This is the title of the web page
This is the title of the web page

Please assign a menu to the primary menu location under menu

State

ಪತ್ರಕರ್ತರ ಸಂಘದ ಉಪಾಧ್ಯಕ್ಷರು, ಬಜಾರಪ್ಪ ನಿವಾಸಕ್ಕೆ ಗಾಲಿ ಅರುಣಾ ಲಕ್ಷ್ಮೀ ಭೇಟಿ – ಚರ್ಚೆ

ಪತ್ರಕರ್ತರ ಸಂಘದ ಉಪಾಧ್ಯಕ್ಷರು, ಬಜಾರಪ್ಪ ನಿವಾಸಕ್ಕೆ ಗಾಲಿ ಅರುಣಾ ಲಕ್ಷ್ಮೀ ಭೇಟಿ – ಚರ್ಚೆ

ಪತ್ರಕರ್ತರ ಸಂಘದ ಉಪಾಧ್ಯಕ್ಷರು, ಬಜಾರಪ್ಪ ನಿವಾಸಕ್ಕೆ ಗಾಲಿ ಅರುಣಾ ಲಕ್ಷ್ಮೀ ಭೇಟಿ – ಚರ್ಚೆ

ಬಳ್ಳಾರಿ : ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಅಧಿನಾಯಕಿ ಹಾಗೂ ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಗಾಲಿ ಅರುಣಾ ಲಕ್ಷ್ಮೀ ಅವರು ಹಿರಿಯ ಪತ್ರಕರ್ತ ಕೆ.ಬಜಾರಪ್ಪ ಅವರು ನಿವಾಸಕ್ಕೆ ಇಂದು ಸೌಹಾರ್ಧವಾಗಿ ಭೇಟಿ ನೀಡಿ ಕೆಲಕಾಲ ಚರ್ಚೆ ನಡೆಸಿದರು.

ಬಳ್ಳಾರಿ ನಗರದ ಪ್ರಸಕ್ತ ರಾಜಕೀಯ ವಿದ್ಯಮಾನಗಳ ಕುರಿತು ಸುಧೀರ್ಘ ಚರ್ಚೆ ನಡೆಸಿದ್ದು, ಕಲ್ಯಾಣ ರಾಜ್ಯ ಪ್ರಗತಿ ಪಕ್ಷದಿಂದ ಸ್ಪರ್ಧೆ ಬಯಸಿರುವ ನನಗೆ ಆರ್ಶೀವಾದ ಮಾಡುವಂತೆ ಮನವಿ ಮಾಡಿದ್ದಾರೆ.

ಮಹಿಳೆಯರು ರಾಜಕೀಯ ಜೀವನದಲ್ಲಿ ಭಾಗವಹಿಸಲು ಹಲವಾರು ಅಡೆತಡೆಗಳನ್ನು ಎದುರಿಸುತ್ತಾರೆ. ಚುನಾವಣೆಗೆ ಸ್ಪರ್ಧಿಸಲು ಮಹಿಳೆಯರ ಆಯ್ಕೆಗಳನ್ನು ಮಿತಿಗೊಳಿಸುತ್ತವೆ. ಸಾಮರ್ಥ್ಯದ ಅಂತರಗಳು ಎಂದರೆ ಮಹಿಳೆಯರು ಪರಿಣಾಮಕಾರಿ ನಾಯಕರಾಗಲು ಅಗತ್ಯವಾದ ಶಿಕ್ಷಣ, ಸಂಪರ್ಕಗಳು ಮತ್ತು ಸಂಪನ್ಮೂಲಗಳನ್ನು ಹೊಂದಲು ಪುರುಷರಿಗಿಂತ ಕಡಿಮೆಯಿದೆ ಎಂದು ಅರುಣಾ ಲಕ್ಷ್ಮೀ ಹೇಳಿದ್ದಾರೆ.

ಶುಭ ಶುಕ್ರವಾರದಂದು ಹಿರಿಯ ಪತ್ರಕರ್ತ ಕೆ.ಬಜಾರಪ್ಪ ನಿವಾಸಕ್ಕೆ ಭೇಟಿ ನೀಡಿರುವ ಹಿನ್ನೆಲೆ ಸಂತಸಪಟ್ಟಿದ್ದು, ಗಾಲಿ ಅರುಣಾ ಲಕ್ಷ್ಮೀಗೆ ಕುರುಬರ ಸಂಪ್ರದಾಯದ ಪ್ರಕಾರ ಅರಿಶಿನ, ಕುಂಕುಮದಿಂದ ಹರಿಸಿದರು. ಈ ಸಂದರ್ಭದಲ್ಲಿ ಹಿರಿಯ ಪತ್ರಕರ್ತ ಕೆ.ಬಜಾರಪ್ಪ ಪತ್ರಕರ್ತರ ಸಂಘದ ಉಪಾಧ್ಯಕ್ಷರ ,ಅವರ ಕುಟುಂಬದಿಂದ ಗಾಲಿ ಅರುಣಾ ಲಕ್ಷ್ಮೀಗೆ ಸನ್ಮಾನಿಸಿ ಗೌರಿಸಿದ್ದಾರೆ. (ಕೆ.ಬಜಾರಪ್ಪ ವರದಿಗಾರರು ಕಲ್ಯಾಣ ಕರ್ನಾಟಕ.)


News 9 Today

Leave a Reply