ಹರಗಿನಡೋಣಿ ಕುಡಿಯುವ ನೀರಿನ ಯೋಜನೆಗೆ ಚಾಲನೆ. ಕೊಟ್ಟ ಮಾತು ಉಳಿಸಿ ಕೊಳ್ಳಲಾಗಿದೆ ಜನರು ಸಂತೋಷ ದಿಂದ ಇರಬೇಕು.ಸಚಿವ ಬಿ.ನಾಗೇಂದ್ರ.
*ಪೈಪ್ಲೈನ್ ಮೂಲಕ ಬಂದ ನೀರಿನಲ್ಲಿ ಮಿಂದೆಂದ್ದು ಕುಣಿದು ಕುಪ್ಪಳಿಸಿದ ಚಿಣ್ಣರು.. ಸಂಭ್ರಮದಲ್ಲಿ ಮಿಂದೆದ್ದ ಗ್ರಾಮಸ್ಥರು..*
*ಬಳ್ಳಾರಿ, ಫೆ.18ರಂದು:* ಹರಗಿನಡೋಣಿ ಗ್ರಾಮದಲ್ಲಿ ಶಾಸಕರ ನಿಧಿಯಿಂದ 30 ಲಕ್ಷ ರೂ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಕುಡಿಯುವ ನೀರಿನ ಯೋಜನೆಗೆ ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆ, ಯುವ ಸಬಲೀಕರಣ ಕ್ರೀಡೆ ಸಚಿವರು ಹಾಗೂ ಜಿಲ್ಲಾ ಉಸ್ತುವರಿ ಸಚಿವರಾದ ಬಿ.ನಾಗೇಂದ್ರ ಅವರು ಚಾಲನೆ ನೀಡಿದರು.
ಹಲವು ದಶಕಗಳ ಬೇಡಿಕೆಯಾಗಿದ್ದ ಈ ಕುಡಿಯುವ ನೀರಿನ ಯೋಜನೆಗೆ ಚಾಲನೆ ದೊರೆತಿರುವುದರಿಂದ ಗ್ರಾಮಸ್ಥರಲ್ಲಿ ಸಂಭ್ರಮ ಮನೆಮಾಡಿದ್ದು ಕಂಡುಬಂತು. ಪೈಪ್ಲೈನ್ ಮೂಲಕ ಗ್ರಾಮಕ್ಕೆ ಬಂದ ನೀರಿನಲ್ಲಿ ಚಿಣ್ಣರು ಮಿಂದೆಂದ್ದು ಕುಣಿದು ಕುಪ್ಪಳಿಸಿದ ದೃಶ್ಯ ಮುದ ನೀಡುವಂತಿತ್ತು.
ಯೋಜನೆಗೆ ಚಾಲನೆ ನೀಡಿ ಮಾತನಾಡಿದ ಸಚಿವರು, ಶಾಸಕರ ಅನುದಾನದ ಅಡಿಯಲ್ಲಿ ಹರಗಿನಡೋಣಿ ಗಾಮಕ್ಕೆ ಅಲ್ಲಿಪುರ ಕೆರೆಯಿಂದ ಸುಮಾರು ಒಂಬತ್ತು ಕಿಲೋಮೀಟರ್ ಉದ್ದದ ಪೈಪ್ ಲೈನ್ ಮೂಲಕ ಕುಡಿಯುವ ನೀರು ಸರಬರಾಜು ಮಾಡಲಾಗಿದೆ. ಹಲವು ದಶಕಗಳಿಂದ ನೆನೆಗುದಿಗೆ ಬಿದ್ದಿದ್ದ ಈ ಯೋಜನೆಗೆ ಚಾಲನೆ ನೀಡಿರುವುದು ನನಗೆ ಸಂತಸ ತಂದಿದೆ ಎಂದರು.ಕೊಟ್ಟಮಾತು ಉಳಿಸಿಕೊಳ್ಳಲಾಗಿದೆ,ಜನರು ಸಂತೋಷ ದಿಂದ ಇರಬೇಕು ಈಹಿಂದೆ ನಾವು ಜನರು ಗೆ ಏನು ಮಾತು ಕೊಡಲಾಗಿತ್ತು ಅದನ್ನು ಹಂತ ಹಂತವಾಗಿ ಮಾಡಿ ಕೊಡಲಾಗುತ್ತದೆ.
ಈ ಅತ್ಯಗತ್ಯ ಯೋಜನೆಯ ಈಡೇರಿಕೆಗೆ ಆಗ್ರಹಿಸಿ ಹರಗಿನಡೋಣಿ ಗ್ರಾಮಸ್ಥರು ಹಲವು ಬಾರಿ ಚುನಾವಣೆಗಳನ್ನು ಬಹಿಷ್ಕರಿಸುವ ಮೂಲಕ ಪ್ರತಿಭಟನೆ ನಡೆಸಿದ್ದನ್ನು ಸ್ಮರಿಸಿದ ಸಚಿವ ಬಿ.ನಾಗೇಂದ್ರ ಅವರು, ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಆ ಸಂದರ್ಭದಲ್ಲಿ ಗ್ರಾಮಸ್ಥರ ಬೇಡಿಕೆಯನ್ನು ಈಡೇರಿಸುವ ಕುರಿತು ಭರವಸೆ ನೀಡಿದ್ದರು. ಅದರಂತೇ ಈಗ ಈ ಕುಡಿಯುವ ನೀರಿನ ಯೋಜನೆಗೆ ಚಾಲನೆ ನೀಡಲಾಗಿದೆ. ಹಾಗೇಯೇ ಈ ಹಿಂದೆ ಯೋಜನೆ ಸಿದ್ದಪಡಿಸಿದಂತೆ ಸುಮಾರು 25ಕೋಟಿ ವೆಚ್ಚದಲ್ಲಿ ಗ್ರಾಮಕ್ಕೆ ಹೊಂದಿಕೊಂಡಂತೆ ಕುಡಿಯುವ ನೀರಿನ ಕೆರೆ ನಿರ್ಮಾಣ ಮಾಡುವ ಮೂಲಕ ದಶಗಳಿಂದ ಹರಗಿನಡೋಡಿ ಗ್ರಾಮ ಎದುರಿಸುತ್ತಿರುವ ಕುಡಿಯುವ ನೀರಿನ ಸಮಸ್ಯೆಗೆ ಮುಂಬರುವ ವರ್ಷದೊಳಗೆ ಶಾಶ್ವತ ಪರಿಹಾರ ಕಲ್ಪಿಸಲಾಗುವುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಮರಿಲಿಂಗಮ್ಮ, ಗ್ರಾಮ ಪಂಚಾಯತಿ ಸದಸ್ಯರಾದ ಗಂಗಾಧರ, ಸಿ.ಚಂದ್ರಪ್ಪ, ಬೊಗ್ಗೇಶ್, ಜಂಬಯ್ಯ, ಓಬಾರೆಡ್ಡಿ, ವೆಂಕಾರೆಡ್ಡಿ, ಬಿ.ಬಸವನಗೌಡ, ಗಂಗಣ್ಣ, ಮಲ್ಲಿಕಾರ್ಜುನ, ಶಂಕ್ರಪ್ಪ, ಹೊನ್ನೂರಪ್ಪ, ಬಾರಿಕರ ಜಗದೀಶ್, ಜಡಿಯಪ್ಪ ಹಾಗೂ ಮುಖಂಡರಾದ ಎಸ್.ಮಹಾರುದ್ರಗೌಡ, ಎಸ್.ಗವಿಸಿದ್ದನಗೌಡ, ಆರ್.ಶಿವರಾಂ ರೆಡ್ಡಿ, ದೊಡ್ಡ ಬಸಪ್ಪ ಮತ್ತು ಕೊಳಗಲ್ ಗ್ರಾಮ ಪಂಚಾಯಿತಿ ಉಸ್ತುವಾರಿ ವೆಂಕಟರಾವ್(ನಾನಿ) ಸೇರಿದಂತೆ ಗ್ರಾಮಸ್ಥರು ಹಾಜರಿದ್ದರು.
(ಕೆ.ಬಜಾರಪ್ಪ ವರದಿಗಾರರು,ಕಲ್ಯಾಣ ಕರ್ನಾಟಕ.)