This is the title of the web page
This is the title of the web page

Please assign a menu to the primary menu location under menu

State

ಕಾಂಗ್ರೆಸ್ ಅಭ್ಯರ್ಥಿಗೆ ಬಂಡಾಯದ ಬಿಸಿ

ಕಾಂಗ್ರೆಸ್ ಅಭ್ಯರ್ಥಿಗೆ ಬಂಡಾಯದ ಬಿಸಿ

ಕಾಂಗ್ರೆಸ್ ಅಭ್ಯರ್ಥಿಗೆ ಬಂಡಾಯದ ಬಿಸಿ

*ಪುಟ್ಬಾಲ್ ಗೆಲುವಿನ ಸನಿಹಕ್ಕೆ*

*ನ್ಯೂಸ್9 ಟುಡೇ ಗುಪ್ತ ಸರ್ವೇಯಲ್ಲಿ ಬಯಲು*

ಬಳ್ಳಾರಿ : ಕಾಂಗ್ರೆಸ್‌ನ ಅಭ್ಯರ್ಥಿ ಗೆಲುವು ನಮ್ಮ ಕೈಯಲ್ಲಿ ಇಲ್ಲ.!!ಅಭ್ಯರ್ಥಿ ನಮಗೆ ಗೌರವ ಕೊಟ್ಟರೆಷ್ಟು ಬಿಟ್ಟರೆಷ್ಟು, ಪಕ್ಷಕ್ಕೆ ದ್ರೋಹ ಮಾಡಲು ಮನುಸ್ಸಿಲ್ಲ. ಮಹಿಳಾ ಅಭ್ಯರ್ಥಿ ಪರವಾಗಿ ಜನರ ಒಲವು ಇದೆ.!! ನಮ್ಮ ಮತಗಳು ನಮಗೆ ಗ್ಯಾರಂಟಿ ಇಲ್ಲದ ವಾತಾವರಣವಿದೆ.!!

ಚುನಾವಣೆಯ ಮತದಾನ ದಿನಾಂಕ ಕೇವಲ ನಾಲ್ಕು ದಿನಗಳು ಉಳಿದಿದೆ.

ಆದರೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ನಾರಾ ಭರತ್ ರೆಡ್ಡಿಗೆ ಪಕ್ಷದಲ್ಲಿ ಬಂಡಾಯದ ಬಿಸಿ ಕಡಿಮೆಯಾಗಿಲ್ಲ.

ಬಹುತೇಕ ಕಾಂಗ್ರೆಸ್ ನಾಯಕರನ್ನು ಹೊರಗಿಟ್ಟು ಚುನಾವಣೆ ಮಾಡುತ್ತಿದ್ದಾರೆ.

ಪಕ್ಷ ಟಿಕೆಟ್ ನೀಡಿದಾಗನಿಂದಲೇ ಕಾಂಗ್ರೆಸ್’ನಲ್ಲಿ ನಾಯಕತ್ವದ ಅಸಮಾಧಾನ ಮತ್ತು ಬಂಡಾಯದ ಬೆಂಕಿ ಹೊತ್ತಿ ಉರಿಯುತ್ತಿದೆ.

ಸೀಮಿತ ನಾಯಕರು ಹೊರತು ಪಡಿಸಿ ದಿಗ್ಗಜರ ದಂಡು ಇವರ ಬಾಗಿಲುಗಳು ಕೂಡ ಮುಟ್ಟಿಲ್ಲ.

ಪಾಲಿಕೆ ಸದಸ್ಯರನ್ನು ಸರಿಪಡಿಸುವ ಪ್ರಯತ್ನದಲ್ಲಿ ಅಭ್ಯರ್ಥಿಗೆ ತಲೆ ಬಿಸಿಯಾಗಿದೆ.

ಇನ್ನೂ ನಾಯಕರುಗಳ, ಕಾರ್ಯಕರ್ತರ ಸಹವಾಸಕ್ಕೆ ಹೋಗಿಲ್ಲ.

ಕೇವಲ ಪಕ್ಷದ ಅಭಿಮಾನಿಗಳ ನೇತೃತ್ವದಲ್ಲಿ ಪ್ರಚಾರ ಮಾಡುತ್ತಿದ್ದಾರೆ. ಮಧ್ಯದಲ್ಲಿ ಪಾಲಿಕೆ ಸದಸ್ಯರ ಸಾಥ್ ಸಿಗುತ್ತಿದೆ.

ಅಭ್ಯರ್ಥಿ ಭರತ್ ರೆಡ್ಡಿ ಅವರ ಯುವಕರ ದಂಡು ಕಟ್ಟಿಕೊಂಡು ಕುಕ್ಕರ್ ವಿತರಣೆ ಸಮಯದಲ್ಲಿ ಮಾಡಿದಂತೆ ಮಾಡುತ್ತಿದ್ದಾರೆ

ಅಭ್ಯರ್ಥಿ ಪರವಾಗಿ ಇರುವ ಕಾಂಗ್ರೆಸ್‌ ಮುಖಂಡರಲ್ಲಿ ಸಾರ್ವಜನಿಕ ಚುನಾವಣೆಯನ್ನು ಮಾಡಿ ಗೆಲುವು ಸೋಲು ನೋಡಿದ ನಾಯಕರರಲ್ಲಿ ಒಬ್ಬರು ಮುಂಡರಗಿ ನಾಗರಾಜ್, ಮಾನಯ್ಯ, ಅಸುಂಡಿ ವಂಡ್ರಿ ಹಾಗೂ ಕೆಲ ಪಾಲಿಕೆ ಸದಸ್ಯರುಗಳು ಮಾತ್ರ ಮೇಲ್ನೋಟಕ್ಕೆ ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನೂ ಉಳಿದ ನಾಯಕರೆಲ್ಲರು ಪಕ್ಷದ ಮುಖಂಡರು.

ಅವರಿಗೆ ಸಾರ್ವಜನಿಕ ಚುನಾವಣೆ ಬಗ್ಗೆ ಮಾಹಿತಿಯಿಲ್ಲ. ಕೇವಲ ಬಾವುಟವನ್ನು ಹಿಡಿದುಕೊಂಡು ಪಕ್ಷದ ಸಿದ್ದಾಂತಗಳು ಹೇಳುವ ನಾಯಕರುಗಳು ಇರೋದು ಅಷ್ಟೇ.. ಇನ್ನೂಳಿದವರು ಅವರು ಚುನಾವಣೆಯ ಸಂತೆಗೆ ಬಂದವರು.

ಪ್ರಸ್ತುತ ಚುನಾವಣೆ ಕದನದಲ್ಲಿ ಕೆ.ಆರ್.ಪಿಪಿ ಪಕ್ಷವು ಮುನ್ನಡೆ ಕಾಯ್ದುಕೊಂಡಿದೆ.

ಕಾಂಗ್ರೆಸ್‌ನ ಬಹುದೊಡ್ಡ ಲೀಡರ್’ಗಳು ಫುಟ್ಬಾಲ್ ಪರವಾಗಿ ಇದ್ದಾರೆ ಅನ್ನುವ ಗಾಳಿ ಮಾತುಗಳು ಕೇಳಿ ಬರುತ್ತವೆ.

ಇದು ಅಪಾಯದ ಸೂಚನೆ. ಅಭ್ಯರ್ಥಿ ಕೂಡ ಇದನ್ನೂ ಸರಿಪಡಿಸುವ ಪ್ರಯತ್ನ ಮಾಡಲಿಲ್ಲ. ಬಹುತೇಕ ಕಾಂಗ್ರೆಸ್ ನಾಯಕರು ಅಭ್ಯರ್ಥಿ ನಾರಾ ಭರತ್ ರೆಡ್ಡಿ ಪರವಾಗಿ ಇಲ್ಲ.

ಈ ಹಿಂದೆ ಪಾಲಿಕೆ ಚುನಾವಣೆಯಲ್ಲಿ ಇತರೆ ತಾಲ್ಲೂಕಿನಲ್ಲಿ ಇವರ ರಾಜಕೀಯ ಆಟವನ್ನು ಕಣ್ಣು ಮುಂದೆ ನೋಡಿದ ನಾಯಕರುಗಳು ಇದು ಸೂಕ್ತ ಅವಕಾಶ ಸಿಕ್ಕಿದೆ, ಕಂಟ್ರೋಲ್ ಮಾಡಬೇಕು ಇಲ್ಲದಿದ್ದರೆ, ನಾಳೆ ದಿನಗಳಲ್ಲಿ ಅಡ್ರೇಸ್ ಇಲ್ಲದಂತೆ ಆಗುವ ಅಪಾಯವಿದೆ ಎನ್ನುವ ಆಲೋಚನೆಗಳಿ ಸದ್ಯ ಸಾರ್ವಜನಿಕರು ಮತ್ತು ಪಕ್ಷದ ಕಾರ್ಯಕರ್ತರು ಮಾಡುತಾಡುತ್ತಿದ್ದಾರೆ ಎನ್ನುವ ಚರ್ಚೆಯಿದೆ.

ಪಕ್ಕದಲ್ಲೇ ಇದ್ದು ಮುಕ್ತಾಯ ಮಾಡಬೇಕು ಅನ್ನುವ ಚದುರಂಗದ ಪ್ಲಾನ್’ಗಳು ಮಾಡಿದ್ದಾರೆ ಎಂದು ಕೇಳಿಬರುತ್ತದೆ. ಏಕೆಂದರೆ ರೆಡ್ಡಿ ತುಂಬಾ ಅಪಾಯದ ಮನುಷ್ಯ ಅನ್ನುವ ಭಯದ ವಾತಾವರಣ ಎಲ್ಲರನ್ನು ಕಾಡ್ತೀದೆ.

ಬಹಿರಂಗವಾಗಿ ಹೇಳಿಕೊಳ್ಳಲು ಸಾಧ್ಯವಾಗದೇ ಇರುವ ವಾತಾವರಣ.

ಈಗಾಗಲೇ ಕಾಂಗ್ರೆಸ್‌ನ ಮಾಜಿ ಮೇಯರ್‌ ವೆಂಕಟರಮಣ ಇಂತಹ ವಾತಾವರಣ ನೋಡಿಕೊಂಡು, ಬಹಿರಂಗವಾಗಿ ಅಭ್ಯರ್ಥಿ ಮೇಲೆ ಆರೋಪಗಳನ್ನು ಮಾಡಿದ್ದರು.

ಪಾಲಿಕೆ ಸದಸ್ಯರ ಸೋಲಲು ಪ್ರಯತ್ನ ಮಾಡಿದ ಅಭ್ಯರ್ಥಿಗೆ ಪಕ್ಷ ಟಿಕೆಟ್ ಕೊಡುತ್ತದೆ ಎಂದರೆ ಇಂತಹ ಅಗೌರವ ತೋರುವ ಪಕ್ಷದಲ್ಲಿ ಇರಲು ಸಾಧ್ಯವಿಲ್ಲ ಎಂದಿದ್ದರು.

ಇದರ ಮಧ್ಯದಲ್ಲಿ ಕೂಡ ಒಂದಿಷ್ಟು ಜಾತಿ ರಾಜಕಾರಣಿಗಳ ಮಾತುಗಳು ಆಡಿದ್ದಾರೆ ಎಂದು ರಹಸ್ಯವಾಗಿ ಕೆಲವರು ಹೇಳುತ್ತಾರೆ. ಈ ಬಾರಿ ಚುನಾವಣೆಯಲ್ಲಿ ಕಮ್ಮ ಸಮಾಜವನ್ನು ನಿಯಂತ್ರಣ ಮಾಡಬೇಕು, ಇಲ್ಲದಿದ್ದರೆ ಅವರ ಪ್ರಭಾವ ಬೆಳೆಯುತ್ತದೆ ಎಂಬ ಮಾತು ರೆಡ್ಡಿ ಪಡೆಯಿಂದ ಕೇಳಿ ಬರುತ್ತಿದೆ.

ಇದರ ಮಧ್ಯದಲ್ಲಿ ನಾರಾ ಭರತ್ ಚುನಾವಣೆಯನ್ನು ಎದುರಿಸಿ ಬರಬೇಕಿಗಿದೆ. ಈಗಾಗಲೇ ಫುಟ್ಬಾಲ್ ಚಾಣಕ್ಯ ಜನಾರ್ದನ ರೆಡ್ಡಿ ಎಲ್ಲ ಪ್ಲಾನ್ ಮಾಡಿದ್ದಾರೆ.

ಎಲ್ಲ ಪಕ್ಷದ ನಾಯಕರ ಜೊತೆಯಲ್ಲಿ ಮಾತನಾಡಿ ಬೆಂಬಲ ಕೇಳಿದ್ದಾರೆ ಎನ್ನುವುದು ಮೇಲ್ನೋಟಕ್ಕೆ ಕಾಣುತ್ತಿದೆ.

ನ್ಯೂಸ್9 ಟುಡೇ ಗುಪ್ತ ಸರ್ವೇ ಮಾಡಲಾಗಿತ್ತು. ಕಾಂಗ್ರೆಸ್‌ನ ಗೆಲುವು ಅಷ್ಟು ಸುಲಭವಾಗಿಲ್ಲ ಎಂದು ತಿಳಿದು ಬಂದಿದೆ.

(ಕೆ.ಬಜಾರಪ್ಪ ನ್ಯೂಸ್9ಟುಡೇ ವರದಿಗಾರರು ಕಲ್ಯಾಣ ಕರ್ನಾಟಕ ಚೀಫ್ ಬ್ಯೂರೋ.)


News 9 Today

Leave a Reply