This is the title of the web page
This is the title of the web page

Please assign a menu to the primary menu location under menu

State

ರಾಹುಲ್ ಗಾಂಧಿಗೆ ಪಪ್ಪು ಹೇಳಿಕೆ ವಿಚಾರ ; ಶ್ರೀರಾಮುಲುಗೆ ಸಚಿವ ನಾಗೇಂದ್ರ ತಿರುಗೇಟು

ರಾಹುಲ್ ಗಾಂಧಿಗೆ ಪಪ್ಪು ಹೇಳಿಕೆ ವಿಚಾರ ; ಶ್ರೀರಾಮುಲುಗೆ ಸಚಿವ ನಾಗೇಂದ್ರ ತಿರುಗೇಟು

ರಾಹುಲ್ ಗಾಂಧಿಗೆ ಪಪ್ಪು ಹೇಳಿಕೆ ವಿಚಾರ ; ಶ್ರೀರಾಮುಲುಗೆ ಸಚಿವ ನಾಗೇಂದ್ರ ತಿರುಗೇಟು

ಬಳ್ಳಾರಿ : ರಾಹುಲ್ ಗಾಂಧಿ ಅವರನ್ನು ಪಪ್ಪು ಎಂದಿದ್ದ ಮಾಜಿ ಸಚಿವ ಶ್ರೀರಾಮುಲುಗೆ ಸಚಿವ ನಾಗೇಂದ್ರ ತಿರುಗೇಟು ನೀಡಿದ್ದಾರೆ. ಮಾಜಿ ಸಚಿವ ಶ್ರೀರಾಮುಲು ಹೇಳಿಕೆ ಹಾಸ್ಯಾಸ್ಪದವಾಗಿದ್ದು, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರನ್ನು ಪಪ್ಪು ಎಂದ ಕರೆಯುವ ಇವರಿಗೆ ಅರ್ಹತೆಯಿಲ್ಲ ಎಂದು ಗುಡಿಗಿದ್ದಾರೆ.

ಬಳ್ಳಾರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು ಬಿಜೆಪಿ ಪಕ್ಷದ ಸುಳ್ಳಿನ ಕಥೆ ಜನರು ನೋಡಿದ್ದಾರೆ.
ಸುಳ್ಳು ಸುದ್ದಿ ಮತ್ತು ಅಪಪ್ರಚಾರ ಮಾಡುವಲ್ಲಿ ಬಿಜೆಪಿಗರು ನಿಸ್ಸಿಮರಾಗಿದ್ದಾರೆ. ಆದರೆ ದೇಶದ ಜನರು ಮತ್ತು ರಾಜ್ಯದ ಜನರು ಬಿಜೆಪಿಯ ಕುತಂತ್ರಗಳನ್ನು ನಂಬುವುದಿಲ್ಲ ಎಂದಿದ್ದಾರೆ.

ಮಾಜಿ ಸಚಿವ ಶ್ರೀರಾಮುಲು ಹೇಳಿಕೆ ಹಾಸ್ಯಾಸ್ಪದ. ರಾಹುಲ್ ಗಾಂಧಿ ಅವರ ಭಾರತ್ ಜೋಡೋ ಯಾತ್ರೆಯ ಒಂದು ಹೆಜ್ಜೆಗೆ ಬಿಜೆಪಿ ಯಾವ ಸ್ಥಾನಕ್ಕೆ ಕುಸಿದಿದೆ ನೋಡಿ. ತಾವು ತಮ್ಮ ಪಾರ್ಟಿ ಯಾವ ರೀತಿ ಸೋಲು ಕಂಡಿದೆ ಅಂತಾ ಮಾಜಿ ಸಚಿವ ಶ್ರೀರಾಮುಲು ಎಚ್ಚೆತ್ತುಕೊಳ್ಳಬೇಕು.
ರಾಹುಲ್ ಗಾಂಧಿ ಅವರನ್ನ ಪಪ್ಪು ಎನ್ನಲು ನೀವು ಅರ್ಹರಲ್ಲ‌ ಎಂದು ವಾಗ್ದಾಳಿ ನಡೆಸಿದ್ದಾರೆ.

ದೇಶದ ಉದ್ದಗಲಕ್ಕೂ ರಾಹುಲ್ ಗಾಂಧಿ ಅವರನ್ನ ಜನ ಮೆಚ್ಚಿಕೊಂಡಿದ್ದಾರೆ‌. ಮುಂದಿನ 2024ರ ಚುನಾವಣೆಯಲ್ಲಿ ನೋಡ್ತಿರಿ ನಿಮ್ಮ ದಿಕ್ಸೂಚಿ ಎಲ್ಲಿಗೆ ಹೋಗುತ್ತೆ ಅಂತಾ‌. ಈಗಾಗಲೇ ನಿಮ್ಮ ಭವಿಷ್ಯ ನೆಲಕಚ್ಚಿದೆ. ಸೋಲಿನ ಹತಾಶೆಯಿಂದ ಬಾಯಿಗೆ ಬಂದಂತೆ ಮಾತನಾಡುವುದು ಬಿಟ್ಟು ಬಿಡಿ ಎಂದು ಬಳ್ಳಾರಿ ಉಸ್ತುವಾರಿ ಸಚಿವ ನಾಗೇಂದ್ರ ಹೇಳಿದ್ದಾರೆ.(ಕೆ.ಬಜಾರಪ್ಪ ವರದಿಗಾರರು ಬಳ್ಳಾರಿ.)


News 9 Today

Leave a Reply