*ಬಿಜೆಪಿ ಯಿಂದ ನಗರಕ್ಕೆ ಪ್ರಬಲ ಆಕಾಂಕ್ಷಿ ಅಗಿ ಇದ್ದಿನಿ. ಶಾಸಕ ಸಮಕ್ಷದಲ್ಲಿ”ಸೈ”ಎಂದು ಸಂದೇಶ ರವಾನೆ ಮಾಡಿದ ರಾಮಲಿಂಗಪ್ಪ.!!* ಬಳ್ಳಾರಿ(10) ವಿಜಯ ಸಂಕಲ್ಪ ಯಾತ್ರೆ ಕುರಿತು ಮಾಹಿತಿ ನೀಡುವ ಹಿನ್ನೆಲೆ ಬಿಜೆಪಿ ಕಚೇರಿ ಯಲ್ಲಿ ಜಿಲ್ಲಾ ಅಧ್ಯಕ್ಷರ ನೇತೃತ್ವದಲ್ಲಿ ಸುದ್ದಿ ಗೋಷ್ಟಿ ಮಾಡಲಾಯಿತು.
ಈಸಂದರ್ಭದಲ್ಲಿ ಶಾಸಕ ಸೋಮಶೇಖರ್ ರೆಡ್ಡಿಯವರು, ಕೂಡ ಉಪಸ್ಥಿತಿ ಇದ್ದರು.
ಈಸಂದರ್ಭದಲ್ಲಿ ಮಾತನಾಡಿದ ಬಿಜೆಪಿ ಹಿರಿಯ ಮುಖಂಡರು ಹಾಲುಮತ ಸಮಾಜದ ಮುಖಂಡರು ಕೆ.ಎ.ರಾಮಲಿಂಗಪ್ಪ ಈಬಾರಿ ನಾವು ಬಳ್ಳಾರಿ ನಗರದಿಂದ ಬಿಜೆಪಿ ಅಭ್ಯರ್ಥಿ ಯಾಗಿ ಸ್ಪರ್ಧೆ ಮಾಡುವ ಪ್ರಬಲ ಆಕಾಂಕ್ಷಿ ಅಗಿ ಇದ್ದಿನಿ ಎಂದು,ನೇರವಾಗಿ ಶಾಸಕರ ಸಮಕ್ಷದಲ್ಲಿ ಬಹಿರಂಗ ವಾಗಿ ಹೇಳಿದ್ದಾರೆ.
ಸೋಮಶೇಖರ್ ರೆಡ್ಡಿ ಗೆ ಟಿಕೆಟ್ ನೀಡಿಲ್ಲ ಅಂದರೆ ನನಗೆ ಖಚಿತ ಏಂದರು.
ರಾಮಲಿಂಗಪ್ಪ ಅವರು ಕೂಡಾ ಹಿರಿಯ ರಾಜಕಾರಣಿಗಳು ಈಹಿಂದೆ ಹಲವಾರು ಬಾರಿ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ ಅನುಭವ ಇದೆ.
ಸಂಘ ಪರಿವಾರ ಜೊತೆಯಲ್ಲಿ ಉತ್ತಮ ಸಂಬಂದ ಗಳು ಹೊಂದಿರುವ ವ್ಯಕ್ತಿ,ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಸಂಬಂದಿ ಗಳು ಕೂಡ.
ಪದೇಪದೇ ಈಬಾರಿ ನಗರದ ಟಿಕೆಟ್ ಕೇಳುವ ಪ್ರಯತ್ನ ದಲ್ಲಿಇದ್ದಿನಿ,ಶಾಸಕ ಸೋಮಶೇಖರ್ ರೆಡ್ಡಿಯವರು ಗೆ ಈಬಾರಿ ಚುನಾವಣೆಯಲ್ಲಿ ಗೆಲ್ಲುವ ವಾತಾವರಣ ಇಲ್ಲವೆಂದು ಪತ್ರಿಕಾ ಗೋಷ್ಟಿ ಮಾಡಿ ಬಹಿರಂಗ ವಾಗಿ ಧೈರ್ಯವಾಗಿ ಹೇಳಿಕೆ ನೀಡಿದ ಮೊದಲ ಬಿಜೆಪಿ ಮುಖಂಡರು.
ಈಹಿಂದೆ ಕೂಡ ರಾಮಲಿಂಗಪ್ಪ ಅವರು ಬುಡಾ ಅದ್ಯಕ್ಷ ಆಗಿದ್ದರು ಕೇವಲ ಒಂದೇ ದಿನದಲ್ಲಿ ಸ್ಥಾನವನ್ನು ಕಳೆದ ಕೊಂಡರು.
ಇದಕ್ಕೆ ಸೋಮಶೇಖರ್ ರೆಡ್ಡಿ ಅವರು ಕಿಡಿ ಹಚ್ಚಿದರು ಏಂದರು, ಅದಕ್ಕೆ ಸೋಮಶೇಖರ್ ರೆಡ್ಡಿ ನಾನು ಏನು ಮಾಡಿಲ್ಲ ಜನಾರ್ದನ ರೆಡ್ಡಿ ಹಚ್ಚಿ ಏಂದರು ಹೆಚ್ಚಿದೆ ಅಷ್ಟೇ ಎಂದು ಕ್ಯಾಮರಾ ಗಳು ಮುಂದೆ ಪಂಚಾಯತಿ ಇಟ್ಟು ಕೊಂಡಿದ್ದರು.
ರಾಮಲಿಂಗಪ್ಪ ನಗರದ ಪ್ರಭಲ ಆಕಾಂಕ್ಷಿ ಅನ್ನುವ ಹೇಳಿಕೆ ಹಿನ್ನೆಲೆ ಸಿಟ್ಟಿಂಗ್ ಶಾಸಕ ಮುಂದೆ ತಮಗೆ ಇಲ್ಲ ಅಂದರೆ ನಾವು ಸಮರಕ್ಕೆ ಸಿದ್ದವಾಗಿ ಇದ್ದುವಿ ಅನ್ನುವ ಸಂದೇಶದ ತುಂಬಾ ಮಹತ್ತರ ಪಾತ್ರವನ್ನು ವಹಿಸುತ್ತದೆ.
ಅಂದರೆ ನಗರದ ಬಿಜೆಪಿ ಟಿಕೆಟ್ ಗೊಂದಲ ದಲ್ಲಿ ಇದೇ ಎನ್ನುವ ಸ್ಪಷ್ಟ ಸಂದೇಶ ಬಹಿರಂಗ ಗೊಂಡಿದೆ. (ಕೆ.ಬಜಾರಪ್ಪ ವರದಿಗಾರರು ಬಳ್ಳಾರಿ.)