*ಲೋಕೋಪಯೋಗಿ ಇಲಾಖೆ ಜಪ್ತ್ ,ಕಚೇರಿ ಸಾಮಾಗ್ರಿಗಳು ಎತ್ತಂಗಡಿ!!.* ಹೆದ್ದಾರಿ ಗೆ ಭೂಮಿ ಕಳೆದು ಕೊಂಡು ವರ್ಷಗಳು ಆಗಿದ್ದು “ಪೈಸ, ದಮ್ಮಡಿ” ನೋಡಿಲ್ಲ!!. ಬಳ್ಳಾರಿ(17) ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ ನಿಯಮಿತ 2008 ರಲ್ಲಿ ರಸ್ತೆ ಅಭಿವೃದ್ಧಿ ಮಾಡಲು ಸಂಗನಕಲ್ಲು ಎರ್ರಗುಡಿ ಮೋಕ ಗ್ರಾಮದ ರೈತರು ಭೂಮಿಯನ್ನು ತೆಗೆದು ಕೊಂಡಿದ್ದರು.
16ವರ್ಷಗಳ ದಿಂದ ನೂರಾರು ರೈತರು ನ್ಯಾಯಾಲಯದ ದಲ್ಲಿ ಹೋರಾಟ ಮಾಡುತ್ತಾ ಬಂದಿದ್ದಾರೆ.
ಸಚಿವರು ಗೆ ಶಾಸಕರು ಗೆ ಯಾಲ್ಲರ ಪಾದಗಳು ಗೆ ನಮಸ್ಕಾರ ಮಾಡಿದರು ಅವರ ಮನಸ್ಸು ಬದಲಿ ಆಗಲಿಲ್ಲ ರಾಜಕಾರಣಿಗಳ,ಸರ್ಕಾರ ದಿಂದ ನ್ಯಾಯ ಸಿಗಲಿಲ್ಲ.
ಕೊನಗೆ ನ್ಯಾಯಲಯವು ಸಂಬಂಧಿಸಿದ ಪಿ,ಡಬ್ಲ್ಯೂ,ಡಿ,ಇಲಾಖೆ ಯನ್ನು ಜಪ್ತ್ ಮಾಡುವಂತೆ ಜಿಲ್ಲಾ ನ್ಯಾಯಾಲಯ, ಆದೇಶ ನೀಡಿದ್ದಾರೆ.
ಶುಕ್ರವಾರ,ಕೋಟೆ ಪ್ರದೇಶದಲ್ಲಿ ಇರುವ ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಅಭಿಯಂತರ ಅವರ ಕಚೇರಿ ಯನ್ನು ಜಪ್ತ್ ಮಾಡಿದರು.
ಕಂಪ್ಯೂಟರ್ ,ಅಧಿಕಾರಿಗಳ ಕುರ್ಚಿ ಗಳು ಮುಂತಾದ ಸಾಮಾಗ್ರಿಗಳು ಟ್ರಾಕ್ಟರ್ ಮೂಲಕ ರೈತರು ನ್ಯಾಯಾಲಯಕ್ಕ ಶಿಫ್ಟ್ ಮಾಡಿದರು. ಹಸಿರು ಶಾಲ್ ಹಾಕಿಕೊಂಡು ಪ್ರಮಾಣ ಸ್ವೀಕಾರ ಮಾಡಿದ ಯಾಲ್ಲ ಸರ್ಕಾರ ಗಳು ಗೆ ಅವಮಾನ ಆಗಿದೆ.ಅಡಳಿತ ಅಧಿಕಾರಿಗಳ ಮಾನ ಮರ್ಯಾದೆ ಕೂಡ ಬೀದಿಗೆ ಬಂದಿದೆ. (ಕೆ.ಬಜಾರಪ್ಪ ವರದಿಗಾರರು ಕಲ್ಯಾಣ ಕರ್ನಾಟಕ.)