ಮಿರ್ಚಿ ಮಾರಾಟಕ್ಕೆ ತೆರಳಿದ ರೈತರು ರಸ್ತೆ ಅಪಘಾತ ದಲ್ಲಿ ಮೃತಿ.
ಬಳ್ಳಾರಿ (26) ಗಡಿಭಾಗದ ಅನಂತಪುರ ಜಿಲ್ಲೆ ರಾಮದುರ್ಗ ತಾಲ್ಲೂಕಿನ ಬೊಮ್ಮನಹಾಳು ಮಂಡಲ ಗೋವಿಂದವಾಡ ಗ್ರಾಮದ ರೈತರು ಆಶೋಕ್ ಲೈ ಲಾಂಡ್ ದೋಸ್ತ್ ವಾಹನ ka,34.c.5693.ವಾಹನದಲ್ಲಿ ಹಾವೇರಿ ಬ್ಯಾಡಗಿ ಮಾರುಕಟ್ಟೆ ಗೆ ಮಿರ್ಚಿ ಮಾರಟ ಮಾಡಲು ತೆರಳುವ ಸಮಯದಲ್ಲಿ ಭಾನುವಾರ ರಾತ್ರಿ ಬೆಳಿಗಿನ ಜಾವ 4.ಸಮಯದಲ್ಲಿ ರಾಂಪುರ ಹತ್ತಿರ ತಮ್ಮೆನಹಳ್ಲೀ ರಾಜಪೂರ ಬಳಿ,ಮುಂದೆ ಹೋಗುವ ಮತ್ತೊಂದು ವಾಹನ ಕ್ಕೆ ಹಿಂಬದಿ ದಿಂದ “ಡಿಕ್ಕಿ” ಹೊಡೆದ ಹಿನ್ನೆಲೆಯಲ್ಲಿ ದೋಸ್ತ್ ವಾಹನದಲ್ಲಿ ಕೂತು ಕೊಂಡಿದ್ದ, ರೈತರು (ಅಪಘಾತ ದಲ್ಲಿ )ದಾಸರಿ ಕೇಶಪ್ಪ,(34) ಬೋಯ ವಂಡ್ರಪ್ಪ (64,) ಇವರು ಸ್ಥಳದಲ್ಲಿ ಮೃತ ಪಟ್ಟಿದ್ದಾರೆ.
ಇನ್ನೊಬ್ಬರಿಗೆ ,ಡ್ರೈವರ್ ಗೆ ಗಾಯಗಳು ಆಗಿದ್ದು ಬಳ್ಳಾರಿ ವಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.ರಾಂಪುರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲೆ ಅಗಿದೆ. ಗಡಿ ಭಾಗದಲ್ಲಿ ಸೂಕ್ತ ಮಿರ್ಚಿ ಮಾರುಕಟ್ಟೆ ಇಲ್ಲದೆ ಇರುವ ಕಾರಣ, ಕರ್ನೂಲು ಅನಂತಪುರ ನಮ್ಮ ಕರ್ನಾಟಕದ ರೈತರು ಬ್ಯಾಡಗಿ ಮಾರುಕಟ್ಟೆ ಮೇಲೆ ಅವಲಂಬಿತವಾಗಿರುತ್ತಾರೆ. ಈಮಾರ್ಗದಲ್ಲಿ ಲೆಕ್ಕಕ್ಕೆ ಇಲ್ಲದಷ್ಟು ಅಪಘಾತ ಗಳು ಸಂಭವಿಸಿದ ರೈತರು ಮೃತಪಟ್ಟ ಇರುತ್ತಾರೆ. ಇದಕ್ಕೆ ಸರ್ಕಾರ ಗಳು ರಾಜಕಾರಣಿಗಳು ಜವಾಬ್ದಾರಿ ಆಗಿರುತ್ತಾರೆ.*ಕಷ್ಟ ಪಟ್ಟು ಬೀಳದ ರೈತರು ಮಾರುಕಟ್ಟೆ ಗೆ ಮಾರಾಟ ಮಾಡಿ ಬಂದಿರುವ ಹಣ ದಿಂದ ಸಾಲಸೂಲ ಕಟ್ಟಿಕೊಂಡು ಜೀವನವನ್ನು ಮಾಡೋವ ಕನಸು ಕತ್ತಲು ಅಗಿದೆ.* (ಕೆ.ಬಜಾರಪ್ಪ ವರದಿಗಾರರು ಬಳ್ಳಾರಿ.)