This is the title of the web page
This is the title of the web page

Please assign a menu to the primary menu location under menu

State

ಬಳ್ಳಾರಿ ನಗರಕ್ಕೆ ಬುಲ್ಲೋಡು ಯಾರು?

ಬಳ್ಳಾರಿ ನಗರಕ್ಕೆ ಬುಲ್ಲೋಡು ಯಾರು?

*ಬಳ್ಳಾರಿ ನಗರಕ್ಕೆ ಬುಲ್ಲೋಡು ಯಾರು?*

*ಜೆ.ಎಸ್ ಅಂಜನೇಯಲು V/S ನಾರಾ ಭರತ್ ರೆಡ್ಡಿ*

*ಟಿಕೆಟ್ ಘೋಷಣೆಗೆ ಕಾಯಬೇಕಿದೆ ಇನ್ನೂ ಎರಡು ದಿನ*ಕಾಂಗ್ರೆಸ್ ಪಕ್ಷ ಆಡಳಿತಕ್ಕೆ ಬಂದರೆ ಬಳ್ಳಾರಿ ಜಿಲ್ಲೆಯ ಕಾರ್ಯಕರ್ತರಿಗೆ ಪ್ರಾಧಾನ್ಯತೆ ದೊರೆಯುತ್ತದೆ,ಡಿಕೆಸಿ.*

ಬಳ್ಳಾರಿ (11)ಕಾಂಗ್ರೆಸ್ ಟಿಕೆಟ್ ಇನ್ನೂ ಎರಡು ದಿನಗಳು ಕಾಯಬೇಕಾಗಿದೆ. ದುಬಾರಿ ಚುನಾವಣೆ ಎನ್ನುವ ಲೆಕ್ಕಾಚಾರದಲ್ಲಿ ಕಾಂಗ್ರೆಸ್ ಸೂಕ್ತ ಅಭ್ಯರ್ಥಿ ಯನ್ನು ಕಣಕ್ಕೆ ಇಳಿಸುತ್ತಿದೆ.

ಮೊನ್ನೆ ಮಾಜಿ ಮೇಯರ್ ವೆಂಕಟರಮಣ ಕಾಂಗ್ರೆಸ್ ಪಕ್ಷ ತೊರೆದು ಕೆಆರ್ ಪಿಪಿ ಪಕ್ಷಕ್ಕೆ ಸೇರ್ಪಡೆಗೊಂಡ ಸಮಯದಲ್ಲಿ ಅವರು ಮಾತನಾಡಿದ ಮಾತುಗಳು ಕಷ್ಟಪಟ್ಟ ನಾಯಕರಿಗೆ, ಕಾರ್ಯಕರ್ತರಿಗೆ ಬೆಲೆ ಇಲ್ಲವೆ.?

ಹಣ ಒಂದು ಇದ್ದರೆ ಸಾಕು ಎನ್ನುವ ಮಾನದಂಡಗಳು ಕಂಡುಬರುತ್ತವೆ ಎಂದು ಬೇಸರಗೊಂಡ ಅವರು ಪಕ್ಷಕ್ಕೆ ಗುಡ್ ಬೈ ಹೇಳಿದ್ದರೆ.

ಪ್ರಸ್ತುತ ರಾಜಕೀಯ ವಿದ್ಯಮಾನಗಳು ಕೂಡ ದುಬಾರಿ ಚುನಾವಣೆಗಳಾಗಿ ಮಾರ್ಪಟ್ಟಿವೆ.

ಇತರೆ ಪಕ್ಷಗಳಿಗೆ ಟಕ್ಕರ್ ಕೊಡಬೇಕು ಅಂದರೆ •ಶೀಲಕ್ಷ್ಮಿ ದೊಡ್ಡ ಮಟ್ಟದಲ್ಲಿ ಬೇಕಾಗುತ್ತದೆ.

ಇದರಲ್ಲಿ ಲಾಬಿ ಮಾಡುವ ನಾಯಕರ ವ್ಯಾಪಾರ ಕೂಡಾ ಜೋರಾಗಿ ಇರುತ್ತದೆ.

ಒಮ್ಮೆ ಚುನಾವಣೆಯಲ್ಲಿ ಹೆಚ್ಚು ಕಡಿಮೆ ಆದರೆ ಕೆಲ ವರ್ಷಗಳ ಪಕ್ಷ ನೆಲ ಕಚ್ಚಬೇಕಾಗುತ್ತದೆ.

ತದನಂತರ ಹೋರಾಟಗಳು ಆರೋಪಗಳು ಸಾಮಾನ್ಯ ವಿಚಾರವಾಗಿದೆ.

*ಕರ್ನಾಟಕ ರಾಜಕಾರಣ ಚಿನ್ನದ ತೂಕ ಇದ್ದಂತೆ ಇದೆ.*
ಮೂರು ಪಕ್ಷಗಳು ಕೂಡ ಬಲ ಬಲವಾಗಿ ಹೋರಾಟ ಮಾಡುತ್ತಿವೆ.

ಸಂಪೂರ್ಣ ಬಹುಮತ ಬರುವ ನಿರೀಕ್ಷೆ ಇದ್ದರೆ ಮಾತ್ರವೆ ಒಂದು ಕ್ಷೇತ್ರ ಯಾವ ಲೆಕ್ಕಾಚಾರ ಅಲ್ಲವೇ ಅಲ್ಲ.

ಇಂತಹ ಕಷ್ಟಪಟ್ಟ ಕಾರ್ಯಕರ್ತರಿಗೆ ಕೊಡುವ ವಿಚಾರ ಆಲೋಚನೆ ಮಾಡಲು ಸಾಧ್ಯವಿತ್ತು.

ಅಪ್ಪಿ ತಪ್ಪಿ ಸಣ್ಣ ಸಮಸ್ಯೆ ಆದರೂ ಪಕ್ಷದಲ್ಲಿ ತುಂಬಾ ಸಮಸ್ಯಗಳು ಸೃಷ್ಟಿಯಾಗುತ್ತವೆ.

ಇದಕ್ಕೆ ಹೈಕಮಾಂಡ್ ಎಲ್ಲವೂ ಆಲೋಚನೆ ಮಾಡಿರಬಹುದು ಎಂದು ಅಂದಾಜಿಸಲಾಗಿದೆ.

ಇದಕ್ಕೆ ಡಿ.ಕೆ ಶಿವಕುಮಾರ್ ಕೂಡ ಎಲ್ಲವೂ ಆಲೋಚನೆ ಮಾಡಿ ಆಪ್ತನಿಗೆ ಶಾಂತಿ ಸಂದೇಶ ಹೇಳಿ ಸರ್ಕಾರ ಬಂದರೆ ಉನ್ನತ ಸ್ಥಾನಗಳು ಸಿಗುತ್ತವೆ, ಯಾರು ಕೂಡ ಬಂಡಾಯ ಗೊಂದಲಗಳು ಸೃಷ್ಟಿ ಮಾಡಬಾರದು. ಪಕ್ಷಕ್ಕೆ ವಿರುದ್ಧವಾಗಿ ಕೆಲಸ ಮಾಡಿ ಆಕ್ರೋಶಕ್ಕೆ ಗುರಿಯಾಗಬಾರದು ಎಂಬ ಸೂಕ್ಷ್ಮವಾದ ಸಂದೇಶ ರವಾನೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

ಇತ್ತ ನಾರಾ ಭರತ್ ರೆಡ್ಡಿ ಕೂಡಾ ವಯಸ್ಸಿನಲ್ಲಿ ಚಿಕ್ಕವರಾಗಿದ್ದು, ಅವರ ತಂದೆ ನಾರಾ ಸೂರ್ಯನಾರಾಯಣ ರೆಡ್ಡಿ ರಾಜಕೀಯದ ಭೀಷ್ಮ.

ಕಾಂಗ್ರೆಸ್ ಕಾರ್ಯಕರ್ತರಲ್ಲಿ ರೆಡ್ಡಿ ದರ್ಬಾರ್ ಎನ್ನುವ ಆಳ್ವಿಕೆ ಮಾಡುತ್ತಿದ್ದಾರೆ, ಈಗಾಗಲೇ ನಗರದಲ್ಲಿ ಗಿಫ್ಟ್ ಕೊಡುವ ಸಮಯದಲ್ಲಿ ಪಕ್ಷದ ಕಾರ್ಯಕರ್ತರನ್ನು ಕಡೆಗಣಿಸಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿವೆ ಅದರೆ ಅವರು ಮಾಡಿದ ಗಿಫ್ಟ್ ಹಂಚಿಕೆ ಅವರ ವೈಯುಕ್ತಿಕ ವಿಚಾರವಾಗಿದೆ.

ಅದರೆ ನಾರಾ ಭರತ್ ರೆಡ್ಡಿ ಸ್ವಲ್ಪ ಸ್ಪೀಡ್ ಇದ್ದಾರೆ,ತಂದೆ ಎಲ್ಲರನ್ನು ಪ್ರೀತಿ, ವಿಶ್ವಾಸ ತೆಗೆದುಕೊಂಡು ಹೋಗುವ ಮನೋಭಾವ, ಅವರು ಕೊಟ್ಟರೆ ವರ ಬಿಟ್ಟರೆ ಶಾಪ.

ದಾನ ಧರ್ಮದ ವಿಚಾರದಲ್ಲಿ ಒಂದು ಕೈ ಮೇಲೆ ಇರುತ್ತದೆ.

ಭರತ್ ಗೆದ್ದರೆ ಜನ ಪ್ರತಿನಿಧಿಯಾಗಿ ಓವರ್ ಸ್ಪೀಡ ಆಗಿ ಹೋಗಲು ಸಾಧ್ಯವಾಗುವುದಿಲ್ಲ.

ರಾಜಕೀಯ ಭವಿಷ್ಯದಲ್ಲಿ ಉತ್ತಮ ನಡುವಳಿಕೆಗಳನ್ನು ಬೀಳಿಸಿಕೊಳ್ಳುವ ಪ್ರಯತ್ನ ಎಲ್ಲಾ ನಾಯಕರು ಮಾಡುತ್ತಾರೆ.

ಈ ಬಾರಿ ಕಾಂಗ್ರೆಸ್ ಪಕ್ಷದಲ್ಲಿ ಯುವನಾಯಕರ ಪಡೆ ಮುಂಚೂಣಿಯಲ್ಲಿ ಇದೆ.

ಇದು ಕೂಡಾ ಉತ್ತಮ ಬೆಳವಣಿಗೆ ಎಂದು ಹಿರಿಯರು ಹೇಳುತ್ತಾರೆ.

ಭರತ್ ಜನರ ಮಧ್ಯದಲ್ಲಿ ಇದ್ದು, ಸ್ನೇಹವನ್ನು ಬೆಳೆಸಬೇಕಾಗಿತ್ತು.

ಸೀಮಿತ ಮುಖಂಡರು, ಕಾರ್ಯಕರ್ತರ ಜೊತೆಯಲ್ಲಿ ಜಾಸ್ತಿ ಕಾಣಿಸಿಕೊಂಡಿದ್ದಾರೆ,
ಅದಕ್ಕೆ ರೆಡ್ಡಿ ದರ್ಬಾರ್ ಅನ್ನುವ ಸಂದೇಶ ರವಾನೆ ಅಗಿದೆ ಜನರಲ್ಲಿ.

ಭರತ್ ಹಿಂದೆ ಇರುವ ಕೆಲವರು ಇಂತಹ ದಾರಿ ತಪ್ಪಿಸುವ ಕೆಲಸ ಮಾಡಿರಬಹುದು ಎಂದು ಮೇಲ್ನೋಟಕ್ಕೆ ಕಾಣಿಸುತ್ತದೆ.

ಈ ಹಿಂದೆ ಆಡಳಿತ ಮಾಡಿದ ಸತ್ಯ ಹರಿಶ್ಚಂದ್ರ ಶಾಸಕನಿಗಿಂತ 100% ಉತ್ತಮ ಅಭ್ಯರ್ಥಿ ಎನ್ನುತ್ತಾರೆ
ಸಾರ್ವಜನಿಕರು.

ಇಲ್ಲಿನ ಒಂದು ಸಮುದಾಯ ಲೀಡರ್ ಷಿಪ್ ಮಾಡಲು ಪ್ರಯತ್ನ ಮಾಡುತ್ತಿದೆ.

ಚುನಾವಣೆ ಸಮಯದಲ್ಲಿ ಎಲ್ಲರು ಒಂದಾಗಬೇಕು ಅನ್ನುವುದು ಕಾರ್ಯಕರ್ತರ ಅಭಿಪ್ರಾಯವಾಗಿದೆ.

ಕಾಂಗ್ರೆಸ್ ಟಿಕೆಟ್ ವಿಚಾರ ಪಕ್ಷದ ಕಾರ್ಯಕರ್ತರಲ್ಲಿ ಅಸಮಾಧಾನ ಸ್ಫೋಟಗೊಂಡಿದೆ.

ಬೇರೆ ಪಕ್ಷದವರು ಒಂದು ಸುತ್ತಿನ ಪ್ರಚಾರ ಮಾಡಿದ್ದಾರೆ,ಇನ್ನೂ ಕೆಲವಡೆ ಕಾಂಗ್ರೆಸ್ ಕಾರ್ಯಕರ್ತರನ್ನು ಹಾಗೂ ಇತರೆ ಪಕ್ಷಗಳು ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ.ಕಾರ್ಯಕರ್ತರು ಕೂಡ ನೋಡಬೇಕು ಅಗಿದೆ.

(ಕೆ.ಬಜಾರಪ್ಪ ವರದಿಗಾರರು ಕಲ್ಯಾಣ ಕರ್ನಾಟಕ.)


News 9 Today

Leave a Reply