*ಕರಾಟೆ ಕಟ್ಟೆ ಸ್ವಾಮಿ ಹತ್ಯೆ ಮಾಡಿದ ಪ್ರಕರಣ ದಲ್ಲಿ ಜೈಲುವಾಸ!!.*
ಬಳ್ಳಾರಿ6)ಗಾಂಧಿನಗರ ಪೊಲೀಸರ ಯಶಸ್ವಿ ಕಾರ್ಯಚರಣೆ ಕೊಲೆ ಪ್ರಕರಣ ಪತ್ತೆ
ದಿನಾಂಕ 06/08/2023 ರಂದು ರಾತ್ರಿ 09-00 ಗಂಟೆಯಿಂದ 09-30 ಗಂಟೆಯ ಮಧ್ಯವಧಿಯಲ್ಲಿ ಬಳ್ಳಾರಿ ನಗರದ ಜೈಲ್ ಕಾಂಪೌಂಡ್ ಹತ್ತಿರ ಇರುವ ಬ್ಲೂ ಸೈ ಶಾಲೆಯ ಹತ್ತಿರ ಇರುವ ಎ.ಆರ್.ಜಿ.ರೆಡ್ಡಿ ರವರ ಮನೆಯ ಗೇಟ್ ಮುಂದುಗಡೆ ಯಾರೋ ದುಷ್ಕರ್ಮಿಗಳು ಯಾವುದೋ ವಿಷಯಕ್ಕೆ ಬಿ.ಹುಸೇನಪ್ಪ ತಂದೆ ರಾಜಪ್ಪ ವಃ 55 ವರ್ಷ, ಆದಿ ಕರ್ನಾಟಕ ಜನಾಂಗ, ಬಳ್ಳಾರಿ ಕೆ.ಎಸ್.ಆರ್.ಟಿ.ಸಿ.ಯಲ್ಲಿ ಡಿವಿಜನಲ್ ಸೆಕ್ಯೂರಿಟಿ ಇನ್ಸ್‌ಪೆಕ್ಟರ್ ವಾಸಃಮನೆ ನಂ.38, ಕೆ.ಹೆಚ್.ಬಿ.ಕಾಲೋನಿ, ಪಾರ್ವತಿನಗರ, ಜೈಲ್ ಹಿಂದುಗಡೆ, ಬಳ್ಳಾರಿ. ಸ್ವಂತ ಊರು ಬೂತಲದಿನ್ನಿ ಗ್ರಾಮ. ಸಿಂಧನೂರು [ತಾ] ರಾಯಚೂರು ಜಿಲ್ಲೆ. ರವರನ್ನು ಕೊಲೆ ಮಾಡಿದ ಬಗ್ಗೆ ಪ್ರಕರಣ ದಾಖಲಾಗಿರುತ್ತದೆ.
ಸದರಿ ಪ್ರಕರಣದಲ್ಲಿ ಪತ್ತೆಗಾಗಿ ಮಾನ್ಯ ಶ್ರೀ. ರಂಜಿತ್ ಕುಮಾರ್ ಬಂಡಾರು ಐ.ಪಿ.ಎಸ್. ಎಸ್.ಪಿ. ಬಳ್ಳಾರಿ ರವರ ನಿರ್ದೇಶನದಂತೆ ಮಾನ್ಯ ಶ್ರೀ. ಕೆ.ಪಿ. ರವಿಕುಮಾರ್ ಹೆಚ್ಚುವರಿ ಎಸ್.ಪಿ. ಬಳ್ಳಾರಿ ಹಾಗೂ ಮಾನ್ಯ ಶ್ರೀ. ಚಂದ್ರಕಾಂತ ನಂದರೆಡ್ಡಿ ಡಿ.ಎಸ್.ಪಿ. ಬಳ್ಳಾರಿ ನಗರ ಉಪ-ವಿಭಾಗರವರ ಮಾರ್ಗದರ್ಶನದಂತೆ ಸದರಿ ಪ್ರಕರಣದಲ್ಲಿ ಸಿದ್ದರಾಮೇಶ್ವರ ಪೊಲೀಸ್ ಇನ್ಸ್‌ಪೆಕ್ಟರ್, ನೇತೃತ್ವದಲ್ಲಿ ಗಾಂಧಿನಗರ ಪೊಲೀಸ್ ಠಾಣೆಯ ಸಿಬ್ಬಂದಿಯವರಾದ ಜಯರಾಂ, ನಾರಾಯಣ, ಮಾರುತಿ ತಿಮ್ಮಪ್ಪ ಮತ್ತು ಬ್ರೂಸ್‌ಪೇಟೆ ಪೊಲೀಸ್ ಠಾಣೆಯ ಸಿಬ್ಬಂದಿ ರಾಮಲಿಂಗರವರ ತಂಡವನ್ನು ರಚಿಸಿದ್ದು, ಸದರಿ ತಂಡವು ವಿವಿಧ ವೈಜ್ಞಾನಿಕ ವಿಧಾನಗಳ ಮೂಲಕ ಸದರಿ ಪ್ರಕರಣವನ್ನು ಭೇದಿಸಿ ದಿನಾಂಕ: 06/12/2023 ರಂದು ಸದರಿ ಪ್ರಕರಣದಲ್ಲಿ ಕೊಲೆ ಮಾಡಿದ ಆರೋಪಿತರಾದ 1) ಕಟ್ಟಿಸ್ವಾಮಿ ತಂದೆ ಗಂಗಪ್ಪ ವಃ 41 ವರ್ಷ, ಆದಿ ಕರ್ನಾಟಕ ಜನಾಂಗ, ಕರಾಟೆ ತರಬೇತಿ ಕೆಲಸ, ವಾಸಃ 34ನೇ ವಾರ್ಡ್, ರಾಜೀವ್ ಗಾಂಧಿನಗರ, ಹೊಸಪೇಟೆ ರಸ್ತೆ, ಕಂಟೋನ್‌ಮೆಂಟ್, ಬಳ್ಳಾರಿ. 2) ಮಾನಪ್ಪ ತಂದೆ ಸಣ್ಣ ಮಾರೆಣ್ಣ, 40 ವರ್ಷ, ಎಸ್.ಸಿ. ಜನಾಂಗ, ಸೈಟ್ ಏಜೆಂಟ್ ಕೆಲಸ, ವಾಸ: 4 ನೇ ವಾರ್ಡ್, ಎಸ್.ಸಿ. ಕಾಲೋನಿ, ಕೊಳಗಲ್ ಗ್ರಾಮ ಬಳ್ಳಾರಿ (ತಾ) ರವರನ್ನು ದಸ್ತಗಿರಿ ಮಾಡಿ ಕೃತ್ಯಕ್ಕೆ ಬಳಸಿದ ಆಯುಧ ಮತ್ತು ಒಂದು ಮೋಟಾರ್ ಸೈಕಲ್‌ನ್ನು ಜಪ್ತು ಪಡಿಸಿಕೊಂಡಿದ್ದು, ಆರೋಪಿ ಕಟ್ಟೆಸ್ವಾಮಿ ಮತ್ತು ಕೊಲೆಯಾದ ಹುಸೇನಪ್ಪ ರವರಿಗೆ ಹಣದ ವ್ಯವಹಾರ ಇದ್ದು, ಆರೋಪಿತನು ಹಣವನ್ನು ಕೇಳಲು ಹೋದಾಗ ಕೊಲೆಯಾದ ಹುಸೇನಪ್ಪ ಆರೋಪಿ ಕಟ್ಟೆಸ್ವಾಮಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಅವಮಾನ ಮಾಡಿದ್ದರಿಂದ ಅದೇ ಸಿಟ್ಟಿನಿಂದ ಸದರಿ ಆರೋಪಿ ಕಟ್ಟಿಸ್ವಾಮಿ ಇನ್ನೊಬ್ಬ ಆರೋಪಿ ಮಾನಪ್ಪ ಸಹಾಯ ಪಡೆದು ಕೊಲೆ ಮಾಡಿರುತ್ತಾರೆಂದು ತಿಳಿದು ಬಂದಿದ್ದರಿಂದ ಆರೋಪಿತರನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಿರುತ್ತಾರೆ.
ಸದರಿ ಪ್ರಕರಣದಲ್ಲಿ ಆರೋಪಿತರನ್ನು ಪತ್ತೆ ಹಚ್ಚಿದ ಗಾಂಧಿನಗರ ಪೊಲೀಸ್ ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿಯವರ ಕಾರ್ಯಕ್ಕೆ ಮಾನ್ಯ ಪೊಲೀಸ್ ಅಧೀಕ್ಷಕರು ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಹಾಗೂ ಡಿ.ಎಸ್.ಪಿ. ನಗರ ಉಪ-ವಿಭಾಗರವರು ಪ್ರಶಂಸೆ ವ್ಯಕ್ತಪಡಿಸಿರುತ್ತಾರೆ.
ಕಟ್ಟೆ ಸ್ವಾಮಿ ಬಿಜೆಪಿ, ಕಾಂಗ್ರೆಸ್ ಪಕ್ಷದಲ್ಲಿ ಗುರ್ತಿಸಿ ಕೊಂಡ ವ್ಯಕ್ತಿ.ನಗರದಲ್ಲಿ ಕರಾಟೆ ಪ್ರೋಗ್ರಾಂ ಗಳು ಮಾಡಿದ್ದರು. ಇತ್ತೀಚೆಗೆ ರಾಜಕಾರಣಿ ದಲ್ಲಿ ಕಾಣಿಸಿಕೊಂಡ ಮಾಸ್ಟರ್.
ಉಸ್ತುವಾರಿ ಸಚಿವರ ಆಪ್ತರು ಆಗಿದ್ದರು, ಮೊನ್ನೆ ಚುನಾವಣೆಯಲ್ಲಿ ಬಿಜೆಪಿ ಜೊತೆಯಲ್ಲಿ ಇದ್ದರು.ಈ ಹತ್ಯೆಯ ಕಥೆ ಹಲವಾರು ರೀತಿಯಲ್ಲಿ ತಿರುವು ಪಡೆದು ಕೊಂಡಿತ್ತು.ಪ್ರಸ್ತುತ ಇದಕ್ಕೆ ಪೂರ್ತಿ ಮಾಹಿತಿ ಸಿಕ್ಕಿದೆ. (ಕೆ.ಬಜಾರಪ್ಪ ವರದಿಗಾರರು ಬಳ್ಳಾರಿ9844445008.)