ಪೋಲಿಸ್ ಎಎಸ್ಐ ಶೇಕ್ಷಾವಲಿ ಅಮಾನತು. ಬಳ್ಳಾರಿ ಮಹಿಳಾ ಪೋಲಿಸ್ ಠಾಣೆಯಲ್ಲಿ ಒಂದು ಪ್ರಕರಣ ದಲ್ಲಿ ಬಹಿರಂಗವಾಗಿಯೇ 25ಸಾವಿರ ದಿಂದ 15 ಸಾವಿರ ರೂಪಾಯಿಗಳು ಲಂಚ ಬೇಡಿಕೆ ಇಟ್ಟು 5,ಸಾವಿರ ನಗದು ಠಾಣೆಯ ಕಚೇರಿ ಯಲ್ಲಿ ಮಹಾರಾಜ ನಂತೆ ಕೂತು ಕೊಂಡು ಹಣವನ್ನು ಪಡೆದ ಎಎಸ್ಐ ಶೇಕ್ಷಾವಲಿ ಲಂಚದ ಕರ್ಮ ಕಾಂಡ ವಿಡಿಯೋ ನ್ಯೂಸ್9 ಟುಡೇ ಕ್ಯಾಮೆರಾ ದಲ್ಲಿ ಸೆರೆಹಿಡಿಯಲಾಗಿತ್ತು ಸುದ್ದಿ ಪ್ರಸಾರ ಮಾಡಲಾಗಿತ್ತು.
ಎರಡು ದಿನಗಳ ನಂತರ ಪೋಲಿಸ್ ವರಿಷ್ಠ ಅಧಿಕಾರಿಗಳು ಮಹಿಳಾ ಠಾಣೆಯ ಎಎಸ್ಐ ಶೇಕ್ಷಾವಲಿ ಅವರನ್ನು ಅಮಾನತು ಮಾಡಿದ್ದಾರೆ. *!!ಅದರೆ ತಕ್ಷಣವೇ ಕ್ರಮ ಕೈಗೊಳ್ಳಲು ದಿಟ್ಟ ಅಧಿಕಾರಿ ಎಸ್ಪಿ ರಂಜಿತ್ ಕುಮಾರ್ ಅವರು ಎರಡು ದಿನಗಳು ಕಾಲಾವಕಾಶ ತೆಗೆದುಕೊಂಡಿದ್ದಾರೆ.!!* ಎಎಸ್ಐ ಲಂಚ ಬೇಡಿಕೆ ವಿಚಾರ ಲಂಚ ಕೊಡುವ ಮುನ್ನವೇ ಕೆಲ ಗಂಟೆಗಳ ಮುಂದೆಯೇ ಲೋಕಾಯುಕ್ತ ಡಿವೈಎಸ್ಪಿ ಗೆ ಹೇಳಿದರು ಕೂಡ ಎಮರ್ಜೆನ್ಸಿ ಯಲ್ಲಿ ನಾವು ಏನು ಮಾಡಲು ಸಾಧ್ಯವಾಗುವುದಿಲ್ಲ ಎಂದು ನಿರ್ಲಕ್ಷ್ಯ ತೋರಿದ್ದರು.
ಇನ್ನೂ ಉಳಿದ ಅಧಿಕಾರಿಗಳು ಗೆ ಮಾಹಿತಿ ಕೊಟ್ಟರು ಆಪರೇಷನ್ ಮಾಡಲು ವಿಫಲ ವಾಗಿದ್ದರು.
ಕೊನೆಗೆ ಠಾಣೆ ಯಲ್ಲಿ ನ್ಯೂಸ್ 9ಟುಡೇ ಸ್ಟಿಂಗ್ ಆಪರೇಷನ್ ಮಾಡಲಾಯಿತು.
ತಕ್ಷಣವೇ ಕ್ರಮ ಕೇ ಗೊಳ್ಳವ ಇಲಾಖೆ ಗಳು ಎಮರ್ಜೆನ್ಸಿ ಯಲ್ಲಿ ಉಪಯೋಗ ಕ್ಕೆ ಇಲ್ಲವೆಂದು ಕಂಡುಬರುತ್ತದೆ.
ಈರೀತಿ ಅದರೆ ಸಾರ್ವಜನಿಕ ಗೆ ನ್ಯಾಯ ಸಿಗಲು ಸಾಧ್ಯವಿಲ್ಲ.
ಇಷ್ಟು ನಿರ್ಲಕ್ಷ್ಯ ವಹಿಸಿದ ಅಡಳಿತ ನೋಡಿದರೆ ಇನ್ನೂ ಮುಂದೆ ಠಾಣೆ ಗಳಲ್ಲಿ ಇಂತಹ ಪೋಲಿಸರು ನೇರವಾಗಿ ಜೇಬಿನಲ್ಲಿ ಕೇ ಹಾಕಿ ಹಣ ಕಿತ್ತು ಕೊಂಡರು ಅಚ್ಚರಿ ಇಲ್ಲ.ಇಷ್ಟು ತಡವಾಗಿ ಮಾಡದ ಕ್ರಮದಲ್ಲಿ ಹಲವಾರು ಅನುಮಾನ ಗಳು ಮೂಡಿಸುತ್ತವೆ!.(ಕೆ. ಬಜಾರಪ್ಪ ವರದಿಗಾರರು ಕಲ್ಯಾಣ ಕರ್ನಾಟಕ.ನ್ಯೂಸ್9ಟುಡೇ.)