ಅನ್ನದಾತನ ಶ್ರಮ!! ಭತ್ತದ ಸಸಿ ಮಡಿಗಳುಗೆ ಟ್ಯಾಂಕರ್ ಗಳ ಮೂಲಕ ನೀರು ಸರಬರಾಜು!!. ಬಳ್ಳಾರಿ (4) ಈಗಾಗಲೇ ಮಳೆ ರಾಯ ಕೇಲ ತಿಂಗಳುಗಳ ದಿಂದ ಮಾಯ ವಾಗಿದ್ದು ರೈತರು ಆಕಾಶದಲ್ಲಿ ನೋಡುವ ವಾತಾವರಣ ಸೃಷ್ಟಿ ಆಗಿದೆ.
ಈವರೆಗೆ ಇನ್ನೂ ಬೇಸಾಯದ ಚಟುವಟಿಕೆಗಳನ್ನು ಮಾಡಿಕೊಳ್ಳಲು ಆಗಿಲ್ಲ.
ದುಬಾರಿ ವೆಚ್ಚದ ಬೀಜಗಳನ್ನು ಖರೀದಿ ಮಾಡಿಕೊಂಡು ಸಸಿಗಳನ್ನು ಬೆಳೆಸಿ ಸಮಯಕ್ಕೆ ನಾಟಿಕೆ ಮಾಡಿಕೊಳ್ಳಲು, ರೈತ ಹರ ಸಾಹಸ ಮಾಡಬೇಕು ಅಗಿದೆ.
ಕೇಲ ಬೀಜಗಳು ನರ್ಸರಿ ನೆಟ್ ಗಳಲ್ಲಿ ಹಾಕಿ ಸಾವಿರಾರು ಗಟ್ಟಲೆ ಹಣವನ್ನು ನೆಟ್ ಮಾಲಿಕರು ಗೆ ಕೊಡಬೇಕು.
ಇನ್ನೂ ಕೇಲ ಭತ್ತದ ತಳಿಗಳನ್ನು ನೇರವಾಗಿ ಭೂಮಿಯಲ್ಲಿ ಹಾಕಿ (ಅಗೆಮಡಿಗಳು)ಮೂಲಕ ಬೇಳಸಬೇಕು.
ಇವು ಯಾಲ್ಲವು ಭೂಮಿಯಲ್ಲಿ ನಾಟಿಕೆ ಮಾಡವ ಸಮಯಕ್ಕೆ ಸಿದ್ದತೆ ಮಾಡಿಕೊಳ್ಳಬೇಕು.
ಬಳ್ಳಾರಿ ಜಿಲ್ಲೆ ಯಲ್ಲಿ ಮಳೆ ಕಡಿಮೆ ಅಗಿರವ ಹಿನ್ನೆಲೆಯಲ್ಲಿ ಕಾಲುವೆ ನೀರು ತಡವಾಗಿದ್ದು, ಸಮಯಕ್ಕೆ ನೀರು ಇಲ್ಲದೇ ಇರುವುದರಿಂದ ದೇವರ ಮೇಲೆ ನಂಬಿಕೆ ಇಟ್ಟು ಜಿಲ್ಲೆ ಯಲ್ಲಿ ಕೇಲ ಬಾಗದಲ್ಲಿ ರೈತರು ಭತ್ತದ ಸಸಿಮಡಿಗಳು ಹಾಕಿದ್ದಾರೆ.
ಅಲ್ಪಸ್ವಲ್ಪ ಮಳೆ ದಿಂದ ಸಸಿಮಡಿಗಳು ಮೊಳಕೆ ಹಾಕಿದ್ದಾವೆ,ಆದರೆ ಅವುಗಳನ್ನು ನಾಟಕ ಮಾಡಲು ಇನ್ನೂ ಒಂದಿಷ್ಟು ದಿನಗಳು ಸಮಯ ಬೇಕು, ಅವುಗಳು ಗೆ ಸಮರ್ಪಕ ನೀರು ಬೇಕು.
ಆದರೆ ತುಂಗಭದ್ರಾ ನದಿ ತುಂಬಿ ತುಳುಕುತ್ತದೆ ನಾಲೆಗಳುಗೆ ನೀರು ಬಿಟ್ಟಿದ್ದಾರೆ, ಆದರೆ ಕೇಲ ಭಾಗದಲ್ಲಿ ನಾಲೆಗಳು ರಿಪೇರಿ ಮಾಡುತ್ತಾ ಇದ್ದಾರೆ,ಅದರಿಂದಾಗಿ ರೈತರ ಸಸಿಮಡಿಗಳು ಗೆ ನೀರಿನ ಕೊರತೆ ಉಂಟಾಗಿದೆ.
ಬೇಸಾಯದ ಮೇಲೆ ಅಧಾರಿತ ವಾಗಿರುವ ಅನ್ನದಾತ ನೂರಾರು ಕಷ್ಟಗಳನ್ನು ಎದುರಿಸಿದ ಬೇಕು ಅಗಿದೆ.
ಸಾವಿರಾರು ಗಟ್ಟಲೆ ಖರ್ಚು ಮಾಡಿ ಹಾಕಿರುವ ಬೀಜ ವನ್ನು ನೀರು ಕೊರತೆ ದಿಂದ ಸುಮ್ಮನೆ ಬಿಟ್ಟು ಬಿಡಲು ಸಾಧ್ಯವಾಗುವುದಿಲ್ಲ.
ಅದಕ್ಕೆ ಕಷ್ಟ ನಷ್ಟು ಲಾಭ ಎನ್ನುವುದನ್ನು ಲೆಕ್ಕಿಸದೆ ಖಾಸಗಿ ಟ್ಯಾಂಕ್ ಗಳು ಮೂಲಕ ಒಂದು ಟ್ಯಾಂಕರ್ ಗೆ,600/- ರಂತೆ ಹತ್ತಾರು ಟ್ಯಾಂಕರ್ ಗಳು ದಿಂದ ಸಸಿಮಡಿಗಳು ಗೆ ನೀರು ಉಣಿಸುವ ಸಾಹಸ ಕೆಲಸಕ್ಕೆ ಮುಂದಾಗುತ್ತಾರೆ ರೈತರು.
ಬಳ್ಳಾರಿ ನಗರದ ತಾಳುರು ರಸ್ತೆಯ ಡಾಕ್ಟರ್ ಕ್ಯಾಂಪ್ ಪಕ್ಕದಲ್ಲಿ ಮಂಜುನಾಥ್ ಅನ್ನುವ ರೈತ 20 ಎಕರೆಗೆ ಬೇಕಾಗುವಷ್ಟು ಭತ್ತದ ಸಸಿಮಡಿಗಳು ಗಳು ಹಾಕಿಕೊಂಡಿದ್ದಾರೆ.
ನೀರು ಇಲ್ಲದೆ ಕಾರಣ ಟ್ಯಾಂಕರ್ ಗಳು ಮೇಲೆ ಅಧಾರಿತ ಹಾಗಿದ್ದರೆ.
ರೈತ ಮಂಜುನಾಥ್ ನ್ಯೂಸ್9ಟುಡೇ ಜೊತೆಯಲ್ಲಿ ಮಾತನಾಡುತ್ತಾ ನೀರು ಬಿಡುವ ಸಮಯದಲ್ಲಿ ನಾಲೆಗಳ ರಿಪೇರಿ ಇಟ್ಟುಕೊಂಡು ಸರ್ಕಾರ ರೈತರು ಗೆ ತೊಂದರೆ ಮಾಡುತ್ತದೆ, ಯಾರೂ ಕೂಡ ಇದರ ಬಗ್ಗೆ ಗಮನವನ್ನು ಹರಿಸಲು ಅಗದು ಅವರ ಗೆ ಏಂದು ಬೇಸರ ವ್ಯಕ್ತಪಡಿಸಿದ್ದಾರೆ. (ಕೆ.ಬಜಾರಪ್ಪ ವರದಿಗಾರರು )