This is the title of the web page
This is the title of the web page

Please assign a menu to the primary menu location under menu

State

ವಿವಿಧ ಪಕ್ಷಗಳನ್ನು ತೊರೆದು ಹರಿದು ಬರುತ್ತಿರುವ ಕಾರ್ಯಕರ್ತರು ಗ್ರಾಮೀಣ ಶಾಸಕ ಬಿ.ನಾಗೇಂದ್ರ ಅವರ ನೇತೃತ್ವದಲ್ಲಿ ಕಾಂಗ್ರೆಸ್ ಸೇರ್ಪಡೆ.*

ವಿವಿಧ ಪಕ್ಷಗಳನ್ನು ತೊರೆದು ಹರಿದು ಬರುತ್ತಿರುವ ಕಾರ್ಯಕರ್ತರು ಗ್ರಾಮೀಣ ಶಾಸಕ ಬಿ.ನಾಗೇಂದ್ರ ಅವರ ನೇತೃತ್ವದಲ್ಲಿ ಕಾಂಗ್ರೆಸ್ ಸೇರ್ಪಡೆ.*

*ವಿವಿಧ ಪಕ್ಷಗಳನ್ನು ತೊರೆದು ಹರಿದು ಬರುತ್ತಿರುವ ಕಾರ್ಯಕರ್ತರು ಗ್ರಾಮೀಣ ಶಾಸಕ ಬಿ.ನಾಗೇಂದ್ರ ಅವರ ನೇತೃತ್ವದಲ್ಲಿ ಕಾಂಗ್ರೆಸ್ ಸೇರ್ಪಡೆ.*

*ಬಳ್ಳಾರಿ: ನಗರದ 33ನೇ ವಾರ್ಡ್ ವಿನಾಯಕ ನಗರ ಪ್ರದೇಶದ 300ಕ್ಕೂ ಹೆಚ್ಚು ಜನರು ವಿವಿಧ ಪಕ್ಷಗಳನ್ನು ತೊರೆದು ಗ್ರಾಮೀಣ ಶಾಸಕ ಬಿ.ನಾಗೇಂದ್ರ ಅವರ ನೇತೃತ್ವದಲ್ಲಿ ಭಾನುವಾರ ಕಾಂಗ್ರೆಸ್ ಸೇರ್ಪಡೆಯಾದರು.*

*ವಿನಾಯಕ ನಗರ ಬಡಾವಣೆಯ ಹಿರೀಯರು, ಯುವಕರು, ಮಹಿಳೆಯರು ಸೇರಿದಂತೆ 300ಕ್ಕೂ ಹೆಚ್ಚು ಜನರು ಕಾಂಗ್ರೆಸ್ ಸೇರ್ಪಡೆಯಾದರು. ಶಾಸಕ ಬಿ.ನಾಗೇಂದ್ರ ಅವರು ಎಲ್ಲರನ್ನೂ ಪಕ್ಷಕ್ಕೆ ಬರಮಾಡಿಕೊಂಡರು. ನಂತರ ಮಾತನಾಡಿದ ಅವರು, ವಿನಾಯಕ ನಗರ ಬಡಾವಣೆಯ ಜನರು, ಅಭಿಮಾನಿಗಳು ನಮ್ಮ‌ ಮೇಲೆ ಹಾಗೂ ಪಕ್ಷದ ಮೇಲೆ‌ ವಿಶ್ವಾಸವಿಟ್ಟು ನಾನಾ ಪಕ್ಷಗಳನ್ನು ತೊರೆದು 300ಕ್ಕೂ ಹೆಚ್ಚು‌ಜನರು ಕಾಂಗ್ರೆಸ್ ಸೆರ್ಪಡೆಯಾಗಿರುವುದು ಸಂತಸ ಮೂಡಿಸಿದೆ. ಈ ಭಾಗದಲ್ಲಿ ನಮಗೆ ಇನ್ನಷ್ಟು ಶಕ್ತಿ ಬಂದಂತಾಗಿದೆ. ಸಕಲ ಕಷ್ಟಗಳನ್ನು ನಿವಾರಿಸುವ ವಿನಾಯಕನ ಹೆಸರಿಟ್ಟುಕೊಂಡ ವಿನಾಯಕ ನಗರದ ಜನರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದು, ಮತ್ತಷ್ಟು ಶಕ್ತಿ ಬಂದಂತಾಗಿದೆ. ಅಭಿವೃದ್ಧಿ ನಿರೀಕ್ಷಿಸಿ ಪ್ರತಿಯೋಬ್ಬರೂ ಕಾಂಗ್ರೆಸ್ ಬೆಂಬಲಿಸಿ ಆರ್ಶಿವಾದಿಸಿ, ಅವದಿಯಲ್ಲಿ ಕ್ಷೇತ್ರದ ಅಭಿವೃದ್ಧಿಯೇ ಬದಲಾಗಲಿದೆ. ಎಲ್ಲರಂತೆ ಸುಳ್ಳು ಹೇಳುವ ಜಾಯಮಾನ ನನ್ನದಲ್ಲ, ಮಾತುಕೊಟ್ಟರೆ ಹಿಂಜರಿಯುವ ಮಾತೇ ಇಲ್ಲ, ಬಿಜೆಪಿ ಸೇರಿದಂತೆ ಇತರೇ ಪಕ್ಷದವರ ಸುಳ್ಳು ಭರವಸೆಗಳಿಗೆ, ನಾನಾ ಅಮೀಷಗಳಿಗೆ ಜನರು ಮರುಳಾಗದೇ ಅಭಿವೃದ್ಧಿ ನಿರೀಕ್ಷಿಸಿ ಪ್ರತಿಯೋಬ್ಬರೂ ಕಾಂಗ್ರೆಸ್ ಬೆಂಬಲಿಸಿ, ನಿಮ್ಮೊಂದಿಗೆ ನಾನಿರುವೆ, ಅವದಿಯಲ್ಲಿ ಕ್ಷೇತ್ರದ ಅಭಿವೃದ್ಧಿ ಚಿತ್ರಣವೇ ಬದಲಾಗಲಿದೆ, ಇದು ಭರವಸೆಯಲ್ಲ ನುಡಿದಂತೆ ನಡೆಯುವೆ ಎಂದು ತಿಳಿಸಿದರು.*

*ಈ ಸಂದರ್ಭದಲ್ಲಿ ಬಡಾವಣೆಯ ಪ್ರಮುಖರು, ಶಾಸಕರ‌ ಬೆಂಬಲಿಗರು ಸೇರಿದಂತೆ ಕಾಂಗ್ರೆಸ್ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.* ಕೆ.ಬಜಾರಪ್ಪ ಚೀಫ್ ಬ್ಯೂರೋ. ಕಲ್ಯಾಣ ಕರ್ನಾಟಕ.


News 9 Today

Leave a Reply