ಇಂದನಿಂದ ಮರಳು ಸರಬರಾಜು ಬಂದ್!!.ಮರಳು ನಲ್ಲಿ ವಜ್ರ ವೈಡೂರ್ಯವು ಇಲ್ಲ. ದುಬಾರಿ ಬೆಲೆಗೆ ಮರಳು ಟೆಂಡರ್!! ಬಳ್ಳಾರಿ (16) ತಾಲೂಕಿನ ವ್ಯಾಪ್ತಿಯಲ್ಲಿ ಬರುವ ಮರಳು ಬಿಟ್ಟ್ ಗಳು ಇಂದಿನಿಂದ ಮರಳು ಸರಬರಾಜು ನಿಲ್ಲಿಸುವಂತೆ ಗಣಿ ಇಲಾಖೆ ಅಧಿಕಾರಿಗಳು ಮೌಖಿಕವಾಗಿ ಆದೇಶ ಮಾಡಿದ್ದಾರೆ ಏಂದು ತಿಳಿದು ಬಂದಿದೆ.
ಈಗಾಗಲೇ ಬಳ್ಳಾರಿ ತಾಲ್ಲೂಕಿನ ಹಗರಿ ವೇದಾವತಿ ನದಿಯ ತೀರದಲ್ಲಿ, ವಣೆನೂರು ಕರಿಚೇಡು,ಅಸುಂಡಿ,ತಲಮಾಮಿಡಿ ಪ್ರದೇಶಗಳಲ್ಲಿ ಪಟ್ಟ ಲ್ಯಾಂಡ್,ಸರ್ಕಾರದ ಬಿಟ್ಟ್ ಗಳಲ್ಲಿ ಮರಳು ಸರಬರಾಜು ನಡೆಯುತ್ತಾ ಇತ್ತು.
ಆದರೆ ಪಟ್ಟ ಲ್ಯಾಂಡ್ ಬಿಟ್ಟ್ ಗಳು ಹೊರತುಪಡಿಸಿ,ಸರ್ಕಾರ ಬಿಟ್ಟ್ ಗಳ ಮರಳು ದರಗಳು ಕೇಳಿದರೆ ಅಚ್ಚರಿ ಮಾಡಿಸುವ ವಿಚಾರ ಇದೇ,ಕೇವಲ 80ರಿಂದ 120 ಗೆ ಸರ್ಕಾರದ ದರದಲ್ಲಿ ಸಿಗುವ ಮರಳು,ಸಾವಿರಾರು ರೂಪಾಯಿಗಳು ಗೆ ಅಧಿಕ ದರಗಳಲ್ಲಿ ಟೆಂಡರ್ ಮಾಡಿಕೊಂಡು, ಆಕ್ರಮ ದಂದೆ ಮಾಡಿದರೆ ಮಾತ್ರವೇ ನಾಲ್ಕು ರೂಪಾಯಿ ಗಳು,ಹಾಕಿರುವ ಬಂಡವಾಳ ಗಿಟ್ಟಿಸಿ ಕೊಳ್ಳುವ ವಾತಾವರಣ ಸೃಷ್ಟಿ ಮಾಡಿಕೊಂಡು,ಇತರ ಸಕ್ರಮ ಮರಳು ದಂದೆ ಗಳನ್ನು ಕೂಡ ಆಕ್ರಮ ಮರಳು ದಂದೆ ಗಳು ಅನ್ನುವ ಆರೋಪ ಗಳು ಮಾಡುವ ವಾತಾವರಣ ವ್ಯಾಪಾರಸ್ಥರು ಮಾಡಿಕೊಂಡಿದ್ದು ಅಚ್ಚರಿ ಮೂಡಿಸುತ್ತದೆ.
ಈಗಾಗಲೇ ಆಸುಂಡಿ, ಬಿಟ್ಟ್ 3350/-ಒಂದು ಟನ್ 10ಟನ್ ಗೆ 33.500/-ಶಿಫ್ಟ್ ಅಗು ಲೋಡಿಂಗ್10000/- ರೂಪಾಯಿ ಗಳು,ಒಟ್ಟಾರೆ10 ಟನ್ ಮರಳು 43,500/- ರೂಪಾಯಿ ಗಳು ಅಗುತ್ತಾವೇ.
ಇವರು ಮಾರಾಟ ಮಾಡುತ್ತ ಇರೊದು18000/- ಸಾವಿರ ದಿಂದ 22000/- ಗಳು,ಈ ರೀತಿಯಲ್ಲಿ 21000.ಸಾವಿರಗಳು ನಷ್ಟ ದಲ್ಲಿ ಇರುತ್ತದೆ, ಏನು ಮಾಡಿದರು,ಲಾಭ ಗಳಿಸಲು ಸಾಧ್ಯವಿಲ್ಲ, ಕೊನೆಗೆ ಅಕ್ರಮ ದಂದೆ ಮಾಡಲೇಬೇಕು.
ಒಂದು ಪರಿಮಿಟ್ ಮೇಲೆ ಹತ್ತಾರು ಗಡಿಗಳು,10 ಟನ್ ಪರವಾನಗಿ ಪಡೆದು 30.ಟನ್ ವರೆಗೆ ಮೇಲ್ಪಟ್ಟ ಅಕ್ರಮ ಮರಳು ಸರಬರಾಜು ಮಾಡಲೇಬೇಕು ಅಗಿದೆ.
ಅಕ್ರಮ ದಂದೆ ಮಾಡಲೇಬೇಕು.
ಇನ್ನೂ ಕೇಲ ಬಿಟ್ಟ್ ಗಳಲ್ಲಿ 2250/-1450/- ಗಳು ಗೆ ಟನ್ ಹರಾಜು ನಲ್ಲಿ ಟೆಂಡರ್ ಅಗಿದೆ ಇದು ಸರ್ಕಾರದ ಬಿಟ್ಟ್ ಗಳ,ಕಥೆ.
ಇದರಲ್ಲಿ ಪ್ರೈವೇಟ್ ಬಿಟ್ಟ್ ಗಳಲ್ಲಿ250/- ಟನ್ ಹರಾಜು ಆಗಿದೆ.
ಸಕ್ರಿಯವಾಗಿ ಪರಿಮಿಟ್ ಪ್ರಕಾರ ನಡೆಯುತ್ತದೆ ಎಂದು ಅಧಿಕಾರಿಗಳ ಮನೋಭಾವ ಇದೇ,ಕಣ್ಣಿಗೆ ಕಾಣುತ್ತದೆ ಕೂಡ,ಆದರೆ ಮತ್ತೊಂದು ವಿಚಾರ ಕೂಡ ಇದೆ,ಪಟ್ಟ ಲ್ಯಾಂಡ್ ಬಿಟ್ಟು ಸರ್ಕಾರದ ಪ್ರದೇಶದಲ್ಲಿ ಮರಳು ತೆಗೆದು ಮಾರಾಟ ಮಾಡಿದ್ದಾರೆ ಅನ್ನುವ ಆರೋಪ ಗಳು ಇದ್ದಾವೆ,ಆದರೆ ಯಾರು ಬಳಿ ಅಧಾರ ಗಳು ಇಲ್ಲ ಅಕ್ರಮ ಮರಳು ತುಂಬುವ ಸಮಯದಲ್ಲಿ ಹಿಡಿದುಕೊಂಡು ಪ್ರಕರಣ ದಾಖಲೆ ಮಾಡಿದ ಘಟನೆ ಗಳು ಇಲ್ಲ.
ಪಟ್ಟಾ ಲ್ಯಾಂಡ್ ಗಳನ್ನು ಖರೀದಿ ಮಾಡಿದ್ದು, ಸಕ್ರಿಯ ವಾಗಿ ಸರ್ಕಾರದ ಆದೇಶ ಪ್ರಕಾರ ಬಿಟ್ಟ್ ನಡೆಯುತ್ತದೆ.
ಯಾರು ಅಕ್ರಮ ಮರಳು ದಂದೆ ಮಾಡಿದ್ದಾರೆ, ಇದರಲ್ಲಿ ವಜ್ರ ವೈಡೂರ್ಯ ಗಳು ಇದ್ದಾವೆ ಅಂದುಕೊಂಡು,ಅಧಿಕ ದರಗಳು ಗೆ ಟೆಂಡರ್ ಮಾಡಿ ಕೊಂಡು ಕಸಿಬಿಸಿ ಗೆ ಬಿದ್ದು ಇತರ ಮೇಲೆ ಆರೋಪ ಮಾಡೋದು ಸರಿಯಾದ ಪದ್ದತಿ ಅಲ್ಲವೆಂದು ಯಾಲ್ಲ ಅಧಿಕಾರಿಗಳು ಬಂದು ತನಖಿ ಮಾಡಲಿ ತಪ್ಪು ಮಾಡಿದ್ದರೆ ದಂಡ ವಿಧಿಸಲಿ.
ಯಾರು ಅಕ್ರಮ ಮರಳು ದಂದೆ ಮಾಡುತ್ತಾ ಇದ್ದಾರೆ ನಮ್ಮ ಹತ್ತರ ಕೂಡ ದಾಖಲೆ ಗಳು ಇದ್ದಾವೆ ಸಮಯ ಬರಲಿ ನಾವು ತನಖಿಗೆ ಒತ್ತಾಯ ಮಾಡುತ್ತಿವಿ ಏಂದು ಪಟ್ಟಾ ಲ್ಯಾಂಡ್ ಮಾಲಿಕರು ದೂರವಾಣಿ ಮೂಲಕ ತಿಳಿಸಿದ್ದಾರೆ.
ಈಗಾಗಲೇ ಜನರು ಗೆ,ಕಾರ್ಮಿಕರ ಗೆ ಕಾಮಗಾರಿ ಗಳು ಗೆ ಮರಳು ಇಲ್ಲದೆ ಪರದಾಡುವ ವಾತಾವರಣ ಇದೇ.
ಜಿಲ್ಲೆ ಗೆ ಲಕ್ಷಾಂತರ ಟನ್ ಗಳ ಮರಳು ಬೇಕು ಸರ್ಕಾರದ ಕಾಮಗಾರಿ ಗಳು ಗೆ ಸರಬರಾಜು ಮಾಡಲು ಅಗುತ್ತಾ ಇಲ್ಲ,ಜನರು ಗೆ ಕೂಡ ಸರಳವಾಗಿ ಮರಳು ಸರಬರಾಜು ಮಾಡಬೇಕು ಅನ್ನುವ ಉದ್ದೇಶ ನಮಗೆ ಇದೆ.
ಅಡಿ ಅಡಿ ಗೆ ಚೇಕ್ ಪೋಷ್ಟುಗಳು ಹಾಕಿ ತನಖಿ ಮಾಡಲಿ,ಅಕ್ರಮ ಕಂಡರೆ ಗುತ್ತಿಗೆ ದಾರರ ಲೈಸೆನ್ಸ್ ರದ್ದು ಮಾಡಲಿ.
ಅಕ್ರಮ ಮರಳ ದಂದೆ ಕಂಡರೆ ಸ್ಟಾಕ್ ಯಾರ್ಡ್ ದಿಂದ ಗಡಿಗಳನ್ನು ಹೊರಗೆ ಬಿಡೋದು ಬೇಡ ನಾವು ಕೂಡ ಸಕ್ರಮ ವಾಗಿ ಮರಳು ದಂದೆ ನಡೆಯಬೇಕು ಅನ್ನುವುದು ನಮ್ಮ ಉದ್ದೇಶ ಅಗಿದೆ ಸಕ್ರಿಯ ವಾಗಿ ನಡೆದರೆ ನಾವು ಯಾರಿಗೆ ಭಯಪಡುವ ಅವಶ್ಯಕತೆ ಇಲ್ಲ, ಅಕ್ರಮ ಮಾಡುತ್ತಾರೆ ಅನ್ನುವ ಕಟ್ಟ ದೃಷ್ಟಿಯಿಂದ ನಮ್ಮನ್ನು ನೋಡುತ್ತಾ ಇದ್ದಾರೆ, ನಮ್ಮಗೆ ಕೂಡ ಹಲವಾರು ಕಷ್ಟಗಳು ಇದ್ದಾವೆ, ನಗರ ದಲ್ಲಿ ಗಾಡಿ ಗಳು ಬರದಂತೆ ಮಾಡಿ, ನಮ್ಮ ಜೊತೆಯಲ್ಲಿ ವ್ಯಾಪಾರ ಮಾಡಿದ್ದಾರೆ, ಅನ್ ಲೋಡ್ ಪಾಯಿಂಟ್ ಗೆ,ಕೂಡ ಯಾಲ್ಲ ರೀತಿಯಲ್ಲಿ ಕಿರಿಕಿರಿಯನ್ನು ಮಾಡಿದ್ದಾರೆ ಕೇಲ ಅಧಿಕಾರಿಗಳ ದಿಂದ ಬೆದರಿಕೆ ಕೂಡ ಹಾಕಿಸಿದ ಘಟನೆ ಗಳು ಇದ್ದಾವೆ.
ಇದರಿಂದ ಯಾಲ್ಲರು ಗೆ ತೊಂದರೆ ಅಗಿದೆ, ಸಕ್ರಿಯವಾಗಿ ನಡೆದರೆ ನಮಗೆ ಮನಸ್ಸು ಶಾಂತಿ ಇರುತ್ತದೆ ಏಂದು ಹೆಸರು ಹೇಳಲು ಇಷ್ಟ ಇಲ್ಲದೆ ಇರುವ ಜಿಲ್ಲೆಯ ಗುತ್ತಿಗೆ ದಾರರು,ನೊವು ಹಂಚಿಕೊಂಡಿದ್ದಾರೆ.
ಮರಳು ಸಮಿತಿ ಯಲ್ಲಿ ಹಲವಾರು ಅಧಿಕಾರಿಗಳು ಇದ್ದು ಅಕ್ರಮ ಮರಳು ಗಾರಿಕೆ ನಡೆಯುತ್ತದೆ ಅಂದರೆ ನಾಳೆ ಇವರು ಯಾಲ್ಲರು ಅಪವಾದ ಹೊರ ಬೇಕು ಅಗಿದೆ. (ಕೆ.ಬಜಾರಪ್ಪ ವರದಿಗಾರರು ಬಳ್ಳಾರಿ.)