತಾದ ಇನ್ನೂ ಕೆಲ ಸಂಬಂಧಿಸಿದ ದೂರುಗಳ ಸುರಿಮಳೆಗಳು ಆರಂಭವಾದ ಹಿನ್ನೆಲೆಯಲ್ಲಿ,ಇಲಾಖೆಯ ಸೂಕ್ಷ್ಮತೆಯನ್ನು ಗುರ್ತಿಸಿಯ, ಕೆಲ ಠಾಣೆಯ ಅಧಿಕಾರಿಗಳ ದುರ್ಬಳಕೆ, ಕರ್ತವ್ಯ ದುರುಪಯೋಗ ಪಡಿಸಿಕೊಂಡಿರುವ ಕುರಿತು ತಿಳಿದು ಕೊಂಡಿರುವ ಅಲೋಕ್ ಕುಮಾರ್‌ ಅವರು ಟೈಮ್ ಕಡಿಮೆ ಇದೆ ಸಹಕಾರ ಇರಲಿ ಮತ್ತೆ ಮತ್ತೆ ಬರುತ್ತವೆ ಎಂದು ಅಧಿಕಾರಿಗಳ ಜೊತೆಯಲ್ಲಿ ಮೀಟಿಂಗ್ ಇದೆ ಎಂದು ಕಚೇರಿ ಒಳಗಡೆ ತೆರಳಿದರು.

ತದನಂತರ ಮೀಟಿಂಗ್’ನಲ್ಲಿ ಕೆಲ ಠಾಣೆಯ ಅಧಿಕಾರಿಗಳು ರಿಪೇರಿ ಮಾಡಬೇಕು ಅನ್ನುವ ಮಾಹಿತಿಯನ್ನು ಎಸ್ಪಿ ಸಾಹೇಬರಿಗೆ ಹೇಳಿ, ವ್ಯವಸ್ಥೆ ಬಗ್ಗೆ ಹೊಸದಾಗಿ ಬಂದಿರುವ ಎಸ್ಪಿ ರಂಜಿತ್ ಕುಮಾರ್ ಜನರ ಮೆಚ್ಚುಗೆಯನ್ನು ಪಡೆದಿದ್ದಾರೆ,ತಾವು ಠಾಣೆ (ಕೆಲ) ಗಳಲ್ಲಿ ಇದ್ದುಕೊಂಡು ತಮ್ಮ ಮೇಲೆಯ ದೂರುಗಳು ಬರುತ್ತವೆ ಅಂದರೆ, ತಮ್ಮ ಕರ್ತವ್ಯ ನಿರ್ವಹಣೆ ಎಷ್ಟುರ ಮಟ್ಟಿಗೆ ಇದೆ ಎನ್ನುವುದು ಗೊತ್ತಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ ಎಂದು ಬಲ್ಲ ಮೂಲಗಳು ಮಾಹಿತಿ ತಿಳಿದು ಬಂದಿದೆ.

ಎಡಿಜಿಪಿ ಕೇಂದ್ರ ಸಚಿವ ಅಮಿತ್ ಶಾ ಅವರ ಕಾರ್ಯಕ್ರಮ ಇರುವ ಹಿನ್ನೆಲೆಯಲ್ಲಿ ಸ್ವಲ್ಪ ಗಡಿಬಿಡಿಯಲ್ಲಿ ಇದ್ದರು.

ಅಹವಾಲು ಸಭೆಯಲ್ಲಿ ಬಂದಿರುವ ಎಲ್ಲ ದೂರಗಳ ವಿವರಗಳನ್ನು ಬೆಂಗಳೂರು ಕಚೇರಿಗೆ ಕಳಿಸಿ ಕೊಡಲು ತಿಳಿಸಿದ್ದಾರೆ ಎಂದು ಮಾಹಿತಿ ತಿಳಿದು ಬಂದಿದೆ.ಗ್ರಾಮೀಣ (ರೂರಲ್ ಸ್ಟೇಷನ್‌) ಪೋಲಿಸ್ ಠಾಣೆ ಯಲ್ಲಿ ನಿರಂಜನ್,ಸಾಹೇಬರು, ರಮೇಶ್,ರಖೀಬ್,ಮಜೀದ್,ಮಲ್ಲಿಕಾರ್ಜುನ, ಬೀರಪ್ಪ,ಇನ್ನೂ ಮುಂತಾದ 5.6 ಸಿಬ್ಬಂದಿ ಗಳ ಹೆಸರು ಗಳು ಸಾರ್ವಜನಿಕರ ವಲಯದಲ್ಲಿ ಕೇಳಿ ಬರುತ್ತಿದೆ.ನಿರಂಜನ್ ಅವರು ಮಾತ್ರ ಹಲವಾರು ಕಡೆ ವರ್ಗಾವಣೆ ಗೊಂಡು, ಮತ್ತೆ ಬಳ್ಳಾರಿ ಗೆ ಬಂದಿದ್ದು ವಾಸ್ತವ ವಿಷಯ ಇದೆ.

ಈಗಾಗಲೇ ಇವರ ಮೇಲೆ ಕೇಲ ಆರೋಪ ಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.

ಇನ್ನೂ ಉಳಿದ ಸಿಬ್ಬಂದಿಯನ್ನು ಕೂಡ ಚುನಾವಣೆ ಸಮಯದಲ್ಲಿ ವರ್ಗಾವಣೆ ಮಾಡುವ ಸಾಧ್ಯತೆ ಇದ್ದು,ಎಸ್ ಪಿ ಅವರ ಗೆ ಸುಳ್ಳು ಮಾಹಿತಿಯನ್ನು ಕೊಟ್ಟು ಇಲಾಖೆಯ ಗೌರವ ಹಾಳು ಮಾಡಿದ್ದಾರೆ ಏಂದು 5 ವರ್ಷಗಳ ಮೇಲ್ಪಟ್ಟ ಇರುವ ಸಿಬ್ಬಂದಿ ಗಳ ಮಾಹಿತಿ ಕೊಡಿ ಎಂದು ಕೇಳಿದ ಪತ್ರದಲ್ಲಿ ಕೇಲ ಸಿಬ್ಬಂದಿ ಗಳು ಹೆಸರು ತಪ್ಪಿಸಿ ಸುಳ್ಳು ಮಾಹಿತಿ ಕೊಟ್ಟಿದ್ದು ವರದಿಗಳಲ್ಲಿ ಪ್ರಚಾರ ಆಗಿತ್ತು.

ಅದಕ್ಕೆ ಎಸ್.ಪಿ ಅವರು ಸುಳ್ಳು ಮಾಹಿತಿಯನ್ನು ಕೊಟ್ಟಿದ್ದು ಕಂಡು ಬಂದಿದೆ ತಕ್ಷಣವೇ ವಾಸ್ತವ ವರದಿ ಕೊಡಿ ಎಂದು ಕೇಳಿದರು ಕೂಡ ಸಮರ್ಪಕವಾಗಿ ಕೊಟ್ಟಿಲ್ಲ ಎಂದು ಪೋಲಿಸ್ ವಲಯದಲ್ಲಿ ಗುಸು ಗುಸು ಇದೆ!!.ಜಿಲ್ಲೆ ರೂರಲ್ ಠಾಣೆ ಯಲ್ಲಿ ವರ್ಗಾವಣೆ ದಂದೆ ವಿಚಾರದಲ್ಲಿ ಲೋಪದೋಷಗಳು ಅಗಿರವ ವಿಚಾರಗಳು ಕಣ್ಣುಮುಂದೆ ಸಹಪಾಠಿಗಳು ನೋಡಿದ್ದು ಅವರ ಇಲಾಖೆಯ ಬಗ್ಗೆ,ಹಾಡು ಹಗಲು ಎಸ್.ಪಿ ಅವರ ಗೆ ಸುಳ್ಳು ಮಾಹಿತಿ ಕೊಟ್ಟಿದ್ದು, ಸಾರ್ವಜನಿಕ ವಲಯದಲ್ಲಿ ಅಗೌರವ ತೋರುತ್ತದೆ.

ಎಸ್.ಪಿ ಅವರು ವಾಸ್ತವ ವನ್ನು ಪರಿಶೀಲನೆ ಮಾಡಿ ಕ್ರಮ ಕೈಗೊಳ್ಳಲು ಆಗಿಲ್ಲ ಅಂದರೆ ,ಇಲಾಖೆ ಯಲ್ಲಿ ಮತ್ತು ಸಾರ್ವಜನಿಕ ವಲಯದಲ್ಲಿ ಇವರ ಗೆ ಏಷ್ಟು ಗೌರವ ಸಿಗುತ್ತದೆ ಏಂದು ಆಲೋಚನೆ ಮಾಡಬೇಕು ಅಗಿದೆ. ಕೆ.ಬಜಾರಪ್ಪ ವರದಿಗಾರರು ಕಲ್ಯಾಣ ಕರ್ನಾಟಕ. ಬಳ್ಳಾರಿ.


News 9 Today

Leave a Reply