This is the title of the web page
This is the title of the web page

Please assign a menu to the primary menu location under menu

State

ಕೋಮುವಾದಿ ಪಕ್ಷಗಳ ಆಮಿಷಕ್ಕೆ ಬಲಿಯಾಗಬೇಡಿ, ಈ ಬಾರಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದೇ ಬರುತ್ತೆ ಗ್ರಾಮೀಣ ಶಾಸಕ ಬಿ.ನಾಗೇಂದ್ರ

ಕೋಮುವಾದಿ ಪಕ್ಷಗಳ ಆಮಿಷಕ್ಕೆ ಬಲಿಯಾಗಬೇಡಿ, ಈ ಬಾರಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದೇ ಬರುತ್ತೆ ಗ್ರಾಮೀಣ ಶಾಸಕ ಬಿ.ನಾಗೇಂದ್ರ

*ಕೋಮುವಾದಿ ಪಕ್ಷಗಳ ಆಮಿಷಕ್ಕೆ ಬಲಿಯಾಗಬೇಡಿ, ಈ ಬಾರಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದೇ ಬರುತ್ತೆ ಗ್ರಾಮೀಣ ಶಾಸಕ ಬಿ.ನಾಗೇಂದ್ರ*

*ಬಳ್ಳಾರಿ, ಮಾ.07; ಬಳ್ಳಾರಿ ಗ್ರಾಮೀಣ ಕ್ಷೇತ್ರದ ಕೌಲ್ ಬಜಾರ್ ವ್ಯಾಪ್ತಿಯಲ್ಲಿ ಬರುವ 25 ಮತ್ತು 28ನೇ ವಾರ್ಡಿನಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಕಾಂಗ್ರೆಸ್ ಗ್ಯಾರಂಟಿಗಳ ಕಾರ್ಡ್ ವಿತರಣೆ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಈ ಕಾರ್ಯಕ್ರಮದಲ್ಲಿ ಬಳ್ಳಾರಿ ಗ್ರಾಮಾಂತರ ಜನಪ್ರಿಯ ಶಾಸಕರಾದ ಸನ್ಮಾನ್ಯ ಶ್ರೀ ಬಿ.ನಾಗೇಂದ್ರ ಅವರು ಪಾಲ್ಗೊಂಡು ಗ್ಯಾರಂಟಿ ಕಾರ್ಡುಗಳನ್ನು ವಿತರಣೆ ಮಾಡಿದರು.*

*ನಂತರ ಮಾತನಾಡಿದ ಮಾನ್ಯ ಶಾಸಕರು ನಮ್ಮ ಪಕ್ಷ ರಾಜ್ಯದಲ್ಲಿ ಮುಂಬರುವ ಚುನಾವಣೆಯಲ್ಲಿ ಅಧಿಕಾರಕ್ಕೆ ಬಂದರೆ, ಪ್ರತಿ ಕುಟುಂಬದ ಮಹಿಳೆಗೆ ಮಾಸಿಕ ಎರಡು ಸಾವಿರ ರೂ, ಪ್ರತಿ ಕುಟುಂಬಕ್ಕೆ ಮಾಸಿಕ ಎರಡು ನೂರು ಯುನೀಟ್ ವಿದ್ಯುತ್ ಉಚಿತವಾಗಿ ನೀಡಲಿದೆ. ಅಲ್ಲದೆ ಮಾಸಿಕ ಪ್ರತಿ ವ್ಯಕ್ತಿಗೆ 10 ಕಿಲೋ ಅಕ್ಕಿ ನೀಡಲಿದೆಂದು ಗ್ಯಾರಂಟಿ ಕೊಡುವುದಾಗಿ ಹೇಳಿದರು.*

*ಬಿಜೆಪಿ ಮೇಲೆ ವಾಗ್ದಾಳಿ ನಡೆಸಿದ ಅವರು ಕೌಲ್ ಬಜಾರ್ ಭಾಗದ ಜನರಿಗೆ ಮನೆಯ ಪಟ್ಟ ಕೊಡಬಾರದು ಯಾಕೆಂದರೆ ಅವರು ಕಾಂಗ್ರೆಸ್ ಪಕ್ಷಕ್ಕೆ ವೋಟ್ ಹಾಕಿದ್ದಾರೆ. ಹಾಗಾಗಿ ಇನ್ನೊಂದು ಸಾರಿ ಬಿಜೆಪಿ ಅವರ ಮುಖಕ್ಕೆ ಹೊಡೆದ ಹಾಗೆ ಕಾಂಗ್ರೆಸ್ ಪಕ್ಷಕ್ಕೆ ಮತವನ್ನು ಹಾಕೋಣ ಎಂದರು.*

*ನಿಮಗೆ ಪಟ್ಟ ಬರಬೇಕು ಅಂದರೆ ಕಾಂಗ್ರೆಸ್ ಪಕ್ಷಕ್ಕೆ ಮತವನ್ನು ಹಾಕಬೇಕು, ಈ ಮೂರು ಗ್ಯಾರಂಟಿಗಳು ನಿಮಗೆ ಸಿಗಬೇಕೆಂದರೆ ನೀವು ಕಾಂಗ್ರೆಸ್ ಪಕ್ಷಕ್ಕೆ ಮತವನ್ನು ಹಾಕಬೇಕು. ಪ್ರತಿಯೊಂದು ಹಬ್ಬಕ್ಕೂ ಕಲರ್ಫುಲ್ ಲೈಟ್ ಗಳನ್ನು ಹಾಕಿ, ಹಬ್ಬವನ್ನು ಸಂಭ್ರಮದಿಂದ ಆಚರಣೆ ಮಾಡಬೇಕಾದರೂ ಕಾಂಗ್ರೆಸ್ ಪಕ್ಷಕ್ಕೆ ಮತವನ್ನು ಹಾಕಬೇಕು. ಈ ಬಿಜೆಪಿ ಕೋಮುವಾದಿ ಪಕ್ಷಕ್ಕೆ ನೀವು ಯಾವತ್ತಿಗೂ ಮತವನ್ನು ಕೊಡಬೇಡಿ ಹಾಗೂ ನೀವು ಕೋಮುವಾದಿ ಬಿಜೆಪಿ ಪಕ್ಷಕ್ಕೆ ಮತವನ್ನು ಕೊಡುವುದಿಲ್ಲ ಎಂಬುದು ಸಹ ನನಗೆ ಗೊತ್ತಿದೆ ಎಂದರು.*

*ಕೋಮುವಾದಿ ಪಕ್ಷಗಳು, ಕೋಮುವಾದಿ ರಾಜಕಾರಣಿಗಳು ಸಮುದಾಯದ ಜನರಿಗೆ ಆಮಿಷಗಳನ್ನು ಒಡ್ಡುತ್ತಾರೆ, ಕೇಸ್ ಹಾಕುವುದಾಗಿ ಬೆದರಿಸುತ್ತಾರೆ ಯಾರೂ ಕೂಡ ಆಮಿಷಕ್ಕೆ ಈಡಾಗಬಾರದು, ಭಯಪಡಿಸಿದರೆ ಹೆದರಬಾರದು ನಾವೆಲ್ಲ ನಿಮ್ಮ ಜೊತೆ ಇದ್ದೇವೆ. ಮುಂಬರುವ ದಿನಗಳಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ಖಚಿತ. ಆಗ ಕೌಲ್ ಬಜಾರ್ ಪ್ರದೇಶವನ್ನು, ಇಡೀ ಗ್ರಾಮೀಣ ಕ್ಷೇತ್ರವನ್ನು ಅಭಿವೃದ್ಧಿಪಡಿಸೋಣ ಎಂದು ಶಾಸಕ ಬಿ.ನಾಗೇಂದ್ರ ಅವರು ಹೇಳಿದರು.*

*ಈ ಸಂದರ್ಭದಲ್ಲಿ ರಾಜ್ಯದ ಸಭಾ ಸದಸ್ಯ ಶ್ರೀ ಡಾ. ಸೈಯದ್ ನಾಸಿರ್ ಹುಸೇನ್, ಪಾಲಿಕೆ ಮೇಯರ್ ಆದ ಶ್ರೀಮತಿ ಎಂ.ರಾಜೇಶ್ವರಿ ಸುಬ್ಬರಾಯಡು, ಪ್ರಚಾರ ಸಮಿತಿಯ ಬಳ್ಳಾರಿ ನಗರ ಜಿಲ್ಲಾಧ್ಯಕ್ಷರಾದ ಕೆ.ಎಸ್.ಎಲ್ ಸ್ವಾಮಿ, ಪ್ರಚಾರ ಸಮಿತಿಯ ಬಳ್ಳಾರಿ ಗ್ರಾಮೀಣ ಅಧ್ಯಕ್ಷರಾದ ಮುಂಡ್ರಿಗಿ ನಾಗರಾಜ್, ಪಾಲಿಕೆ ಸದಸ್ಯರಾದ ಡಿ.ಮುಬೀನಾ ಕಾಂಗ್ರೆಸ್ ಮುಖಂಡರಾದ ಅಕ್ಬರ್, ಅಲ್ಲಾ ಬಕಷ್, ನಾಜು, ಅಯಾಜ್ ಅಹ್ಮದ್, ಗುಜರಿ ಬಸವರಾಜ್, ನಾಗಲಕೆರೆ ಗೋವಿಂದ, ಕೆ.ಹೊನ್ನಪ್ಪ, ಲೋಕೇಶ್, ಗುರುರಾಜ್, ಭಂಡಾರಿ ಸೀನಾ, ಸಿಂಧುವಾಳ್ ಗಾದಿಲಿಂಗನಗೌಡ, ಬೆಣಕಲ್ ಬಸವರಾಜ್ ಗೌಡ, ಯರಗುಡಿ ಮುದಿ ಮಲ್ಲಯ್ಯ, ಹಗರಿ ಗೋವಿಂದ, ಗೋನಾಳ್ ನಾಗಭೂಷಣ ಗೌಡ, ಶ್ರೀನಾಥ್, ಸೇರಿದಂತೆ ಕಾಂಗ್ರೆಸ್ ಪಕ್ಷದ ಮುಖಂಡರು ಪಾಲ್ಗೊಂಡಿದ್ದರು.*

 


News 9 Today

Leave a Reply