*ಬಿಜೆಪಿಯಲ್ಲಿ ಸಂಭ್ರಮಾಚರಣೆ, ಕಾಂಗ್ರೆಸ್ನಲ್ಲಿ ಕಳವಳ!ಗಾಲಿ ಪಕ್ಷಕ್ಕೆ ವಿಜಯ ಸಂಕೇತ!!*
ಬಳ್ಳಾರಿ ಮಾ 06.ರಾಜ್ಯದ ವಿಧಾನಸಭೆ ಚುನಾವಣೆಗೆ ಕೇವಲ ಕೆಲ ತಿಂಗಳ ಅವಧಿ ಇರುವ ಸಮಯದಲ್ಲಿ ಯಾಲ್ಲ ಪಕ್ಷಗಳು ಈಗಾಗಲೇ ಸರ್ಕಸ್ ಮಾಡುತಿದ್ದಾವೆ.
ಟಿಕೆಟ್ ಲೆಕ್ಕಾಚಾರದಲ್ಲಿ ಪಕ್ಷಗಳು “ಬಿಜಿ ಬಿಜಿ” ಆಗಿದ್ದಾವೆ.
ಈಗಾಗಲೇ ಬಿಜೆಪಿಗೆ ಚಾಲೆಂಜಾಗಿ, ಕಾಂಗ್ರೆಸ್ ಪಕ್ಷಕ್ಕೆ ನಡುಕ ಹುಟ್ಟಿಸುವ ಮತ್ತೊಂದು ಪಕ್ಷ ಗಾಲಿ ಜನಾರ್ದನ ರೆಡ್ಡಿ ಕೆ.ಆರ್.ಪಿ.ಪಿ ಪಕ್ಷ.
ಈಗಾಗಲೇ ರಾಜ್ಯದಲ್ಲಿ ತಲ್ಲಣ ಮಲ್ಲಣ ಸೃಷ್ಟಿ ಮಾಡುತ್ತಾ ಇದೇ.
ಬಳ್ಳಾರಿ ಯಲ್ಲಿ ಎಲ್ಲ ಪಕ್ಷಗಳು ಟಿಕೆಟ್ ಟಿಕೆಟ್ ಅನ್ನುವ *ಕಂಡಕ್ಟರ್* ಪರಿಸ್ಥಿತಿ ಅಗಿದೆ.
ಬಳ್ಳಾರಿ ಅಭ್ಯರ್ಥಿಯಾಗಿ ಗಾಲಿ ಅರುಣಾ ಜನರಿಗೆ ಗಿಫ್ಟ್ ಗಳು ಕೊಡುವ ಮೂಲಕ ಪ್ರಚಾರ ದಲ್ಲಿ ಜೋರಾಗಿ ಇದ್ದಾರೆ.
ಈ ವರೆಗೆ ಬಿಜೆಪಿ,ಕಾಂಗ್ರೆಸ್,ಅಭ್ಯರ್ಥಿಗಳು ಯಾರು ಎನ್ನುವುದು ರಹಸ್ಯ ವಾಗಿದೆ.
ಈಬಾರಿ ಬಳ್ಳಾರಿಯಲ್ಲಿ ಬಿಜೆಪಿ ಅಭ್ಯರ್ಥಿ ಸ್ಪರ್ಧೆ ಟೈಮ್ ಪಾಸಾಗಿ ಇರುತ್ತದೆ.
ಲೆಕ್ಕಕ್ಕೆ ಉಂಟು ಆಟಕ್ಕಿಲ್ಲ ಎನ್ನುವ ರೀತಿಯಲ್ಲಿ ಇರುತ್ತದೆ ಎಂದು ಜನರು ಕಿವಿ ಕಚ್ಚಿಕೊಳ್ಳುತಿದ್ದಾರೆ.
ಇದರಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗಳ ಕಥೆ ಅಯೋಮಯ ಇದೇ.
ದೆಹಲಿ ಮಟ್ಟದಲ್ಲಿ ಮಲ್ಲಿಕಾರ್ಜುನ ಖರ್ಗೆ,ಅಲ್ಲಂ ವೀರಭದ್ರಪ್ಪ ನಾಸಿರ್ ಹುಸೇನ್, ಇನ್ನೂ ಕಲಬುರಗಿ ಮಾಜಿ ಸಚಿವರು ಶರಣ ಪ್ರಕಾಶ್ ಪಾಟೀಲ್.ಎಮ್,ಬಿ.ಪಾಟೀಲ್, ಖಂಡ್ರೆ ಇನ್ನು ಮುಂತಾದ ನಾಯಕರು, ಜಾತಿ ಲೆಕ್ಕಾಚಾರದಲ್ಲಿ ಅಲ್ಲಂ ಪ್ರಶಾಂತ್ ಕಡೆಗೆ ಭಜನೆ ಮಾಡುತ್ತಾ ಇದ್ದಾರೆ ಎಂದು ಕೇಳಿ ಬರುತ್ತಿದೆ.
ಇನ್ನೂ ಉಳಿದ ನಾಯಕರು ದಿವಾಕರ ಬಾಬು, ನಾರಾ ಭರತ್, ಕಡೆಗೆ ಎಂದು ಕೇಳಿ ಬರುತ್ತದೆ.
ಕಾಂಗ್ರೆಸ್ ಟಿಕೆಟ್ ಅಲ್ಲಂ ಪ್ರಶಾಂತ್ ಗೆ ಖಚಿತ ಎಂದು ಭಾವನೆ ಮತ್ತು ರಾಜಕೀಯದ ತಂತ್ರಗಾರಿಕೆ,ಮಾಡಿಕೊಂಡ ಬಿಜೆಪಿಯಲ್ಲಿ ಸಂಭ್ರಮಾಚರಣೆ ಇದೆ ಅನ್ನುವುದು ಕೇಳಿ ಬಂದಿದೆ.
ಬಿಜೆಪಿಯ ಕೇಲ ಚೋಟಾ ಮೋಟ ನಾಯಕರು ಅಲ್ಲಂ ಪ್ರಶಾಂತ್ ಗೆ ಕಾಂಗ್ರೆಸ್ ಟಿಕೆಟ್ ಕೊಟ್ಟರೆ ಬಿಜೆಪಿ ಗೆಲುವು ಖಚಿತ ಎಂದು ಖುಷಿ ಖುಷಿಯಾಗಿ ಸಂತೋಷ ವನ್ನು ಹಂಚಿಕೊಳ್ಳತ್ತಾರೆ ಎಂದು ಗುಸು ಗುಸು ಇದೆ.
ಇದು ವಾಸ್ತವ ಸಂಗತಿ ಕೂಡ ಇರಬಹುದು!!.
ಪ್ರಶಾಂತ್ ಗೆ ಟಿಕೆಟ್ ಕೊಟ್ಟರೆ ಕಾಂಗ್ರೆಸ್ ಗತಿ ಅಷ್ಟೇ ಗೋವಿಂದ ನಾಮವೇ!! ದಿವಾಕರ ಬಾಬುಗೆ ಸಿಕ್ಕರೆ ಚುನಾವಣೆ ಕಥೆ ಅದಲು ಬದಲು ಆಗುತ್ತದೆ ಎನ್ನುತ್ತಾರೆ ಸಾರ್ವಜನಿಕರು.
ಭರತ್ ಕೂಡ ಸಮಬಲದ ವ್ಯಕ್ತಿ,ಈಗಾಗಲೇ ಬಳ್ಳಾರಿಯಲ್ಲಿ ಮಹಿಳಾ ಅಭ್ಯರ್ಥಿ ಗಾಲಿ ಅರುಣಾ ಸ್ಪರ್ಧೆ ಖಚಿತ ವಾಗಿದೆ.
ಮತದಾರ ರಲ್ಲಿ ಮಹಿಳಾ ಅನ್ನುವ ಅನುಕಂಪದ ವಾತಾವರಣ ಇದೇ.
ಇದಕ್ಕೆ ಪರ್ಯಾಯವಾಗಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಮಹಿಳೆ ಕಣದಲ್ಲಿ ಇದ್ದಾರೆ ,ರಾಜ್ಯ ಮಟ್ಟದಲ್ಲಿ ಕೂಡ ಬಹುತೇಕ ಸರ್ವೇ ಗಳು ಕಾಂಗ್ರೆಸ್ ಗಾಳಿ ಇದೆ ಅನ್ನುತ್ತಾರೆ,ಇಲ್ಲಿ ಕೂಡ ಅನುಕೂಲ ಆಗುತ್ತದೆ ಎಂದು ಹಿರಿಯರ ಮಾತಾಗಿದೆ.
ಈಬಾರಿ ಕಾಂಗ್ರೆಸ್ V/S ಕೆ.ಆರ್.ಪಿ.ಪಿ ನಡುವೆ ಸ್ಪರ್ಧೆ ಇರುತ್ತದೆ.
ಈಗಾಗಲೇ ನಗರದಲ್ಲಿ ಕೂಡ ಬಿಜೆಪಿ ಹಿರಿಯರು ಕೂಡ ರಹಸ್ಯ ವಾಗಿ ಗಾಲಿ ಪಕ್ಷಕ್ಕೆ ಮಾಡಬೇಕು ಎನ್ನುವ ಸಂದೇಶ ರವಾನೆ ಮಾಡಿದ್ದಾರೆ ಅನ್ನುವ ಗುಸು ಗುಸು ಸಾರ್ವಜನಿಕರ ವಲಯದಲ್ಲಿ ಕೇಳಿ ಬರುತ್ತಿದೆ.
ಬಹುತೇಕ ವಲಯಗಳಲ್ಲಿ ದೊಡ್ಡ ಮಟ್ಟದಲ್ಲಿ ಗಾಲಿ ಪಕ್ಷಕ್ಕೆ ಸೇರ್ಪಡೆ ಅಗುತ್ತಾ ಇದ್ದಾರೆ.
ನಗರದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಲೀಡರ್ ಕೊರತೆ ಇದೆ,ಜಿಲ್ಲಾ, ನಗರ ಅಧ್ಯಕ್ಷರು ಮೌನಂ,ಶರಣಂ ಆಗಿದ್ದಾರೆ.
ಇದರಲ್ಲಿ ಒಬ್ಬ ಅಧ್ಯಕ್ಷ ಗಾಲಿ ಸಂಪರ್ಕದಲ್ಲಿ ಇದ್ದಾರೆ ಅನ್ನುವ ಅನುಮಾನಗಳು ಹುಟ್ಟು ಕೊಂಡಿವೆ.
ಗಾಲಿ ಜನಾರ್ದನ ರೆಡ್ಡಿ ಎಲ್ಲರ ಜೊತೆಯಲ್ಲಿ ಉತ್ತಮ ಸಂಬಂಧ ಗಳು ಹೊಂದಿರುವ ನಾಯಕರು.
ಅನಿಲ್ ಲಾಡ್ ಮೇಲೆ ಹೈ ಕಮಾಂಡ್ ಗೆ ಅನುಮಾನಗಳು ಇದ್ದಾವೆ ಎಂದು ಸರ್ವೇ ದಲ್ಲಿ ಲಾಡ್ ಗೆ ಪಾಸ್ ಮಾರ್ಕ್ ಗಳು ಇಲ್ಲವೆಂದು,ವಲಸೆ ಹೋಗುವ ಲೀಡರ್ ಎಂದು ಮಾಹಿತಿ ಸಿಕ್ಕಿದೆ ಎನ್ನುತ್ತಾರೆ ಕೆಲವರು.
ರಾಜಕೀಯ ವಿದ್ಯಮಾನಗಳು ಏನಾದರೂ ಆಗಬಹುದು.
ಜನರು ರಾಜಕೀಯ ಬೆಳವಣಿಗೆಗಳ ಬಗ್ಗೆ ಕಾದುನೋಡಬೇಕಿದೆ.
ಈಬಾರಿ ಚುನಾವಣೆ ಆರ್ಥಿಕವಾಗಿ,ದುಬಾರಿ ಯಾಗಿ ಇರುತ್ತದೆ.
ಗಾಲಿ ಅರುಣಾ ಮೂಲತಃ ಆಂದ್ರಪ್ರದೇಶದ ಹೆಣ್ಣು ಮಗಳು ರೆಡ್ಡಿ ಪ್ರಬಲ ರೆಡ್ಡಿ ಸಮಾಜದ ಅವರು ಇವರು ತಂದೆ ಪರಮೇಶ್ವರ ರೆಡ್ಡಿ ಗಾಲಿ ಅವರ ಮಾಮಾ, ವ್ಯಾಪಾರ ಸಂಸ್ಥೆಗಳು ಹೊಂದಿರುವ ದೊಡ್ಡ ನಾಯಕರು.
ಮಗಳು ಚುನಾವಣೆ ಪ್ರತಿಷ್ಠಿತ ವಿಚಾರ ಅನ್ನುವ ನಿಟ್ಟಿನಲ್ಲಿ ಯಾಲ್ಲಾ ರೀತಿಯಲ್ಲಿ ಸಿದ್ದವಾಗಿದ್ದಾರೆ ಅನ್ನುವ ಸಂಕೇತ ಇದೇ. ಗಾಲಿ ಜೈಲ್ ವಾಸ ಸಂದರ್ಭದಲ್ಲಿ ಗಾಲಿ ಸೋದರರ ಉಪಕಾರ ಅಷ್ಟು ಅಷ್ಟೇ ಇತ್ತು ಗಾಲಿ ಜನಾರ್ದನ ರೆಡ್ಡಿ ಸಹಾಯ ಸಹಕಾರ ದಿಂದ ಬೆಳೆದ ಅವರು.
ಅದರೆ ರಾಜಕೀಯ ಕ್ಕೆ ಬಂದರೆ ಜಿದ್ದಾಜಿದ್ದಿ ಅನ್ನುವ ಮಾತುಗಳು ಕೇಳಿ ಬರುತ್ತವೆ.
ಗಾಲಿ ಪ್ರಸ್ತುತ ನೊಂದು ಬೆಂದು ಮರು ರಾಜಕೀಯ ಪ್ರವೇಶ ಮಾಡಿದ್ದಾರೆ.
ಸಣ್ಣಪುಟ್ಟ ವ್ಯತ್ಯಾಸಗಳು ಅಗಿ ಹೆಚ್ಚು ಕಡಿಮೆ ಅದರೆ ಭವಿಷ್ಯ ಮತ್ತೆ ಕತ್ತಲು ಮಯವುವಾಗುತ್ತದೆ.
ಇದಕ್ಕೆ ಸೋದರರ ಹೊಣೆಗಾರಿಕೆ ಕಾರಣ ಅನ್ನುವ ಅಪವಾದ ಗಳು ಮತ್ತು ಸಂಬಂಧ ಗಳಲ್ಲಿ ಬಿರುಕುಗಳು,ಖಚಿತ🔥.
ಕೆ.ಬಜಾರಪ್ಪ ವರದಿಗಾರರು. ಕಲ್ಯಾಣ ಕರ್ನಾಟಕ ಚೀಫ್ ಬ್ಯೂರೋ.