This is the title of the web page
This is the title of the web page

Please assign a menu to the primary menu location under menu

State

ನಾರಾ ಸೂರ್ಯನಾರಾಯಣ ರೆಡ್ಡಿ ಅವರ ಮೇಲೆ ಕೋಟಿ,ಕೋಟಿ ವಂಚನೆ, ಪತ್ರಗಳಲ್ಲಿ ಅವ್ಯವಹಾರ ಅಗಿದೆ ಎಂದು ಎಸ್ಪಿಗೆ ದೂರು!!

ನಾರಾ ಸೂರ್ಯನಾರಾಯಣ ರೆಡ್ಡಿ ಅವರ ಮೇಲೆ ಕೋಟಿ,ಕೋಟಿ ವಂಚನೆ, ಪತ್ರಗಳಲ್ಲಿ ಅವ್ಯವಹಾರ ಅಗಿದೆ ಎಂದು ಎಸ್ಪಿಗೆ ದೂರು!!

ನಾರಾ ಸೂರ್ಯನಾರಾಯಣ ರೆಡ್ಡಿ ಅವರ ಮೇಲೆ ಕೋಟಿ,ಕೋಟಿ ವಂಚನೆ, ಪತ್ರಗಳಲ್ಲಿ ಅವ್ಯವಹಾರ ಅಗಿದೆ ಎಂದು ಎಸ್ಪಿಗೆ ದೂರು!!

ಬಳ್ಳಾರಿ ಮಾ (07) ನಗರದ ಪ್ರಭಾವಿ ರಾಜಕಾರಣಿ ಕಾಂಗ್ರೆಸ್ ಮುಖಂಡರು ನಾರಾ ಸೂರ್ಯನಾರಾಯಣ ರೆಡ್ಡಿಯವರ ಪುತ್ರ ನಾರಾ ಭರತ್ ರೆಡ್ಡಿ 2023 ರ ವಿಧಾನಸಭೆ ಚುನಾವಣೆ ಗೆ ಪ್ರಸ್ತುತ ಕಾಂಗ್ರೆಸ್ ಪ್ರಭಲ ಅಭ್ಯರ್ಥಿ ಯಾಗಿ ಮುಂಚೂಣಿಯಲ್ಲಿ ಇದ್ದಾರೆ.

ಈವರೆಗೆ ಅವರ ವ್ಯವಹಾರಗಳು ಯಾರಿಗೆ ಗೊತ್ತಿಲ್ಲದೆ ನಡೆಯುತ್ತಿದ್ದವು.

ಅವರು ಗ್ರಾನೈಟ್ ಉದ್ಯಮಿ ಎಂದುಎಲ್ಲರಿಗೂ ತಿಳಿದ ವಿಚಾರ.

ಆದರೆ ಇದ್ದಕ್ಕಿದ್ದಂತೆ ಯಲಬುರ್ಗಾ ತಾಲೂಕಿನ ಕೂಕನೂರು ಭೂಮಿ ವಿಚಾರದಲ್ಲಿ ಸಿವಿಲ್ ಮ್ಯಾಟರ್ ಪಾರ್ಟ್ನರ್ಸ್ ವ್ಯವಹಾರಗಳ ಬಿಸಿನೆಸ್ ನಲ್ಲಿ ಒಬ್ಬ ವ್ಯಕ್ತಿ ಮೃತಪಟ್ಟಿರುತ್ತಾರೆ.

ಮೃತಪಟ್ಟ ವ್ಯಕ್ತಿಗೆ ಲಾಭ ನಷ್ಟಗಳ ವಿಚಾರದಲ್ಲಿ ಜನರಲ್ ಪೌರಣ ಪಟ್ಟ ವಿಚಾರದಲ್ಲಿ ವಂಚನೆ ಮಾಡಿದ್ದಾರೆ ಎಂದು ಕೊಟಿ ಗಟ್ಟಲೆ ಹಣ ಮೃತಪಟ್ಟ ಪಾರ್ಟನರ್ ಗೆ ಬರಬೇಕೆಂದು 2001 ರಿಂದ 2023 ವರೆಗೆ ನಡೆದ ವ್ಯವಹಾರಗಳಲ್ಲಿ ನಾರಾ ಸೂರ್ಯನಾರಾಯಣ ರೆಡ್ಡಿ ಕುಟುಂಬದ ಕೆಲ ಸದಸ್ಯರು ರಾಘವೇಂದ್ರ ಎಂಟರ್ ಪ್ರೈಸಸ್ ಕಚೇರಿ ಸಿಬ್ಬಂದಿ ಮೇಲೆ ಪ್ರಕರಣ ದಾಖಲೆ ಮಾಡುವಂತೆ ಮಂಗಳವಾರ ತರಾತೂರಿಯಲ್ಲಿ ಬಂದು ಮೃತಪಟ್ಟ ಸಂಬಂಧ ಕುಟುಂಬದವರು ,ಎನ್ ಪೂಣಿಮಾ. ಸುನೀಲ್ ಕುಮಾರ್, ಮತ್ತಿತರರು ಒಟ್ಟಾರೆ ಮೂರು ಮಂದಿ ಎಸ್ಪಿ ಕಚೇರಿ ಗೆ ಬಂದು ನಾರಾ ಸೂರ್ಯನಾರಾಯಣ ರೆಡ್ಡಿ ,ಅವರ ಕುಟುಂಬದ ಅವರ ಮೇಲೆ ದೂರು ದಾಖಲೆ ಮಾಡುವಂತೆ ಪತ್ರದ ಮೂಲಕ ಕಂಪ್ಲೈಂಟ್ ಕೊಟ್ಟಿದ್ದಾರೆ.

ಪ್ರತಿಯನ್ನು ಕೆಲವರಿಗೆ ವ್ಯಾಟ್ಸಪ್ ಮೂಲಕ ಹಾಕಿ ಮೊಬೈಲ್‌ ಯಲ್ಲಿ ವಿಡಿಯೋ ಮಾಡಿದ ಸಂಭಾಷಣೆ ಹಾಕಿದ್ದಾರೆ.

ಸಂಬಂಧಿಸಿದ ದೂರುದಾರ ಸುನೀಲ್ ಅನ್ನುವ ಅವರನ್ನು ಸಂಪರ್ಕ ಮಾಡಿದರೆ, ನಾವು ಡ್ರೈವಿಂಗ್ ಮಾಡುತ್ತಾ ಇದ್ದುವಿ ನಮಗೆ ಯಾರೂ ಒಬ್ಬ ಸ್ನೇಹಿತರು XYZ ಕುಮಾರ್ ಸ್ವಾಮಿ ಗುಡಿ ಹತ್ತಿರ ಸಿಕ್ಕಿದ್ದರು ಎಸ್ಪಿ ಗೆ ದೂರು ಕೊಡಿ ಎಂದು ಹೇಳಿದ್ದರು,ಅದಕ್ಕೆ ಕೊಟ್ಟು ಬಂದಿದೆ ಎಂದರು, ತದನಂತರ ಮತ್ತೆ ಪೋನ್ ಕಾಲ್ ಅವರು ರಿಸಿವ್ ಮಾಡಿಲ್ಲ.

ಇದು ಚುನಾವಣೆ ಸಮಯದಲ್ಲಿ ಸ್ವಲ್ಪ ಮಟ್ಟಿಗೆ ಗಂಭೀರ ಸ್ವರೂಪ ಪಡೆದು ಕೊಳ್ಳಬಹುದು, ಇದರ ವಾಸ್ತವ ಏನು ಅನ್ನುವುದು,ದೂರು ಕಾಪಿ ಮೂಲಕ ಸಾಬೀತು ಮಾಡಲು ಸಾಧ್ಯವಾಗದು.

ಆದರೇ ಆರೋಪ ಮಾಡಿದ್ದಾರೆ,ಇದರ ಪೂರ್ತಿ ಮಾಹಿತಿ ತಿಳಿಯಬೇಕು ಅಗಿದೆ.

ಇದರಲ್ಲಿ ಒಬ್ಬ ವಿಮ್ಸ್ ಆಸ್ಪತ್ರೆಯ ಡಾ.ವಿನಾಯಕ್ ಪ್ತಸನ್ನ ದೂರುದಾರರಿಗೆ ಬೆದರಿಕೆ ಕರೆಗಳು ಬಂದ ಸಮಯದಲ್ಲಿ ಅವರಗೆ ಸಹಕಾರಿಯಾಗಿ ಮಾರ್ಗದರ್ಶನ ಸಹಕಾರ ಮಾಡಿದ್ದಾರೆ ಎಂದು ದಾಖಲೆ ಗಳಲ್ಲಿ ಇದೆ.

ಇತ್ತ ರೆಡ್ಡಿ ಕೂಡ ಸಂಪರ್ಕಕ್ಕೆ ಸಿಕ್ಕಿಲ್ಲ.ಇವರ ಇಬ್ಬರು ನಡುವೆ ನಡೆದ ವ್ಯವಹಾರ ಸಂಪೂರ್ಣ ಹೊರಗೆ ಬರಬೇಕು ಅಗಿದೆ.

ಇದರ ಹಿಂದೆ ಇರುವ ಸೂತ್ರದಾರರು ಯಾರು ಎನ್ನುವದು ಬಹಿರಂಗಗೊಳ್ಳಬೇಕು ಅಗಿದೆ.

(ಕೆ.ಬಜಾರಪ್ಪ ವರದಿಗಾರರು ಕಲ್ಯಾಣ ಕರ್ನಾಟಕ.)


News 9 Today

Leave a Reply