ಕಾನಿಪ ಸಂಘದ ಪತ್ರಕರ್ತರಿಗೆ ವಿಮೆ ಸೌಲಭ್ಯ, ಕಾರ್ಡ್ ಗಳ ವಿತರಣೆ
ಬಳ್ಳಾರಿ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಯಾಳ್ಪಿ ವಲಿಭಾಷಾ ಅವರು ನೀಡಿದ ಭರವಸೆಯಂತೆ ಶುಕ್ರವಾರ ಕಾನಿಪ ಸಂಘದ ಸದಸ್ಯರಿಗೆ ಅಂಚೆ ಇಲಾಖೆಯಡಿ ವಿಮೆ ಸೌಲಭ್ಯವನ್ನು ಕಲ್ಪಿಸಿ, ಕೊಟ್ಟ ಮಾತನ್ನು ಈಡೇರಿಸಿದರು. ಬಹುತೇಕ ಪತ್ರಕರ್ತರು ವಿಮೆ ಕಾರ್ಡ್ ಗಳನ್ನು ಮಾಡಿಸಿಕೊಳ್ಳುವ ಮೂಲಕ ಸಂತಸ ವ್ಯಕ್ತಪಡಿಸಿದರು. ಅಂಚೆ ಇಲಾಖೆ ಸಿಬ್ಬಂದಿಗಳಾದ ಎಸ್.ಎಂ.ಶಾಂತಾ ಅವರು ನಗರದ ಪತ್ರಿಕಾ ಭವನದಲ್ಲಿ ಪತ್ರಕರ್ತರ ಎಲ್ಲ ಮಾಹಿತಿಗಳನ್ನು ಪಡೆದು ಆನ್ ಲೈನ್ ಮೂಲಕ ವಿಮೆ ಸೌಲಭ್ಯವನ್ನು ಕಲ್ಪಿಸಿದರು. ಈ ಸಂದರ್ಭದಲ್ಲಿ ವಾರ್ತಾ ಇಲಾಖೆ ಹಿರಿಯ ಸಹಾಯಕ ನಿರ್ದೇಶಕರಾದ ಧನಂಜಯಪ್ಪ ಅವರು, ಕಾನಿಪ ಪತ್ರಕರ್ತರ ಸಂಘದ ಅದ್ಯಕ್ಷ ಯಾಳ್ಪಿ ವಲಿಭಾಷಾ ಅವರ ನೇತೃತ್ವದಲ್ಲಿ ಪತ್ರಕರ್ತರಿಗೆ ವಿಮೆ ಕಾರ್ಡ್ ಗಳನ್ನು ವಿತರಿಸಿದರು. ಈ ಸಂದರ್ಭದಲ್ಲಿ ಕಾನಿಪ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿ.ರವಿ, ಉಪಾಧ್ಯಕ್ಷರಾದ ಬಜಾರಪ್ಪ, ಮಲ್ಲಯ್ಯ, ಗುರುಶಾಂತ್, ಕಾರ್ಯದರ್ಶಿ ರಘುರಾಮ್, ಕಾರ್ಯಕಾರಿ ಸಮೀತಿ ಸದಸ್ಯರಾದ ಎಂ.ಜಂಬುನಾಥ್, ವೆಂಕಟೇಶ ದೇಸಾಯಿ, ಎಂ.ಇ.ಜೋಶಿ, ಶ್ರೀನಿವಾಸಲು, ಪಂಪನಗೌಡ, ಮಲ್ಲಿಕಾರ್ಜುನ ಸೇರಿದಂತೆ ಪತ್ರಕರ್ತರು ಉಪಸ್ಥಿತರಿದ್ದರು.