ಬಳ್ಳಾರಿ ಮಹಾನಗರ ಪಾಲಿಕೆ ಮೇಯರ್ ಸ್ಥಾನ ಎಡಗೈ ಸಮುದಾಯಕ್ಕೆ ಸ್ಥಾನ ನೀಡಲು ಕರ್ನಾಟಕ ರಾಜ್ಯ ಶ್ರೀ ಮಾದರ ಸಂಘದಿಂದ ಒತ್ತಾಯ
ಬಳ್ಳಾರಿ ಮಾ,28,
ಮಹಾನಗರ ಪಾಲಿಕೆ ಸ್ಥಾನ ಪರಿಶಿಷ್ಟ ಜಾತಿ ಸಮುದಾಯಕ್ಕೆ ಮೀಸಲು ಆಗಿರುವುದರಿಂದ ಶ್ರೀಮತಿ ಉಮಾದೇವಿ ಶಿವರಾಜ, ಮಹಾನಗರ ಪಾಲಿಕೆ ಸದಸ್ಯರು 7ನೇ ವಾರ್ಡ್, ಬಾಪೂಜಿನಗರ ಇವರು ಎಡಗೈ ಸಮುದಾಯದ (ಮಾದಿಗ ಸೇರಿದ ಏಕಾಂಗಿ ಮಹಿಳೆಯಾಗಿರುತ್ತಾರೆ.
ಆದ್ದರಿಂದ ಕಾಂಗ್ರೆಸ್ ಪಕ್ಷವು ಇದುವರೆಗೆ ಮಾದಿಗ ಸಮುದಾಯದವರನ್ನು ಮೇಯರ್ ಸ್ಥಾನ ನೀಡಿರುವುದಿಲ್ಲ. ಆದರೆ ಬೇರೆ ಪರಿಶಿಷ್ಟ ಜಾತಿಯೊಳಗೆ ಬಲಗೈ ಸಮುದಾಯ ಹಾಗೂ ಭೋವಿ ಸಮುದಾಯ, ಭಂಜಾರ ಸಮುದಾಯಕ್ಕೆ ಈಗಾಗಲೇ ನೀಡಿದ್ದು, ಈಗ ಮಾದಿಗ ಸಮುದಾಯ ಶ್ರೀಮತಿ ಉಮಾದೇವಿ ಇವರನ್ನು ಮಹಾಪೌರರನ್ನಾಗಿ ಕಾಂಗ್ರೆಸ್ ಪಕ್ಷವು ಆಯ್ಕೆ ಮಾಡಬೇಕೆಂದು ಈ ಮೂಲಕ ಪತ್ರಿಕಾ ಪ್ರಕಟಣೆಯ ಮೂಲಕ ಒತ್ತಾಯಿಸುತ್ತಿದ್ದೇವೆ.
ಒಂದು ವೇಳೆ ಆಯ್ಕೆ ಮಾಡದೇ ಇದ್ದ ಪಕ್ಷದಲ್ಲಿ ಬಳ್ಳಾರಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 40-50 ಸಾವಿರ ಮಾದಿಗ ಸಮುದಾಯ ಮತದಾರರಿದ್ದು, ಯಾರೇ ಶಾಸಕರಾಗಲು ನಿರ್ಣಯಕ ಪಾತ್ರವನ್ನು ವಹಿಸುವುದರಿಂದ ಮುಂದಿನ ಚುನಾವಣೆಯಲ್ಲಿ ಪರಿಣಾಮ ಬೀರುವುದನ್ನು ತಪ್ಪಿಸಲು ಹಗರಿಬೊಮ್ಮನಹಳ್ಳಿ-ಹಡಗಲಿ ಕ್ಷೇತ್ರದಲ್ಲಿ ಲಂಬಾಣಿ ಸಮುದಾಯಕ್ಕೆ 2 ಕ್ಷೇತ್ರದಲ್ಲಿ ಸ್ಥಾನ ನೀಡಿರುವುದರಿಂದ ಬಹು ಸಂಖ್ಯಾಂತರಾದ ಮಾದಿಗರಿಗೆ ಅನ್ಯಾಯವಾಗಿದೆ. ಇದರಿಂದಾಗಿ ಮೇಯರ್ ಸ್ಥಾನವನ್ನು ನೀಡುವುದರ ಮೂಲಕ ನಮ್ಮ ಸಮುದಾಯಕ್ಕೆ ಬೆಂಬಲ ನೀಡಬೇಕೆಂದು ಕರ್ನಾಟಕ ಈ ಸುದ್ದಿ ಗೋಷ್ಠಿಯಲ್ಲಿ ರಾಜ್ಯ ಶ್ರೀ ಮಾದರ ಚನ್ನಯ್ಯ ಸಂಘದ ರಾಜ್ಯದಕ್ಷರ ಎಚ್, ಹನುಮೇಶ್, ಚಿದಾನಂದ ದುರುಗಪ್ಪ, ಸಿದ್ದೇಶ್, ಗುರುರಾಜ್, ಪೃಥ್ವಿರಾಜು ಹಾಗೂ ದಲಿತ ಮುಖಂಡರು ಇದ್ದರು, (ಕೆ.ಬಜಾರಪ್ಪ ವರದಿಗಾರರು.ಕಲ್ಯಾಣ ಕರ್ನಾಟಕ.)