This is the title of the web page
This is the title of the web page

Please assign a menu to the primary menu location under menu

State

ಹರಿದು ಬಂದ ಜನಸಾಗರ ರುಚಿ ರುಚಿಯ ಭೋಜನ ವ್ಯವಸ್ಥೆ.

ಹರಿದು ಬಂದ ಜನಸಾಗರ ರುಚಿ ರುಚಿಯ ಭೋಜನ ವ್ಯವಸ್ಥೆ.

*ಹರಿದು ಬಂದ ಜನಸಾಗರ ರುಚಿ ರುಚಿಯ ಭೋಜನ ವ್ಯವಸ್ಥೆ.* ಬಳ್ಳಾರಿ,ಮಾ:14; ಗ್ರಾಮಾಂತರ ಪ್ರದೇಶದ ಜೋಳದರಾಶಿ ಗ್ರಾಮದ ಕುಂಟ ಮಾರೆಮ್ಮ ಗುಡಿಯಲ್ಲಿ ಶಾಸಕ ಬಿ.ನಾಗೇಂದ್ರರವರು ಏರ್ಪಡಿಸಿದ್ದ ಪೂಜಾ ಕಾರ್ಯಕ್ರಮ ಅದ್ಧೂರಿಯಾಗಿ ಜರುಗಿದೆ.

ನಾಡಿನ ಜನತೆಗೆ ಮತ್ತು ರೈತರ ಒಳತಿಗಾಗಿ ಬಳ್ಳಾರಿ ತಾಲೂಕಿನ ಜೋಳದರಾಶಿ ಗ್ರಾಮದ ಕುಂಟಮಾರೆಮ್ಮ ದೇವಿಗೆ ವಿಶೇಷ ಪೂಜೆ ಸಲ್ಲಿಸಿದ ಶಾಸಕ ನಾಗೇಂದ್ರರವರ ಕುಟುಂಬ ನಾಡಿನ ಜನತೆಗೆ ಹಾಗೂ ರೈತರಿಗೆ ಒಳಿತಾಗಲಿ ಎಂದು ಪ್ರಾರ್ಥಿಸಿದ್ದಾರೆ.

ಶಾಸಕ ಬಿ.ನಾಗೇಂದ್ರರವರು ಏರ್ಪಡಿಸಿದ್ದ ಪೂಜಾ ಕಾರ್ಯಕ್ರಮಕ್ಕೆ ಬಳ್ಳಾರಿ ಗ್ರಾಮಾಂತರ ಪ್ರದೇಶದ ಆನೇಕ ಹಳ್ಳಿಗಳಿಂದ ಸಾಹಸ್ರಾರು ಜನ ಭಾಗವಹಿಸಿದ್ದು ಸಾವಿರಾರು ಜನಕ್ಕೆ ಊಟದ ವ್ಯವಸ್ಥೆಯನ್ನು ಮಾಡಿದ್ದರು.

ಈ ಕಾರ್ಯಕ್ರಮಕ್ಕೆ ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರದ ಪ್ರಭಲ ಅಕಾಂಕ್ಷಿಯಾದ ನಾರಾಭರತ್ ರೆಡ್ಡಿ, ತಿಲಕ್ ಸಿರುಗುಪ್ಪ ವಿಧಾನಸಭಾ ಕ್ಷೇತ್ರದ ಕೈ ಅಕಾಂಕ್ಷಿ ಮುರಳಿಕೃಷ್ಣ, ಮಾಜಿ ಶಾಸಕ ನಾರಾ ಸೂರ್ಯನಾರಯಣ ರೆಡ್ಡಿ, ರಾಮಂ ಪ್ರಸಾದ್, ಪಾಲಿಕೆಯ ಮೇಯರ್ ರಾಜೇಶ್ವರಿ ಸುಬ್ಬಾರಾಯುಡು, ಮಾಜಿ ಸಚಿವ ಎಂ.ದಿವಾಕರ್ ಬಾಬು, ಕಂಪ್ಲಿ ವಿಧಾನ ಸಭಾ ಕ್ಷೇತ್ರದ ಕೈ ಅಕಾಂಕ್ಷಿ ನಾರಾಯಣಪ್ಪ, ಬಳ್ಳಾರಿಯ ಪಾಲಿಕೆಯ ಬಹುತೇಕ ಸದಸ್ಯರು ಹಾಜರಿದ್ದು, ಗ್ರಾಮಾಂತರ ಪ್ರದೇಶದ ಸುತ್ತಮುತ್ತಲಿನ ಹಳ್ಳಿಯ ಕಾಂಗ್ರೆಸ್ ಕಾರ್ಯಕರ್ತರು ಮುಖಂಡರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

ಈ ಪೂಜಾ ಕಾರ್ಯಕ್ರಮಕ್ಕೆ ಜನಸಾಗರವೇ ಹರಿದು ಬಂದಿದೆ. ವೇಜ್ ನಾನ್ ವೇಜ್ ಉಟದ ವ್ಯವಸ್ಥೆ ಮಾಡಿದ್ದರು.105,ಕುರಿಗಳನ್ನು ಕಟ್ ಮಾಡಲಾಗಿತ್ತು ಏಂದು ಸಾರ್ವಜನಿಕರ ಮಾತನಾಡುತ್ತಾ ಇದ್ದರು. ಹತ್ತಾರು ಎಕರೆ ಬಯಲು ಪ್ರದೇಶದಲ್ಲಿ ಟೆಂಟ್ ಹಾಕಲಾಗಿತ್ತು. ಗಾಳಿ ಗೆ ಸ್ವಲ್ಪ ಹೆಚ್ಚು ಕಡಿಮೆ ಆಗಿತ್ತು.ಅಪಾರ ಸಂಖ್ಯೆಯಲ್ಲಿ ಹರಿದು ಬಂದಿರುವ ಜನರು ಗೆ ಯಾವುದೇ ತೊಂದರೆ ಆಗದಂತೆ ವ್ಯವಸ್ಥೆ ಮಾಡಲಾಗಿತ್ತು. ಕೆ.ಬಜಾರಪ್ಪ ವರದಿಗಾರರು ಬಳ್ಳಾರಿ.


News 9 Today

Leave a Reply