*ತೀರ್ಥ ಪ್ರಸಾದ ತೆಗೆದಕೊಳ್ಳಲು ಬಳ್ಳಾರಿಗೆ ಆಗಮಿಸಿದ್ದ ಕೆ.ಎಸ್ ಈಶ್ವರಪ್ಪ ಗಡಿಬಿಡಿಯಿಂದ ಹೊರಟರು*
ಬಳ್ಳಾರಿ: ಬಿಜೆಪಿ ಪಕ್ಷದಿಂದ ನೊಂದು ಬೆಂದು ಅವಮಾನಕ್ಕೆ ಗುರುಯಾಗಿರುವ ಕುರುಬ ಸಮುದಾಯದ ಬಹುದೊಡ್ಡ ಲೀಡರ್ ಅಗಿರುವ ಹರಕುಬಾಯಿ ಈಶ್ವರಪ್ಪ ಅವರು ಮನೆದೇವರ ದರ್ಶನಕ್ಕಾಗಿ ಬಳ್ಳಾರಿಗೆ ಶುಕ್ರವಾರ ಆಗಮಿಸಿದ್ದರು.
ಸಂಪ್ರದಾಯದ ಹಾಜರಾತಿಯಂತೆ ನಗರದ ಖಾಸಗಿ ಹೋಟೆಲ್ ನಕ್ಷತ್ರದಲ್ಲಿ ಪತ್ರಿಕಾಗೋಷ್ಠಿ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕೊಲೆ ಬೆದರಿಕೆ ಸಂಚು ಮಾಡಿದ್ದಾರೆ ಎಂದು ಮಾಹಿತಿ ಬಂದಿದೆ. ನಾನು ಹಿಂದುತ್ವವಾದಿ ಎಂಬ ನಿಟ್ಟಿನಲ್ಲಿ ಹಿಂಡಲಗಿ ಜೈಲಿನಲ್ಲಿ ಇರುವ ಶಾಹಿರ್ ಶೇಖ್ ನಾಗ್ಪುರ ಪೋಲಿಸರ ತನಿಖೆ ವಿಚಾರದಲ್ಲಿ ಬಂಧಿತನಾಗಿದ್ದಾನೆ ಎಂದರು. ಈ ಹಿಂದೆ ನನಗೆ ಹಿಂದುತ್ವ ಪ್ರತಿಪಾದಿಸಿ ಮಾತಾಡಿದಾಗ ನನಗೆ ಕೊಲೆ ಬೆದರಿಕೆ ಬಂದಿತ್ತು. ಈ ವಿಷಯ ಸದನಕ್ಕೆ ತಿಳಿಸಿದ್ದೆ. ಆಗ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಇತ್ತು. ಆ ವೇಳೆ ಭದ್ರತೆ ನೀಡಿದ್ದರು ಎಂದು ಮಾಹಿತಿ ನೀಡಿದರು.
ಪೋಲಿಸರ ಮಾಹಿತಿ ಮೇರೆಗೆ ಕೊಲೆಯ ಸ್ಕೆಚ್ ಮಾಡಿದ್ದಾರೆ ಅನ್ನುವ ಮಾಹಿತಿಯನ್ನು ನೀಡಿದ್ದಾರೆ ಎಂದರು. ಇದೆ ಸಂದರ್ಭದಲ್ಲಿ ಬಿಜೆಪಿ ಪಕ್ಷ ಎಲ್ಲವೂ ಕೊಟ್ಟಿದೆ. ನನಗೆ ಯಾವುದೇ ಬೇಸರಯಿಲ್ಲ ಎಂದು ಹೇಳಿದರು. ನಾನು ಬಿಜೆಪಿಯಿಂದ ಚುನಾವಣೆ ರಾಜಕೀಯಕ್ಕೆ ರಾಜೀನಾಮೆ ನೀಡಿದ ಬಳಿಕ ವರಿಷ್ಠರ ಬಳಿ ಯಾವುದೇ ಸ್ಥಾನಮಾನ ಕೇಳಲಿಲ್ಲ ಎಂದು ಸ್ಪಷ್ಟನೆ ಕೊಟ್ಟರು.
ಚುನಾವಣಾ ರಾಜಕೀಯದಿಂದ ದೂರ ಉಳಿಯಲು ತೀರ್ಮಾನಿಸಿರುವ ಕುರಿತು ಪ್ರತಿಕ್ರಿಯಿಸಿದ ಈಶ್ವರಪ್ಪನವರು, ಮೊನ್ನೆ ರಾಜ್ಯದ ಚುನಾವಣಾ ಪ್ರಭಾರಿ ಧರ್ಮೇಂದ್ರ ಪ್ರಧಾನ್ ಅವರು ಫೋನ್ ಮಾಡಿ ಮಾತನಾಡಿದರು. ನೀವು ಚುನಾವಣಾ ರಾಜಕೀಯಕ್ಕೆ ರಾಜೀನಾಮೆ ಎಂಬ ರೀತಿಯಲ್ಲಿ ರಾಜೀನಾಮೆ ಕಳಿಸಬಾರದು ಎಂದು ಹೇಳಿದರು. ಫಾರ್ಮ್ಯಾಟ್ ಕಳಿಸುವಂತೆ ಹೇಳಿರುವೆ. ಅವರು ಕಳಿಸಿದ ಫಾರ್ಮ್ಯಾಟ್ ನಲ್ಲಿ ರಾಜೀನಾಮೆ ಪತ್ರ ಕಳಿಸುವೆ ಎಂದರು.
ಗಡಿಬಿಡಿಯಿಂದ ಬಂದ ಕೆ.ಎಸ್ ಈಶ್ವರಪ್ಪನವರು ಹೊರಟರು. ಮನೆಯ ದೇವರು ದರ್ಶನಕ್ಕೆ ಬಂದಿದ್ದೇನೆ ಹೊರತು ಬೇರೆ ಏನೂ ಇಲ್ಲವೆಂದರು.
*************