*ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಭೇಟಿ ನೀಡಿದ,ಗಾಲಿ ಲಕ್ಷ್ಮಿ ಅರುಣಾ.*
ಬಳ್ಳಾರಿ.(25)ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಸಭಾಂಗಣದಲ್ಲಿ
ಎಲ್ಲರನ್ನೂ ಸೌಹಾರ್ದಯುತವಾಗಿ ಭೇಟಿಯಾಗಿ ಔಪಚಾರಿಕವಾಗಿ,ನಗರದ ಕೆ.ಆರ್.ಪಿ.ಪಿ.ಅಭ್ಯರ್ಥಿ ಗಾಲಿ ಲಕ್ಷ್ಮಿ ಅರುಣಾ ಮಾತನಾಡಿದರು.
ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರದ ಅಭಿವೃದ್ಧಿ, ವಾಣಿಜ್ಯ – ವ್ಯಾಪಾರೋದ್ಯಮಿಗಳಿಗೆ ನೆರವಾಗುವ ಕುರಿತು ತನ್ನದೇ ಆದ ಯೋಜನೆಗಳನ್ನು ವಿವರಿಸಿದ್ದಾರೆ.
ಸಂಸ್ಥೆಯ ಎಲ್ಲಾ ಆಜೀವ ಸದಸ್ಯರು, ಕೈಗಾರಿಕೋದ್ಯಮಿಗಳು, ವರ್ತಕರು, ವ್ಯಾಪಾರಿಗಳು, ಕಿರಾಣಿ ವರ್ತಕರು ಹಾಗೂ ರಿಟೇಲ್ ವ್ಯಾಪಾರಸ್ಥರು, ಸಗಟು ವ್ಯಾಪಾರಸ್ಥರು, ಕಾಟನ್ ಮಿಲ್ ಅಸೋಸಿಯೇಷನ್, ರೈಸ್ ಮಿಲ್ ಅಸೋಸಿಯೇಷನ್, ಸ್ಪಾಂಜ್ ಐರನ್ ಕೈಗಾರಿಕೆಗಳ ಅಸೋಸಿಯೇಷನ್, ಗಾರ್ಮೆಂಟ್ ಅಸೋಸಿಯೇಷನ್ ಹಾಗೂ ನಮ್ಮ ಸಂಸ್ಥೆಯಲ್ಲಿ ನೋಂದಣಿ ಆಗಿರುವ ಎಲ್ಲಾ ಸಂಘ – ಸಂಸ್ಥೆಗಳ ಸದಸ್ಯರು – ಪದಾಧಿಕಾರಿಗಳು ಈ ಸಭೆಯಲ್ಲಿ ಉಪಸ್ಥಿತಿ ಇದ್ದರು.
ಈ ಸಂದರ್ಭದಲ್ಲಿ ಅಧ್ಯಕ್ಷರಾದ ಸಿ ಶ್ರೀನಿವಾಸ ರಾವ್, ಕಾರ್ಯದರ್ಶಿಯಾದ ಶ್ರೀ ಯಶವಂತ್ ರಾಜ್, ಉಪಾಧ್ಯಕ್ಷರಾದ ಶ್ರೀ ಮಂಜುನಾಥ್, ರಮೇಶ್ ಬುಜ್ಜಿ, ಶ್ರೀ ಸುರೇಶ್ ಬಾಬು, ಶ್ರೀ ದೊಡ್ಡನಗೌಡ, ಸೊಂತಾ ಗಿರಿಧರ್, ಶ್ರೀ ಪಾಲಣ್ಣ, ಮಾಜಿ ಅಧ್ಯಕ್ಷರಾದ ಶ್ರೀ ರವಿಕುಮಾರ್, ಶ್ರೀ ರಾಜಗೋಪಾಲ್ ಮತ್ತು ಸಂಸ್ಥೆಯ ಪದಾಧಿಕಾರಿಗಳು ಮತ್ತು ಸದಸ್ಯರು ಹಾಗೂ ಜಿಲ್ಲಾ ಮಹಿಳಾ ಶಕ್ತಿ ಘಟಕದ ಅಧ್ಯಕ್ಷರಾದ ಶ್ರೀಮತಿ ಹಂಪಿ ರಮಣ, ಸಾಮಾಜಿಕ ಜಾಲತಾಣದ ಅಧ್ಯಕ್ಷರಾದ ಮಲ್ಕಿಕಾರ್ಜುನ ಆಚಾರ್, ಪಕ್ಷದ ಹಿರಿಯ ಮುಖಂಡರುಗಳಾದ ಶ್ರೀನಿವಾಸ ರೆಡ್ಡಿ, ವೆಂಕಟರಮಣ, ಶ್ರೀ ಸುರೇಶ್ ರೆಡ್ಡಿ, ಸೂರಿಬಾಬು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.