This is the title of the web page
This is the title of the web page

Please assign a menu to the primary menu location under menu

State

ಜನಾರ್ಧನ್ ರೆಡ್ಡಿ ವಿರುದ್ದ ಲಾಡ್ ಸಿಡಿಲು. ಅಮಿತ್ ಶಾಗೆ ದೂರು!!- ಅನಿಲ್ ಲಾಡ್ ಪ್ರಯಾಣ ಅನುಮಾನ,ಬಿಜೆಪಿ ವಲಯದಲ್ಲಿ ಕಕ್ಕಬಿಕ್ಕಿ.

ಜನಾರ್ಧನ್ ರೆಡ್ಡಿ ವಿರುದ್ದ ಲಾಡ್ ಸಿಡಿಲು. ಅಮಿತ್ ಶಾಗೆ ದೂರು!!- ಅನಿಲ್ ಲಾಡ್ ಪ್ರಯಾಣ ಅನುಮಾನ,ಬಿಜೆಪಿ ವಲಯದಲ್ಲಿ ಕಕ್ಕಬಿಕ್ಕಿ.

ಜನಾರ್ಧನ್ ರೆಡ್ಡಿ ವಿರುದ್ದ ಲಾಡ್ ಸಿಡಿಲು. ಅಮಿತ್ ಶಾಗೆ ದೂರು!!- ಅನಿಲ್ ಲಾಡ್ ಪ್ರಯಾಣ ಅನುಮಾನ,ಬಿಜೆಪಿ ವಲಯದಲ್ಲಿ ಕಕ್ಕಬಿಕ್ಕಿ.

ಬಳ್ಳಾರಿ : ಬಳ್ಳಾರಿ ನಗರದ ವಿವಿಧ ಭಾಗಗಳಲ್ಲಿ ಜನಸಾಮಾನ್ಯರನ್ನು ಬೆದರಿಸಿ ಮನೆಗಳು, ಜಾಗಗಳು ಆಕ್ರಮವಾಗಿ ಮಾಜಿ ಸಚಿವ ಗಾಲಿ ಜನಾರ್ಧನ್ ರೆಡ್ಡಿ ಅವರು ಕಬ್ಜ ಮಾಡಿಕೊಂಡಿದ್ದಾರೆ ಎಂದು ಮಾಜಿ ಶಾಸಕ ಅನಿಲ್ ಎಚ್ ಲಾಡ್ ಅವರು ಆರೋಪಿಸಿದರು.

ನಗರದ ತಮ್ಮ ಗೃಹ ಕಚೇರಿಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

ನನ್ನ ಮನೆ ಸೇರಿ ಅವಂಭಾವಿ, ವೀರನಗೌಡ ಕಾಲೋನಿ ಸಾಕಷ್ಟು ಮನೆಗಳನ್ನು ಮಾಜಿ ಸಚಿವ ಗಾಲಿ ಜನಾರ್ಧನ್ ರೆಡ್ಡಿ ಅವರು ಆಕ್ರಮವಾಗಿ ನೊಂದಣಿ ಮಾಡಿಕೊಂಡಿದ್ದಾರೆ. 2008ರಲ್ಲಿ ನಾನೊಂದು ಮನೆ ಖರೀದಿ ಮಾಡಿದ್ದೆ, ಜನಾರ್ಧನ್ ರೆಡ್ಡಿ ಅವರ ಮಾವನ ಹೆಸರಿಗೆ ಅಕ್ರಮವಾಗಿ ನೊಂದಣಿ ಮಾಡಿಸಿಕೊಂಡಿದ್ದಾರೆ ಎಂದು ಆರೋಪಿಸಿದರು.

ಬಳ್ಳಾರಿಯ ಟಿ.ಬಿ ಸ್ಯಾನಿಟೋರಿಯಂ ಬಳಿ ಸುಮಾರು 150 ಎಕರೆ ಜಮೀನು ಆಕ್ರಮವಾಗಿ ಸಂಪಾದನೆ ಮಾಡಿಕೊಂಡಿದ್ದಾರೆ. ನಗರದ ಅವಂಭಾವಿಯ ನಧಾಫ್ 100 ಎಕರೆ ಜಮೀನಿ ಹಾಕಿಕೊಂಡಿದ್ದಾರೆ ಎಂದು ದೂರಿರುವ ಅವರು, ಜನಸಾಮಾನ್ಯರಿಗೆ ತೊಂದರೆ ಕೊಟ್ಟಿರುವ ಮಾಜಿ ಸಚಿವ ಗಾಲಿ ಜನಾರ್ಧನ್ ರೆಡ್ಡಿ ವಿರುದ್ಧ ಕೇಂದ್ರ ಸಚಿವ ಅಮಿತ್ ಶಾ ಅವರಿಗೆ ದೂರು ಕೊಡುವೆ ಎಂದರು.

ಮೂವರು ಪ್ರಮುಖ ವ್ಯಕ್ತಿಗಳಿಂದ ರಹಸ್ಯವಾಗಿ ಸಭೆ ಮಾಡಿ ಆಕ್ರಮ ಮಾಡಿ ಜಾಗವನ್ನು ಹೊಡೆದುಕೊಂಡಿದ್ದಾರೆ. ಬಳ್ಳಾರಿ ನಗರದಲ್ಲಿ ಯಾರೇ ಜನಾರ್ಧನ್ ರೆಡ್ಡಿಯಿಂದ ಜಾಗವನ್ನು ಕಳೆದುಕೊಂಡರು ನನಗೆ ದಾಖಲೆಗಳು ಕೊಟ್ಟರೆ ನಾನು ಎರಡ್ಮೂರು ದಿನಗಳಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ದಾಖಲೆ ಸಮೇತ ದೂರು ಕೊಡುವೇ ಎಂದರು. ಇದರಲ್ಲಿ ಯಾರೇ ಜನಾರ್ಧನ್ ರೆಡ್ಡಿಯಿಂದ ಅನ್ಯಾಯವಾಗಿದ್ರೆ ನನಗೆ ಮಾಹಿತಿ ಕೊಡಿ ಎಂದು ವಿನಂತಿ ಮಾಡಿದ್ದಾರೆ.

ರೆಡ್ಡಿಯವರ ವ್ಯವಹಾರ ಜಿಂದಾಲ್ ಸಂಸ್ಥೆಯ ಉನ್ನತ ಮಟ್ಟದ ಅಧಿಕಾರಿ ಒಬ್ಬರ ಸಮ್ಮುಖದಲ್ಲಿ ನಡೆದಿದೆ ಏಂದರು.

ಹಲವಾರು ವರ್ಷಗಳು ರಾಜಕೀಯ ದಲ್ಲಿ ಇದ್ದು ಇಷ್ಟು ತಡವಾಗಿ ಯಾಕೆ ಆರೋಪ ಮಾಡುತ್ತಾ ಇದ್ದಿರಿ ಏಂದು ಕೇಳಿದ ಪ್ರಶ್ನೆಗೆ ತಬ್ಬಿಬಿಬ್ಬಿ ಯಾಗಿ ಸಮಯ ಬರಲಿಲ್ಲ ಏಂದರು.

ಗುಡಿಬಿಡಿ ಯಲ್ಲಿ ಯಾವುದೇ ದಾಖಲೆ ಇಲ್ಲದೆ ಪತ್ರಿಕಾ ಗೋಷ್ಟಿ ಮಾಡಿದ್ದು ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಈಗಾಗಲೇ ವಿಧಾನ ಸಭೆ ಚುನಾವಣೆಯಲ್ಲಿ ಟಿಕೆಟ್ ಇಲ್ಲವೆಂದು ಖಾತ್ರೆ ಮಾಡಿಕೊಂಡ ಅನಿಲ್ ಲಾಡ್,ಜನಾರ್ದನ ರೆಡ್ಡಿ ವಿರುದ್ಧ ಆರೋಪ ಗಳು ಮಾಡುತ್ತಾರೆ ಎಂದರೆ *ಬಿಜೆಪಿ ಕಡೆಗೆ ಮುಖವನ್ನು ತೋರಿಸುತ್ತದೆ,ಅನ್ನುವ ಅನುಮಾನಗಳು ಕಾಣುತ್ತವೆ*.

ಈಗಾಗಲೇ ಬಳ್ಳಾರಿಯಲ್ಲಿ ಬಿಜೆಪಿ ಟಿಕೆಟ್ ಗೊಂದಲ ಆರಂಭ ವಾಗಿದೆ.

ಒಂದು ಕಡೆಗೆ ಕೊನಂಕಿ, ರಾಮಲಿಂಗಪ್ಪ, ಈಬಾರಿ ಸೋಮಶೇಖರ್ ರೆಡ್ಡಿ ಗೆ ಟಿಕೆಟ್ ಸಿಗದಂತೆ ಟಕ್ಕರ್ ಕೊಡುತ್ತ ಇದ್ದಾರೆ.

ಚುನಾವಣೆ ಗೆ ಮೊದಲೇ ಸೋಮಶೇಖರ್ ರೆಡ್ಡಿ ಸೋಲು ಖಚಿತ ಏಂದು ರಾಮಲಿಂಗಪ್ಪ ಬಹಿರಂಗ ವಾಗಿ ಹೇಳಲಾಗಿತ್ತು.

ಇದರ ಮದ್ಯದಲ್ಲಿ ಅನಿಲ್ ಲಾಡ್ ಬಡಾಯಿ ಲಡಾಯಿ,ಸೋಮಶೇಖರ್ ರೆಡ್ಡಿ ಗೆ,ಉಸಿರು ಗಟ್ಟಿದ ವಾತಾವರಣ ಸೃಷ್ಟಿ ಅಗಿದೆ.

ಲಾಡ್ ಗೋಷ್ಟಿ ಗಡಿ ಬಿಡಿ ಇದ್ದರು ಇದರ ಹಿಂದೆ ಮಹತ್ತರ ರಹಸ್ಯ ಇದೆ ಅನಿಸುತ್ತದೆ.

ದಿನ ದಿನಕ್ಕೆ ಪ್ರಸ್ತುತ ಶಾಸಕ ನಡೆ ಬಿಜೆಪಿ ವಲಯದಲ್ಲಿ ಅನುಮಾನ ದಿಂದ ನೋಡುವ ವಾತಾವರಣ ಸೃಷ್ಟಿ ಅಗಿದೆ ಏಂದು ಪಕ್ಷದಲ್ಲಿ ಅವರ ಆಪ್ತರ ಗುಸು ಗುಸು ಗಳು ಕೇಳಿ ಬಂದಿದೆ ಎಂದು ಗುಸು ಗುಸು ಇದೆ!!.ಪ್ರಸ್ತುತ ವಾತಾವರಣ ದಲ್ಲಿ ಶ್ರೀ ರಾಮುಲು ಅವರು ಕೂಡ ಬಿಜೆಪಿ ಯಲ್ಲಿ ಗೆಲ್ಲುವ ಕುದುರೆ ಬೇಕು ಅದರೆ ಮೇಲೆ ಸವಾರಿ ಮಾಡಬೇಕು ಅನ್ನುವ ಆಲೋಚನೆ ದಲ್ಲಿ ಇದ್ದಾರೆ ,ಹೈ ಕಮಾಂಡ್ ಆದೇಶ ದಂತೆ ಹೋಗುವ ಆಲೋಚನೆ ಹೊಂದಿದ್ದಾರೆ ಏಂದು ತಿಳಿದು ಬಂದಿದೆ.

ಕೆ.ಬಜಾರಪ್ಪ ವರದಿಗಾರರು.ಕಲ್ಯಾಣ ಕರ್ನಾಟಕ.


News 9 Today

Leave a Reply