ಪೋಲಿಸ್ ಇಲಾಖೆಗೆ ಕೂಡ ಜಾತಿ ಬಣ್ಣ!!.
ಸುಭಾಷ್ ವರ್ಸಸ್ ರಫೀಕ್. (ಬಳ್ಳಾರಿ.೧೦) ಕಾಂಗ್ರೆಸ್ ಸರ್ಕಾರ ಅಂದರೆ ಬಡವರ ಹಿಂದುಳಿದ ದಲಿತರ ಪರವಾಗಿ ಇರುವ ಸರ್ಕಾರ,ಇಂದಿರಾಗಾಂಧಿ ಸರ್ಕಾರ ಎಂದು ಭಾವನೆ ಇತ್ತು.
ಆದರೆ ಕಾಲ ಗರ್ಭದಲ್ಲಿ, ಎಲ್ಲವೂ ಮಾಯವಾಯಿತು.
ಶ್ರೀಮಂತರು, ಮೋಸದ ವ್ಯವಹಾರಗಳು, ಮಾಡುವ ನಕಲು ನಾಯಕರು ನಾಲ್ಕು ರೂಪಾಯಿಗಳು ಜನರಿಗೆ ಹಾಕಿ ರಾಜಕೀಯ ಮಾಡುವ ಪಕ್ಷ ಕಾಂಗ್ರೆಸ್ ಪಕ್ಷವಾಗಿದೆ.
ಅಲ್ಪಸ್ವಲ್ಪ ರಾಜಕಾರಣಿಗಳನ್ನು ಹೊರತುಪಡಿಸಿ ಉಳಿದೆಲ್ಲರೂ ಅಪ್ರಯೋಜಕರು.
ತಮ್ಮ ಭದ್ರತೆಗೆ ಬೇಕಾದ ಅನುಕೂಲಗಳನ್ನು ಮಾಡಿಕೊಂಡು,ಜಿಲ್ಲೆಯ ಅಳಿವು ಉಳಿವಿಗಾಗಿ ಶ್ರಮ ಪಡುತ್ತಿಲ್ಲ.
ಇದರಿಂದಾಗಿ ಸಾರ್ವಜನಿಕರು ಬೀದಿಗೆ ಇಳಿದು ಪ್ರಶ್ನೆ ಮಾಡುವಂತಾಗಿದೆ.
ಈ ಕಾರಣದಿಂದಾಗಿ ಗೌರವಾನ್ವಿತ ಸ್ಥಾನದಲ್ಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮತ್ತು ಡಿಕೆ ಶಿವಕುಮಾರ್ ಅವರ ಗೌರವಕ್ಕೆ ಧಕ್ಕೆಯಾಗುವ ಸಂಭವವಿದೆ.
ಇದರಿಂದಾಗಿ ಪ್ರತಿಯೊಬ್ಬರೂ ರಾಜಕೀಯ ಮಾಡುವುದಕ್ಕೆ ಮುಂದಾಗುತ್ತಿದ್ದಾರೆ.
ಸರ್ಕಾರದ ಅಧಿಕಾರಿಗಳಿಗೂ ಕೂಡ ದಿಕ್ಕು ತೋಚದಂತೆ ಆಗಿದೆ.
ಸಾಧಾರಣವಾಗಿ ರಾಜಕಾರಣದಲ್ಲಿ ಚುನಾಯಿತ ವ್ಯಕ್ತಿಗಳಿಗೆ ಮಾತ್ರವೇ ಆಡಳಿತದಲ್ಲಿ ಹಕ್ಕು ಇರುತ್ತದೆ.
ಬಳ್ಳಾರಿ ಜಿಲ್ಲೆಯ ರಾಜಕಾರಣದಲ್ಲಿ ಎಲ್ಲವೂ ತಲೆಕೆಳಗಾಗಿದೆ.
ಪ್ರಸ್ತುತ ರಾಜಕಾರಣಿಗಳಲ್ಲಿ ಯಾರು ಅನುಭವ ಇಲ್ಲದಿರುವ ನಾಯಕರು ಇಲ್ಲ.
ಎಲ್ಲರೂ ಬಲ್ಲದಿಗ್ಗಜರು ಇದ್ದಾರೆ, ಮಾರ್ಗದರ್ಶಕರು ಇದ್ದಾರೆ,ಇವರೆಲ್ಲರೂ ತಮ್ಮ ಅಧಿಕಾರವನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ ಅನ್ನುವ ಆರೋಪಗಳು ಇದ್ದಾವೆ.
ಇದರಿಂದಾಗಿ ನಿಷ್ಠಾವಂತ ಅಧಿಕಾರಿಗಳ ವರ್ಗಾವಣೆ ಪ್ರಕ್ರಿಯೆಯಲ್ಲಿ ಬಳ್ಳಾರಿ ರಾಜಕೀಯ ಮುಗಿಲು ಮುಟ್ಟಿದೆ.
ಇನ್ನು ಕೇಲವರು ರಾಜ್ಯದಲ್ಲಿ ಸಚಿವರು, ಶಾಸಕರು, ನಾಯಕರು ಪ್ರವಾಸ ಮಾಡುತ್ತಾ ಮೋಜು ಮಸ್ತಿ ಮಾಡುತ್ತಿದ್ದಾರೆ,ಅನ್ನುವ ಆರೋಪಗಳು ವಿರೋಧ ಪಕ್ಷದ ಮುಖಂಡರ ವಾದ.
ಇದರಿಂದಾಗಿ ಬಹುತೇಕ ನಿಷ್ಠಾವಂತ ಅಧಿಕಾರಿಗಳು ಬಳ್ಳಾರಿ ಜಿಲ್ಲೆಯ ಸಹವಾಸ ಬೇಡವೇ ಬೇಡ ಅನ್ನುವ ವಾತಾವರಣ ಸೃಷ್ಟಿಯಾಗಿದೆ.
ಇದರಿಂದಾಗಿ ಆಡಳಿತ ವ್ಯವಸ್ಥೆಯ ಮೇಲೆ ಬಹಳ ಕೆಟ್ಟ ಪರಿಣಾಮ ಬೀಳುತ್ತದೆ.
ಪೋಲಿಸ್ ಇಲಾಖೆಯ ವರ್ಗಾವಣೆಯ ವಿಚಾರದಲ್ಲಿ ಕೂಡ ಜಾತಿ, ಬೇಧ – ಭಾವ ತಾರತಮ್ಯ ಲೆಕ್ಕಾಚಾರಗಳು ಆರಂಭವಾಗಿದೆ.
ಗ್ರಾಮೀಣ ವ್ಯಾಪ್ತಿಯಲ್ಲಿ ಬಹುತೇಕ ಪೊಲೀಸ್ ಠಾಣೆಗಳು ಜಾತಿಯ ರೂಪ ತಾಳಿವೆ.
ಪ್ರಸ್ತುತ ಕೌಲ್ ಬಜಾರ್ ಠಾಣೆಯಲ್ಲಿ ಕೂಡ ಜಾತಿಯ ವಾಸನೆ ಕೇಳಿ ಬರುತ್ತದೆ.
ಇದೇ ಪೊಲೀಸ್ ಠಾಣೆಯಿಂದ *ವಾಸುಕುಮಾರ* ಕಂಪ್ಲಿಗೆ ವರ್ಗಾವಣೆ, ಮಹಿಳಾ ಠಾಣೆಯಿಂದ ಸುಭಾಷ್ ಅಲ್ಲಿಗೆ ಅನ್ನುವ ಮಾತು ಕೇಳಿ ಬಂದಿತ್ತು, ಆದರೆ ಇಲ್ಲಿ ಈ ಹಿಂದೆ ನಡೆದ ಕೇಲ ದೇಶ ಮಟ್ಟದ ಕೇಲ ಗೊಂದಲ ವಿಚಾರದಲ್ಲಿ ಜಿಲ್ಲೆಯಲ್ಲಿ ಕೂಡ ಬಿಕ್ಕಟ್ಟು ವಾತಾವರಣ ಸೃಷ್ಟಿ ಯಾದ ಸಮಯದಲ್ಲಿ *ಸುಭಾಷ್* ಕಟ್ಟುನಿಟ್ಟಿನ ಕಾನೂನು ಕ್ರಮ ಕೈಗೊಂಡಿದ್ದಾರೆ ಅನ್ನುವ ಮತ್ತು ಒಂದು ಸಮುದಾಯಕ್ಕೆ ಸಹಕಾರ ಮಾಡಿಲ್ಲ ಅನ್ನುವ, ಇನ್ನೂ ಸ್ವಲ್ಪ ಹೆಚ್ಚು ಕಡಿಮೆ ಮಾತುಗಳು ಕೇಳಿ ಬಂದಿದ್ದಾವೆ.
ಇದರಿಂದ ಕೌಲ್ ಬಜಾರ್ ಠಾಣೆಗೆ ಮುಸ್ಲಿಂ ಸಮುದಾಯದ ಲೋಕಾಯುಕ್ತ ಕಚೇರಿಯಲ್ಲಿ ಇರುವ ರಫೀಕ್ ಗೆ ಹಾಕಬೇಕು ಅನ್ನುವ ಪ್ರಯತ್ನಗಳು ನಡೆದಿವೆ ಅನ್ನುವುದು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತದೆ.
ಇದರಲ್ಲಿ ಸಚಿವರ ಶಾಸಕರ ಪ್ರತಿಷ್ಠೆ ಇದೇ ಅನ್ನುವ ಗುಸು-ಗುಸು ಮಾತು ಕೇಳಿಬರುತ್ತಿದೆ.
ಪ್ರಸ್ತುತ ಕೌಲ್ ಬಜಾರ್ ಠಾಣೆ ಗೌರವಾನ್ವಿತ ಅಧಿಕಾರಿಯಾದ *ಡಿವೈಎಸ್ಪಿ ಉಮಾ ರಾಣಿ* ಇಂಚಾರ್ಜ್ ಇದ್ದಾರೆ.
ಜಾತಿ ರಾಜಕಾರಣ ಆರಂಭವಾದರೆ, ಮುಂದಿನ ದಿನಗಳಲ್ಲಿ ಜಿಲ್ಲೆಯಲ್ಲಿ ಹಲ್ಲೋಲ ಕಲ್ಲೋಲ ವಾತಾವರಣ ಸೃಷ್ಟಿಯಾಗಬಹುದು.
ಭಯದ ವಾತಾವರಣ ನಿರ್ಮಾಣವಾಗಬಹುದು, ಜನರು ದಂಗೆ ಎಳುವ ಸಾಧ್ಯತೆ ಇದೆ ಎಂದು ಜನರು ಅಭಿಪ್ರಾಯಪಟ್ಟಿದ್ದಾರೆ.
ಕಾನೂನು ಪಾಲನೆ ಸುವ್ಯವಸ್ಥೆಯಲ್ಲಿ ಪಾರದರ್ಶಕತೆ ಇರಬೇಕು ಯಾವುದೇ ಸಮುದಾಯ ಆಗಿರಲಿ ಎಲ್ಲರನ್ನು ಸಮಾನವಾಗಿ ನೋಡುವ ಚಿಂತನೆ ಇರಬೇಕು. (ಕೆ. ಬಜಾರಪ್ಪ ವರದಿಗಾರರು ಕಲ್ಯಾಣ ಕರ್ನಾಟಕ.)