ಬಳ್ಳಾರಿ ಜಿಲ್ಲೆಯ ಲಾರಿ ಮಾಲಿಕರ ಸಂಘದ ಪದಾಧಿಕಾರಿಗಳ ಮೇಲೆ ಹಲ್ಲೆ ಪ್ರಕರಣ ದಾಖಲು!!
•ಜಿಲ್ಲೆ ಯಲ್ಲಿ ದಲಿತರಿಗೆ ರಕ್ಷಣೆ ಇಲ್ಲವೇ.?
•ಪ್ರಕರಣ ದಾಖಲೆ ಆಗಿದ್ದರು ಪೋಲಿಸರ ಗೆ ಕಾನೂನಿನ ತೊಡಕು??
•ಶಾಸಕರು ಯಾರ ಪರವಾಗಿ??.
•ಸಚಿವರು ಯಾರು ಪರವಾಗಿ?? .
•ದಿಗ್ಗಜ ರಾಜಕಾರಣಿ ಶ್ರೀ ರಾಮುಲು ಅಜ್ಞಾತ ದಲ್ಲಿಯೇ!!.
•ಲಾರಿ ಅಸೋಸಿಯೇಷನ್ ಗೆ ದಲಿತರು ಅಧ್ಯಕ್ಷರು ಅಗಬಾರದೆ??. ಬಳ್ಳಾರಿ(16)ಬಳ್ಳಾರಿ ಜಿಲ್ಲೆ ವ್ಯಾಪಾರ ವಹಿವಾಟುಗಳು ಗೆ ಖ್ಯಾತಿ ಪಡೆದಿದೆ. ಒಂದಾನೊಂದು ಕಾಲದಲ್ಲಿ ಗಣಿಗಾರಿಕೆ ಮತ್ತು ಮುಂತಾದ ವಹಿವಾಟು ಗಳು ಜಿಲ್ಲೆಯ ಕೀರ್ತಿ ಪ್ರಪಂಚ ಮಟ್ಟದಲ್ಲಿ ಇತ್ತು.
ಹತ್ತಾರು ವರ್ಷಗಳ ಹಿಂದೆ ಸ್ಥಾಪಿಸಿದ ಸಂಘ ಕ್ಕೆ ಯಾವುದೇ ಸಮಸ್ಯೆಗಳು ಇರಲಿಲ್ಲ ಎಲ್ಲರೂ ಚನ್ನಾಗಿ ಮಾಡಿಕೊಂಡು ಹೋಗುತ್ತಾ ಇದ್ದರು. ಬಹುತೇಕ ಲಾರಿ ಮಾಲಿಕರು,ಒಂದಿಷ್ಟು ಲೀಡರ್ ಗಳು ಜಿಲ್ಲೆಯ ಗುಡ್ ಷೇಡ್,ಲೋಡಿಂಗ್ ಅನ್ ಲೋಡಿಂಗ್ ಮೇಲೆ ಹಮಾಲಿ ಗುತ್ತಿಗೆಯ ಮೇಲೆ ಜೀವನ ಮಾಡುವ ಅವರು.
ಇದನ್ನು ನೋಡುತ್ತ ಇರುವವರು ಬಹುತೇಕ ಆಂಧ್ರಪ್ರದೇಶದ ಮೂಲದ,ಮತ್ತು ಕರ್ನಾಟಕ ಜನ.
ಕೇಲ ವರ್ಷಗಳ ಹಿಂದೆ ಲಾರಿ ಅಸೋಸಿಯೇಷನ್ ನಲ್ಲಿ ಲೋಡಿಂಗ್ ಗೆ ಕೂಪನ್ ಕೊಡುವ ವಿಚಾರದಲ್ಲಿ ಅಧಿಕ ಪ್ರಮಾಣದಲ್ಲಿ (ಹೇವಿ ಟನ್ )ಸಾಗಣಿಕೆ ಮಾಡುವ ವಿಚಾರದಲ್ಲಿ ಗೊಂದಲ ಗಳು ಸೃಷ್ಟಿ ಆಗಿದ್ದವು.
ಅದು ಪೋಲಿಸ್ ಠಾಣೆಯ ಮೆಟ್ಟಿಲು ಗಳು ನ್ಯಾಯಲಯ ಗಳು ವರಗೆ ತಲುಪಿತ್ತು.
ಇದು ಒಂದು ರೀತಿಯಲ್ಲಿ ಅಸೋಸಿಯೇಷನ್ ಬಾಗಿಲು ಹಾಕುವ ಮಟ್ಟಕ್ಕೆ ಮತ್ತು ಅಧ್ಯಕ್ಷ ರನ್ನು ಬದಲಾವಣೆ ಮಾಡುವ ವರೆಗೆ ಗಲಾಟೆ ಗಳು ಆರಂಭ ವಾಗಿತ್ತು,ಆದರೆ ಕೇಲ ದಿನಗಳು ಎಲ್ಲವು ನಿಶಬ್ದ ವಾತಾವರಣ ದಲ್ಲಿ ಇತ್ತು.
ಕೂಪನ್ ಕೊಡುವ ವ್ಯವಸ್ಥೆ ರದ್ದು ಆಗಿತ್ತು,ಇಷ್ಟ ರಲ್ಲಿ ಅಧ್ಯಕ್ಷರ ನೇಮಕ ವಿಚಾರ ಆರಂಭ ವಾಗಿದ್ದು, ಸಂಘದ ವಿರುದ್ಧ ದೂರು ಸಲ್ಲಿಸಲಾಗಿತ್ತು.
ತನಿಖೆ ಮಾಡಿದ ಸಂಸ್ಥೆ ಸಂಘದಲ್ಲಿ ಯಾವುದೇ ರೂಲ್ಸ್ ಬಿಟ್ಟು ಮಾಡಿಲ್ಲ ಎಲ್ಲವು ಸರಿಯಾಗಿ ಇದ್ದಾವೆ ಅನ್ನುವ ಕ್ಲಿನ್ ಚಿಟ್ ನೀಡಿದ್ದಾರೆ ಎಂದು, ಅದರ ಪ್ರಕಾರವೇ ಕೆಲ ತಿಂಗಳ ಗಳು ಹಿಂದೆ ದಲಿತ ಸಂಘದ ಸಮಾಜದ ಲಾರಿ ಮಾಲಿಕರು ಅಗಿರುವ ಪೆದ್ದನ್ನ ಅವರನ್ನು ಅಧ್ಯಕ್ಷರಾಗಿ ಆಯ್ಕೆ ಮಾಡಿಕೊಂಡಿದ್ದಾರೆ ಅದು ಕೂಡ ಬೈಲಾ ಪ್ರಕಾರವೇ ಆಗಿದ್ದಾರೆ ಎಂದು ತಿಳಿದು ಬಂದಿದೆ.
ಇದಕ್ಕೆ ಈ ಹಿಂದೆ ವಿಜಯ ಭಾಸ್ಕರ್ ರೆಡ್ಡಿ ಅನ್ನುವ ಲಾರಿ ಮಾಲಿಕರು,ಅಧ್ಯಕ್ಷರು ಆಗಿದ್ದರು, ಕೆಲ ಕಾರಣಗಳಿಂದ ಇವರನ್ನು ಇಳಿಸಿ ಮುನ್ನಾ ಭಾಯಿ ಅವರನ್ನು ಅಧ್ಯಕ್ಷರು ಮಾಡಲಾಗಿತ್ತು, ತದನಂತರ ಪೆದ್ದನ್ನ ಆಗಿದ್ದಾರೆ,ಅಂದಿನಿಂದ ವಿಜಯ ಭಾಸ್ಕರ್ ರೆಡ್ಡಿ ಅವರ ಟೀಮ್ ವಿರೋಧ ಮಾಡುತ್ತಾ ಇದ್ದಾರೆ.
ಇದರಲ್ಲಿಯೂ ರಾಜಕೀಯದ ಬಣ್ಣ ಪಡೆದು ಕೊಂಡಿದೆ.
ಶಾಸಕರು ವಿಜಯ ಭಾಸ್ಕರ್ ರೆಡ್ಡಿ ಟೀಮ್ ಗೆ ಹಂಗಾಮಿ ಅಧ್ಯಕ್ಷರನ್ನಾಗಿ ಮಾಡಿಕೊಂಡು ಬನ್ನಿ ಡಿ.ಸಿ ಅವರ ಜೊತೆಯಲ್ಲಿ ಮಾತನಾಡುವೇ ಎಂದು ಹೇಳಿದ್ದಾರೆ ಅನ್ನುವ ಸಮಾಚಾರ ಕೆಲ ಪತ್ರಿಕೆ ಗಳಲ್ಲಿ ಪ್ರಚಾರ ಆಗಿದೆ.
ಇದರಿಂದ ವಿಜಯಬಾಸ್ಕರ ರೆಡ್ಡಿ ಟೀಮ್ ಮತ್ತಷ್ಟು ಸಂಘದ ವಿರುದ್ಧ ಚಟುವಟಿಕೆಗಳನ್ನು ಮಾಡುತ್ತಾ ಬಂದಿದ್ದಾರೆ ಅನ್ನುವ ಅರೋಪ ಇದೆ.
ವಿಜಯ ಭಾಸ್ಕರ್ ರೆಡ್ಡಿ ಗೆ 60.70.ಮೇಲ್ಪಟ್ಟ ಲಾರಿಗಳು ಇದ್ದಾವೆ.F.C.ಫ್ಯಾಕ್ಟರಿ ಗಳ ಟ್ರಾನ್ಸ್ ಪೋರ್ಟ್ ಇದೇ.
ಇದರಲ್ಲಿ ವಿಜಯ ಭಾಸ್ಕರ ರೆಡ್ಡಿ ತುಂಬಾ ಚತುರ ಪ್ರತಿಭೆಯ ಉಳ್ಳ ಲಾರಿ ಮಾಲಿಕರು.
ಲಾರಿ ಅಸೋಸಿಯೇಷನ್ ಇವರ ಕೈಯಲ್ಲಿ ಇದ್ದರೆ ಇವರ ವಾಹನಗಳುಗೆ ಕೈ ತುಂಬಾ ಕೆಲಸ.
ರಾಜ ಇವರೆ ಮಂತ್ರಿ ಇವರೆ ಅನ್ನುವ ಆಲೋಚನೆ,ನೂರಾರು ವರ್ಷಗಳ ದಿಂದ ನೆಡೆಯುತ್ತಿರುವ ಸಂಘದಲ್ಲಿ ವಿಜಯ ಭಾಸ್ಕರ್ ರೆಡ್ಡಿ ಅವರನ್ನು ಅಧ್ಯಕ್ಷ ಸ್ಥಾನ ದಿಂದ ಹೊರಗಡೆ ಹಾಕಿದ ದಿನದಿಂದ ರೆಡ್ಡಿ ಗೆ ಕಸಿ ಬಿಸಿ ಅಗಿದೆ.
ಕೊನೆಗೆ ವಿಜಯ ಭಾಸ್ಕರ್ ರೆಡ್ಡಿ RTO ಕೆಲಸವನ್ನು ಮಾಡಿದರು ಇವರು ನೇರವಾಗಿ ಗಾಡಿಗಳನ್ನು ಹಿಡಿದು ಕೊಂಡು(ಟನ್ನೆಜ್) ತನಿಖೆ ಮಾಡುವ ಕೆಲಸವನ್ನು ಮಾಡಿದ್ದರು.
ಅಂದರೆ ಸರ್ಕಾರದ ಅಧಿಕಾರಿಗಳು ವಿಜಯಭಾಸ್ಕರ್ ರೆಡ್ಡಿಯವರ ಕೈ ಗೊಂಭೆ ಗಳು ಆಗಿದ್ದಾರೆ ಎಂದು ಮೇಲೆ ನೋಟಕ್ಕೆ ಕಾಣುತ್ತದೆ.
ಸಾರಿಗೆ ಇಲಾಖೆಯಲ್ಲಿ ಇನ್ನೂ ಯಾಕೆ ಇವರಿಗೆ ಸಂಬಳ ? ಭ್ರಷ್ಟಾಚಾರದ ದುಡ್ಡು ಇರುವಾಗಲೇ .ಸರ್ಕಾರ ಬದಲಾವಣೆ ಅಗಿ ಹೋಯಿತು, ಕಾಂಗ್ರೆಸ್ ಸರ್ಕಾರ ಅಡಳಿತ ಕ್ಕೆ ಬಂತು ಅಂದಿನಿಂದ ವಿಜಯಭಾಸ್ಕರ್ ರೆಡ್ಡಿ ಜಾತಿ ಲೆಕ್ಕಾಚಾರದ ಮೇಲೆ ಅಸೋಸಿಯೇಷನ್ ಮೇಲೆ ದಬ್ಬಾಳಿಕೆ ಮಾಡುವ ಪ್ಲಾನ್ ಮಾಡಿದ್ದಾರೆ ಎಂದು ಆರೋಪ.
ಧೀಮಂತ ನಾಯಕ ಸೂರ್ಯನಾರಾಯಣ ರೆಡ್ಡಿ ಪುತ್ರರಾದ ನಾರಾ ಭರತ್ ರೆಡ್ಡಿ ಶಾಸಕರನ್ನಾಗಿ ಮಾಡಿ ಜನರು ಬದಲಾವಣೆ ಬಯಸಿದ್ದಾರೆ,ಪದೆಪದೆ ನಗರ ಶಾಸಕರ ಬೆಂಬಲ ಇದೇ ನಾವು ಯಾಕೆ ಸುಮ್ಮನೆ ಇರಬೇಕು ಅನ್ನುವ ನಿಟ್ಟಿನಲ್ಲಿ ಅಸೋಸಿಯೇಷನ್ ಅಧ್ಯಕ್ಷರು ಅಗಿರವ ದಲಿತ ಸಮಾಜದ ಪೆದ್ದನ್ನ ಮೇಲೆ ಇತರರು ಮೇಲೆ ಹಲ್ಲೆ ಮಾಡಿದ್ದಾರೆ ಅನ್ನುವ ನಿಟ್ಟಿನಲ್ಲಿ SC.ST ಕಾಯ್ದೆ ಪ್ರಕಾರ ಪ್ರಕರಣ ದಾಖಲೆ ಅಗಿದೆ.
ಜಿಲ್ಲೆಯ ದಲಿತ ಮುಖಂಡರು ಹೆಚ್ಚಿನ ಮಟ್ಟದಲ್ಲಿ ಇದ್ದರು ಕೂಡ ದಲಿತರ ಮೇಲೆ ನಡು ರಸ್ತೆ ಯಲ್ಲಿ ಹಲ್ಲೆ ಮಾಡುವ ವಾತಾವರಣ ಸೃಷ್ಟಿ ಅಗಿದೆ ಅಂದರೆ ಇದಕ್ಕೆ ರಾಜಕಾರಣಿಗಳ ಬೆಂಬಲ ಇದೇ ಅನ್ನುವುದು ಬಹಿರಂಗ ಸತ್ಯದ ವಿಚಾರ ಅಗಿದೆ.
ಈಗಾಗಲೇ ವಿಜಯ ಭಾಸ್ಕರ ರೆಡ್ಡಿ ಟೋಮ್ ಲಾರಿ ಮಾಲಿಕರಿಗೆ ನಗರದ ಶಾಸಕರ ಹೆಸರು ಹೇಳಿಕೊಂಡು ಗ್ರೂಪ್ ಗಳಲ್ಲಿ ವಾಯಸ್ಸ್ ಮೂಲಕ ಪಂಚಾಯತ್ ಗೆ ಬರಲು ಆಹ್ವಾನ ಮಾಡಿದ್ದಾರೆ.
ಉಸ್ತುವಾರಿ ಸಚಿವರು ಮಾತ್ರ ಮೌನ ವಾಗಿದ್ದಾರೆ.
ದಿಗ್ಗಜ ರಾಜಕಾರಣಿ ಶ್ರೀ ರಾಮುಲು ಕೂಡ ಅಜ್ಞಾತ ದಲ್ಲಿ ಇದ್ದಾರೆ.
ದಲಿತರ ಮೇಲೆ ಹಲ್ಲೆ ಆಗಿದ್ದರು ಕೂಡ ಕಾನೂನು ತೊಡಕುಗಳು ಇದ್ದಾವೆ ಎಂದು ಡಿಪಾರ್ಟ್ಮೆಂಟ್ ಕೂಡ ಟೈಮ್ ಪಾಸ್ ಮಾಡುತ್ತಾ ಇದೆ.
ಇನ್ನೂ ಮೇಲೆ ದಲಿತರ ಮೇಲೆ ಹಲ್ಲೆ ಮಾಡಿದರೆ ಭಯಪಡುವ ಅವಶ್ಯಕತೆ ಕಾಯ್ದೆ ಗಳು ಏನು ಮಾಡೋದು ಇಲ್ಲವೆಂದು ಇದರಿಂದಲೇ ತಿಳಿಯುತ್ತದೆ.!!.
ಆರೋಪ ಗಳು ಇದ್ದರು ಕೂಡ ಮತ್ತೆ ಶಾಸಕರು ಪಂಚಾಯತಿ ಮಾಡುತ್ತಾರೆ ಬನ್ನಿ ಎಂದು ಗ್ರೂಪ್ ಗಳಲ್ಲಿ ಹಾಕಿ ಆಹ್ವಾನ ಮಾಡುತ್ತಾರೆ ಅಂದರೆ, ಜನರಿಗೆ ಯಾವ ಸಂದೇಶ ನೀಡುತ್ತಾರೆ, ಇವರು.
ಇವರಿಗೆ ಬೆಂಬಲ ನೀಡುವ ರಾಜಕಾರಣಿಗಳಿಗೆ ಮಾಹಿತಿ ಬೇಡವೇ ದಲಿತರ ಮೇಲೆ ಹಲ್ಲೆ ಮಾಡಿದ ಪ್ರಕರಣ ದಲ್ಲಿ ಇರುವ ವ್ಯಕ್ತಿಗಳು ಕೂಡ ಅವರ ಜೊತೆಯಲ್ಲಿ ಪಂಚಾಯತಿ ಕಟ್ಟೆ ಮಾಡುತ್ತಾರೆ ಅಂದರೆ ಏನು ಅರ್ಥ ಎಂದು ಸಾರ್ವಜನಿಕರ ಪ್ರಶ್ನೆ ಅಗಿದೆ. ಅಂದರೆ ನಗರದ ಶಾಸಕರು ದಲಿತ ವಿರೋಧಿ ಅನ್ನುವ ಪಟ್ಟಿಯನ್ನು ಪಡೆಯುವ ಸಾಧ್ಯತೆ ಇದೆಯಾ.??.
ಸೂಕ್ಷ್ಮತೆ ವಿಚಾರಗಳಲ್ಲಿ ಶಾಸಕರ ಹೆಸರು ದುರ್ಬಳಕೆ ಆಗುತ್ತದೆ ಅನ್ನುವ ಅನುಮಾನಗಳು ಕೂಡಾ ಇದ್ದಾವೆ.ನಾರಾ ಭರತ್ ರೆಡ್ಡಿ ಅವರು ವಯಸ್ಸಿನಲ್ಲಿ ಚಿಕ್ಕವರು ಆಗಿರಬಹುದು ಆದರೆ ರಾಜಕೀಯದ ಮನೆತನದಲ್ಲಿ ಬೆಳೆದ ಲೀಡರ್.
ಪದೇ ಪದೇ ವಿಜಯಭಾಸ್ಕರ್ ರೆಡ್ಡಿ ಟೀಮ್ ಶಾಸಕರ ಹೆಸರು ಬಂಡವಾಳ ಮಾಡಿಕೊಂಡು ಗೊಂದಲಗಳನ್ನು ಸೃಷ್ಟಿ ಮಾಡುತ್ತಾರೆ ಎಂದು ಕೆಲ ಲಾರಿ ಮಾಲಿಕರ ಗುಸು ಗುಸು ಇದೇ.
ಕೊನೆಗೆ ಲಾರಿ ಅಸೋಸಿಯೇಷನ್ ಜಗಳ ಶಾಸಕರ ಮೇಲೆ ಇಟ್ಟಿದ್ದು ಅಚ್ಚರಿ ಅಗಿದೆ.
ಮುಂದೆ ಯಾವ ಮಟ್ಟಕ್ಕೆ ತಲುಪುತ್ತದೆ ಅನ್ನವದು ಕಾದುನೊಡಬೇಕಾಗಿದೆ. ಎಲ್ಲರು ಚನ್ನಾಗಿ ಇದ್ದು ಅಸೋಸಿಯೇಷನ್ ಬೆಳೆದು ಕೊಂಡು ಹೋಗಬೇಕು ಅಗಿದೆ ಅನ್ನುವ ವಿಚಾರ ಲಾರಿ ಮಾಲಿಕರ ಮನಸ್ಸು ಅಗಿದೆ. ಶಾಸಕರು ವಾಸ್ತವ ವಿಷಯ ಪರಿಶೀಲನೆ ಮಾಡಬೇಕು ಅಗಿದೆ. ದಲಿತರ ಮೇಲೆ ನಡೆದ ಹಲ್ಲೆ ರಾಜ್ಯಮಟ್ಟದ ದಲ್ಲಿ ಹೋರಾಟ ಗಳು ಆಗುವ ಸಾಧ್ಯತೆ ಗಳು ಇದ್ದಾವೆ.ಶಾಸಕರ ಬಳಿ ಅಸೋಸಿಯೇಷನ್ ಯಲ್ಲಿ ಇರುವ ಸಂಬಂಧಿಗಳು ಇದ್ದಾರೆ ಅನ್ನುವ ಹಿನ್ನೆಲೆಯಲ್ಲಿ ಅವರು ಪರವಾಗಿ ಬ್ಯಾಟಿಂಗ್ ಮಾಡುತ್ತಾರೆ ಅನ್ನುವ ಗುಸು,ಗುಸು ಇದೇ.
(ಕೆ.ಬಜಾರಪ್ಪ ವರದಿಗಾರರು ಕಲ್ಯಾಣ ಕರ್ನಾಟಕ.)