ಕಾಂಗ್ರೆಸ್ ನಡೆ ಕೋಟಿ ಕೋಟಿ ಶೂರರ ಕಡೆ!!
ಬಳ್ಳಾರಿ: ಶ್ರೀ ಲಕ್ಷ್ಮಿ ಇದ್ದರೆ ಮಾತ್ರವೇ ಬಳ್ಳಾರಿ ಟಿಕೆಟ್ ಸಿಗುತ್ತದೆ.
ಕಷ್ಟಪಟ್ಟ ನಾಯಕರಿಗೆ ಪುಟ್ಟುಗೊಸಿ ಮಾತ್ರವೇ!
ಬಳ್ಳಾರಿ ಕಾಂಗ್ರೆಸ್ ಟಿಕೆಟ್ ತುಂಬಾ ದುಬಾರಿ ಬೆಲೆಗೆ ಮಾರಾಟ ಆಗುತ್ತದೆ ಅನ್ನುವ ವಾಸನೆ ಬೀದಿ ಬದಿಯಲ್ಲಿ ಕೇಳಿ ಬರುತ್ತಿದೆ.
ಕಷ್ಟಪಟ್ಟ ನಾಯಕರ ಪಟ್ಟಿಯಲ್ಲಿ ಪಕ್ಷಕ್ಕೆ ದುಡಿದ, ದಬ್ಬಾಳಿಕೆ ದೌರ್ಜನ್ಯ ಗಳ ಸಮಯದಲ್ಲಿ ನಿಂತು ಹೋರಾಟ ಮಾಡಿದ ನಿಷ್ಠಾವಂತ ಕಾರ್ಯಕರ್ತರ ಪಟ್ಟಿಯಲ್ಲಿ ಇರುವ ಜೆ.ಎಸ್ ಅಂಜನೇಯುಲು ಅಂತಹ ಅಭ್ಯರ್ಥಿಗೆ ಪಕ್ಷ ಟಿಕೆಟ್ ನೀಡಿಲ್ಲ ಅಂದರೆ ಕಾಂಗ್ರೆಸ್ ಪಕ್ಷದ ಸಂಸ್ಕೃತಿ ಸಣ್ಣ ಮಕ್ಕಳಿಗೂ ಕೂಡ ಅರ್ಥವಾಗುವ ರೀತಿಯಲ್ಲಿ ಇದೆ.
ಬಳ್ಳಾರಿ ಇತಿಹಾಸದದಲ್ಲಿ ಕಾಂಗ್ರೆಸ್ ಅಂದರೆ ದಿವಾಕರ ಬಾಬು, ಅಲ್ಲಂ, ಕೆ.ಸಿ. ಕೊಂಡಯ್ಯ, ಸೂರ್ಯನಾರಾಯಣ ರೆಡ್ಡಿ, ಅನಿಲ್ ಲಾಡ್, ಸಂತೋಷ ಲಾಡ್ ಇವರಿಗೆ ಮಾತ್ರವೇ ಸೀಮಿತವಾಗಿದೆ. ಇವರು ಎಲ್ಲರೂ ಶ್ರೀಮಂತರ ಪಟ್ಟಿಯಲ್ಲಿ ಮೊದಲನೆಯ ಸ್ಥಾನದಲ್ಲಿದ್ದಾರೆ.
ಆದರೆ ಇವರು ಹಾಯ್, ಬಾಯ್, ಲೀಡರ್’ಗಳು, ಮಾಸ್ ಅಂದರೆ ದಿವಾಕರ ಬಾಬು, ಸಾಫ್ಟ್ ಅಂದರೆ ಅಲ್ಲಂ, ಸೈಲೆಂಟ್ ಅಂದರೆ ಸ್ಲೋ ಕೆ.ಸಿ. ಕೊಂಡಯ್ಯ ಇದ್ದಲ್ಲಯೇ ರಾಜಕೀಯ ತಂತ್ರಗಾರಿಕೆ ಮಾಡುವ, ಗ್ರಾಮೀಣ ಕ್ಷೇತ್ರಗಳಲ್ಲಿ ಹಿಡಿತ ಹೊಂದಿರುವ ಸೂರ್ಯನಾರಾಯಣ ರೆಡ್ಡಿಯವರು. ಕಾಂಗ್ರೆಸ್ ಪಕ್ಷ ಕೂಡ ನಿಷ್ಟೆಗೆ, ಭಕ್ತಿಗೆ ಗೌರವ ಕೊಡುವ ಸಂಪ್ರದಾಯವೇ ಇಲ್ಲವೇ ಇಲ್ಲ. ಅದರಿಂದಾಗಿ ಕಾಂಗ್ರೆಸ್ ಕೋಟೆಯಲ್ಲಿ ರೆಡ್ಡಿಗಳು ದರ್ಬಾರ್ ನಡೆದು ಹೋಯಿತು.
ಅದಕ್ಕೆ ನೂರಾರು ಕಾರಣಗಳು, ಅಂದಿನಿಂದ ಇಂದಿನವರೆಗೆ ಕಾಂಗ್ರೆಸ್ ಪಕ್ಷದಲ್ಲಿ ದುಡಿದ ಮತ್ತು ದೊಡ್ಡನಾಯಕ ಡಿಕೆಶಿ ಆಪ್ತಮಿತ್ರ ಅನ್ನುವ ಆಂಜನೇಯುಲುಗೆ ಈ ಬಾರಿ ವಿಧಾನಸಭೆ ಚುನಾವಣೆ ಟಿಕೆಟ್ ಖಚಿತ ಅನ್ನುವ ಸಂದೇಶ ಈ ಹಿಂದೆ ರವಾನೆ ಆಗಿತ್ತು.
ಆರ್ಥಿಕವಾಗಿ ಸ್ವಲ್ಪ ಹೆಚ್ಚು ಕಡಿಮೆ ಇದ್ದರು ಕಾಂಗ್ರೆಸ್ ಟಿಕೆಟ್ ಕೊಟ್ಟರೆ ಚುನಾವಣೆ ವೆಚ್ಚದಲ್ಲಿ ಕಡಿಮೆ ಆಗದಂತೆ ನೋಡಿ ಕೊಳ್ಳುವ ಸಾಮರ್ಥ್ಯವನ್ನು ಹೊಂದಿದ್ದಾರೆ ಎನ್ನುವ ಸಂದೇಶ ರವಾನೆ ಮಾಡಿದ್ದರು.
ಕಾಂಗ್ರೆಸ್ ಪಕ್ಷದಲ್ಲಿ ಸಿದ್ಧಾಂತಗಳು ಇದ್ದರೆ ಆಂಜನೇಯಲುಗೆ ಟಿಕೆಟ್ ಕೊಟ್ಟು ಗೆಲ್ಲಿಸುವ ಪ್ರಯತ್ನ ಮಾಡಬಹುದು ಆಗಿತ್ತು.
ಶ್ರೀಮಂತರು ದುಬಾರಿ ಖರ್ಚು ಮಾಡುವ ಸಾಮರ್ಥ್ಯ ಇರುವ ನಾಯಕರಿಗೆ ರಾಜ್ಯದಲ್ಲಿ ಎಲ್ಲಿ ಬೇಕಾದರು ಟಿಕೆಟ್ ಕೊಡಬಹುದು ಸ್ಪರ್ಧೆ ಮಾಡಬಹುದು.
ಬಳ್ಳಾರಿಯಿಂದಲೇ ಯಾಕೆ ಸ್ಪರ್ಧೆ ಮಾಡಬೇಕು ಎನ್ನುವ ಪ್ರಶ್ನೆಗಳು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತದೆ.
ಬಳ್ಳಾರಿ ಟಿಕೆಟ್ ಕೊಟ್ಟರೆ ಮೂರು ಕ್ಷೇತ್ರಗಳ ಕಾಂಗ್ರೆಸ್ ಅಭ್ಯರ್ಥಿಗಳು ಗೆಲ್ಲುತ್ತಾರೆ ಎಂಬ ಆಲೋಚನೆಗಳು ಅಪಾಯ ಮಟ್ಟದ ವಿಚಾರಗಳಾಗಿವೆ.
ನಾಳೆ ಅವರ ಬೇಡಿಕೆಗಳು ಹೈ ಕಮಾಂಡ್ ಗೆ ತಲೆ ನೋವು ಆಗಬಹುದು.
ನಾರಾ ಭರತ್ ರೆಡ್ಡಿಗೆ ಟಿಕೆಟ್ ನೀಡುವ ವಿಚಾರ ಗೊಂದಲವನ್ನು ಸೃಷ್ಟಿ ಮಾಡಿದೆ.
ಕಾಂಗ್ರೆಸ್ ಪಕ್ಷದ ನಾರಾ ಸೂರ್ಯನಾರಾಯಣ ರೆಡ್ಡಿ ತಂದೆ ನಂತರ ಭರತ್ ಚಿಕ್ಕ ವಯಸ್ಸಿನಲ್ಲಿ ಟಿಕೆಟ್ ಬಯಸಿದ್ದಾರೆ.
ಪಕ್ಷದಲ್ಲಿ ಕೂಡ ಭರತ್ ಇನ್ನೂ ಸೇವೆ ಮಾಡಬೇಕು ಆಗಿತ್ತು ಎಂದು ಹಿರಿಯರ ವಾದವಾಗಿದೆ.
*ಇದನ್ನು ನೋಡಿದರೆ ಕಾಂಗ್ರೆಸ್ ನೆಡೆ ಕೋಟಿ ಕೋಟಿ ಕಡೆ ಇರುವ ಅನ್ನುವ ಲೆಕ್ಕಾಚಾರದಲ್ಲಿ ಇದೆ ಎಂಬ ಅನುಮಾನು ಮೂಡುತ್ತಿವೆ.*
ಈಗಾಗಲೇ ಬಳ್ಳಾರಿ ಕಾಂಗ್ರೆಸ್ ಚುನಾವಣೆ ಪ್ರಚಾರದಲ್ಲಿ ಜೀರೋ ಇದೆ. ಬಳ್ಳಾರಿ ಕಾಂಗ್ರೆಸ್’ನಲ್ಲಿ ಕೂಡ ಅಸಮಾಧಾನದ ಬೆಂಕಿ ಇದೆ. ಪಕ್ಷದ ಗುರಿ ಗೆಲ್ಲುವ ಕಡೆ ಇರುತ್ತದೆ. ಒಮ್ಮೆ ರಾಂಗ್ ರೂಟ್ ಮಾಡಿದರೆ ತದನಂತರ ಪಶ್ಚಾತ್ತಾಪ ಪಡಬೇಕಾತ್ತದೆ. ಆಗಲೇ ರಾಜಕೀಯ ಲೆಕ್ಕಾಚಾರಗಳು ಮರ್ಮವಾಗಿ ಇರುತ್ತವೆ.
ಪಕ್ಷ ಟಿಕೆಟ್ ಯಾರಿಗೆ ನೀಡಲಿ, ಅಭ್ಯರ್ಥಿಯನ್ನು ಗೆಲ್ಲಿಸುವ ಪ್ರಯತ್ನ ಮಾಡಬೇಕಾತ್ತದೆ ಎಂದು ಕಾರ್ಯಕರ್ತರ ಮನೋಭಾವ ಕೂಡ ಇದೆ.
ಭರತ್ ಟಿಕೆಟ್ ಬಳ್ಳಾರಿ ಕಾಂಗ್ರೆಸ್ ಪಕ್ಷವನ್ನು ಯಾವ ದಿಕ್ಕಿಗೆ ಪ್ರಯಾಣ ಮೂಡಿಸುತ್ತದೆ ಅನ್ನುವುದು ಸದ್ಯ ಯಕ್ಷಯಾಗಿದ್ದು, ಕಾದ ನೋಡಬೇಕಾಗಿದೆ.
(ಕೆ.ಬಜಾರಪ್ಪ, ವರದಿಗಾರರು ಕಲ್ಯಾಣ ಕರ್ನಾಟಕ)