This is the title of the web page
This is the title of the web page

Please assign a menu to the primary menu location under menu

State

ಮೂರು ಕಾಸಿಗೆ ಹರಾಜದ ಮಹಿಳಾ ಪೋಲಿಸ್ ಠಾಣೆ!

ಮೂರು ಕಾಸಿಗೆ ಹರಾಜದ ಮಹಿಳಾ ಪೋಲಿಸ್ ಠಾಣೆ!

ಮೂರು ಕಾಸಿಗೆ ಹರಾಜದ ಮಹಿಳಾ ಪೋಲಿಸ್ ಠಾಣೆ!

*ರಾಜರೋಷವಾಗಿ ಲಂಚ ಪಡೆಯುತ್ತಿರುವ ಅಧಿಕಾರಿಗಳು!*

*ಲಂಚ ಪಡೆದ ಸಿಕ್ಕಿಬಿದ್ದ ಠಾಣೆಯ ಎಎಸ್ಐ ಶೇಕ್ಷಾವಲಿ*

ಗಣಿನಾಡು ಬಳ್ಳಾರಿ ನಗರದ ಮಹಿಳಾ ಪೋಲಿಸ್ ಠಾಣೆಯಲ್ಲಿ ಗಂಡ ಹೆಂಡತಿ ಜಗಳ, ಪ್ರೀತಿ ಮಾಡಿಕೊಳ್ಳುವ ಬಾಲ್ಯವಿವಾಹಗಳು ಸೇರಿದಂತೆ ಇತರೆ ವಿಚಾರಗಳ ಪಂಚಾಯತಿ ರೀತಿಯಲ್ಲಿ ಅಕ್ರಮ ಸಕ್ರಮ ಕಥೆಗಳು ಬರುತ್ತವೆ.

ಈ ಠಾಣೆಯಲ್ಲಿ ಅಧಿಕಾರಿಗಳಿಗೆ ಅವರನ್ನು ಇವರನ್ನು ಕೂಡಿಸಿ, ಪಂಚಾಯತಿ ಮಾಡೋದು, ಸರಿ ಹೋಗಲಿಲ್ಲ ಅಂದರೆ ಪ್ರಕರಣ ದಾಖಲೆ ಮಾಡೋದು ಇವರ ಕೆಲಸವಾಗಿರುತ್ತದೆ.

ಸರ್ಕಾರ ಮಹಿಳೆಯರಿಗೆ ಪ್ರತ್ಯೇಕವಾಗಿ ಠಾಣೆ ಇರಬೇಕು ಎನ್ನುವ ನಿಟ್ಟಿನಲ್ಲಿ ಯೋಚನೆ ಮಾಡಿ ಠಾಣೆ ಆರಂಬಿಸಿದರು.

ಆದರೆ ಇಲ್ಲಿ ಕೆಲ ಅಧಿಕಾರಿಗಳು ಹಗಲು ದರೋಡೆ ಮಾಡುವುದು ಕಂಡುಬರುತ್ತದೆ.

ಇಲ್ಲಿಯ ಠಾಣೆಯ ಜವಾಬ್ದಾರಿ ಅಧಿಕಾರಿಗಳಿಗೆ ಗೊತ್ತಿಲ್ಲದೆ ವ್ಯವಹಾರ ಮಾಡುತ್ತಾರೆ ಅನ್ನುವುದು ಇದೇ ಠಾಣೆಯ ಜವಾಬ್ದಾರಿ ಅಧಿಕಾರಿಗಳು ಕೂಡಾ ನಿಷ್ಠಾವಂತರ ಎಂದು ಹೇಳಲು ಸಾಧ್ಯವಿಲ್ಲ.

ಆದರೆ ಇಲ್ಲಿನ ಠಾಣೆಯ ಎಎಸ್ಐ ಶೇಕ್ಷಾವಲಿ ಅನ್ನುವ ಅಧಿಕಾರಿ ಠಾಣೆಯಲ್ಲಿ ಕೂತು ಕೊಂಡು ಲಂಚ ಬೇಡಿಕೆ ಇಟ್ಟು ನೇರವಾಗಿ ಹಣವನ್ನು ಪಡೆಯುತ್ತಾರೆ. ಸಾಹೇಬರಿಗೆ 15,000/, ಅವರಿಗೆ 10,000 ಎಂದು ಡೀಲ್ ಮಾಡಿಕೊಳ್ಳುತ್ತಾರೆ. ಕೊನೆಗೆ 5 ಸಾವಿರ ಇವರಿಗೆ, 10,000 ಸಾಹೇಬರಿಗೆ ಎಂದು ಓಕೆ ಮಾಡಿಕೊಂಡು 5000/ ತೆಗೆದುಕೊಳ್ಳುವ ವಿಡಿಯೋ ರಹಸ್ಯವಾಗಿ ಮೊಬೈಲ್‌ ಯಲ್ಲಿ ಸೆರೆಯಾಗಿದೆ.

ಒಂದೇ ಸಮಾಜದ ಅವರು ಪ್ರೀತಿ ಮಾಡಿಕೊಂಡಿರುವ ಪ್ರಕರಣ ಠಾಣೆಗೆ ಬರುತ್ತದೆ. ಎರಡು ಕುಟುಂಬಗಳು ರಾಜಿ ಪಂಚಾಯಿತಿ ಮೇಲೆ ಸರಿ ಮಾಡಿಕೊಂಡು ಪ್ರಕರಣ ಇಲ್ಲದಂತೆ ಮಾಡಿಕೊಳ್ಳುತ್ತಾರೆ. ಠಾಣೆಯ ಅಧಿಕಾರಿ ಸುಭಾಷ್ ಗೌರವದಿಂದ ಸರಿ ಮಾಡುತ್ತಾರೆ.

ಆದರೆ ಎಎಸ್ಐ ಶೇಕ್ಷಾವಲಿ ಮಾತ್ರ ಲಂಚ ಬೇಡಿಕೆ ಇಟ್ಟು ಠಾಣೆಯ ಮರ್ಯಾದೆ ಹರಾಜು ಮಾಡಿದ್ದಾರೆ.

ಇವರು ಲಂಚ ಬೇಡಿಕೆ ಇಟ್ಟಿದ್ದು ಎಸ್ಪಿ ಅವರ ಗಮನಕ್ಕೆ ಇತ್ತು. ಠಾಣೆಯ ಅಧಿಕಾರಿಗಳಿಂದ ಮಾಹಿತಿ ಪಡೆದು ಕ್ರಮವನ್ನು ಜರುಗಿಸಲಾಗಿತ್ತು ಎಂದು ದೂರವಾಣಿ ಮೂಲಕ ನ್ಯೂಸ್9 ಟುಡೇಗೆ ತಿಳಿಸಿದ್ದರು.

ಇಂತಹ ಭ್ರಷ್ಟ ಅಧಿಕಾರಿಗಳು ಠಾಣೆಯಲ್ಲಿ ಇದ್ದರೆ ಮಹಿಳೆಯರಿಗೆ ನ್ಯಾಯಾ ಸಿಗಲು ಸಾಧ್ಯವಿಲ್ಲ!
ಈ ಪೂಣ್ಯತ್ಮನ ಕಥೆ ಬಹು ದೊಡ್ಡದಿದೆ‌.

ದಿಟ್ಟ ಅಧಿಕಾರಿಗಳು ಎಂದು ಹೆಸರು ಪಡೆದ ಎಸ್ಪಿ ಅವರು ಯಾವ ಕ್ರಮ ಕೈಗೊಳ್ಳುತ್ತಾರೆ ಎಂದು ಕಾದು ನೋಡಬೇಕಿದೆ.

(ಕೆ.ಬಜಾರಪ್ಪ ವರದಿಗಾರರು .)


News 9 Today

Leave a Reply