*ಪಾಲಿಕೆ ಚುನಾವಣೆಯಲ್ಲಿ ಪಕ್ಷ ಸೋಲಿಸಲು ಕುತಂತ್ರ ಮಾಡಿದವರಗೆ ಟಿಕೆಟ್ ನೀಡಲಿದೇಯ ಕಾಂಗ್ರೆಸ್??*
*ಇತರೆ ಪಕ್ಷದ ಮುಖಂಡರು ಸೇರ್ಪಡೆಯಿಂದ ಕೆಆರ್’ಪಿಪಿಗೆ ಮತ್ತಷ್ಟು ಶಕ್ತಿ*
*ಬಿಜೆಪಿ,ಕಾಂಗ್ರೆಸ್ ಪಕ್ಷಗಳಿಗೆ ನಡಕು ಶುರು*
ಬಳ್ಳಾರಿ : ರಾಜ್ಯ ರಾಜಕಾರಣದಲ್ಲಿ ತನ್ನದೇ ಆದ ಪ್ರತಿಷ್ಠೆ ಹೊಂದಿರುವ ಬಳ್ಳಾರಿ ನಗರ ರಾಜಕೀಯ ಮತ್ತಷ್ಟು ರಂಗೇರಿದ್ದು, ಸದಾ ಒಂದಲ್ಲ ಒಂದು ಸದ್ದು ಮಾಡುತ್ತಲೇ ಇರುತ್ತದೆ. ಸದ್ಯ ಬಳ್ಳಾರಿ ನಗರದಲ್ಲಿ ಪಕ್ಷಾಂತರ ಪರ್ವ ಆರಂಭಗೊಂಡಿದ್ದು ರಾಜಕೀಯ ಪಕ್ಷಗಳ ತಲೆ ಬಿಸಿಯಾಗಿದೆ.
ಈಗಾಗಲೇ ನೂತನವಾಗಿ ಸ್ಥಾಪಿಸಿರುವ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿಯವರ ಕೆ.ಆರ್.ಪಿ.ಪಿ. ಪಕ್ಷಕ್ಕೆ ಕಾಂಗ್ರೆಸ್ ಪಕ್ಷದ ಮಾಜಿ ಮೇಯರ್ ಹಾಗೂ ಬಳ್ಳಾರಿ ನಗರ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ವೆಂಕಟರಮಣ ಸೇರಿದ ಅವರ ಬೆಂಬಲಿಗರಾದ ಮಾಜಿ ಪಾಲಿಕೆ ಸದಸ್ಯರಾದ ಮರಿದೇವಯ್ಯ, ಶಶಾಬ್, ರಾಮುಡು ಭಾನುವಾರ ನೂರಾರು ಕಾರ್ಯಕರ್ತರ ಜೊತೆಯಲ್ಲಿ ಕೆಆರ್’ಪಿಪಿ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಯಾದರು.
ಬಳ್ಳಾರಿ ನಗರದ ವಿದ್ಯಾ ನಗರದಲ್ಲಿರುವ ವೆಂಕಟರಮಣ ಅವರ ಮನೆ ಆವರಣದಲ್ಲಿ ಬೃಹತ್ ವೇದಿಕೆ ಕಾರ್ಯಕ್ರಮದಲ್ಲಿ ಸೇರ್ಪಡೆಗೊಂಡು.
ಈ ವೇಳೆ ಮಾತನಾಡಿದ ವೆಂಕಟರಮಣ ಅವರು, ಕಾಂಗ್ರೆಸ್ ಪಕ್ಷದಲ್ಲಿ ಸಿದ್ದಾಂತಗಳು ಸರ್ವನಾಶ ಅಗಿದೆ.
ಪಾಲಿಕೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಸೋಲಿಸುವ ಪ್ರಯತ್ನ ಮಾಡಿದ ನಾಯಕರಿಗೆ ಪಕ್ಷದಲ್ಲಿ ಗೌರವ ಇದೆ.
ಕೋಟಿ, ಕೋಟಿ ಹಣ ಇದ್ದರೆ ಮಾತ್ರ ಕಾಂಗ್ರೆಸ್ ಪಕ್ಷದ ಟಿಕೆಟ್ ಸಿಗುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿರುವ ಅವರು ನಮ್ಮಂತ ನಿಷ್ಠಾವಂತರಿಗೆ ಪಕ್ಷದಲ್ಲಿ ಉಳಿಗಾಳವಿಲ್ಲ ಎಂದಿದ್ದಾರೆ.
ಈ ಸಂದರ್ಭದಲ್ಲಿ ಗಾಲಿ ಲಕ್ಷ್ಮಿ ಅರುಣಾ (ಅಭ್ಯರ್ಥಿ), ಶ್ರೀನಿವಾಸರೆಡ್ಡಿ, ಪರಮೇಶ್ವರರೆಡ್ಡಿ, ಶಿವರೆಡ್ಡಿ, ಖುದ್ದೂಸಾಬ್, ಅಲಿಖಾನ್, ಉಮರಾಜ್, ಹಂಪಿ ರಮಣಾ, ಪರ್ವಿನ್ ಭಾನ್, ರಾಜಶೇಖರ ಗೌಡ, ಅಸುಂಡಿ ಸೂರಿ ಸೇರಿದಂತೆ ಮುಂತಾದ ನಾಯಕರು ಇದ್ದರು.
ಈಗಾಗಲೇ ಕಾಂಗ್ರೆಸ್ ಟಿಕೆಟ್ ಕೋಟಿ, ಕೋಟಿ ಇರುವ ನಾಯಕರಿಗೆ ನೀಡಲಿದೆ ಎಂಬ ಲೆಕ್ಕಾಚಾರದ ಮಾಹಿತಿ ಪಡೆದ ಮಾಜಿ ಮೇಯರ್ ವೆಂಕಟರಮಣ ಅವರು ಇಂತಹ ನಾಯಕರಗಳ ನಾಯಕತ್ವದ ಪಕ್ಷದಲ್ಲಿ ಇರಲು ಸಾಧ್ಯವಿಲ್ಲ ಎನ್ನುವ ಸಂದೇಶ ರವಾನೆ ಮಾಡಿದ್ದಾರೆ.
ಪಕ್ಷದಲ್ಲಿ ಸಾಮಾನ್ಯ ಕಾರ್ಯಕರ್ತನಾಗಿ ದುಡಿದವರಿಗೆ ಮಾನ್ಯತೆ ಇಲ್ಲದೇ, ಕೇವಲ ದುಡ್ಡಿನ ಮೇಲೆ ಕಾಂಗ್ರೆಸ್ ಟಿಕೆಟ್ ಹಂಚಿಕೆಯಾಗುತ್ತಿರುವುದು ಸಾಮಾನ್ಯ ಕಾರ್ಯಕರ್ತರಿಗೆ ಬೇಸರ ತರಿಸಿದೆ.
ಬಳ್ಳಾರಿಯಲ್ಲಿ ಪ್ರಬಲ ಸಮುದಾಯ ಎಂದರೆ ಕಮ್ಮ ಸಮಾಜ, ಅವರು ರಾಜಕೀಯದಲ್ಲಿ ಶಕ್ತಿ ಸಾಮರ್ಥ್ಯ ಹೊಂದಿರುವ ನಾಯಕರು ಇದ್ದಾರೆ. ಈಗಾಗಲೇ ಮೂಲೆ ಗುಂಪು ಆಗುವ ದಿನಮಾನಗಳು ಕಾಣುತ್ತವೆ.
ಕಾಂಗ್ರೆಸ್ ಟಿಕೆಟ್ ಗೊಂದಲ ದಿಂದ ಬಹುತೇಕ ಕಾರ್ಯಕರ್ತರು ಇತರೆ ಪಕ್ಷಗಳಿಗೆ ವಲಸೆ ಹೋಗುವ ಸಾಧ್ಯತೆಗಳು ದಟ್ಟವಾಗಿವೆ.
ಬಳ್ಳಾರಿ ನಗರದಲ್ಲಿ ಕಾಂಗ್ರೆಸ್ ಪಕ್ಷ ಸಂಪೂರ್ಣವಾಗಿ ಅಡ್ರೆಸ್ ಇಲ್ಲದಂತೆ ಆಗುವ ಸಾಧ್ಯತೆಯಿದೆ ಎಂದು ಕೇಳಿಬರುತ್ತದೆ.
ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷದ ನಾಯಕರು ಈಗಾಗಲೇ ಕೆ.ಆರ್.ಪಿ.ಪಿ ಪಕ್ಷದ ಬಾಗಿಲು ತಟ್ಟುತ್ತಿದ್ದಾರೆ.
ಇದರಿಂದ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳ ದಿಂದ ಸ್ಪರ್ಧಿಸುವ ವ್ಯಕ್ತಿಗಳಿಗೆ ನಡುಕು ಹುಟ್ಟಿದೆ ಎಂದರೆ ಸುಳ್ಳಲ್ಲ.
(ಕೆ.ಬಜಾರಪ್ಪ ವರದಿಗಾರರು ಬಳ್ಳಾರಿ.)