This is the title of the web page
This is the title of the web page

Please assign a menu to the primary menu location under menu

State

ಕೀಳಮಟ್ಟದ ರಾಜಕಾರಣಿ ಜನಾರ್ದನ ರೆಡ್ಡಿ ; ಚಾನಾಳ್ ಶೇಖರ್

ಕೀಳಮಟ್ಟದ ರಾಜಕಾರಣಿ ಜನಾರ್ದನ ರೆಡ್ಡಿ ; ಚಾನಾಳ್ ಶೇಖರ್

ಕೀಳಮಟ್ಟದ ರಾಜಕಾರಣಿ ಜನಾರ್ದನ ರೆಡ್ಡಿ ; ಚಾನಾಳ್ ಶೇಖರ್

ಬಳ್ಳಾರಿ (1)ಜನಾರ್ಧನರೆಡ್ಡಿ ಅವರ ಬೆಂಬಲಿಗರಿಗೆ ಭರತ್ ರೆಡ್ಡಿ ಅವರ ಬೆಂಬಲಿಗರಿಂದ ಮಾತಿನ ಚಕಮಕಿ ಮುಂದುವರಿದಿದೆ.

ಯಡಿಯೂರಪ್ಪ ಅವರನ್ನು ಕಣ್ಣೀರಿಡಿಸಿದ ದುಷ್ಟ ನಾಯಕ ಜನಾರ್ಧನ್ ರೆಡ್ಡಿ ಎಂದು ಕಾಂಗ್ರೆಸ್ ಮುಖಂಡ ಚಾನಾಳ್ ಶೇಖರ್ ಆಕ್ರೋಶ ವ್ಯಕ್ತಪಡಿಸಿದರು.

ಈ ಕುರಿತು ಬಳ್ಳಾರಿ ನಗರದ ಖಾಸಗಿ ಹೋಟಲ್ ಸಭಾಂಗಣದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

ಎಂ.ಪಿ.ಪ್ರಕಾಶ್ ಅವರು ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿರುವಾಗ ಗಾಲಿ ಜನಾರ್ಧನ ರೆಡ್ಡಿ ವಿಕೃತಿ ಮೆರೆದ, ಸಿದ್ದರಾಮಯ್ಯನವರ ಮಗನ ಸಾವಿನಲ್ಲಿ ವಿಕೃತಿ ಮೆರೆದು ಕೀಳುಮಟ್ಟದ ರಾಜಕಾರಣಿ ಜನಾರ್ಧನ ರೆಡ್ಡಿ ಎಂದು ಗುಡುಗಿದರು.ಗುರುವಾರ ಕೆ ಆರ್,ಪಿಪಿ ಮುಖಂಡರು ಶಾಸಕ ಭರತ್ ರೆಡ್ಡಿ ವಿರುದ್ಧ ವಾಗ್ದಾಳಿ ಮಾಡಿದ್ದರು. ಶುಕ್ರವಾರ ಕಾಂಗ್ರೆಸ್ ನ ಕೆಲ ಮುಖಂಡರು ಜನಾರ್ದನ ರೆಡ್ಡಿ ವಿರುದ್ಧ ಏಕವಚನ ದಲ್ಲಿ ವಾಗ್ದಾಳಿ ನಡೆಸಿದರು.ಕಾಂಗ್ರೆಸ್‌ನ ಪಾಲಿಕೆ ಕೇಲ ಸದಸ್ಯರುಗಳು, ಯುವ ಮುಖಂಡರು ಗಳು,ಚಾನಳ್ ಶೇಖರ್ ಉಪಸ್ಥಿತಿ ಇದ್ದರು.

ಹಿರಿಯ ರಾಜಕಾರಣಿಗಳು ಯಾರೂ ಇರಲಿಲ್ಲ.

ಕಾಂಗ್ರೆಸ್ ಮುಖಂಡರ ಏಕವಚನ ವಾಗ್ದಾಳಿ ಹಲವಾರು ಅನುಮಾನ ಗಳಗೆ ಎಡೆ ಮಾಡಿಕೊಟ್ಟಿದೆ.

ಸಂಪ್ರದಾಯ ಉಳ್ಳ ಕಾಂಗ್ರೆಸ್ ಪಕ್ಷದ ಮುಖಂಡರು ತಲೆ ತಲೆ ಗೆ ಒಬ್ಬರು ಆಕ್ರೋಶ ಭರಿತವಾದ ಮಾತುಗಳನ್ನು ನೋಡಿದರೆ ಮುಂದೆ ಏನು ಆಗಬಹುದು ಅನ್ನುವ ಅಲೊಚನೆ ಸಾರ್ವಜನಿಕರಲ್ಲಿ ಪ್ರಶ್ನೆ ಮೂಡುವಂತೆ ಅಗಿದೆ.

ಕೌಂಟರ್ ಕೊಡುವ ಪದ್ಧತಿ ಕೂಡ ಒಂದು ಸಿಸ್ಟಮ್ ನಲ್ಲಿ ಇರಬೇಕು ಯಾವುದೇ ಪಕ್ಷ ಕ್ಕೆ ಅಗಲಿ.

ಕಾರ್ಯಕರ್ತರ ಮನೋಭಾವ ಗಳು ಸಾರ್ವಜನಿಕರಲ್ಲಿ ಆತಂಕ ಮೂಡಿಸಬಾರದು. (ಕೆ.ಬಜಾರಪ್ಪ ವರದಿಗಾರರು ಕಲ್ಯಾಣ ಕರ್ನಾಟಕ.)

 


News 9 Today

Leave a Reply